ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  National Tourism Day: ಜೀವನದಲ್ಲಿ ಒಮ್ಮೆಯಾದ್ರೂ ನೋಡ್ಲೇಬೇಕು ಅನ್ನಿಸುವ ಭಾರತದಲ್ಲಿನ 6 ಅದ್ಭುತ ಪ್ರವಾಸಿ ತಾಣಗಳಿವು

National Tourism Day: ಜೀವನದಲ್ಲಿ ಒಮ್ಮೆಯಾದ್ರೂ ನೋಡ್ಲೇಬೇಕು ಅನ್ನಿಸುವ ಭಾರತದಲ್ಲಿನ 6 ಅದ್ಭುತ ಪ್ರವಾಸಿ ತಾಣಗಳಿವು

Jan 25, 2024 07:23 AM IST

ಭಾರತ ಪ್ರಕೃತಿ ಸೌಂದರ್ಯದ ನಾಡು. ಈಶಾನ್ಯ ರಾಜ್ಯಗಳು, ಸಮುದ್ರ ತೀರಗಳು, ಪರ್ವತ ಪ್ರದೇಶಗಳು, ಹಸಿರು ಕಣಿವೆಗಳು ಹೀಗೆ ನಮ್ಮ ದೇಶದಲ್ಲಿ ಎಲ್ಲಿ ನೋಡಿದರೂ ಪಾರಿಸರಿಕ ಅಂದವು ಕಣ್ಮನ ಸೆಳೆಯುತ್ತದೆ. ರಾಷ್ಟ್ರೀಯ ಪ್ರವಾಸೋದ್ಯಮ ದಿನವಾದ ಇಂದು (ಜ.25) ಜೀವನದಲ್ಲಿ ಒಮ್ಮೆಯಾದ್ರೂ ನೋಡಬೇಕು ಅನ್ನಿಸುವ ಭಾರತದಲ್ಲಿನ ಅದ್ಭುತ ಪ್ರವಾಸಿ ತಾಣಗಳ ಪರಿಚಯ ಮಾಡಲಾಗಿದೆ. 

  • ಭಾರತ ಪ್ರಕೃತಿ ಸೌಂದರ್ಯದ ನಾಡು. ಈಶಾನ್ಯ ರಾಜ್ಯಗಳು, ಸಮುದ್ರ ತೀರಗಳು, ಪರ್ವತ ಪ್ರದೇಶಗಳು, ಹಸಿರು ಕಣಿವೆಗಳು ಹೀಗೆ ನಮ್ಮ ದೇಶದಲ್ಲಿ ಎಲ್ಲಿ ನೋಡಿದರೂ ಪಾರಿಸರಿಕ ಅಂದವು ಕಣ್ಮನ ಸೆಳೆಯುತ್ತದೆ. ರಾಷ್ಟ್ರೀಯ ಪ್ರವಾಸೋದ್ಯಮ ದಿನವಾದ ಇಂದು (ಜ.25) ಜೀವನದಲ್ಲಿ ಒಮ್ಮೆಯಾದ್ರೂ ನೋಡಬೇಕು ಅನ್ನಿಸುವ ಭಾರತದಲ್ಲಿನ ಅದ್ಭುತ ಪ್ರವಾಸಿ ತಾಣಗಳ ಪರಿಚಯ ಮಾಡಲಾಗಿದೆ. 
