ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Dhruva Sarja: ವಿಶೇಷ ದಿನದಂದೇ ಇಬ್ಬರು ಮಕ್ಕಳಿಗೆ ನಾಮಕರಣ ಮಾಡಿದ ಧ್ರುವ ಸರ್ಜಾ; ಹೀಗಿದೆ ಮಗ, ಮಗಳ ಹೆಸರು

Dhruva Sarja: ವಿಶೇಷ ದಿನದಂದೇ ಇಬ್ಬರು ಮಕ್ಕಳಿಗೆ ನಾಮಕರಣ ಮಾಡಿದ ಧ್ರುವ ಸರ್ಜಾ; ಹೀಗಿದೆ ಮಗ, ಮಗಳ ಹೆಸರು

Jan 22, 2024 03:38 PM IST

Dhruva Sarja Children's Naming Ceremony: ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ಮತ್ತವರ ಕುಟುಂಬ ಆಂಜನೇಯನ ಭಕ್ತರು. ಇದೀಗ ಅಯೋಧ್ಯೆ ರಾಮನ ಪ್ರಾಣ ಪ್ರತಿಷ್ಠಾಪನೆ ದಿನವೇ ತಮ್ಮಿಬ್ಬರು ಮಕ್ಕಳಿಗೆ ವಿಶೇಷ ಹೆಸರುಗಳ ನಾಮಕರಣ ಮಾಡಿದ್ದಾರೆ ಧ್ರುವ ಮತ್ತು ಪ್ರೇರಣಾ ಶಂಕರ್‌

  • Dhruva Sarja Children's Naming Ceremony: ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ಮತ್ತವರ ಕುಟುಂಬ ಆಂಜನೇಯನ ಭಕ್ತರು. ಇದೀಗ ಅಯೋಧ್ಯೆ ರಾಮನ ಪ್ರಾಣ ಪ್ರತಿಷ್ಠಾಪನೆ ದಿನವೇ ತಮ್ಮಿಬ್ಬರು ಮಕ್ಕಳಿಗೆ ವಿಶೇಷ ಹೆಸರುಗಳ ನಾಮಕರಣ ಮಾಡಿದ್ದಾರೆ ಧ್ರುವ ಮತ್ತು ಪ್ರೇರಣಾ ಶಂಕರ್‌
ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಇಬ್ಬರೂ ಬಾಲ್ಯ ಸ್ನೇಹಿತರು. ಈ ಜೋಡಿ 2018ರಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡು, 2019ರ ನವೆಂಬರ್‌ 25ರಂದು ಮದುವೆಯಾಗಿತ್ತು. 
(1 / 11)
ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಇಬ್ಬರೂ ಬಾಲ್ಯ ಸ್ನೇಹಿತರು. ಈ ಜೋಡಿ 2018ರಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡು, 2019ರ ನವೆಂಬರ್‌ 25ರಂದು ಮದುವೆಯಾಗಿತ್ತು. (Instagram\ Dhruva Sarja)
2022ರ ಅಕ್ಟೋಬರ್‌ 2ರಂದು ಈ ದಂಪತಿ ಮಡಿಲಿಗೆ ಮುದ್ದಾದ ಹೆಣ್ಣು ಮಗು ಆಗಮಿಸಿತ್ತು. ಪುಟಾಣಿಯ ಫೋಟೋ ಹಂಚಿಕೊಂಡಿದ್ದ ಧ್ರುವ ಮಗಳ ಹೆಸರನ್ನು ಮಾತ್ರ ರಿವೀಲ್‌ ಮಾಡಿರಲಿಲ್ಲ.
(2 / 11)

ಇದೀಗ ಮಗಳ ಬಳಿಕ ಮಗನ ಆಗಮನವೂ ಆಗಿದೆ. ಹೀಗಿರುವಾಗಲೇ 2023ರ ಸೆಪ್ಟೆಂಬರ್‌ 18ರಂದು ಇದೇ ದಂಪತಿ ಗಂಡು ಮಗುವನ್ನು ಬರಮಾಡಿಕೊಂಡಿತ್ತು.
(3 / 11)

ಮಗನ ಫೋಟೋವನ್ನು ಈ ಜೋಡಿ ಇನ್ನೂ ರಿವೀಲ್‌ ಮಾಡಿಲ್ಲ. ಜತೆಗೆ ಈ ಇಬ್ಬರು ಮಕ್ಕಳ ಹೆಸರೇನು ಎಂಬುದನ್ನೂ ಅಧಿಕೃತವಾಗಿ ಘೋಷಿಸಿರಲಿಲ್ಲ.
(4 / 11)

ಇದೀಗ ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್‌ ತಮ್ಮ ಇಬ್ಬರು ಮಕ್ಕಳಿಗೆ ಕೊನೆಗೂ ನಾಮಕರಣ ಮಾಡಿದ್ದಾರೆ. 
(5 / 11)

ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ದಿನದಂದೇ ಇಬ್ಬರು ಮಕ್ಕಳಿಗೆ ವಿಶೇಷ ಹೆಸರನ್ನೇ ಇಟ್ಟಿದ್ದಾರೆ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್‌. 
(6 / 11)

ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಮುಂದೆಯೇ ನಾಮಕರಣ ಕಾರ್ಯಕ್ರಮ ನೆರವೇರಿಸಲಾಗಿದೆ. 
(7 / 11)
ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಮುಂದೆಯೇ ನಾಮಕರಣ ಕಾರ್ಯಕ್ರಮ ನೆರವೇರಿಸಲಾಗಿದೆ. 
ಬೆಂಗಳೂರು ಹೊರವಲಯದಲ್ಲಿರುವ ಧ್ರುವ ಸರ್ಜಾ ಅವರ ​ ನೆಲಗುಳಿಯಲ್ಲಿನ ಫಾರ್ಮ್​ಹೌಸ್‌ನಲ್ಲಿ ಇಬ್ಬರು ಮಕ್ಕಳಿಗೆ ನಾಮಕರಣ ಮಾಡಲಾಗಿದೆ.
(8 / 11)

ಎರಡೂ ಕುಟುಂಬದವರು, ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿಯೇ ಈ ಶಾಸ್ತ್ರ ನೆರವೇರಿಸಿದ್ದಾರೆ ಧ್ರುವ ಸರ್ಜಾ. 
(9 / 11)

ಅಂದಹಾಗೆ, ಮಗಳಿಗೆ ರುದ್ರಾಕ್ಷಿ ಅಂತ ಹೆಸರಿಟ್ಟರೆ, ಮಗನಿಗೆ ಹಯಗ್ರೀವ ಎಂದು ನಾಮಕರಣ ಮಾಡಿದ್ದಾರೆ. 
(10 / 11)
ಅಂದಹಾಗೆ, ಮಗಳಿಗೆ ರುದ್ರಾಕ್ಷಿ ಅಂತ ಹೆಸರಿಟ್ಟರೆ, ಮಗನಿಗೆ ಹಯಗ್ರೀವ ಎಂದು ನಾಮಕರಣ ಮಾಡಿದ್ದಾರೆ. 
ಸೋಷಿಯಲ್‌ ಮೀಡಿಯಾದಲ್ಲಿ ಈ ಹೆಸರುಗಳು ಹರಿದಾಡುತ್ತಿದ್ದಂತೆ, ಅವರ ಅಭಿಮಾನಿಗಳಿಂದಲೂ ಶುಭಾಶಯಗಳು ರವಾನೆಯಾಗುತ್ತಿವೆ. 
(11 / 11)

    ಹಂಚಿಕೊಳ್ಳಲು ಲೇಖನಗಳು