ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Congress: ಮೋದಿ ಸರ್ಕಾರಕ್ಕೆ 100 ರೂಪಾಯಿ ತೆರಿಗೆ ಕೊಟ್ರೆ ವಾಪಸ್ ಬರೋದು 13 ರೂ; ಕರ್ನಾಟಕಕ್ಕೆ ಮಹಾಮೋಸ ಎಂದ ಕಾಂಗ್ರೆಸ್

Congress: ಮೋದಿ ಸರ್ಕಾರಕ್ಕೆ 100 ರೂಪಾಯಿ ತೆರಿಗೆ ಕೊಟ್ರೆ ವಾಪಸ್ ಬರೋದು 13 ರೂ; ಕರ್ನಾಟಕಕ್ಕೆ ಮಹಾಮೋಸ ಎಂದ ಕಾಂಗ್ರೆಸ್

Apr 21, 2024 03:55 PM IST

ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು ಎಂದು ಜಾಹೀರಾತು ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಇದೀಗ ತೆರಿಗೆಯಲ್ಲಿ ರಾಜ್ಯಕ್ಕೆ ಮಹಾಮೋಸವಾಗಿದೆ ಎಂದಿದೆ. ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನ ಹೊಸ ಜಾಹೀರಾತು ಹೀಗಿದೆ.

  • ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು ಎಂದು ಜಾಹೀರಾತು ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಇದೀಗ ತೆರಿಗೆಯಲ್ಲಿ ರಾಜ್ಯಕ್ಕೆ ಮಹಾಮೋಸವಾಗಿದೆ ಎಂದಿದೆ. ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನ ಹೊಸ ಜಾಹೀರಾತು ಹೀಗಿದೆ.
ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ನಡುವೆ ಭಾರಿ ಪೈಪೋಟಿಗೆ ಕಾರಣವಾಗಿದೆ. ಪ್ರಧಾನಿ ಮೋದಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಹೋಗಿದ್ದೇ ತಡ ಇತ್ತ ಕೈ ನಾಯಕರು ತೆರಿಗೆ ವಿಚಾರವನ್ನು ಇಟ್ಟುಕೊಂಡು ನಮೋ ಸರ್ಕಾರಕ್ಕೆ ತಿರುಗೇಟು ನೀಡುತ್ತಿದ್ದಾರೆ.
(1 / 6)