ಭಾರತ ಸುಂದರ ಪ್ರಕೃತಿಯನ್ನು ಹೊಂದಿರುವ ವೈಭವದ ನಾಡು. ಇಲ್ಲಿನ ಪ್ರಾಕೃತಿಕ ವೈವಿಧ್ಯವನ್ನು ನೋಡಿಯೇ ತಣಿಯಬೇಕು. ನಮ್ಮ ದೇಶದಲ್ಲಿ ನೀವು ಯಾವುದೇ ಭಾಗಕ್ಕೆ ಭೇಟಿ ನೀಡಿದರೂ ಪ್ರಕೃತಿ ಸೌಂದರ್ಯ ನಿಮ್ಮನ್ನು ಮೋಡಿ ಮಾಡುತ್ತದೆ. ಸುಂದರ ಬೆಟ್ಟ ಗುಡ್ಡಗಳು, ತಿಳಿನೀಲಿ ಸಮುದ್ರ, ಮೈದುಂಬಿ ಹರಿವ ಜಲಪಾತಗಳು, ಹಿಮಚ್ಛಾದಿತ ಪ್ರದೇಶಗಳು ಹೀಗೆ ಪ್ರಕೃತಿ ಮಾತೆಯು ನಿಮ್ಮನ್ನು ಕೈಬೀಸಿ ಕರೆಯುವುದು ಸುಳ್ಳಲ್ಲ. ಭಾರತದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಪ್ರತಿವರ್ಷ ಜನವರಿ 25 ರಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಜೀವನದಲ್ಲಿ ಒಮ್ಮೆಯಾದ್ರೂ ನೋಡ್ಲೇಬೇಕು ಅನ್ನಿಸುವ ಭಾರತದಲ್ಲಿನ ಅದ್ಭುತ ತಾಣಗಳ ಬಗ್ಗೆ ಇಲ್ಲಿದೆ ಮಾಹಿತಿ.    
(1 / 7)
ಭಾರತ ಸುಂದರ ಪ್ರಕೃತಿಯನ್ನು ಹೊಂದಿರುವ ವೈಭವದ ನಾಡು. ಇಲ್ಲಿನ ಪ್ರಾಕೃತಿಕ ವೈವಿಧ್ಯವನ್ನು ನೋಡಿಯೇ ತಣಿಯಬೇಕು. ನಮ್ಮ ದೇಶದಲ್ಲಿ ನೀವು ಯಾವುದೇ ಭಾಗಕ್ಕೆ ಭೇಟಿ ನೀಡಿದರೂ ಪ್ರಕೃತಿ ಸೌಂದರ್ಯ ನಿಮ್ಮನ್ನು ಮೋಡಿ ಮಾಡುತ್ತದೆ. ಸುಂದರ ಬೆಟ್ಟ ಗುಡ್ಡಗಳು, ತಿಳಿನೀಲಿ ಸಮುದ್ರ, ಮೈದುಂಬಿ ಹರಿವ ಜಲಪಾತಗಳು, ಹಿಮಚ್ಛಾದಿತ ಪ್ರದೇಶಗಳು ಹೀಗೆ ಪ್ರಕೃತಿ ಮಾತೆಯು ನಿಮ್ಮನ್ನು ಕೈಬೀಸಿ ಕರೆಯುವುದು ಸುಳ್ಳಲ್ಲ. ಭಾರತದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಪ್ರತಿವರ್ಷ ಜನವರಿ 25 ರಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಜೀವನದಲ್ಲಿ ಒಮ್ಮೆಯಾದ್ರೂ ನೋಡ್ಲೇಬೇಕು ಅನ್ನಿಸುವ ಭಾರತದಲ್ಲಿನ ಅದ್ಭುತ ತಾಣಗಳ ಬಗ್ಗೆ ಇಲ್ಲಿದೆ ಮಾಹಿತಿ.    (Intsagram/@trip_geography •)
ಜೋಗ ಜಲಪಾತ: ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ ಜಲಪಾತವನ್ನು ನಮ್ಮ ರಾಜ್ಯದ ಹೆಮ್ಮೆ ಎನ್ನಬಹುದು. ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಜೋಗವೂ ಒಂದು. ಶರಾವತಿ ನದಿ ನೀರಿನಿಂದ ಈ ಜಲಪಾತವು ರೂಪುಗೊಂಡಿದೆ. ರಾಜ, ರಾಣಿ, ರೋವರ್‌ ಹಾಗೂ ರಾಕೆಟ್‌ ಜೋಗ ಜಲಪಾತದಲ್ಲಿ ಹರಿಯುತ್ತವೆ. ಇದು 253 ಮೀಟರ್ (830 ಅಡಿ) ಎತ್ತರದಿಂದ ಬೀಳುತ್ತದೆ. ಸುತ್ತಲಿನ ಹಬ್ಬಿರುವ ಹಸಿರು, ಭೋರ್ಗರೆವ ಜಲಪಾತ ನಿಮ್ಮನ್ನು ಅದ್ಭುತಲೋಕ ಕೊಂಡೊಯ್ಯವುದರಲ್ಲಿ ಎರಡು ಮಾತಿಲ್ಲ. ಜೀವನದಲ್ಲಿ ಒಮ್ಮೆಯಾದ್ರೂ ಜೋಗದ ಗುಂಡಿ ನೋಡ್ಬೇಕು ಅಂತ ಕವಿಗಳೂ ಕೂಡ ಹೇಳಿರುವುದನ್ನು ಈ ವೇಳೆ ನೆನಪಿಸಿಕೊಳ್ಳಬಹುದು. 
