ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tulip Festival 2024: ಶ್ರೀನಗರದಲ್ಲಿರುವ ಏಷ್ಯಾದ ಅತಿದೊಡ್ಡ ಟ್ಯುಲಿಪ್ ಉದ್ಯಾನ ಈಗ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ; ಚಿತ್ರನೋಟ

Tulip Festival 2024: ಶ್ರೀನಗರದಲ್ಲಿರುವ ಏಷ್ಯಾದ ಅತಿದೊಡ್ಡ ಟ್ಯುಲಿಪ್ ಉದ್ಯಾನ ಈಗ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ; ಚಿತ್ರನೋಟ

Mar 24, 2024 02:06 PM IST

ಶ್ರೀನಗರದಲ್ಲಿರುವ ಏಷ್ಯಾದ ಅತಿದೊಡ್ಡ ಟ್ಯುಲಿಪ್ ಉದ್ಯಾನ ಈಗ ಪ್ರವಾಸಿಗರ ಗಮನಸೆಳೆದಿದೆ. 55 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಈ ಉದ್ಯಾನದಲ್ಲಿ ಈ ವರ್ಷ 73 ಬಗೆಯ ಟ್ಯುಲಿಪ್ ಹೂವುಗಳು ಅರಳತೊಡಗಿವೆ. ಇದರ ಚಿತ್ರನೋಟ ಇಲ್ಲಿದೆ. 

ಶ್ರೀನಗರದಲ್ಲಿರುವ ಏಷ್ಯಾದ ಅತಿದೊಡ್ಡ ಟ್ಯುಲಿಪ್ ಉದ್ಯಾನ ಈಗ ಪ್ರವಾಸಿಗರ ಗಮನಸೆಳೆದಿದೆ. 55 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಈ ಉದ್ಯಾನದಲ್ಲಿ ಈ ವರ್ಷ 73 ಬಗೆಯ ಟ್ಯುಲಿಪ್ ಹೂವುಗಳು ಅರಳತೊಡಗಿವೆ. ಇದರ ಚಿತ್ರನೋಟ ಇಲ್ಲಿದೆ. 
ಶ್ರೀನಗರದಲ್ಲಿರುವ ಏಷ್ಯಾದ ಅತಿದೊಡ್ಡ ಟುಲಿಪ್ ಉದ್ಯಾನವನ್ನು ವೀಕ್ಷಿಸುವುದಕ್ಕೆ ಶನಿವಾರ ಸಾರ್ವಜನಿಕರಿಗೆ ತೆರೆದುಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಉದ್ಯಾನವು ದಾಲ್ ಸರೋವರ ಮತ್ತು ಜಬರ್ವಾನ್ ಬೆಟ್ಟಗಳ ನಡುವೆ ನೆಲೆಗೊಂಡಿದೆ. 
(1 / 10)
ಶ್ರೀನಗರದಲ್ಲಿರುವ ಏಷ್ಯಾದ ಅತಿದೊಡ್ಡ ಟುಲಿಪ್ ಉದ್ಯಾನವನ್ನು ವೀಕ್ಷಿಸುವುದಕ್ಕೆ ಶನಿವಾರ ಸಾರ್ವಜನಿಕರಿಗೆ ತೆರೆದುಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಉದ್ಯಾನವು ದಾಲ್ ಸರೋವರ ಮತ್ತು ಜಬರ್ವಾನ್ ಬೆಟ್ಟಗಳ ನಡುವೆ ನೆಲೆಗೊಂಡಿದೆ. (ANI)
ಇಂದಿರಾ ಗಾಂಧಿ ಸ್ಮಾರಕ ಟುಲಿಪ್ ಉದ್ಯಾನದಲ್ಲಿ 68 ವಿವಿಧ ಬಣ್ಣಗಳ ಟುಲಿಪ್ ಹೂವುಗಳು ಅರಳುತ್ತಿವೆ. ಈ ವರ್ಷ ಇದಕ್ಕೆ ಇನ್ನೂ 5 ಬಗೆಯ ಹೂವುಗಳು ಸೇರಿದ್ದು, ಸಾರ್ವಜನಿಕರಿಗೆ ವೀಕ್ಷಣೆಗಾಗಿ ತೆರೆಯಲಾಗಿದೆ ಎಂದು ಪುಷ್ಪ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಈ ಉದ್ಯಾನವನ್ನು ಸಿರಾಜ್ ಬಾಗ್ ಎಂದು ಕರೆಯಲಾಗುತ್ತಿತ್ತು.
