ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇಂಡೋ-ಪಾಕ್ ವಿಶ್ವಕಪ್ ಪಂದ್ಯಗಳಲ್ಲಿ ಅತ್ಯಧಿಕ ರನ್ ಗಳಿಸಿದ ಟಾಪ್-5 ಭಾರತೀಯ ಆಟಗಾರರು ಇವರೇ

ಇಂಡೋ-ಪಾಕ್ ವಿಶ್ವಕಪ್ ಪಂದ್ಯಗಳಲ್ಲಿ ಅತ್ಯಧಿಕ ರನ್ ಗಳಿಸಿದ ಟಾಪ್-5 ಭಾರತೀಯ ಆಟಗಾರರು ಇವರೇ

Oct 14, 2023 12:22 AM IST

India vs Pakistan: ಕ್ರಿಕೆಟ್ ವಿಶ್ವಕಪ್‌ನ ಬಹುನಿರೀಕ್ಷಿತ ಪಂದ್ಯ ಅಕ್ಟೋಬರ್ 14 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ವಿಶ್ವಕಪ್ ಇತಿಹಾಸದಲ್ಲಿ ಪಾಕ್ ಎದುರು ಭಾರತ 7 ಪಂದ್ಯಗಳಲ್ಲೂ ಜಯಿಸಿ ಅಜೇಯ ದಾಖಲೆ ಹೊಂದಿದೆ. ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಅಧಿಕ ರನ್ ಗಳಿಸಿದ ಟಾಪ್ 5 ಭಾರತೀಯ ಬ್ಯಾಟ್ಸ್‌ಮನ್‌ಗಳ ಕುರಿತು ತಿಳಿಯೋಣ.

  • India vs Pakistan: ಕ್ರಿಕೆಟ್ ವಿಶ್ವಕಪ್‌ನ ಬಹುನಿರೀಕ್ಷಿತ ಪಂದ್ಯ ಅಕ್ಟೋಬರ್ 14 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ವಿಶ್ವಕಪ್ ಇತಿಹಾಸದಲ್ಲಿ ಪಾಕ್ ಎದುರು ಭಾರತ 7 ಪಂದ್ಯಗಳಲ್ಲೂ ಜಯಿಸಿ ಅಜೇಯ ದಾಖಲೆ ಹೊಂದಿದೆ. ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಅಧಿಕ ರನ್ ಗಳಿಸಿದ ಟಾಪ್ 5 ಭಾರತೀಯ ಬ್ಯಾಟ್ಸ್‌ಮನ್‌ಗಳ ಕುರಿತು ತಿಳಿಯೋಣ.
ಸಚಿನ್ ತೆಂಡೂಲ್ಕರ್ 1992ರ ವಿಶ್ವಕಪ್‌ನಿಂದ 2011 ವಿಶ್ವಕಪ್‌ವರೆಗೆ ಪಾಕಿಸ್ತಾನ ವಿರುದ್ಧ 5 ಪಂದ್ಯಗಳನ್ನು ಆಡಿದ್ದಾರೆ. 5 ಇನ್ನಿಂಗ್ಸ್‌ಗಳಲ್ಲಿ 313 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 78.25 ಎಂಬುದು ವಿಶೇಷ. ಈ 5 ಇನ್ನಿಂಗ್ಸ್‌ಗಳಲ್ಲಿ ಸಚಿನ್ 3 ಬಾರಿ ಅರ್ಧಶತಕ ಸಿಡಿಸಿದ್ದಾರೆ.
(1 / 5)

ಭಾರತ-ಪಾಕಿಸ್ತಾನ ಏಕದಿನ ವಿಶ್ವಕಪ್​​ ಪಂದ್ಯಗಳಲ್ಲಿ ಅಧಿಕ ರನ್ ಗಳಿಸಿದವರ ಪೈಕಿ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. 2011ರಿಂದ 2019ರವರೆಗೂ 3 ವಿಶ್ವಕಪ್​ಗಳಲ್ಲಿ ಪಾಕ್ ವಿರುದ್ಧ ವಿರಾಟ್ ಒಟ್ಟು 193 ರನ್ ಗಳಿಸಿದ್ದಾರೆ. 64.33ರ ಬ್ಯಾಟಿಂಗ್​ ಸರಾಸರಿಯಲ್ಲಿ ರನ್ ಗಳಿಸಿದ್ದು, ತಲಾ ಒಂದೊಂದು ಶತಕ ಹಾಗೂ ಅರ್ಧಶತಕ ಬಾರಿಸಿದ್ದಾರೆ. ಇದೀಗ ಮತ್ತೊಂದು ಶತಕ ಸಿಡಿಸಿದರೆ, ಸಚಿನ್ ದಾಖಲೆಯನ್ನು ಮುರಿಯಲಿದ್ದಾರೆ. 
(2 / 5)

ನಾಯಕ ರೋಹಿತ್ ಶರ್ಮಾ 3ನೇ ಸ್ಥಾನದಲ್ಲಿದ್ದಾರೆ. 2015 ಮತ್ತು 2019ರ ವಿಶ್ವಕಪ್ ಸೇರಿ ಪಾಕಿಸ್ತಾನದ ವಿರುದ್ಧ 2 ಇನ್ನಿಂಗ್ಸ್‌ಗಳಲ್ಲಿ ಒಟ್ಟು 155 ರನ್ ಗಳಿಸಿದ್ದಾರೆ. 77.50ರ ಸರಾಸರಿ ಹೊಂದಿರುವ ರೋಹಿತ್, ಶತಕವನ್ನೂ (140 ರನ್) ಸಿಡಿಸಿದ್ದಾರೆ.
(3 / 5)

ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್, ವಿಶ್ವಕಪ್​​ಗಳಲ್ಲಿ ಪಾಕಿಸ್ತಾನ ವಿರುದ್ಧ ಆಡಿರುವ 3 ಇನ್ನಿಂಗ್ಸ್​​ಗಳಲ್ಲಿ 118 ರನ್ ಗಳಿಸಿದ್ದಾರೆ. ಅವರು ವಿಶ್ವಕಪ್​ನಲ್ಲಿ ಪಾಕಿಸ್ತಾನ ಎದುರು ಅಧಿಕ ರನ್ ಗಳಿಸಿದವರ ಪೈಕಿ 4ನೇ ಸ್ಥಾನದಲ್ಲಿದ್ದಾರೆ. ಅಜರುದ್ದೀನ್ 1992 ರಿಂದ 1999ರ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಕಣಕ್ಕಿಳಿದಿದ್ದರು.
(4 / 5)

ಏಕದಿನ ವಿಶ್ವಕಪ್​​ಗಳಲ್ಲಿ ಪಾಕಿಸ್ತಾನ ವಿರುದ್ಧ ಅಧಿಕ ರನ್ ಗಳಿಸಿದ ಆಟಗಾರರ ಪೈಕಿ ಸುರೇಶ್ ರೈನಾಗೆ 5ನೇ ಸ್ಥಾನ. ಅವರು 2011 ಮತ್ತು 2015ರ ವಿಶ್ವಕಪ್​​ನಲ್ಲಿ ಪಾಕ್ ವಿರುದ್ಧ ಆಡಿದ್ದರು. ಒಟ್ಟು 110 ರನ್ ಗಳಿಸಿದ್ದರು. 74 ರನ್ ಅವರ ಗರಿಷ್ಠ ಸ್ಕೋರ್ ಆಗಿದೆ.
(5 / 5)

    ಹಂಚಿಕೊಳ್ಳಲು ಲೇಖನಗಳು