ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rcb Worst Record: ಗುಜರಾತ್ ವಿರುದ್ಧ 200 ರನ್ ಬಿಟ್ಟುಕೊಟ್ಟು ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ಆರ್​​ಸಿಬಿ

RCB Worst Record: ಗುಜರಾತ್ ವಿರುದ್ಧ 200 ರನ್ ಬಿಟ್ಟುಕೊಟ್ಟು ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ಆರ್​​ಸಿಬಿ

Apr 28, 2024 06:43 PM IST

RCB Worst Record : ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ 200 ರನ್ ಬಿಟ್ಟುಕೊಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದಿದೆ.

  • RCB Worst Record : ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ 200 ರನ್ ಬಿಟ್ಟುಕೊಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದಿದೆ.
ಪ್ರಸಕ್ತ ಸಾಲಿನ ಐಪಿಎಲ್​ನಲ್ಲಿ ಆರ್​​ಸಿಬಿ ಮತ್ತೊಂದು ಕಳಪೆ ದಾಖಲೆ ಬರೆದಿದೆ. ಏಪ್ರಿಲ್ 28ರಂದು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಈ ಕೆಟ್ಟ ರೆಕಾರ್ಡ್ ನಿರ್ಮಿಸಿದೆ.
(1 / 5)
ಪ್ರಸಕ್ತ ಸಾಲಿನ ಐಪಿಎಲ್​ನಲ್ಲಿ ಆರ್​​ಸಿಬಿ ಮತ್ತೊಂದು ಕಳಪೆ ದಾಖಲೆ ಬರೆದಿದೆ. ಏಪ್ರಿಲ್ 28ರಂದು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಈ ಕೆಟ್ಟ ರೆಕಾರ್ಡ್ ನಿರ್ಮಿಸಿದೆ.(PTI)
ಗುಜರಾತ್ ಟೈಟಾನ್ಸ್ ವಿರುದ್ಧ 200 ರನ್​​ ಬಿಟ್ಟುಕೊಡುವ ಮೂಲಕ ಆರ್​ಸಿಬಿ, ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ 200+ ರನ್ ಬಿಟ್ಟುಕೊಟ್ಟ ಎರಡನೇ ತಂಡ ಎಂಬ ಕುಖ್ಯಾತಿಗೆ ಒಳಗಾಯಿತು.
(2 / 5)
ಗುಜರಾತ್ ಟೈಟಾನ್ಸ್ ವಿರುದ್ಧ 200 ರನ್​​ ಬಿಟ್ಟುಕೊಡುವ ಮೂಲಕ ಆರ್​ಸಿಬಿ, ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ 200+ ರನ್ ಬಿಟ್ಟುಕೊಟ್ಟ ಎರಡನೇ ತಂಡ ಎಂಬ ಕುಖ್ಯಾತಿಗೆ ಒಳಗಾಯಿತು.(ANI )
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್​ನಲ್ಲಿ 28ನೇ ಬಾರಿಗೆ 200+ ರನ್ ಬಿಟ್ಟುಕೊಡುವ ಮೂಲಕ ಪಂಜಾಬ್ಸ್​ ಕಿಂಗ್ಸ್ ದಾಖಲೆಯನ್ನು ಸರಿಗಟ್ಟಿತು.
(3 / 5)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್​ನಲ್ಲಿ 28ನೇ ಬಾರಿಗೆ 200+ ರನ್ ಬಿಟ್ಟುಕೊಡುವ ಮೂಲಕ ಪಂಜಾಬ್ಸ್​ ಕಿಂಗ್ಸ್ ದಾಖಲೆಯನ್ನು ಸರಿಗಟ್ಟಿತು.(ANI )
ಎದುರಾಳಿಗಳ ವಿರುದ್ಧ ಪಂಜಾಬ್ ಕಿಂಗ್ಸ್ ಸಹ 28 ಸಲ 200 + ರನ್ ಬಿಟ್ಟುಕೊಟ್ಟಿದೆ. ಮೊದಲು ಬ್ಯಾಟಿಂಗ್ ನಡೆಸಿದ ಜಿಟಿ, 20 ಓವರ್​​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು.
(4 / 5)
ಎದುರಾಳಿಗಳ ವಿರುದ್ಧ ಪಂಜಾಬ್ ಕಿಂಗ್ಸ್ ಸಹ 28 ಸಲ 200 + ರನ್ ಬಿಟ್ಟುಕೊಟ್ಟಿದೆ. ಮೊದಲು ಬ್ಯಾಟಿಂಗ್ ನಡೆಸಿದ ಜಿಟಿ, 20 ಓವರ್​​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು.(IPL-X)
ಸಾಯಿ ಸುದರ್ಶನ್ ಮತ್ತು ಶಾರೂಖ್ ಖಾನ್ ಅಬ್ಬರದ ಬ್ಯಾಟಿಂಗ್ ನಡೆಸಿದರು. ಸುದರ್ಶನ್ 49 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್ ಸಹಿತ ಅಜೇಯ 84 ರನ್ ಸಿಡಿಸಿದರೆ, ಶಾರೂಖ್ 30 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್ ಸಹಿತ 58 ರನ್ ಚಚ್ಚಿದರು.
(5 / 5)
ಸಾಯಿ ಸುದರ್ಶನ್ ಮತ್ತು ಶಾರೂಖ್ ಖಾನ್ ಅಬ್ಬರದ ಬ್ಯಾಟಿಂಗ್ ನಡೆಸಿದರು. ಸುದರ್ಶನ್ 49 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್ ಸಹಿತ ಅಜೇಯ 84 ರನ್ ಸಿಡಿಸಿದರೆ, ಶಾರೂಖ್ 30 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್ ಸಹಿತ 58 ರನ್ ಚಚ್ಚಿದರು.(AP)

    ಹಂಚಿಕೊಳ್ಳಲು ಲೇಖನಗಳು