ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  49 ಎಸೆತಗಳಲ್ಲಿ ಶತಕ ಸಿಡಿಸಿದ ಸುನಿಲ್ ನರೈನ್; ಐಪಿಎಲ್‌ನಲ್ಲಿ ಈ ದಾಖಲೆ ನಿರ್ಮಿಸಿದ ಮೊದಲ ಆಟಗಾರ

49 ಎಸೆತಗಳಲ್ಲಿ ಶತಕ ಸಿಡಿಸಿದ ಸುನಿಲ್ ನರೈನ್; ಐಪಿಎಲ್‌ನಲ್ಲಿ ಈ ದಾಖಲೆ ನಿರ್ಮಿಸಿದ ಮೊದಲ ಆಟಗಾರ

Apr 16, 2024 09:48 PM IST

Sunil Narine: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರ ಸುನಿಲ್ ನರೈನ್, ಐಪಿಎಲ್‌ 2024ರಲ್ಲಿ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ಟಿ20 ಶತಕ ಸಿಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

  • Sunil Narine: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರ ಸುನಿಲ್ ನರೈನ್, ಐಪಿಎಲ್‌ 2024ರಲ್ಲಿ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ಟಿ20 ಶತಕ ಸಿಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ 35 ವರ್ಷದ ಅನುಭವಿ ಆಟಗಾರ ಕೇವಲ 49 ಎಸೆತಗಳಲ್ಲಿ ಅಮೋಘ ಶತಕ ಸಿಡಿಸಿದರು. ಇದರೊಂದಿಗೆ ಕೆಕೆಆರ್‌ ಪರ ಐಪಿಎಲ್‌ ಶತಕ ಸಿಡಿಸಿದ ಮೂರನೇ ಆಟಗಾರ ಎನಿಸಿಕೊಂಡರು.
(1 / 6)
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ 35 ವರ್ಷದ ಅನುಭವಿ ಆಟಗಾರ ಕೇವಲ 49 ಎಸೆತಗಳಲ್ಲಿ ಅಮೋಘ ಶತಕ ಸಿಡಿಸಿದರು. ಇದರೊಂದಿಗೆ ಕೆಕೆಆರ್‌ ಪರ ಐಪಿಎಲ್‌ ಶತಕ ಸಿಡಿಸಿದ ಮೂರನೇ ಆಟಗಾರ ಎನಿಸಿಕೊಂಡರು.(PTI)
ಈ ಹಿಂದೆ ಬ್ರೆಂಡನ್‌ ಮೆಕಲಮ್‌ (2008) ಮತ್ತು ವೆಂಕಟೇಶ್‌ ಅಯ್ಯರ್‌ (2023) ಮಾತ್ರವೇ ಕೋಲ್ಕತ್ತಾ ತಂಡದ ಪರ ಶತಕ ಸಿಡಿಸಿದ್ದರು. ಇದೀಗ ಈ ಪಟ್ಟಿಗೆ ನರೈನ್‌ ಮೂರನೇ ಆಟಗಾರನಾಗಿ ಸೇರಿಕೊಂಡಿದ್ದಾರೆ.
(2 / 6)
ಈ ಹಿಂದೆ ಬ್ರೆಂಡನ್‌ ಮೆಕಲಮ್‌ (2008) ಮತ್ತು ವೆಂಕಟೇಶ್‌ ಅಯ್ಯರ್‌ (2023) ಮಾತ್ರವೇ ಕೋಲ್ಕತ್ತಾ ತಂಡದ ಪರ ಶತಕ ಸಿಡಿಸಿದ್ದರು. ಇದೀಗ ಈ ಪಟ್ಟಿಗೆ ನರೈನ್‌ ಮೂರನೇ ಆಟಗಾರನಾಗಿ ಸೇರಿಕೊಂಡಿದ್ದಾರೆ.(ANI )