(2 / 7)
ಜೋಗ ಜಲಪಾತ: ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ ಜಲಪಾತವನ್ನು ನಮ್ಮ ರಾಜ್ಯದ ಹೆಮ್ಮೆ ಎನ್ನಬಹುದು. ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಜೋಗವೂ ಒಂದು. ಶರಾವತಿ ನದಿ ನೀರಿನಿಂದ ಈ ಜಲಪಾತವು ರೂಪುಗೊಂಡಿದೆ. ರಾಜ, ರಾಣಿ, ರೋವರ್‌ ಹಾಗೂ ರಾಕೆಟ್‌ ಜೋಗ ಜಲಪಾತದಲ್ಲಿ ಹರಿಯುತ್ತವೆ. ಇದು 253 ಮೀಟರ್ (830 ಅಡಿ) ಎತ್ತರದಿಂದ ಬೀಳುತ್ತದೆ. ಸುತ್ತಲಿನ ಹಬ್ಬಿರುವ ಹಸಿರು, ಭೋರ್ಗರೆವ ಜಲಪಾತ ನಿಮ್ಮನ್ನು ಅದ್ಭುತಲೋಕ ಕೊಂಡೊಯ್ಯವುದರಲ್ಲಿ ಎರಡು ಮಾತಿಲ್ಲ. ಜೀವನದಲ್ಲಿ ಒಮ್ಮೆಯಾದ್ರೂ ಜೋಗದ ಗುಂಡಿ ನೋಡ್ಬೇಕು ಅಂತ ಕವಿಗಳೂ ಕೂಡ ಹೇಳಿರುವುದನ್ನು ಈ ವೇಳೆ ನೆನಪಿಸಿಕೊಳ್ಳಬಹುದು. (Unsplash)
ರಣ್‌ ಆಫ್‌ ಕಛ್‌, ಗುಜರಾತ್‌: ಇದು ಗುಜರಾತ್‌ನ ಥಾರ್ ಮರುಭೂಮಿಯಲ್ಲಿದೆ. ಈ ಪ್ರದೇಶವು ಸಾಂಸ್ಕೃತಿಕ ಪ್ರದರ್ಶನಗಳು, ಕರಕುಶಲ ವಸ್ತುಗಳು ಮತ್ತು ವಿಶಾಲವಾದ ಮರುಭೂಮಿ ಪ್ರದೇಶಗಳಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ರಣ್‌ ಉತ್ಸವ ಬಹಳ ವಿಶೇಷ. ಇಲ್ಲಿನ ಸೂರ್ಯೋದಯ ಹಾಗೂ ಸೂರ್ಯಸ್ತವನ್ನು ಮಿಸ್‌ ಮಾಡಿಕೊಳ್ಳಲೇಬಾರದು. 
