ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮೆರಿಕದಲ್ಲಿ 4 ಪಂದ್ಯಗಳು; ಟಿ20 ವಿಶ್ವಕಪ್ 2024ರಲ್ಲಿ ಭಾರತದ ಪಂದ್ಯಗಳ ವೇಳಾಪಟ್ಟಿ ಹೀಗಿದೆ

ಅಮೆರಿಕದಲ್ಲಿ 4 ಪಂದ್ಯಗಳು; ಟಿ20 ವಿಶ್ವಕಪ್ 2024ರಲ್ಲಿ ಭಾರತದ ಪಂದ್ಯಗಳ ವೇಳಾಪಟ್ಟಿ ಹೀಗಿದೆ

Jan 08, 2024 08:30 PM IST

India ICC T20 World Cup 2024 Fixtures: ಟಿ20 ವಿಶ್ವಕಪ್ 2024ರ ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿವೆ. ಗ್ರೂಪ್ ಪಂದ್ಯಗಳಲ್ಲಿ ಭಾರತ ಯಾವಾಗ, ಎಲ್ಲಿ, ಯಾವ ತಂಡದ ವಿರುದ್ಧ ಆಡಲಿದೆ? ಟೀಮ್‌ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಹೀಗಿದೆ.

  • India ICC T20 World Cup 2024 Fixtures: ಟಿ20 ವಿಶ್ವಕಪ್ 2024ರ ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿವೆ. ಗ್ರೂಪ್ ಪಂದ್ಯಗಳಲ್ಲಿ ಭಾರತ ಯಾವಾಗ, ಎಲ್ಲಿ, ಯಾವ ತಂಡದ ವಿರುದ್ಧ ಆಡಲಿದೆ? ಟೀಮ್‌ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಹೀಗಿದೆ.
ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಆತಿಥ್ಯದಲ್ಲಿ ನಡೆಯಲಿರುವ 2024ರ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟಗೊಂಡಿದೆ. ಭಾರತವು ಟೂರ್ನಿಯ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಪಾಕಿಸ್ತಾನ, ಕೆನಡಾ, ಐರ್ಲೆಂಡ್ ಹಾಗೂ ಸಹ ಆತಿಥೇಯ ದೇಶ ಅಮೆರಿಕ ತಂಡಗಳಿವೆ. ಭಾರತ ತನ್ನ ಗುಂಪು ಹಂತದ ಎಲ್ಲಾ ನಾಲ್ಕು ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಿದೆ.
(1 / 7)
ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಆತಿಥ್ಯದಲ್ಲಿ ನಡೆಯಲಿರುವ 2024ರ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟಗೊಂಡಿದೆ. ಭಾರತವು ಟೂರ್ನಿಯ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಪಾಕಿಸ್ತಾನ, ಕೆನಡಾ, ಐರ್ಲೆಂಡ್ ಹಾಗೂ ಸಹ ಆತಿಥೇಯ ದೇಶ ಅಮೆರಿಕ ತಂಡಗಳಿವೆ. ಭಾರತ ತನ್ನ ಗುಂಪು ಹಂತದ ಎಲ್ಲಾ ನಾಲ್ಕು ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಿದೆ.(HT)
ಭಾರತ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಸೆಣಸಲಿದೆ. ಈ ಪಂದ್ಯವು ಜೂನ್ 5ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.
(2 / 7)
ಭಾರತ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಸೆಣಸಲಿದೆ. ಈ ಪಂದ್ಯವು ಜೂನ್ 5ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.(BCCI)
ಜೂನ್ 9ರಂದು ಭಾರತ-ಪಾಕಿಸ್ತಾನ ತಂಡಗಳ ನಡುವೆ ಬ್ಲಾಕ್ ಬಸ್ಟರ್ ಪಂದ್ಯ ನಡೆಯಲಿದೆ. ಸಾಂಪ್ರದಾಯಿಕ ಎದುರಾಳಿಗಳು ಒಂದೇ ಗುಂಪಿನಲ್ಲಿವೆ. ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯ ಯಾವಾಗ ನಡೆಯಲಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಈ ಪಂದ್ಯ ಕೂಡ ನ್ಯೂಯಾರ್ಕ್‌ನಲ್ಲಿ ನಡೆಯಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
(3 / 7)
