ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysore Dasara Lightings: ಇದು ಇಂದ್ರನಗರಿಯಲ್ಲ, ಬೆಳಕುಗಳಲ್ಲಿ ಮಿಂದೆದ್ದ ಮಲ್ಲಿಗೆ ನಗರಿ ದೀಪದೂರು ಮೈಸೂರು

Mysore Dasara Lightings: ಇದು ಇಂದ್ರನಗರಿಯಲ್ಲ, ಬೆಳಕುಗಳಲ್ಲಿ ಮಿಂದೆದ್ದ ಮಲ್ಲಿಗೆ ನಗರಿ ದೀಪದೂರು ಮೈಸೂರು

Oct 23, 2023 06:57 PM IST

Mysore light look ಮೈಸೂರು ನಗರವನ್ನು ಪಾರಂಪರಿಕ ನಗರಿ, ನಿವೃತ್ತಿಗರ ತಾಣ, ಅರಮನೆ ನಗರಿ, ದಸರಾ ನಗರಿ, ಮಲ್ಲಿಗೆ ಊರು ಎಂಬ ಹಲವು ಅಭಿದಾನಗಳಿಂದ ಕರೆಯಲಾಗುತ್ತದೆ. ದಸರಾ ಬಂದರೆ ಮೈಸೂರು ದೀಪಗಳ ನಗರಿಯೂ ಆಗುತ್ತಿದೆ. ಕೆಲ ವರ್ಷದಿಂದ ದಸರಾ ದೀಪಾಲಂಕಾರ ದೀಪಧಾರಣಿಯ ರೂಪ ನೀಡಿದೆ. ಛಾಯಾಗಾಹಕ ಎಸ್‌.ಆರ್.ಮಧುಸೂಧನ್‌‌ ಕಣ್ಣಲ್ಲಿ ಕಂಡ ಮೈಸೂರು ದಸರಾ ಎಷ್ಟೊಂದು ಸುಂದರ…

  • Mysore light look ಮೈಸೂರು ನಗರವನ್ನು ಪಾರಂಪರಿಕ ನಗರಿ, ನಿವೃತ್ತಿಗರ ತಾಣ, ಅರಮನೆ ನಗರಿ, ದಸರಾ ನಗರಿ, ಮಲ್ಲಿಗೆ ಊರು ಎಂಬ ಹಲವು ಅಭಿದಾನಗಳಿಂದ ಕರೆಯಲಾಗುತ್ತದೆ. ದಸರಾ ಬಂದರೆ ಮೈಸೂರು ದೀಪಗಳ ನಗರಿಯೂ ಆಗುತ್ತಿದೆ. ಕೆಲ ವರ್ಷದಿಂದ ದಸರಾ ದೀಪಾಲಂಕಾರ ದೀಪಧಾರಣಿಯ ರೂಪ ನೀಡಿದೆ. ಛಾಯಾಗಾಹಕ ಎಸ್‌.ಆರ್.ಮಧುಸೂಧನ್‌‌ ಕಣ್ಣಲ್ಲಿ ಕಂಡ ಮೈಸೂರು ದಸರಾ ಎಷ್ಟೊಂದು ಸುಂದರ…
ಮೈಸೂರು ಮತ್ತು ಬೆಳಕಿನ ನೋಟವೇ ವಿಭಿನ್ನ. ಮೈಸೂರಿನ ಮುಕುಟದಂತಿರುವ ಚಾಮುಂಡಿಬೆಟ್ಟ ಹತ್ತಿ ಕ್ಯಾಮರಾ ಕೈಗೆತ್ತಿಕೊಂಡರ ಕಣ್ಣಳತೆ ಎಲ್ಲೆಲ್ಲಿಯೂ ದೀಪ ಸೌಂದರ್ಯ ತೆರೆದುಕೊಳ್ಳುತ್ತದೆ. ಮೈಸೂರು ದಸರಾದ ವೈಭವವೂ ಅನಾವರಣಗೊಳ್ಳುತ್ತದೆ.
(1 / 11)

ಇದು ಮೈಸೂರಿನ ಭವ್ಯ ಅರಮನೆ. ಬೆಳಕು ಬಿದ್ದರಂತೂ ಚಿನ್ನದ ಬಣ್ಣದಿಂದ ಫಳಫಲನೇ ಹೊಳೆಯುತ್ತದೆ. ಜನ ಇಲ್ಲಿ ಬಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನುಸವಿಯುತ್ತಾರೆ. ಅರಮನೆ ಅವರಣದಲ್ಲಿ ಬೆಳಕಿನೊಂದಿಗೆ ಹೊಳೆದು ಖುಷಿಪಡುತ್ತಾರೆ.
(2 / 11)

ಇದು ಮೈಸೂರಿನ ಕೃಷ್ಣರಾಜೇಂದ್ರ ವೃತ್ತ. ಇಲ್ಲಿಯೂ ಬಣ್ಣ ಬಣ್ಣದ ದೀಪಗಳ ಮೂಲಕ ವೃತ್ತ ಅಲಂಕಾಋ ಮಾಡಿದ್ದಾರೆ. ವಾಹನ ಸಂಚರಿಸುವಾಗ ಛಾಯಾಗ್ರಾಹಕನ ಕಣ್ಚಳಕಕ್ಕೆ ಸಿಕ್ಕ ನೋಟ.
(3 / 11)

