ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜಗತ್ತಿನ 10 ವಿಸ್ಮಯಕಾರಿ ತಾಣಗಳಿವು; ಇಲ್ಲಿನ ಅಚ್ಚರಿಯನ್ನು ಕಣ್ಣಾರೆ ಕಂಡ್ರು ನೀವು ನಂಬೋದು ಕಷ್ಟ

ಜಗತ್ತಿನ 10 ವಿಸ್ಮಯಕಾರಿ ತಾಣಗಳಿವು; ಇಲ್ಲಿನ ಅಚ್ಚರಿಯನ್ನು ಕಣ್ಣಾರೆ ಕಂಡ್ರು ನೀವು ನಂಬೋದು ಕಷ್ಟ

Mar 29, 2024 01:05 PM IST

ನಮ್ಮ ಜಗತ್ತು ಹಾಗೂ ಪ್ರಕೃತಿ ಹಲವು ವಿಸ್ಮಯಗಳ ಆಗರ. ನಮ್ಮ ಕಣ್ಣನ್ನೇ ನಾವು ನಂಬಲಾರದಷ್ಟು ವಿಸ್ಮಯಗಳು ಇಲ್ಲಿವೆ. ಪ್ರಪಂಚದ ಅದೆಷ್ಟೋ ತಾಣಗಳು ನಮಗೆ ಅಸಹಜ ಎನ್ನಿಸುವುದು ಸುಳ್ಳಲ್ಲ. ಅಂತಹ 10 ನಿಗೂಢ, ವಿಸ್ಮಯಕಾರಿ ತಾಣಗಳು ಇಲ್ಲಿವೆ ನೋಡಿ. ಈ ತಾಣಗಳ ಅಚ್ಚರಿಯನ್ನು ನೀವೇ ಕಣ್ಣಾರೆ ನೋಡಿದ್ರೂ ನಂಬೋದು ಕಷ್ಟ. 

  • ನಮ್ಮ ಜಗತ್ತು ಹಾಗೂ ಪ್ರಕೃತಿ ಹಲವು ವಿಸ್ಮಯಗಳ ಆಗರ. ನಮ್ಮ ಕಣ್ಣನ್ನೇ ನಾವು ನಂಬಲಾರದಷ್ಟು ವಿಸ್ಮಯಗಳು ಇಲ್ಲಿವೆ. ಪ್ರಪಂಚದ ಅದೆಷ್ಟೋ ತಾಣಗಳು ನಮಗೆ ಅಸಹಜ ಎನ್ನಿಸುವುದು ಸುಳ್ಳಲ್ಲ. ಅಂತಹ 10 ನಿಗೂಢ, ವಿಸ್ಮಯಕಾರಿ ತಾಣಗಳು ಇಲ್ಲಿವೆ ನೋಡಿ. ಈ ತಾಣಗಳ ಅಚ್ಚರಿಯನ್ನು ನೀವೇ ಕಣ್ಣಾರೆ ನೋಡಿದ್ರೂ ನಂಬೋದು ಕಷ್ಟ. 
ದಿ ವೇವ್‌-ಅರಿಜೋನಾ, ಅಮೆರಿಕ: ಈ ಜಾಗವು ಅದ್ಭುತ ಮರಳುಗಲ್ಲಿನ ಗುಹೆಗಳಿಂದ ಕೂಡಿದೆ. ಕೆಂಪು ಅಲೆಗಳಂತೆ ಕಾಣುವ ಕಡಿದಾದ ಬೆಟ್ಟಗಳನ್ನು ಇಲ್ಲಿ ಕಾಣಬಹುದು. ಪೆರಿಯಾ ಕಣಿವೆಯಲ್ಲಿದೆ ಈ ತಾಣ. ಇದು ಜಗತ್ತಿನ ಅಸಹಜ ಎನ್ನಿಸುವ ತಾಣಗಳಲ್ಲಿ ಒಂದು.
(1 / 10)
ದಿ ವೇವ್‌-ಅರಿಜೋನಾ, ಅಮೆರಿಕ: ಈ ಜಾಗವು ಅದ್ಭುತ ಮರಳುಗಲ್ಲಿನ ಗುಹೆಗಳಿಂದ ಕೂಡಿದೆ. ಕೆಂಪು ಅಲೆಗಳಂತೆ ಕಾಣುವ ಕಡಿದಾದ ಬೆಟ್ಟಗಳನ್ನು ಇಲ್ಲಿ ಕಾಣಬಹುದು. ಪೆರಿಯಾ ಕಣಿವೆಯಲ್ಲಿದೆ ಈ ತಾಣ. ಇದು ಜಗತ್ತಿನ ಅಸಹಜ ಎನ್ನಿಸುವ ತಾಣಗಳಲ್ಲಿ ಒಂದು.(Pinterest )
ಸಲಾರ್ ಡಿ ಯುಯುನಿ, ಬೊಲಿವಿಯಾ: ಇದು ಜಗತ್ತಿನ ಅತಿ ದೊಡ್ಡ ಉಪ್ಪು ನೀರಿನ ಸರೋವರ. 10000 ಚದರ ಕಿಲೋಮೀಟರ್‌ ವಿಸ್ತೀರ್ಣ ಹೊಂದಿರುವ ಈ ಪ್ರದೇಶವು ಸಮುದ್ರ ಮಟ್ಟದಿಂದ 3,656 ಮೀಟರ್‌ ಎತ್ತರದಲ್ಲಿದೆ. ಇಲ್ಲಿ 40 ಸಾವಿರ ವರ್ಷಗಳ ಹಿಂದಿನ ಸರೋವರ ಆವಿಯಾಗಿ ಉಪ್ಪು ನೀರಿನ ಮಂಜುಗಡ್ಡೆಯಾಗಿದೆ ಎನ್ನಲಾಗುತ್ತದೆ. 
(2 / 10)

