ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಯಶಸ್ವಿ ಮಕ್ಕಳ ಪೋಷಕರಲ್ಲಿ ಕಾಣಿಸುವ 7 ಸಾಮಾನ್ಯ ಸಂಗತಿಗಳಿವು; ನಿಮಗೂ ಈ ಟಿಪ್ಸ್ ಸಹಾಯವಾಗುತ್ತೆ

ಯಶಸ್ವಿ ಮಕ್ಕಳ ಪೋಷಕರಲ್ಲಿ ಕಾಣಿಸುವ 7 ಸಾಮಾನ್ಯ ಸಂಗತಿಗಳಿವು; ನಿಮಗೂ ಈ ಟಿಪ್ಸ್ ಸಹಾಯವಾಗುತ್ತೆ

Apr 28, 2024 06:00 PM IST

ಮಗುವಿನ ಭವಿಷ್ಯ ನಿರ್ಮಾಣದಲ್ಲಿ ಬಾಲ್ಯದಿಂದಲೇ ಅದರ ಲಾಲನೆ-ಪಾಲನೆ ಹೆಚ್ಚು ಪ್ರಭಾವಿತವಾಗಿರುತ್ತದೆ. ಮಗುವಿನ ಭಾವನಾತ್ಮಕ, ಸಾಮಾಜಿಕ ಮತ್ತು ಬೌದ್ಧಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ನಿರ್ಣಾಯಕವಾಗಿರುತ್ತದೆ. ಯಶಸ್ವಿ ಪೋಷಕರು ಎನಿಸಿಕೊಳ್ಳುವಲ್ಲಿ ಪೋಷಕರಲ್ಲಿ ಇರಬೇಕಾದ ಸಾಮಾನ್ಯವಾದ ಕೆಲವು ಗುಣಲಕ್ಷಣಗಳು ಹೀಗಿವೆ. 

  • ಮಗುವಿನ ಭವಿಷ್ಯ ನಿರ್ಮಾಣದಲ್ಲಿ ಬಾಲ್ಯದಿಂದಲೇ ಅದರ ಲಾಲನೆ-ಪಾಲನೆ ಹೆಚ್ಚು ಪ್ರಭಾವಿತವಾಗಿರುತ್ತದೆ. ಮಗುವಿನ ಭಾವನಾತ್ಮಕ, ಸಾಮಾಜಿಕ ಮತ್ತು ಬೌದ್ಧಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ನಿರ್ಣಾಯಕವಾಗಿರುತ್ತದೆ. ಯಶಸ್ವಿ ಪೋಷಕರು ಎನಿಸಿಕೊಳ್ಳುವಲ್ಲಿ ಪೋಷಕರಲ್ಲಿ ಇರಬೇಕಾದ ಸಾಮಾನ್ಯವಾದ ಕೆಲವು ಗುಣಲಕ್ಷಣಗಳು ಹೀಗಿವೆ. 
ಯಾವುದೇ ವ್ಯಕ್ತಿಗೂ ಬದುಕಿನಲ್ಲಿ ಶಿಸ್ತು ಮುಖ್ಯ. ಬೆಳಗ್ಗೆ ನಿದ್ದೆಯಿಂದ ಏಳುವುದರಿಂದ ಹಿಡಿದು, ಊಟದ ಸಮಯ ಮತ್ತು ಆಟದ ಸಮಯ ಎಲ್ಲದಕ್ಕೂ ಒಂದು ಶಿಸ್ತಿನ ಸಮಯ ಪಾಲನೆ ಬೇಕು. ಆಗ ಮಗು ಸಮಯ ಸೇರಿದಂತೆ ಆಟೋಟಗಳ ಮೌಲ್ಯವನ್ನು ಅರಿತುಕೊಳ್ಳುತ್ತದೆ. ಮಕ್ಕಳಲ್ಲಿ ಶಿಸ್ತನ್ನು ಕಲಿಸುವ ಪೋಷಕರು ಭವಿಷ್ಯದ ಯಶಸ್ಸಿನತ್ತ ಕೊಂಡೊಯ್ಯುತ್ತಾರೆ.
(1 / 7)

ಯಶಸ್ವಿ ಪೋಷಕರು ಮಗುವಿನ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಬಾಲ್ಯದಿಂದಲೇ ಮಕ್ಕಳಲ್ಲಿ ಕಲಿಕೆಯ ಉತ್ಸಾಹ ತುಂಬುತ್ತಾರೆ. ಇದೇ ವೇಳೆ ಅವರಲ್ಲಿ ಒತ್ತಡ  ಹಾಗೂ ಹೊರೆಯಾಗದಂತೆ ಎಚ್ಚರವಾಗಿರುತ್ತಾರೆ. ಮಗುವಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಅದಕ್ಕೆ ಪೂರಕವಾಗಿ ಮನೆಯಲ್ಲಿ ಕ್ರಿಯಾತ್ಮಕ ವಾತಾವರಣವನ್ನು ಸೃಷ್ಟಿಸುತ್ತಾರೆ.
(2 / 7)

ಯಶಸ್ವಿ ಪೋಷಕರು ತಮ್ಮ ಮಕ್ಕಳನ್ನು ಉನ್ನತ ಮಟ್ಟದಲ್ಲಿ ಹಿಡಿದಿಟ್ಟುಕೊಳ್ಳುತ್ತಾರೆ. ಅವರು ಯಶಸ್ವಿಯಾಗಲು ಬೇಕಾದ ಅಗತ್ಯ ಬೆಂಬಲ ನೀಡುತ್ತಾರೆ. ಕಾಲಕಾಲಕ್ಕೆ ನಿರ್ದೇಶನ ನೀಡುತ್ತಾರೆ. ಮಗುವಿನ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟು ಅದರ ಅನ್ವೇಷಣಾ ಮನೋಭಾವವನ್ನು ಮುಂದುವರಿಸಲು ಪ್ರೋತ್ಸಾಹಿಸುತ್ತಾರೆ. ಮಕ್ಕಳಲ್ಲಿ ವಿಶ್ವಾಸ ಹೆಚ್ಚಿಸಲು ನೆರವಾಗುತ್ತಾರೆ.
(3 / 7)

