ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Icc Test Rankings : 15 ತಿಂಗಳಿಂದ ಟೆಸ್ಟ್ ಕ್ರಿಕೆಟ್ ಆಡದಿದ್ದರೂ ರ‍್ಯಾಂಕಿಂಗ್​ನಲ್ಲಿ ಏರಿದ ರಿಷಭ್ ಪಂತ್

ICC Test Rankings : 15 ತಿಂಗಳಿಂದ ಟೆಸ್ಟ್ ಕ್ರಿಕೆಟ್ ಆಡದಿದ್ದರೂ ರ‍್ಯಾಂಕಿಂಗ್​ನಲ್ಲಿ ಏರಿದ ರಿಷಭ್ ಪಂತ್

Apr 11, 2024 02:10 PM IST

ICC Test Rankings : ಐಪಿಎಲ್​ 2024ರ ಮಧ್ಯೆಯೇ ಐಸಿಸಿ ಟೆಸ್ಟ್​ ಕ್ರಿಕೆಟ್​ ಶ್ರೇಯಾಂಕ ಬಿಡುಗಡೆಯಾಗಿದೆ. ಒಂದು ವರ್ಷಕ್ಕೂ ಅಧಿಕ ಕಾಲ ಕ್ರಿಕೆಟ್ ಆಡದಿದ್ದರೂ ರಿಷಭ್ ಪಂತ್​ ಒಂದು ಸ್ಥಾನ ಮೇಲೇರಿದ್ದಾರೆ.

  • ICC Test Rankings : ಐಪಿಎಲ್​ 2024ರ ಮಧ್ಯೆಯೇ ಐಸಿಸಿ ಟೆಸ್ಟ್​ ಕ್ರಿಕೆಟ್​ ಶ್ರೇಯಾಂಕ ಬಿಡುಗಡೆಯಾಗಿದೆ. ಒಂದು ವರ್ಷಕ್ಕೂ ಅಧಿಕ ಕಾಲ ಕ್ರಿಕೆಟ್ ಆಡದಿದ್ದರೂ ರಿಷಭ್ ಪಂತ್​ ಒಂದು ಸ್ಥಾನ ಮೇಲೇರಿದ್ದಾರೆ.
ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಂತರ ರಿಷಭ್ ಪಂತ್ 15 ತಿಂಗಳ ಕಾಲ ಮೈದಾನದಿಂದ ಹೊರಗುಳಿದಿದ್ದರು. ಪ್ರಸ್ತುತ ಐಪಿಎಲ್​​​​ನಲ್ಲಿ ಮೈದಾನಕ್ಕೆ ಮರಳಿರುವ ಪಂತ್, ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಮರಳಿಲ್ಲ. ದೀರ್ಘಕಾಲದವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದಿದ್ದರೂ, ಪಂತ್ ಟೆಸ್ಟ್​ ಕ್ರಿಕೆಟ್​ ವಿಶ್ವ ಶ್ರೇಯಾಂಕದಲ್ಲಿ ಒಂದು ಸ್ಥಾನ ಮೇಲೇರಿದ್ದಾರೆ. ಟೆಸ್ಟ್ ಬ್ಯಾಟ್ಸ್​​ಮನ್​​ಗಳ ಪಟ್ಟಿಯಲ್ಲಿ 16ನೇ ಸ್ಥಾನದಿಂದ 15ನೇ ಸ್ಥಾನಕ್ಕೇರಿದ್ದಾರೆ. ಬಾಂಗ್ಲಾದೇಶ ಪ್ರವಾಸದಲ್ಲಿ ಕಳಪೆ ಪ್ರದರ್ಶನದ ದೃಷ್ಟಿಯಿಂದ ಶ್ರೀಲಂಕಾದ ಧನಂಜಯ ಡಿ ಸಿಲ್ವಾ ಎರಡು ಸ್ಥಾನಗಳನ್ನು ಕಳೆದುಕೊಂಡು 16ನೇ ಸ್ಥಾನಕ್ಕೆ ಇಳಿದಿದ್ದಾರೆ,
(1 / 5)

ಐಸಿಸಿ ಟೆಸ್ಟ್ ಬ್ಯಾಟ್ಸ್​​ಮನ್​ಗಳ ಟಾಪ್ 10ರಲ್ಲಿ ಭಾರತದ ಮೂವರು ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ. ಭಾರತದ ನಾಯಕ ರೋಹಿತ್ ಶರ್ಮಾ 6ನೇ ಸ್ಥಾನದಲ್ಲಿದ್ದಾರೆ. ಐಸಿಸಿ ರ್ಯಾಂಕಿಂಗ್ ಪ್ರಕಾರ, ರೋಹಿತ್ ಪ್ರಸ್ತುತ ಭಾರತದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್​​ಮನ್​. ಯಶಸ್ವಿ ಜೈಸ್ವಾಲ್ ಒಟ್ಟಾರೆ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 9ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಟೆಸ್ಟ್ ಬ್ಯಾಟ್ಸ್​​ಮನ್​ಗಳ ಟಾಪ್-20ರಲ್ಲಿ ಭಾರತದ ಇನ್ನಿಬ್ಬರು ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ. ರಿಷಭ್ ಪಂತ್ (15) ಹೊರತುಪಡಿಸಿ, ಶುಭ್ಮನ್ ಗಿಲ್ 20ನೇ ಸ್ಥಾನದಲ್ಲಿದ್ದಾರೆ.
(2 / 5)

ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ ವಿಶ್ವದ ಅತ್ಯುತ್ತಮ ಬೌಲರ್ ಆಗಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಜಸ್ಪ್ರೀತ್ ಬುಮ್ರಾ, ಜೋಶ್ ಹೇಜಲ್​ವುಡ್ ಅವರೊಂದಿಗೆ ಜಂಟಿಯಾಗಿ 2ನೇ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜಾ 7ನೇ ಸ್ಥಾನದಲ್ಲಿದ್ದಾರೆ. ಕುಲ್ದೀಪ್ ಯಾದವ್ 15, ಮೊಹಮ್ಮದ್ ಶಮಿ 21, ಮೊಹಮ್ಮದ್ ಸಿರಾಜ್ 25, ಅಕ್ಷರ್ ಪಟೇಲ್ 36ನೇ ಸ್ಥಾನದಲ್ಲಿದ್ದಾರೆ.
(3 / 5)

ಪ್ರಸ್ತುತ ವಿಶ್ವದ ಅತ್ಯುತ್ತಮ ಟೆಸ್ಟ್ ಆಲ್​ರೌಂಡರ್​​ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಅಗ್ರಸ್ಥಾನ ಪಡೆದಿದ್ದಾರೆ. ರವಿಚಂದ್ರನ್ ಅಶ್ವಿನ್ ಎರಡನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅಕ್ಷರ್ ಪಟೇಲ್ ಆರನೇ ಸ್ಥಾನದಲ್ಲಿದ್ದಾರೆ. 
(4 / 5)

ಟೆಸ್ಟ್ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಕೇನ್ ವಿಲಿಯಮ್ಸನ್ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಇಂಗ್ಲೆಂಡ್​ನ ಜೋ ರೂಟ್ ಎರಡನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಬಾಬರ್ ಅಜಮ್ ಮತ್ತು ನ್ಯೂಜಿಲೆಂಡ್​​ನ ಡಾರಿಲ್ ಮಿಚೆಲ್ ಜಂಟಿ 3ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 5ನೇ ಸ್ಥಾನದಲ್ಲಿದ್ದಾರೆ.
(5 / 5)

    ಹಂಚಿಕೊಳ್ಳಲು ಲೇಖನಗಳು