ಪಮುಕ್ಕಲೆ, ಟರ್ಕಿ: ಟರ್ಕಿಯಲ್ಲಿರುವ ಈ ತಾಣವು ಮಂಜುಗಡ್ಡೆಯ ಕೋಟೆಯ ನಡುವೆ ಇರುವ ಚಿಕ್ಕ ಚಿಕ್ಕ ಕೊಳಗಳನ್ನು ಹೊಂದಿದ ವಿಶೇಷ ತಾಣವಾಗಿದೆ. ಇದನ್ನು ಟರ್ಕಿ ಭಾಷೆಯಲ್ಲಿ ಹತ್ತಿಕೋಟೆ ಎಂದು ಕರೆಯುತ್ತಾರೆ. ನೈಋತ್ಯ ಟರ್ಕಿಯ ಡೆನಿಜ್ಲಿ ಪ್ರಾಂತ್ಯದಲ್ಲಿದೆ ಪಮುಕ್ಕಲೆ. ಇದು ಯುನೆಸ್ಕೊ ವಿಶ್ವಪಾರಂಪರಿಕ ತಾಣದಲ್ಲೂ ಹೆಸರು ಗಳಿಸಿದೆ. 
(3 / 10)
ಪಮುಕ್ಕಲೆ, ಟರ್ಕಿ: ಟರ್ಕಿಯಲ್ಲಿರುವ ಈ ತಾಣವು ಮಂಜುಗಡ್ಡೆಯ ಕೋಟೆಯ ನಡುವೆ ಇರುವ ಚಿಕ್ಕ ಚಿಕ್ಕ ಕೊಳಗಳನ್ನು ಹೊಂದಿದ ವಿಶೇಷ ತಾಣವಾಗಿದೆ. ಇದನ್ನು ಟರ್ಕಿ ಭಾಷೆಯಲ್ಲಿ ಹತ್ತಿಕೋಟೆ ಎಂದು ಕರೆಯುತ್ತಾರೆ. ನೈಋತ್ಯ ಟರ್ಕಿಯ ಡೆನಿಜ್ಲಿ ಪ್ರಾಂತ್ಯದಲ್ಲಿದೆ ಪಮುಕ್ಕಲೆ. ಇದು ಯುನೆಸ್ಕೊ ವಿಶ್ವಪಾರಂಪರಿಕ ತಾಣದಲ್ಲೂ ಹೆಸರು ಗಳಿಸಿದೆ. (trip adivsor)
ನರಕದ ಬಾಗಿಲು, ತುರ್ಕಮೆನಿಸ್ತಾನ್: ಕರಕುಮ್ ಮರುಭೂಮಿಯಲ್ಲಿರುವ ದರ್ವಾಜಾ ಗ್ಯಾಸ್ ಕ್ರೇಟರ್ ಅನ್ನು 'ನರಕದ ಬಾಗಿಲು' ಎಂದು ಕರೆಯಲಾಗುತ್ತದೆ. ಇಲ್ಲಿ ನಾಲ್ಕು ದಶಕಗಳಿಂದ ನಿರಂತರವಾಗಿ ಉರಿಯುತ್ತಿರುವ ಕುಳಿಗಳು, ಪ್ರಜ್ವಲಿಸುತ್ತಿರುವ ಜ್ವಾಲೆಗಳನ್ನ ಕಾಣಬಹುದಾಗಿದೆ. 
(4 / 10)