(3 / 7)
ರಣ್‌ ಆಫ್‌ ಕಛ್‌, ಗುಜರಾತ್‌: ಇದು ಗುಜರಾತ್‌ನ ಥಾರ್ ಮರುಭೂಮಿಯಲ್ಲಿದೆ. ಈ ಪ್ರದೇಶವು ಸಾಂಸ್ಕೃತಿಕ ಪ್ರದರ್ಶನಗಳು, ಕರಕುಶಲ ವಸ್ತುಗಳು ಮತ್ತು ವಿಶಾಲವಾದ ಮರುಭೂಮಿ ಪ್ರದೇಶಗಳಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ರಣ್‌ ಉತ್ಸವ ಬಹಳ ವಿಶೇಷ. ಇಲ್ಲಿನ ಸೂರ್ಯೋದಯ ಹಾಗೂ ಸೂರ್ಯಸ್ತವನ್ನು ಮಿಸ್‌ ಮಾಡಿಕೊಳ್ಳಲೇಬಾರದು. (Unsplash)
ಗುರುಡೊಂಗ್ಮಾರ್, ಸಿಕ್ಕಿಂ: ಉತ್ತರ ಸಿಕ್ಕಿಂನಲ್ಲಿರುವ ಹರಿಯುವ ಸರೋವರ ಇದಾಗಿದೆ. ಇದು ಭೂಪ್ರದೇಶದಿಂದ 17,800 ಅಡಿ ಎತ್ತರದಲ್ಲಿದೆ. ಗುರುಡೊಂಗ್ಮಾರ್ ಸರೋವರವು ವಿಶ್ವದ ಅತಿ ಎತ್ತರದ ಸರೋವರಗಳಲ್ಲಿ ಒಂದಾಗಿದೆ. ಗುರು ಪದ್ಮಸಂಭವ ಹೆಸರಿನ ಈ ಸರೋವರವನ್ನು ಬೌದ್ಧರು ಮತ್ತು ಸಿಖ್ಖರು ಅತ್ಯಂತ ಪವಿತ್ರ ಸರೋವರ ಎಂದು ಪರಿಗಣಿಸುತ್ತಾರೆ. ಭವ್ಯವಾದ ಕಾಂಚನಜುಂಗಾ ಸೇರಿದಂತೆ ಹಿಮದಿಂದ ಆವೃತವಾಗಿರುವ ಪರ್ವತಗಳ ಶ್ರೇಣಿಯಿಂದ ಸುತ್ತುವರಿದಿದೆ ಈ ಸಮುದ್ರ. ಸರೋವರದ ಸ್ಪಷ್ಟ ನೀಲಿ ನೀರು ಸುತ್ತಮುತ್ತಲಿನ ಶಿಖರಗಳ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ. ಇದನ್ನು ಒಮ್ಮೆಯಾದ್ರೂ ಕಣ್ತುಂಬಿಕೊಂಡು ಧನ್ಯರಾಗಿ. 
(4 / 7)
ಗುರುಡೊಂಗ್ಮಾರ್, ಸಿಕ್ಕಿಂ: ಉತ್ತರ ಸಿಕ್ಕಿಂನಲ್ಲಿರುವ ಹರಿಯುವ ಸರೋವರ ಇದಾಗಿದೆ. ಇದು ಭೂಪ್ರದೇಶದಿಂದ 17,800 ಅಡಿ ಎತ್ತರದಲ್ಲಿದೆ. ಗುರುಡೊಂಗ್ಮಾರ್ ಸರೋವರವು ವಿಶ್ವದ ಅತಿ ಎತ್ತರದ ಸರೋವರಗಳಲ್ಲಿ ಒಂದಾಗಿದೆ. ಗುರು ಪದ್ಮಸಂಭವ ಹೆಸರಿನ ಈ ಸರೋವರವನ್ನು ಬೌದ್ಧರು ಮತ್ತು ಸಿಖ್ಖರು ಅತ್ಯಂತ ಪವಿತ್ರ ಸರೋವರ ಎಂದು ಪರಿಗಣಿಸುತ್ತಾರೆ. ಭವ್ಯವಾದ ಕಾಂಚನಜುಂಗಾ ಸೇರಿದಂತೆ ಹಿಮದಿಂದ ಆವೃತವಾಗಿರುವ ಪರ್ವತಗಳ ಶ್ರೇಣಿಯಿಂದ ಸುತ್ತುವರಿದಿದೆ ಈ ಸಮುದ್ರ. ಸರೋವರದ ಸ್ಪಷ್ಟ ನೀಲಿ ನೀರು ಸುತ್ತಮುತ್ತಲಿನ ಶಿಖರಗಳ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ. ಇದನ್ನು ಒಮ್ಮೆಯಾದ್ರೂ ಕಣ್ತುಂಬಿಕೊಂಡು ಧನ್ಯರಾಗಿ. (Unsplash)