(2 / 10)
ಇಂದಿರಾ ಗಾಂಧಿ ಸ್ಮಾರಕ ಟುಲಿಪ್ ಉದ್ಯಾನದಲ್ಲಿ 68 ವಿವಿಧ ಬಣ್ಣಗಳ ಟುಲಿಪ್ ಹೂವುಗಳು ಅರಳುತ್ತಿವೆ. ಈ ವರ್ಷ ಇದಕ್ಕೆ ಇನ್ನೂ 5 ಬಗೆಯ ಹೂವುಗಳು ಸೇರಿದ್ದು, ಸಾರ್ವಜನಿಕರಿಗೆ ವೀಕ್ಷಣೆಗಾಗಿ ತೆರೆಯಲಾಗಿದೆ ಎಂದು ಪುಷ್ಪ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಈ ಉದ್ಯಾನವನ್ನು ಸಿರಾಜ್ ಬಾಗ್ ಎಂದು ಕರೆಯಲಾಗುತ್ತಿತ್ತು.(HT Photo/Waseem Andrabi)
ಈ ವರ್ಷ, ಉದ್ಯಾನದಲ್ಲಿ 5 ಹೊಸ ಟುಲಿಪ್ ಪ್ರಭೇದಗಳ ಸೇರ್ಪಡೆಯಾಗಿದೆ. ಇದರೊಂದಿಗೆ ಒಟ್ಟು 68 ಪ್ರಭೇದಗಳ ಟ್ಯುಲಿಪ್ ಹೂವುಗಳನ್ನು ಇಲ್ಲಿ ಕಾಣಬಹುದು.
(3 / 10)
ಈ ವರ್ಷ, ಉದ್ಯಾನದಲ್ಲಿ 5 ಹೊಸ ಟುಲಿಪ್ ಪ್ರಭೇದಗಳ ಸೇರ್ಪಡೆಯಾಗಿದೆ. ಇದರೊಂದಿಗೆ ಒಟ್ಟು 68 ಪ್ರಭೇದಗಳ ಟ್ಯುಲಿಪ್ ಹೂವುಗಳನ್ನು ಇಲ್ಲಿ ಕಾಣಬಹುದು.(ANI)
ಪುಷ್ಪ ಕೃಷಿ ಇಲಾಖೆಯು ಈ ಉದ್ಯಾನದಲ್ಲಿ ಎರಡು ಲಕ್ಷ ಟ್ಯುಲಿಪ್ ಗಿಡಗಳನ್ನು ನೆಡುವ ಮೂಲಕ ಉದ್ಯಾನದ ಪ್ರದೇಶವನ್ನು ವಿಸ್ತರಿಸಿದೆ, ಇದರ ಪರಿಣಾಮವಾಗಿ 55 ಹೆಕ್ಟೇರ್ ಭೂಮಿಯಲ್ಲಿ 17 ಲಕ್ಷ ಟುಲಿಪ್ ಹೂವುಗಳು ಅರಳಿ ದಾಖಲೆ ಬರೆದಿವೆ.
