ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸ್ಲೋ ಓವರ್​ ರೇಟ್ ಕಾಯ್ದುಕೊಂಡ ಕೆಎಲ್ ರಾಹುಲ್ ಮತ್ತು ಋತುರಾಜ್ ಗಾಯಕ್ವಾಡ್​ಗೆ ಬಿತ್ತು ಭಾರಿ ದಂಡ

ಸ್ಲೋ ಓವರ್​ ರೇಟ್ ಕಾಯ್ದುಕೊಂಡ ಕೆಎಲ್ ರಾಹುಲ್ ಮತ್ತು ಋತುರಾಜ್ ಗಾಯಕ್ವಾಡ್​ಗೆ ಬಿತ್ತು ಭಾರಿ ದಂಡ

Apr 20, 2024 02:22 PM IST

KL Rahul and Ruturaj Gaikwad : ಐಪಿಎಲ್​ನ 34ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್​ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್​ ಅವರಿಗೆ ದಂಡದ ವಿಧಿಸಲಾಗಿದೆ.

  • KL Rahul and Ruturaj Gaikwad : ಐಪಿಎಲ್​ನ 34ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್​ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್​ ಅವರಿಗೆ ದಂಡದ ವಿಧಿಸಲಾಗಿದೆ.
ಕೆಎಲ್ ರಾಹುಲ್ (82) ಮತ್ತು ಕ್ವಿಂಟನ್ ಡಿ ಕಾಕ್ (54) ಅವರ ಅರ್ಧಶತಕಗಳ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ವಿಕೆಟ್​​ಗಳ ಅಮೋಘ ಜಯ ಗಳಿಸಿತು.
(1 / 7)
ಕೆಎಲ್ ರಾಹುಲ್ (82) ಮತ್ತು ಕ್ವಿಂಟನ್ ಡಿ ಕಾಕ್ (54) ಅವರ ಅರ್ಧಶತಕಗಳ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ವಿಕೆಟ್​​ಗಳ ಅಮೋಘ ಜಯ ಗಳಿಸಿತು.(AFP)
ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್​ಕೆ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಎಲ್​ಎಸ್​​ಜಿ ತಂಡ 19 ಓವರ್​​ಗಳಲ್ಲಿ ಜಯದ ನಗೆ ಬೀರಿತು.
(2 / 7)
ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್​ಕೆ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಎಲ್​ಎಸ್​​ಜಿ ತಂಡ 19 ಓವರ್​​ಗಳಲ್ಲಿ ಜಯದ ನಗೆ ಬೀರಿತು.(PTI)
ಐಪಿಎಲ್​ನ 34ನೇ ಪಂದ್ಯದಲ್ಲಿ ಗೆದ್ದ ಹೊರತಾಗಿಯೂ ಎಲ್​ಎಸ್​ಜಿ ನಾಯಕ ಕೆಎಲ್ ರಾಹುಲ್​ ಮತ್ತು ಸೋತ ಸಿಎಸ್​ಕೆ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್​ಗೂ ದಂಡದ ಬರೆ ಬಿದ್ದಿದೆ.
(3 / 7)
ಐಪಿಎಲ್​ನ 34ನೇ ಪಂದ್ಯದಲ್ಲಿ ಗೆದ್ದ ಹೊರತಾಗಿಯೂ ಎಲ್​ಎಸ್​ಜಿ ನಾಯಕ ಕೆಎಲ್ ರಾಹುಲ್​ ಮತ್ತು ಸೋತ ಸಿಎಸ್​ಕೆ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್​ಗೂ ದಂಡದ ಬರೆ ಬಿದ್ದಿದೆ.