ಏಪ್ರಿಲ್ 20ರ ಶನಿವಾರವಷ್ಟೇ ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು ಎಂದಿದ್ದ ಕಾಂಗ್ರೆಸ್ ಇವತ್ತು (ಏಪ್ರಿಲ್ 21, ಭಾನುವಾರ) ತೆರಿಗೆ ವಿಚಾರದಲ್ಲಿ ತರಾಟೆಗೆ ತೆಗೆದುಕೊಂಡಿದೆ.
(2 / 6)
ಏಪ್ರಿಲ್ 20ರ ಶನಿವಾರವಷ್ಟೇ ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು ಎಂದಿದ್ದ ಕಾಂಗ್ರೆಸ್ ಇವತ್ತು (ಏಪ್ರಿಲ್ 21, ಭಾನುವಾರ) ತೆರಿಗೆ ವಿಚಾರದಲ್ಲಿ ತರಾಟೆಗೆ ತೆಗೆದುಕೊಂಡಿದೆ.
ಮೋದಿ ಸರ್ಕಾರಕ್ಕೆ ಕರ್ನಾಟಕ ಕಟ್ಟುವ ಪ್ರತಿ 100 ರೂಪಾಯಿ ತೆರಿಗೆಯಲ್ಲಿ ಕರ್ನಾಟಕಕ್ಕೆ ಮರಳಿ ಸಿಗುವುದು ಕೇವಲ 13 ರೂಪಾಯಿ ಮಾತ್ರ. ಈ ಅನ್ಯಾಯ ಎಲ್ಲಿಯ ವರೆಗೆ ಸಹಿಸಬೇಕು ಎಂದು ಕಾಂಗ್ರೆಸ್ ಜಾಹೀರಾತು ನೀಡಿದೆ.
(3 / 6)
ಮೋದಿ ಸರ್ಕಾರಕ್ಕೆ ಕರ್ನಾಟಕ ಕಟ್ಟುವ ಪ್ರತಿ 100 ರೂಪಾಯಿ ತೆರಿಗೆಯಲ್ಲಿ ಕರ್ನಾಟಕಕ್ಕೆ ಮರಳಿ ಸಿಗುವುದು ಕೇವಲ 13 ರೂಪಾಯಿ ಮಾತ್ರ. ಈ ಅನ್ಯಾಯ ಎಲ್ಲಿಯ ವರೆಗೆ ಸಹಿಸಬೇಕು ಎಂದು ಕಾಂಗ್ರೆಸ್ ಜಾಹೀರಾತು ನೀಡಿದೆ.
ಸಿಎಂ ಸಿದ್ದರಾಮಯ್ಯ ಅವರು ಇದೇ ವಿಚಾರವನ್ನು ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕನ್ನಡಿಗರು ಬೆವರು ಸುರಿಸಿ ದುಡಿದು ಕೇಂದ್ರ ಬಿಜೆಪಿಸರ್ಕಾರಕ್ಕೆ 100 ರೂಪಾಯಿ ತೆರಿಗೆ ಕಟ್ಟಿದರೆ ಮರಳಿ ನಮಗೆ ಸಿಗುವುದು 13 ರೂಪಾಯಿ. ರಾಜ್ಯಕ್ಕೆ ಬರಬೇಕಿದ್ದ ಬರಪರಿಹಾರ, ವಿಶೇಷ ಅನುದಾನ, ನೀರಾವರಿ ಯೋಜನೆಗಳಿಗೆ ಆರ್ಥಿಕ ನೆರವಿನ ಬದಲಿಗೆ ಸಿಕ್ಕಿದ್ದು ಚೊಂಬು ಎಂದಿದ್ದಾರೆ.
(4 / 6)
ಸಿಎಂ ಸಿದ್ದರಾಮಯ್ಯ ಅವರು ಇದೇ ವಿಚಾರವನ್ನು ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕನ್ನಡಿಗರು ಬೆವರು ಸುರಿಸಿ ದುಡಿದು ಕೇಂದ್ರ ಬಿಜೆಪಿಸರ್ಕಾರಕ್ಕೆ 100 ರೂಪಾಯಿ ತೆರಿಗೆ ಕಟ್ಟಿದರೆ ಮರಳಿ ನಮಗೆ ಸಿಗುವುದು 13 ರೂಪಾಯಿ. ರಾಜ್ಯಕ್ಕೆ ಬರಬೇಕಿದ್ದ ಬರಪರಿಹಾರ, ವಿಶೇಷ ಅನುದಾನ, ನೀರಾವರಿ ಯೋಜನೆಗಳಿಗೆ ಆರ್ಥಿಕ ನೆರವಿನ ಬದಲಿಗೆ ಸಿಕ್ಕಿದ್ದು ಚೊಂಬು ಎಂದಿದ್ದಾರೆ.(PTI)
 ಏಪ್ರಿಲ್ 20ರ ಶನಿವಾರ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಟೆಕ್ ಸಿಟಿ ಬೆಂಗಳೂರನ್ನು ಟ್ಯಾಂಕರ್ ಸಿಟಿಯನ್ನಾಗಿ ಮಾಡಿದ್ದಾರೆ. ನಗರವನ್ನು ಹಾಳು ಮಾಡಿದ್ದು, ಅಭಿವೃದ್ಧಿಯನ್ನೇ ಮಾಡಿಲ್ಲ ಎಂದು ದೂರಿದ್ದರು.
(5 / 6)
 ಏಪ್ರಿಲ್ 20ರ ಶನಿವಾರ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಟೆಕ್ ಸಿಟಿ ಬೆಂಗಳೂರನ್ನು ಟ್ಯಾಂಕರ್ ಸಿಟಿಯನ್ನಾಗಿ ಮಾಡಿದ್ದಾರೆ. ನಗರವನ್ನು ಹಾಳು ಮಾಡಿದ್ದು, ಅಭಿವೃದ್ಧಿಯನ್ನೇ ಮಾಡಿಲ್ಲ ಎಂದು ದೂರಿದ್ದರು.(PTI)
ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್… ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ.
(6 / 6)
ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್… ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ.

    ಹಂಚಿಕೊಳ್ಳಲು ಲೇಖನಗಳು