(4 / 10)
ಪುಷ್ಪ ಕೃಷಿ ಇಲಾಖೆಯು ಈ ಉದ್ಯಾನದಲ್ಲಿ ಎರಡು ಲಕ್ಷ ಟ್ಯುಲಿಪ್ ಗಿಡಗಳನ್ನು ನೆಡುವ ಮೂಲಕ ಉದ್ಯಾನದ ಪ್ರದೇಶವನ್ನು ವಿಸ್ತರಿಸಿದೆ, ಇದರ ಪರಿಣಾಮವಾಗಿ 55 ಹೆಕ್ಟೇರ್ ಭೂಮಿಯಲ್ಲಿ 17 ಲಕ್ಷ ಟುಲಿಪ್ ಹೂವುಗಳು ಅರಳಿ ದಾಖಲೆ ಬರೆದಿವೆ.(ANI)
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿ ಸೀಸನ್‌ ಅನ್ನು ಬೇಸಿಗೆ ಮತ್ತು ಚಳಿಗಾಲವನ್ನು ಮೀರಿ ವಿಸ್ತರಿಸುವ ಗುರಿಯನ್ನು ಇಂದಿರಾ ಗಾಂಧಿ ಸ್ಮಾರಕ ಟುಲಿಪ್ ಗಾರ್ಡನ್ ಹೊಂದಿದೆ.
(5 / 10)
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿ ಸೀಸನ್‌ ಅನ್ನು ಬೇಸಿಗೆ ಮತ್ತು ಚಳಿಗಾಲವನ್ನು ಮೀರಿ ವಿಸ್ತರಿಸುವ ಗುರಿಯನ್ನು ಇಂದಿರಾ ಗಾಂಧಿ ಸ್ಮಾರಕ ಟುಲಿಪ್ ಗಾರ್ಡನ್ ಹೊಂದಿದೆ.(ANI)
ಇಂದಿರಾಗಾಂಧಿ ಟ್ಯುಲಿಪ್ ಗಾರ್ಡನ್‌ 2007ರಲ್ಲಿ ಸ್ಥಾಪನೆಯಾಯಿತು. ಆರಂಭದಲ್ಲಿ ಹಾಲೆಂಡ್‌ನಿಂದ ಆಮದು ಮಾಡಿಕೊಂಡ 50,000 ಟುಲಿಪ್ ಗಿಡಗೊಳಿಂದಿಗೆ ಪ್ರಾರಂಭವಾದ ಉದ್ಯಾನವು ಪ್ರವಾಸಿಗರನ್ನು ಬೇಗನೆ ಆಕರ್ಷಿಸಿತು. ಜನಪ್ರಿಯತೆಯನ್ನು ಗಳಿಸಿತು, 
(6 / 10)
ಇಂದಿರಾಗಾಂಧಿ ಟ್ಯುಲಿಪ್ ಗಾರ್ಡನ್‌ 2007ರಲ್ಲಿ ಸ್ಥಾಪನೆಯಾಯಿತು. ಆರಂಭದಲ್ಲಿ ಹಾಲೆಂಡ್‌ನಿಂದ ಆಮದು ಮಾಡಿಕೊಂಡ 50,000 ಟುಲಿಪ್ ಗಿಡಗೊಳಿಂದಿಗೆ ಪ್ರಾರಂಭವಾದ ಉದ್ಯಾನವು ಪ್ರವಾಸಿಗರನ್ನು ಬೇಗನೆ ಆಕರ್ಷಿಸಿತು. ಜನಪ್ರಿಯತೆಯನ್ನು ಗಳಿಸಿತು, (ANI)
ಇಂದಿರಾ ಗಾಂಧಿ ಸ್ಮಾರಕ ಟುಲಿಪ್ ಗಾರ್ಡನ್‌ಗೆ ನಿತ್ಯ ಬೆಳಿಗ್ಗೆ 8 ರಿಂದ ಸಂಜೆ 7 ರವರೆಗೆ ಸಾರ್ವಜನಿಕರು ಪ್ರವೇಶಿಸಬಹುದು, ಕಳೆದ ವರ್ಷ ಇಲ್ಲಿನ ಪ್ರವೇಶ ಶುಲ್ಕ ವಯಸ್ಕರಿಗೆ 60 ರೂ., ಮಕ್ಕಳಿಗೆ 25 ರೂಪಾಯಿ ಇತ್ತು.