ಪ್ರಶಾರ್ ಸರೋವರ, ಹಿಮಾಚಲ ಪ್ರದೇಶ: ಹಿಮಾಲಯದ ಧೌಲಾಧರ್ ಶ್ರೇಣಿಯಲ್ಲಿರುವ ಈ ಸರೋವರವು ಸಾಮಾನ್ಯ ಸಮಯದಲ್ಲಿ ಹಸಿರು ಮತ್ತು ಚಳಿಗಾಲದಲ್ಲಿ ಹಿಮದಿಂದ ಆವರಿಸಿರುವ ಶಿಖರಗಳಿಂದ ಆವೃತವಾಗಿದೆ. ಈ ಪ್ರದೇಶವು ಶಾಂತ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಇದು ಪ್ರಕೃತಿ ಪ್ರಿಯರಿಗೆ ಮತ್ತು ಏಕಾಂತವನ್ನು ಬಯಸುವವರಿಗೆ ಪರಿಪೂರ್ಣ ತಾಣವಾಗಿದೆ. ಹತ್ತಿರದ ದೇವಾಲಯವು ಪ್ರಶಾಂತ ಭೂದೃಶ್ಯಕ್ಕೆ ಆಧ್ಯಾತ್ಮದ ಟಚ್‌ ನೀಡುತ್ತದೆ. 
(5 / 7)

ಪಹಲ್ಗಾಮ್, ಕಾಶ್ಮೀರ: ಪಹಲ್ಗಾಮ್ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಒಂದು ಸುಂದರ ಪಟ್ಟಣ. ಇದು ಸೊಂಪಾದ ಹುಲ್ಲುಗಾವಲುಗಳು, ದಟ್ಟವಾದ ಕಾಡುಗಳು ಮತ್ತು ಕಣಿವೆಯ ಮೂಲಕ ಹರಿಯುವ ಲೈಡರ್ ನದಿಯೊಂದಿಗೆ ಅದ್ಭುತವಾದ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಅಮರನಾಥ ಗುಹೆಗೆ ಪ್ರಸಿದ್ಧವಾದ ಟ್ರೆಕ್ ಸೇರಿದಂತೆ ಈ ಪ್ರದೇಶದಲ್ಲಿ ಅನೇಕ ಚಾರಣಗಳು ಇಲ್ಲಿಂದ ಪ್ರಾರಂಭವಾಗುತ್ತವೆ.
(6 / 7)

ವ್ಯಾಲಿ ಆಫ್ ಫ್ಲವರ್ಸ್, ಉತ್ತರಾಖಂಡ: ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯಲ್ಲಿದೆ, ವ್ಯಾಲಿ ಆಫ್ ಫ್ಲವರ್ಸ್ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದ್ದು, ಅದರ ಶ್ರೀಮಂತ ಜೀವವೈವಿಧ್ಯ ಮತ್ತು ಅದ್ಭುತವಾದ ಹೂವಿನ ಪ್ರದರ್ಶನಗಳಿಗೆ ಹೆಸರುವಾಸಿಯಾಗಿದೆ. ಆರ್ಕಿಡ್‌ಗಳು, ಗಸಗಸೆಗಳು, ಮಾರಿಗೋಲ್ಡ್‌ಗಳು ಸೇರಿದಂತೆ ವಿವಿಧ ಆಲ್ಪೈನ್ ಹೂವುಗಳಿಂದ ಕಣಿವೆಯನ್ನು ಅಲಂಕರಿಸಲಾಗಿದೆ. ಇದಕ್ಕೆ ಯಾವುದೇ ವಿದೇಶಿ ತಾಣವೂ ಸರಿಸಾಟಿಯಲ್ಲ. 
(7 / 7)

    ಹಂಚಿಕೊಳ್ಳಲು ಲೇಖನಗಳು