ವೈಟೊಮೊ ಗುಹೆಗಳು, ನ್ಯೂಜಿಲೆಂಡ್: ಇದು ಕೂಡ ಜಗತ್ತಿನ ವಿಸ್ಮಯಕಾರಿ ತಾಣಗಳಲ್ಲಿ ಒಂದು. ಇಲ್ಲಿನ ಗುಹೆಗಳಲ್ಲಿ ಮಿಂಚುಹುಳುಗಳು ಹರಡಿರುವಂತೆ ಬೆಳಕು ಹರಡಿರುತ್ತದೆ. ಹಗಲಿನಲ್ಲೂ ತೀವ್ರ ಕತ್ತಲೆ ಇರುವ ಈ ಜಾಗದಲ್ಲಿ ಮಿಂಚು ಹುಳದ ರೀತಿಯ ಪುಟ್ಟ ಹುಳಗಳು ವಿಸ್ಮಯ ಲೋಕವನ್ನು ಸೃಷ್ಟಿಸಿವೆ. 
(5 / 10)
ವೈಟೊಮೊ ಗುಹೆಗಳು, ನ್ಯೂಜಿಲೆಂಡ್: ಇದು ಕೂಡ ಜಗತ್ತಿನ ವಿಸ್ಮಯಕಾರಿ ತಾಣಗಳಲ್ಲಿ ಒಂದು. ಇಲ್ಲಿನ ಗುಹೆಗಳಲ್ಲಿ ಮಿಂಚುಹುಳುಗಳು ಹರಡಿರುವಂತೆ ಬೆಳಕು ಹರಡಿರುತ್ತದೆ. ಹಗಲಿನಲ್ಲೂ ತೀವ್ರ ಕತ್ತಲೆ ಇರುವ ಈ ಜಾಗದಲ್ಲಿ ಮಿಂಚು ಹುಳದ ರೀತಿಯ ಪುಟ್ಟ ಹುಳಗಳು ವಿಸ್ಮಯ ಲೋಕವನ್ನು ಸೃಷ್ಟಿಸಿವೆ. (viator)
ದಿ ಗ್ರೇಟ್ ಬ್ಲೂ ಹೋಲ್, ಬೆಲೀಜ್: ಇದು ಬೆಲೀಜ್ ಕರಾವಳಿಯಲ್ಲಿರುವ ವಿಸ್ಮಯಕಾರಿ ತಾಣವಾಗಿದೆ. ಸಮುದ್ರ ಮಧ್ಯೆ ನೀಲಿ ನೀರಿನ ಹೊಂಡಗಳಿರುವುದನ್ನು ಇಲ್ಲಿ ಕಾಣಬಹುದಾಗಿದೆ. 15000 ವರ್ಷಗಳ ಹಿಂದೆ ಈ ಕುಳಿಗಳು ಉಂಟಾಗಿದೆ ಎಂದು ಹೇಳಲಾಗುತ್ತದೆ. ಇದು ಕೂಡ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಹೆಸರು ಗಳಿಸಿದೆ. 
(6 / 10)
ದಿ ಗ್ರೇಟ್ ಬ್ಲೂ ಹೋಲ್, ಬೆಲೀಜ್: ಇದು ಬೆಲೀಜ್ ಕರಾವಳಿಯಲ್ಲಿರುವ ವಿಸ್ಮಯಕಾರಿ ತಾಣವಾಗಿದೆ. ಸಮುದ್ರ ಮಧ್ಯೆ ನೀಲಿ ನೀರಿನ ಹೊಂಡಗಳಿರುವುದನ್ನು ಇಲ್ಲಿ ಕಾಣಬಹುದಾಗಿದೆ. 15000 ವರ್ಷಗಳ ಹಿಂದೆ ಈ ಕುಳಿಗಳು ಉಂಟಾಗಿದೆ ಎಂದು ಹೇಳಲಾಗುತ್ತದೆ. ಇದು ಕೂಡ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಹೆಸರು ಗಳಿಸಿದೆ. (Wikipedia)
ಮೌಂಟ್ ರೋರೈಮಾ, ವೆನೆಜುವೆಲಾ: ಇದು ವಿಲಕ್ಷಣ ಬೆಟ್ಟಗಳನ್ನು ಹೊಂದಿರುವ ಪ್ರದೇಶವಾಗಿದ್ದು, ಬೆಟ್ಟಗಳ ಬುಡದಲ್ಲಿ ಹಿಮ ಹರಡಿರುತ್ತದೆ. ಇಲ್ಲಿನ ಪ್ರಕೃತಿ ವಿಸ್ಮಯವು ನಿಮ್ಮನ್ನು ಬೆರಗುಗೊಳಿಸುವುದರಲ್ಲಿ ಅನುಮಾನವಿಲ್ಲ. 