(7 / 10)
ಇಂದಿರಾ ಗಾಂಧಿ ಸ್ಮಾರಕ ಟುಲಿಪ್ ಗಾರ್ಡನ್‌ಗೆ ನಿತ್ಯ ಬೆಳಿಗ್ಗೆ 8 ರಿಂದ ಸಂಜೆ 7 ರವರೆಗೆ ಸಾರ್ವಜನಿಕರು ಪ್ರವೇಶಿಸಬಹುದು, ಕಳೆದ ವರ್ಷ ಇಲ್ಲಿನ ಪ್ರವೇಶ ಶುಲ್ಕ ವಯಸ್ಕರಿಗೆ 60 ರೂ., ಮಕ್ಕಳಿಗೆ 25 ರೂಪಾಯಿ ಇತ್ತು.(PTI)
ಇಂದಿರಾ ಗಾಂಧಿ ಟ್ಯುಲಿಪ್ ಉದ್ಯಾನವು ಶ್ರೀನಗರದ ಶೇಖ್ ಉಲ್ ಆಲಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 22 ಕಿಲೋಮೀಟರ್ ಅಂತರದಲ್ಲಿದೆ.
(8 / 10)
ಇಂದಿರಾ ಗಾಂಧಿ ಟ್ಯುಲಿಪ್ ಉದ್ಯಾನವು ಶ್ರೀನಗರದ ಶೇಖ್ ಉಲ್ ಆಲಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 22 ಕಿಲೋಮೀಟರ್ ಅಂತರದಲ್ಲಿದೆ.(PTI)
ಟ್ಯುಲಿಪ್ ಉದ್ಯಾನವು ಶ್ರೀನಗರ ರೈಲು ನಿಲ್ದಾಣದಿಂದ 18 ಕಿಲೋಮೀಟರ್ ಮತ್ತು ಶ್ರೀನಗರದಿಂದ ಲಾಲ್‌ಚೌಕ್‌ನಿಂದ 8 ಕಿಲೋಮೀಟರ್ ದೂರದಲ್ಲಿದೆ,
(9 / 10)
ಟ್ಯುಲಿಪ್ ಉದ್ಯಾನವು ಶ್ರೀನಗರ ರೈಲು ನಿಲ್ದಾಣದಿಂದ 18 ಕಿಲೋಮೀಟರ್ ಮತ್ತು ಶ್ರೀನಗರದಿಂದ ಲಾಲ್‌ಚೌಕ್‌ನಿಂದ 8 ಕಿಲೋಮೀಟರ್ ದೂರದಲ್ಲಿದೆ,(PTI)
ಉದ್ಯಾನದಲ್ಲಿನ ವಿವಿಧ ಬಣ್ಣಗಳ ಹೂವುಗಳನ್ನು ಸೇರಿಸಲು ವಸಂತಕಾಲದ ಇತರೆ ಹೂವುಗಳಾದ ಹೈಸಿಂಥ್ಸ್, ಡಾಫೊಡಿಲ್‌ಗಳು, ಮಸ್ಕರಿ ಮತ್ತು ಸೈಕ್ಲಮೆನ್‌ಗಳನ್ನು ಸೇರಿಸಿರುವುದಾಗಿ ಪುಷ್ಪ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 
(10 / 10)
ಉದ್ಯಾನದಲ್ಲಿನ ವಿವಿಧ ಬಣ್ಣಗಳ ಹೂವುಗಳನ್ನು ಸೇರಿಸಲು ವಸಂತಕಾಲದ ಇತರೆ ಹೂವುಗಳಾದ ಹೈಸಿಂಥ್ಸ್, ಡಾಫೊಡಿಲ್‌ಗಳು, ಮಸ್ಕರಿ ಮತ್ತು ಸೈಕ್ಲಮೆನ್‌ಗಳನ್ನು ಸೇರಿಸಿರುವುದಾಗಿ ಪುಷ್ಪ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. (PTI)

    ಹಂಚಿಕೊಳ್ಳಲು ಲೇಖನಗಳು