ಮಕ್ಕಳನ್ನು ಆರಾಮದಾಯಕ ವಲಯದಲ್ಲಿಯೇ ಉಳಿಯಲು ಬಿಡಬಾರದು. ಅಂಥಾ ಆರಾಮದಾಯಕ ವಲಯದಿಂದ ಹೊರ ತರಿದಿದ್ದರೆ, ಆ ಮಗು ತನ್ನ ಜೀವನದುದ್ದಕ್ಕೂ ಮಗುವಾಗಿ ಉಳಿಯುತ್ತದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಸ್ವಾವಲಂಬಿಗಳಾಗಿ ಬೆಳೆಸಬೇಕು. ಒಬ್ಬ ಚಿಂತಕರಾಗಿ ಅವರನ್ನು ಸಕ್ರಿಯಗೊಳಿಸಬೇಕು. ಮಕ್ಕಳಿಗೂ ಮನೆಕೆಲಸ, ಅಡುಗೆ, ಶುಚಿಗೊಳಿಸುವಿಕೆ ಮತ್ತು ವೈಯಕ್ತಿಕ ನೈರ್ಮಲ್ಯವನ್ನು ನಿಧಾನವಾಗಿ ಕಲಿಸಿಕೊಡಬೇಕು. ಆಗ ಮಕ್ಕಳು ಕೂಡಾ ಎದುರಾಗುವ ಅಡೆತಡೆಗಳನ್ನು ಎದುರಿಸಿ ಬೆಳೆಯುತ್ತಾರೆ.
(4 / 7)

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದರೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಕೊಳ್ಳುವಂತೆ ಪೋಷಕರು ಬೆಂಬಲಿಸಬೇಕು. ತಮ್ಮಲ್ಲಿರುವ ಉತ್ತಮ ಹವ್ಯಾಸಗಳನ್ನು ಪೋಷಕರು ಮಕ್ಕಳಲ್ಲೂ ಮುಂದುವರೆಸಬೇಕು. ಕ್ರೀಡೆ, ಸಂಗೀತ, ಕಲೆ ಮುಂತಾದ ಕ್ಷೇತ್ರಗಳಲ್ಲಿ ಆಸಕ್ಕತಿ ಇದ್ದರೆ ಅದನ್ನು ಕಲಿಸಬೇಕು. ಹಾಗಂತ ಒತ್ತಡ ಹೇರಬಾರದು. ಅವರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಲು ನೋಡಬೇಕು.
(5 / 7)

ಪ್ರತಿ ಮಕ್ಕಳು ಕೂಡಾ ಹೆತ್ತವರು ಹಾಗೂ ದೊಡ್ಡವರು ಮಾಡುವ ಕೆಲಸವನ್ನು ಅನುಕರಿಸುತ್ತಾರೆ. ನೀವು ಬೆಳಗ್ಗೆ ಬೇಗ ಎದ್ದರೆ, ಅವರು ಕೂಡಾ ಅಭ್ಯಾಸ ಮಾಡುತ್ತಾರೆ. ನೀವು ದಿನಪತ್ರಿಕೆಯನ್ನು ಓದುತ್ತಿದ್ದರೆ, ಮಗು ಕೂಡಾ ತನ್ನ ಪುಸ್ತಕವನ್ನು ಓದಲು ಪ್ರಯತ್ನಿಸುತ್ತದೆ. ಪೋಷಕರು ಮಾಡುವ ಕೆಲಸಗಳು ಮಗುವಿನ ಮೇಲೆ ಹೆಚ್ಚಿನ ಪ್ರಭಾವ ಬೀರಬಹುದು.
(6 / 7)

ಮನುಷ್ಯ ಜೀವಿಯಲ್ಲಿ ಆಗಾಗ ಭಿನ್ನಾಭಿಪ್ರಾಯ ಹಾಗೂ ಜಗಳಗಳು ಸಾಮಾನ್ಯ. ಆದರೆ, ಅದನ್ನು ಪರಿಹರಿಸುವ ಹಾಗೂ ಸೂಕ್ತ ರೀತಿಯಲ್ಲಿ ನಿಭಾಯಿಸುವ ಕಲೆ ಎಲ್ಲರಿಗೂ ಇರುವುದಿಲ್ಲ. ಇಂಥಾ ಕಲೆಯನ್ನು ಮಕ್ಕಳು ಸಹ ಕಲಿಯಬೇಕು. ಮಕ್ಕಳ ಸಾಮಾಜಿಕ ಮತ್ತು ಭಾವನಾತ್ಮಕ ಸಾಮರ್ಥ್ಯಗಳ ಬೆಳವಣಿಗೆಗೆ ಪೋಷಕರು ಆದ್ಯತೆ ನೀಡಬೇಕು. ಮಕ್ಕಳಿಗೆ ಪರಾನುಭೂತಿ, ಸ್ವಯಂ ಅರಿವು ಮತ್ತು ಪರಿಣಾಮಕಾರಿ ಸಂವಹನವನ್ನು ಕಲಿಸುವ ಮೂಲಕ ಅವರ ಜೀವನದಲ್ಲಿ ಪೋಷಕರು ಪ್ರಮುಖ ಪಾತ್ರ ವಹಿಸಬೇಕು.
(7 / 7)

    ಹಂಚಿಕೊಳ್ಳಲು ಲೇಖನಗಳು