ಜೂನ್ 9ರಂದು ಭಾರತ-ಪಾಕಿಸ್ತಾನ ತಂಡಗಳ ನಡುವೆ ಬ್ಲಾಕ್ ಬಸ್ಟರ್ ಪಂದ್ಯ ನಡೆಯಲಿದೆ. ಸಾಂಪ್ರದಾಯಿಕ ಎದುರಾಳಿಗಳು ಒಂದೇ ಗುಂಪಿನಲ್ಲಿವೆ. ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯ ಯಾವಾಗ ನಡೆಯಲಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಈ ಪಂದ್ಯ ಕೂಡ ನ್ಯೂಯಾರ್ಕ್‌ನಲ್ಲಿ ನಡೆಯಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.(BCCI)
ಭಾರತ ತನ್ನ ಮೂರನೇ ಪಂದ್ಯದಲ್ಲಿ ಟೂರ್ನಿಯ ಸಹ ಆತಿಥೇಯ ಯುಎಸ್‌ಎ ತಂಡವನ್ನು ಎದುರಿಸಲಿದೆ. ಜೂನ್ 12ರಂದು ಅಮೆರಿಕ ವಿರುದ್ಧದ ಪಂದ್ಯ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಟೀಂ ಇಂಡಿಯಾ ತನ್ನ ಮೊದಲ 3 ಗ್ರೂಪ್ ಪಂದ್ಯಗಳನ್ನು ನ್ಯೂಯಾರ್ಕ್‌ನಲ್ಲಿ ಆಡಲಿದೆ.
(4 / 7)
ಭಾರತ ತನ್ನ ಮೂರನೇ ಪಂದ್ಯದಲ್ಲಿ ಟೂರ್ನಿಯ ಸಹ ಆತಿಥೇಯ ಯುಎಸ್‌ಎ ತಂಡವನ್ನು ಎದುರಿಸಲಿದೆ. ಜೂನ್ 12ರಂದು ಅಮೆರಿಕ ವಿರುದ್ಧದ ಪಂದ್ಯ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಟೀಂ ಇಂಡಿಯಾ ತನ್ನ ಮೊದಲ 3 ಗ್ರೂಪ್ ಪಂದ್ಯಗಳನ್ನು ನ್ಯೂಯಾರ್ಕ್‌ನಲ್ಲಿ ಆಡಲಿದೆ.(BCCI)
ಭಾರತ ತನ್ನ ಕೊನೆಯ ಗುಂಪು ಹಂತದ ಪಂದ್ಯವನ್ನು ಕೆನಡಾ ವಿರುದ್ಧ ಆಡಲಿದೆ. ಈ ಪಂದ್ಯ ಜೂನ್ 15 ರಂದು ಫ್ಲೋರಿಡಾದಲ್ಲಿ ನಡೆಯಲಿದೆ. ಫ್ಲೋರಿಡಾದಲ್ಲಿ ಟೀಂ ಇಂಡಿಯಾ ಈ ಗುಂಪಿನ ಒಂದು ಪಂದ್ಯವನ್ನು ಮಾತ್ರ ಆಡಲಿದೆ. ಭಾರತವು ಈ ಮೊದಲು ಫ್ಲೋರಿಡಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದೆ.
(5 / 7)
ಭಾರತ ತನ್ನ ಕೊನೆಯ ಗುಂಪು ಹಂತದ ಪಂದ್ಯವನ್ನು ಕೆನಡಾ ವಿರುದ್ಧ ಆಡಲಿದೆ. ಈ ಪಂದ್ಯ ಜೂನ್ 15 ರಂದು ಫ್ಲೋರಿಡಾದಲ್ಲಿ ನಡೆಯಲಿದೆ. ಫ್ಲೋರಿಡಾದಲ್ಲಿ ಟೀಂ ಇಂಡಿಯಾ ಈ ಗುಂಪಿನ ಒಂದು ಪಂದ್ಯವನ್ನು ಮಾತ್ರ ಆಡಲಿದೆ. ಭಾರತವು ಈ ಮೊದಲು ಫ್ಲೋರಿಡಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದೆ.(BCCI)
ಜೂನ್ 1ರಂದು ಟೂರ್ನಿ ಆರಂಭಗೊಂಡು ಅದೇ ತಿಂಗಳ 29ಕ್ಕೆ ಮೆಗಾ ಟೂರ್ನಿ ಮುಕ್ತಾಯಗೊಳ್ಳಲಿದೆ. ಒಟ್ಟು 20 ತಂಡಗಳು ಒಂದು ಪ್ರಶಸ್ತಿಗಾಗಿ 29 ದಿನಗಳ ಕಾಲ ಕಾದಾಟ ನಡೆಸಲಿವೆ.
(6 / 7)
ಜೂನ್ 1ರಂದು ಟೂರ್ನಿ ಆರಂಭಗೊಂಡು ಅದೇ ತಿಂಗಳ 29ಕ್ಕೆ ಮೆಗಾ ಟೂರ್ನಿ ಮುಕ್ತಾಯಗೊಳ್ಳಲಿದೆ. ಒಟ್ಟು 20 ತಂಡಗಳು ಒಂದು ಪ್ರಶಸ್ತಿಗಾಗಿ 29 ದಿನಗಳ ಕಾಲ ಕಾದಾಟ ನಡೆಸಲಿವೆ.(AP)
ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಕೆನಡಾ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನಮೀಬಿಯಾ, ನೇಪಾಳ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ಓಮನ್, ಪಾಕಿಸ್ತಾನ, ಪಪುವಾ ನ್ಯೂಗಿನಿಯಾ, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಉಗಾಂಡಾ, ಯುನೈಟೆಡ್ ಸ್ಟೇಟ್ಸ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿವೆ.
(7 / 7)
ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಕೆನಡಾ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನಮೀಬಿಯಾ, ನೇಪಾಳ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ಓಮನ್, ಪಾಕಿಸ್ತಾನ, ಪಪುವಾ ನ್ಯೂಗಿನಿಯಾ, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಉಗಾಂಡಾ, ಯುನೈಟೆಡ್ ಸ್ಟೇಟ್ಸ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿವೆ.(AP)

    ಹಂಚಿಕೊಳ್ಳಲು ಲೇಖನಗಳು