logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಧರ್ಮಸ್ಥಳದಲ್ಲಿ ಹೊಸ ವರ್ಷಾಚರಣೆ; ಮನಮೋಹಕ ಹೂವಿನ ಅಲಂಕಾರದ ಆಕರ್ಷಕ ಫೋಟೋ ವರದಿ

ಧರ್ಮಸ್ಥಳದಲ್ಲಿ ಹೊಸ ವರ್ಷಾಚರಣೆ; ಮನಮೋಹಕ ಹೂವಿನ ಅಲಂಕಾರದ ಆಕರ್ಷಕ ಫೋಟೋ ವರದಿ

Jan 01, 2024 11:39 AM IST

ನಾಡಿನ ಉದ್ದಗಲಕ್ಕೂ ಹೊಸ ಕ್ಯಾಲೆಂಡರ್‌ ವರ್ಷದ ಸಂಭ್ರಮಾಚರಣೆ. ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕ್ಷೇತ್ರದಲ್ಲಿ ವಿಶೇಷ ಹೂವಿನ ಅಲಂಕಾರ ಗಮನಸೆಳೆಯಿತು. ಮನಮೋಹಕ ಅಲಂಕಾರದ ಆಯ್ದ ಫೋಟೋ ವರದಿ ಇಲ್ಲಿದೆ.

ಹೊಸ ವರ್ಷ 2024 ಅನ್ನು ಬರಮಾಡಿಕೊಳ್ಳುವ ನಿಮಿತ್ತದ ಸಂಭ್ರಮಾಚರಣೆ ನಡುವೆ ಡಿಸೆಂಬರ್ 31ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳ ಜನದಟ್ಟಣೆ ಹೆಚ್ಚಾಗಿತ್ತು. ಕ್ಷೇತ್ರದಲ್ಲಿ ಹೊಸ ವರ್ಷ ಹಿನ್ನೆಲೆಯ ಪುಷ್ಪಾಲಂಕಾರ ಗಮನ ಸೆಳೆಯಿತು.
(1 / 5)

ಓಂಕಾರವನ್ನು ರಚಿಸಿ, ಬಳಿಕ ಹೂವಿನಿಂದಲೇ ಶಿವಲಿಂಗ, ತ್ರಿಶೂಲ, ಸ್ವಸ್ತಿಕ, ಓಂಕಾರ ಬರೆದು, ಹೂವುಗಳಿಂದಲೇ ಅಲಂಕಾರ ಮಾಡಿದ ದ್ವಾರ ಗಮನ ಸೆಳೆಯಿತು. ಅಲ್ಲಿ ಆನೆಯ ಮುಖವಾಡ ಮತ್ತಷ್ಟು ಮೆರುಗು ನೀಡಿತು.
(2 / 5)

ಕಾಣಿಕೆ ಹಾಕುವ ಸ್ಥಳದ ಸಮೀಪ ವಿದ್ಯುದ್ದೀಪಗಳ ಜೊತೆಗೆ ಹೂವಿನ ಅಲಂಕಾರದ ಚಪ್ಪರ ಸುಂದರವಾಗಿ ಗೋಚರಿಸಿತು. ರಾತ್ರಿ ಭಕ್ತರು ಈ ಸುಂದರ ದೃಶ್ಯವನ್ನು ಸೆರೆಹಿಡಿಯುತ್ತಿದ್ದ ದೃಶ್ಯ ಕಂಡುಬಂತು.
(3 / 5)

ಚಪ್ಪರದಲ್ಲಿ ವಿದ್ಯುತ್ ಬಲ್ಪುಗಳ ವೃತ್ತಾಕಾರದ ಸಾಲಿನೊಂದಿಗೆ ಅಡಕೆಯ ಸಾಂಪ್ರದಾಯಿಕ ಗೊನೆಯ ಶೃಂಗಾರ ಹೂವಿನಿಂದ ಆವೃತವಾಗಿ ಸುಂದರವಾಗಿ ಕಂಗೊಳಿಸಿತು.
(4 / 5)

ಪುಷ್ಪಾಲಂಕಾರದಲ್ಲಿ ಕಂಗೊಳಿಸಿದ ಶ್ರೀ ಕ್ಷೇತ್ರದಲ್ಲಿ ಭಕ್ತರು ಸ್ವಾಮಿ ದರ್ಶನಕ್ಕೆ ಸರದಿಯಲ್ಲಿ ನಿಂತಿದ್ದ ದೃಶ್ಯ.
(5 / 5)

    ಹಂಚಿಕೊಳ್ಳಲು ಲೇಖನಗಳು