(7 / 10)
ಮೌಂಟ್ ರೋರೈಮಾ, ವೆನೆಜುವೆಲಾ: ಇದು ವಿಲಕ್ಷಣ ಬೆಟ್ಟಗಳನ್ನು ಹೊಂದಿರುವ ಪ್ರದೇಶವಾಗಿದ್ದು, ಬೆಟ್ಟಗಳ ಬುಡದಲ್ಲಿ ಹಿಮ ಹರಡಿರುತ್ತದೆ. ಇಲ್ಲಿನ ಪ್ರಕೃತಿ ವಿಸ್ಮಯವು ನಿಮ್ಮನ್ನು ಬೆರಗುಗೊಳಿಸುವುದರಲ್ಲಿ ಅನುಮಾನವಿಲ್ಲ. (Mybestplace)
ನ್ಯಾಟ್ರಾನ್ ಸರೋವರ, ತಾಂಜಾನಿಯಾ: ಇದು ಬಣ್ಣಗಳ ಸಮುದ್ರ ಎಂದರೂ ತಪ್ಪಲ್ಲ. ಇಲ್ಲಿನ ಸಮುದ್ರದ ನೀರು ಕೆಂಪು, ಹಸಿರು, ನೀಲಿ ಹೀಗೆ ವಿವಿಧ ಬಣ್ಣಗಳನ್ನು ಹೊಂದಿದೆ. ಆಫ್ರಿಕಾದ ಫೆಮ್ಲಿಂಗೊಗಳು ಈ ಜಾಗವನ್ನು ತಮ್ಮ ಸಂತಾನೋತ್ಪತಿಗಾಗಿ ಆರಿಸಿಕೊಳ್ಳುತ್ತವೆ. ಹಾಗಾಗಿ ಇಲ್ಲಿ ಸಾವಿರಾರು ಅಪರೂಪದ ಫೆಮ್ಲಿಂಗೊಗಳನ್ನು ಕಾಣಬಹುದು. 
(8 / 10)
ನ್ಯಾಟ್ರಾನ್ ಸರೋವರ, ತಾಂಜಾನಿಯಾ: ಇದು ಬಣ್ಣಗಳ ಸಮುದ್ರ ಎಂದರೂ ತಪ್ಪಲ್ಲ. ಇಲ್ಲಿನ ಸಮುದ್ರದ ನೀರು ಕೆಂಪು, ಹಸಿರು, ನೀಲಿ ಹೀಗೆ ವಿವಿಧ ಬಣ್ಣಗಳನ್ನು ಹೊಂದಿದೆ. ಆಫ್ರಿಕಾದ ಫೆಮ್ಲಿಂಗೊಗಳು ಈ ಜಾಗವನ್ನು ತಮ್ಮ ಸಂತಾನೋತ್ಪತಿಗಾಗಿ ಆರಿಸಿಕೊಳ್ಳುತ್ತವೆ. ಹಾಗಾಗಿ ಇಲ್ಲಿ ಸಾವಿರಾರು ಅಪರೂಪದ ಫೆಮ್ಲಿಂಗೊಗಳನ್ನು ಕಾಣಬಹುದು. (Hubpages)
ಟಿಯಾಂಜಿ ಪರ್ವತ: ಚೀನಾದ ಹುನಾನ್‌ ಪ್ರಾಂತ್ಯದಲ್ಲಿರುವ ಟಿಯಾಂಜಿ ಪರ್ವತ ಎತ್ತರದ ಶಿಖರಗಳು, ಮಧ್ಯೆದಲ್ಲಿ ಹರಿದಾಡುವ ಮೋಡಗಳಂತೆ ಕಾಣುವ ಹಿಮ, ಹಸಿರ ಪ್ರಕೃತಿಯ ನಡುವೆ ಈ ಪ್ರದೇಶ ನಿಮ್ಮನ್ನು ವಿಸ್ಮಯ ಲೋಕಕ್ಕೆ ಕರೆದುಕೊಂಡು ಹೋಗುವುದು ಸುಳ್ಳಲ್ಲ,.
(9 / 10)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
(10 / 10)
ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 

    ಹಂಚಿಕೊಳ್ಳಲು ಲೇಖನಗಳು