ಪಂದ್ಯದಲ್ಲಿ ಅಂತಿಮವಾಗಿ ನರೈನ್‌ 56 ಎಸೆತಗಳಲ್ಲಿ 109 ರನ್‌ ಗಳಿಸಿ ಟ್ರೆಂಟ್‌ ಬೋಲ್ಟ್‌ ಎಸೆತದಲ್ಲಿ ಕ್ಲೀನ್‌ ಬೋಲ್ಡ್‌ ಆದರು. 194.64ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅವರು, 13 ಬೌಂಡರಿ ಹಾಗೂ 6 ಮಾರಕ ಸಿಕ್ಸರ್‌ ಸಿಡಿಸಿದರು.
(3 / 6)
ಪಂದ್ಯದಲ್ಲಿ ಅಂತಿಮವಾಗಿ ನರೈನ್‌ 56 ಎಸೆತಗಳಲ್ಲಿ 109 ರನ್‌ ಗಳಿಸಿ ಟ್ರೆಂಟ್‌ ಬೋಲ್ಟ್‌ ಎಸೆತದಲ್ಲಿ ಕ್ಲೀನ್‌ ಬೋಲ್ಡ್‌ ಆದರು. 194.64ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅವರು, 13 ಬೌಂಡರಿ ಹಾಗೂ 6 ಮಾರಕ ಸಿಕ್ಸರ್‌ ಸಿಡಿಸಿದರು.(PTI)
ಇದರೊಂದಿಗೆ ವಿಶೇಷ ದಾಖಲೆಯನ್ನು ನರೈನ್‌ ನಿರ್ಮಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಶತಕ ಹಾಗೂ 100 ವಿಕೆಟ್‌ಗಳನ್ನು ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
(4 / 6)
ಇದರೊಂದಿಗೆ ವಿಶೇಷ ದಾಖಲೆಯನ್ನು ನರೈನ್‌ ನಿರ್ಮಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಶತಕ ಹಾಗೂ 100 ವಿಕೆಟ್‌ಗಳನ್ನು ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.(AP)
ಸುನಿಲ್‌ ನರೈನ್ ಐಪಿಎಲ್‌ನಲ್ಲಿ‌ ಈವರೆಗೆ 168 ಪಂದ್ಯಗಳನ್ನು ಆಡಿದ್ದಾರ. ಒಟ್ಟಾರೆ ಟಿ20ಯಲ್ಲಿ 503 ಪಂದ್ಯಗಳಲ್ಲಿ ಆಡಿದ್ದಾರೆ.
(5 / 6)
ಸುನಿಲ್‌ ನರೈನ್ ಐಪಿಎಲ್‌ನಲ್ಲಿ‌ ಈವರೆಗೆ 168 ಪಂದ್ಯಗಳನ್ನು ಆಡಿದ್ದಾರ. ಒಟ್ಟಾರೆ ಟಿ20ಯಲ್ಲಿ 503 ಪಂದ್ಯಗಳಲ್ಲಿ ಆಡಿದ್ದಾರೆ.(AP)
ನರೈನ್‌ ಕೆಕೆಆರ್‌ ತಂಡದ ಪ್ರಮುಖ ಸ್ಪಿನ್‌ ಬೌಲರ್‌. ಇವರ ಬ್ಯಾಟಿಂಗ್‌ ಕೌಶಲದಿಂದಾಗಿ ಅಗ್ರ ಕ್ರಮಾಂಕಕ್ಕೆ ಬಡ್ತಿ ನೀಡಲಾಗಿತ್ತು. ಅದರಂತೆಯೇ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡದ ಮೊತ್ತ ಹೆಚ್ಚಿಸುತ್ತಿದ್ದಾರೆ.‌ ತಂಡದ ಬ್ಯಾಟಿಗ್‌ ತಂತ್ರ ಪಲ ಕೊಡುತ್ತಿದೆ. 
(6 / 6)
ನರೈನ್‌ ಕೆಕೆಆರ್‌ ತಂಡದ ಪ್ರಮುಖ ಸ್ಪಿನ್‌ ಬೌಲರ್‌. ಇವರ ಬ್ಯಾಟಿಂಗ್‌ ಕೌಶಲದಿಂದಾಗಿ ಅಗ್ರ ಕ್ರಮಾಂಕಕ್ಕೆ ಬಡ್ತಿ ನೀಡಲಾಗಿತ್ತು. ಅದರಂತೆಯೇ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡದ ಮೊತ್ತ ಹೆಚ್ಚಿಸುತ್ತಿದ್ದಾರೆ.‌ ತಂಡದ ಬ್ಯಾಟಿಗ್‌ ತಂತ್ರ ಪಲ ಕೊಡುತ್ತಿದೆ. (PTI)

    ಹಂಚಿಕೊಳ್ಳಲು ಲೇಖನಗಳು