ಸ್ಲೋ ಓವರ್​ ರೇಟ್ ಕಾಯ್ದುಕೊಂಡ ಕಾರಣ ಕೆಎಲ್ ರಾಹುಲ್ ಹಾಗೂ ಋತುರಾಜ್ ಗಾಯಕ್ವಾಡ್​ಗೆ ದಂಡ ವಿಧಿಸಲಾಗಿದೆ. ಈ ಕ್ಯಾಪ್ಟನ್​​ಗಳು ನಿಗದಿತ ಸಮಯದಲ್ಲಿ 20 ಓವರ್ ಪೂರ್ಣಗೊಳಿಸಲು ವಿಫಲರಾದರು.
(4 / 7)
ಸ್ಲೋ ಓವರ್​ ರೇಟ್ ಕಾಯ್ದುಕೊಂಡ ಕಾರಣ ಕೆಎಲ್ ರಾಹುಲ್ ಹಾಗೂ ಋತುರಾಜ್ ಗಾಯಕ್ವಾಡ್​ಗೆ ದಂಡ ವಿಧಿಸಲಾಗಿದೆ. ಈ ಕ್ಯಾಪ್ಟನ್​​ಗಳು ನಿಗದಿತ ಸಮಯದಲ್ಲಿ 20 ಓವರ್ ಪೂರ್ಣಗೊಳಿಸಲು ವಿಫಲರಾದರು.(ANI )
ರಾಹುಲ್ ಹಾಗೂ ಗಾಯಕ್ವಾಡ್​ಗೆ ತಲಾ 12 ಲಕ್ಷ ರೂಪಾಯಿ ದಂಡ ಹಾಕಲಾಗಿದೆ. ಇದೇ ಮೊದಲ ಬಾರಿಗೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿ ದಂಡ ಕಟ್ಟಿದ್ದಾರೆ. ಈ ತಪ್ಪು ಮತ್ತೆರಡು ಬಾರಿ ಮಾಡಿದರೆ, ಒಂದು ಪಂದ್ಯದಿಂದ ನಿಷೇದಕ್ಕೂ ಒಳಗಾಗಲಿದ್ದಾರೆ.
(5 / 7)
ರಾಹುಲ್ ಹಾಗೂ ಗಾಯಕ್ವಾಡ್​ಗೆ ತಲಾ 12 ಲಕ್ಷ ರೂಪಾಯಿ ದಂಡ ಹಾಕಲಾಗಿದೆ. ಇದೇ ಮೊದಲ ಬಾರಿಗೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿ ದಂಡ ಕಟ್ಟಿದ್ದಾರೆ. ಈ ತಪ್ಪು ಮತ್ತೆರಡು ಬಾರಿ ಮಾಡಿದರೆ, ಒಂದು ಪಂದ್ಯದಿಂದ ನಿಷೇದಕ್ಕೂ ಒಳಗಾಗಲಿದ್ದಾರೆ.
ಐಪಿಎಲ್​ ನಿಯಮದಲ್ಲಿ ಪ್ರತಿ ತಂಡಗಳು ತಮ್ಮ ಇನ್ನಿಂಗ್ಸ್​ನ 20 ಓವರ್​ಗಳನ್ನು 1 ಗಂಟೆ 30 ನಿಮಿಷ ಅಂದರೆ 90 ನಿಮಿಷದಲ್ಲಿ ಪೂರ್ಣಗೊಳಿಸಬೇಕು. ಒಂದ್ವೇಳೆ ಇದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ 12 ಲಕ್ಷದ ದಂಡದ ಜೊತೆಗೆ ಬೌಂಡರಿ ಲೈನ್​ನಿಂದ ಒಬ್ಬ ಫೀಲ್ಡರ್​ನನ್ನು ಕಡಿತ ಮಾಡಬೇಕಾಗುತ್ತದೆ.
(6 / 7)
ಐಪಿಎಲ್​ ನಿಯಮದಲ್ಲಿ ಪ್ರತಿ ತಂಡಗಳು ತಮ್ಮ ಇನ್ನಿಂಗ್ಸ್​ನ 20 ಓವರ್​ಗಳನ್ನು 1 ಗಂಟೆ 30 ನಿಮಿಷ ಅಂದರೆ 90 ನಿಮಿಷದಲ್ಲಿ ಪೂರ್ಣಗೊಳಿಸಬೇಕು. ಒಂದ್ವೇಳೆ ಇದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ 12 ಲಕ್ಷದ ದಂಡದ ಜೊತೆಗೆ ಬೌಂಡರಿ ಲೈನ್​ನಿಂದ ಒಬ್ಬ ಫೀಲ್ಡರ್​ನನ್ನು ಕಡಿತ ಮಾಡಬೇಕಾಗುತ್ತದೆ.(IPL)
ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
(7 / 7)
ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.

    ಹಂಚಿಕೊಳ್ಳಲು ಲೇಖನಗಳು