ಮೈಸೂರಿನ ಚಾಮರಾಜೇಂದ್ರ ವೃತ್ತ. ಆ ಬೆಳಕಿನ ಹಿನ್ನೆಲೆಯಲ್ಲಿ ಮೈಸೂರು ಅರಮನೆ. ಈ ವೃತ್ತದಲ್ಲಿ ಒಂದು ಸುತ್ತು ಹಾಕಿ ಬಂದರೆ ಬೆಳಕಿನ ಲೋಕವೇ ತೆರೆದುಕೊಳ್ಳುತ್ತದೆ.
(4 / 11)

ಮೈಸೂರು ಮಹಾನಗರ ಪಾಲಿಕೆ ಆಡಳಿತ ಕಚೇರಿಯ ಬಣ್ಣಬಣ್ಣದ ನೋಟ. ಮೈಸೂರಿನ ಬಹುತೇಕ ಸರ್ಕಾರಿ ಕಚೇರಿಗಳು ದಸರಾ ವೇಳೆ ಹೀಗೆಯೇ ಜಗಮಗಿಸುತ್ತವೆ. 
(5 / 11)

ಮೈಸೂರಿನ ಕೆಆರ್‌ ವೃತ್ತ ಸೇರಿದಂತೆ ಬೆಳಕಿನೊಂದಿಗೆ ಮಿಂಚುವ ರಸ್ತೆಗಳಲ್ಲಿ ಹೀಗೆ ಪಾರಂಪರಿಕ ಟಾಂಗಾ ಸವಾರಿ ಮಾಡುವ ಖುಷಿಯೇ ಬೇರೆ. ಬದುಕು ಜಟಕಾ ಬಂಡಿ ಎಂಬ ಹಾಡು ಕೇಳುತ್ತಾ ದಸರಾ ನೋಡುವ ಚಂದವೋ ಚಂದ…
(6 / 11)

ಮೈಸೂರಿನ ಸಯ್ಯಾಜಿರಾವ್‌ ರಸ್ತೆಯಲ್ಲಿ ಸಂಜೆ ನಂತರ ಗಜಪಡೆ ಜಂಬೂಸವಾರಿ ತಾಲೀಮು ನಡೆಸಬೇಕು. ಅವುಗಳಿಗೂ ಸಂಚಾರ ದಟ್ಟಣೆಯ ಅನುಭವವಾಗುತ್ತದೆ. ಅದರ ನಡುವೆಯೇ ಹೆಜ್ಜೆ ಹಾಕುತ್ತವೆ ದಸರಾ ಆನೆಗಳು.
(7 / 11)

ಮೈಸೂರಿನ ದೀಪದ ನೋಟವನ್ನು ತುಂಬಿಕೊಳ್ಳಲೆಂದು ವಾಹನಗಳಲ್ಲಿ ಬರುವವರು ಹೀಗೆ ಕೆಆರ್‌ ವೃತ್ತಕ್ಕೆ ಹೊಂದಿಕೊಂಡ ರಸ್ತೆಯಲ್ಲಿ ಹೀಗೆ ಮಿಸುಕಾಡದೇ ನಿಂತು ಬಿಡುತ್ತಾರೆ. 
(8 / 11)

ಸಂಜೆಯಾಗುತ್ತಲೇ ಮೈಸೂರಿನ ರಸ್ತೆಗಳು ಜಗಮಗಿಸತೊಡುತ್ತವೆ. ಮತ್ತೊಂದು ಕಡೆ ಮೈಸೂರು ನೋಡಲು ಆಗಮಿಸುವ ಜನರ ವಾಹನ ದಟ್ಟಣೆ. ಇದು ಸಂಜೆ ಸಾಮಾನ್ಯ. ಅದೇ ಹಲವರಿಗೆ ಖುಷಿ.
(9 / 11)

ಮೈಸೂರು ದಸರಾದಲ್ಲಿ ಸಂಭ್ರಮಿಸುವ ಜೀವಗಳು ಹಲವು. ಬಡ ಬಲ್ಲಿದ ಎನ್ನುವ ಬೇಧವಿಲ್ಲದೇ ಬಗೆ ಬಗೆಯ ನೋಟಗಳನ್ನು ಕಟ್ಟಿಕೊಡುತ್ತದೆ. ಅದು ಬೆಳಿಕನಲ್ಲಿ ಅದನ್ನು ನೋಡುವುದೇ ಚಂದ.
(10 / 11)

ಮೈಸೂರು ಬೆಳಕು ಎಂದರೆ ಬರೀ ಜನ ಖುಷಿ ಪಡುವ ಬೆಳಕಲ್ಲ. ಹೀಗೆ ಸಣ್ಣ ಸಣ್ಣ ವ್ಯಾಪಾರ ಮಾಡುತ್ತಲೇ ಒಂದಷ್ಟು ಕಾಸು ಗಳಿಸಿ ಖುಷಿ ಪಡುವ ಪುಟ್ಟ ಮನಸುಗಳ ಲೋಕವೂ ಈ ಬೆಳಕಿನಲ್ಲಿ ಅಡಗಿದೆ. ಕೊನೆಗೆ ಉಳಿಯುವುದೇ ಮೈಸೂರು ದಸರಾ ಎಷ್ಟೊಂದು ಸುಂದರ…..
(11 / 11)

    ಹಂಚಿಕೊಳ್ಳಲು ಲೇಖನಗಳು