ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Year Ender 2023: ಈ ವರ್ಷ ಪ್ರೇಕ್ಷಕನಿಂದ ದೂರವೇ ಉಳಿದ ಹೀರೋಗಳಿವರು; ದರ್ಶನ ಕೊಡದೇ ಸತಾಯಿಸಿದವರು

Year Ender 2023: ಈ ವರ್ಷ ಪ್ರೇಕ್ಷಕನಿಂದ ದೂರವೇ ಉಳಿದ ಹೀರೋಗಳಿವರು; ದರ್ಶನ ಕೊಡದೇ ಸತಾಯಿಸಿದವರು

Dec 22, 2023 05:01 PM IST

Year Ender 2023: ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ನೂರಾರು ಸಿನಿಮಾಗಳು ತೆರೆಕಂಡಿವೆ. ಅವುಗಳಲ್ಲಿ ಬಹುಪಾಲು ಹೊಸಬರದ್ದೇ. ಇನ್ನುಳಿದಂತೆ, ಸ್ಟಾರ್‌ ನಟರ ಸಿನಿಮಾಗಳ ಸಂಖ್ಯೆ ಎರಡಂಕಿ ಮಾತ್ರ. ಈ ನಡುವೆ ಈ ವರ್ಷ ಇನ್ನೂ ಹಲವು ನಟರು ಚಿತ್ರಮಂದಿರಗಳತ್ತ ಮುಖ ಮಾಡಲಿಲ್ಲ. ಆ ಹೀರೋಗಳು ಯಾರು? ಇಲ್ಲಿದೆ ಮಾಹಿತಿ.

  • Year Ender 2023: ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ನೂರಾರು ಸಿನಿಮಾಗಳು ತೆರೆಕಂಡಿವೆ. ಅವುಗಳಲ್ಲಿ ಬಹುಪಾಲು ಹೊಸಬರದ್ದೇ. ಇನ್ನುಳಿದಂತೆ, ಸ್ಟಾರ್‌ ನಟರ ಸಿನಿಮಾಗಳ ಸಂಖ್ಯೆ ಎರಡಂಕಿ ಮಾತ್ರ. ಈ ನಡುವೆ ಈ ವರ್ಷ ಇನ್ನೂ ಹಲವು ನಟರು ಚಿತ್ರಮಂದಿರಗಳತ್ತ ಮುಖ ಮಾಡಲಿಲ್ಲ. ಆ ಹೀರೋಗಳು ಯಾರು? ಇಲ್ಲಿದೆ ಮಾಹಿತಿ.
ಕೆಜಿಎಫ್‌ ಬಳಿಕ ಯಶ್‌ ನಾಪತ್ತೆ, ಕಾಂತಾರ ಬಂದ ಬಳಿಕ ಮತ್ತೊಂದು ಕಾಂತಾರ ಕೆಲಸದಲ್ಲಿ ರಿಷಬ್‌ ಶೆಟ್ಟಿ ಬಿಜಿ. ಧ್ರುವ ಸರ್ಜಾ 2021ರಲ್ಲಿಯೇ ಕಾಣಿಸಿದ್ದು, ಅದಾದ ಬಳಿಕ ಇನ್ನೂ ಅವರ ದರ್ಶನವಾಗಿಲ್ಲ. ಹೀಗೆ 2023 ವರ್ಷವನ್ನು ಮಿಸ್‌ ಮಾಡಿಕೊಂಡ ಸ್ಟಾರ್‌ಗಳು ಇವರೇ ನೋಡಿ. 
(1 / 8)

ದುನಿಯಾ ವಿಜಯ್‌: ಇನ್ನು ದುನಿಯಾ ವಿಜಯ್‌ ನಾಯಕನಾಗಿ ನಟಿಸಿದ ಕೊನೇ ಸಿನಿಮಾ ಸಲಗ 2021ರಲ್ಲಿ ರಿಲೀಸ್‌ ಆಗಿತ್ತು. ಇದೀಗ ಭೀಮನ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ.  
(2 / 8)

ನೀನಾಸಂ ಸತೀಶ್‌: 2022ರಲ್ಲಿ ಪೆಟ್ರೋಮ್ಯಾಕ್ಸ್‌ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನೀನಾಸಂ ಸತೀಶ್‌, ಈ ವರ್ಷ ಚಿತ್ರಮಂದಿರದ ಕಡೆ ಮುಖ ಮಾಡಿಲ್ಲ. ಸದ್ಯ ಅವರ ಹಲವು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. 
(3 / 8)

ಶ್ರೀಮುರಳಿ: ಇತ್ತ ಶ್ರೀಮುರಳಿ ನಟನೆಯ ಮದಗಜ ಸಿನಿಮಾ 2021ರಲ್ಲಿ ರಿಲೀಸ್‌ ಆಗಿತ್ತು. ಅದಾದ ಬಳಿಕ ಅವರ ಬೇರಾವ ಸಿನಿಮಾ ರಿಲೀಸ್‌ ಆಗಿಲ್ಲ. ಇತ್ತೀಚೆಗಷ್ಟೇ ಬರ್ತ್‌ಡೇ ನೆಪದಲ್ಲಿ ಬಘೀರ ಚಿತ್ರದ ಟೀಸರ್‌ ಬಿಡುಗಡೆ ಆಗಿತ್ತು.
(4 / 8)

ಶರಣ್‌: ಜಡೇಶ್‌ ಕುಮಾರ್‌ ಹಂಪಿ ನಿರ್ದೇಶನದ ಶರನ್‌ ನಟನೆಯ ಗುರು ಶಿಷ್ಯರು ಚಿತ್ರ ಕಳೆದ ವರ್ಷ ತೆರೆಕಂಡಿತ್ತು. ಈ ವರ್ಷ ಅವರ ಬೇರಾವ ಸಿನಿಮಾ ರಿಲೀಸ್‌ ಆಗಲಿಲ್ಲ. 
(5 / 8)

ರಿಷಬ್‌ ಶೆಟ್ಟಿ: ಕಾಂತಾರ ಬಳಿಕ ಅದರ ಪ್ರೀಕ್ವೆಲ್‌ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ ನಟ, ನಿರ್ದೇಶಕ ರಿಷಬ್‌ ಶೆಟ್ಟಿ. ಇತ್ತೀಚೆಗಷ್ಟೇ ಮುಹೂರ್ತ ಮುಗಿಸಿಕೊಂಡಿದೆ ಈ ಸಿನಿಮಾ. 
(6 / 8)

ಧ್ರುವ ಸರ್ಜಾ: ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ 2021ರಲ್ಲಿ ತೆರೆಗೆ ಬಂದಿತ್ತು. ಅದಾದ ಮೇಲೆ ಮಾರ್ಟಿನ್‌ ಮತ್ತು ಕೆಡಿ ಸಿನಿಮಾ ಕೆಲಸಗಳಲ್ಲಿ ಅವರು ಬಿಜಿಯಾಗಿದ್ದಾರೆ. ಮುಂದಿನ ವರ್ಷವೇ ಆ ಸಿನಿಮಾಗಳು ತೆರೆಗೆ ಬರಲಿವೆ. 
(7 / 8)

ಯಶ್: ಕೆಜಿಎಫ್‌ ಬಳಿಕ ಯಶ್‌ ಅವರ ಹೊಸ ಸಿನಿಮಾ ಇತ್ತೀಚೆಗಷ್ಟೇ ಘೋಷಣೆ ಆಗಿದೆ. ಚಿತ್ರಕ್ಕೆ ಟಾಕ್ಸಿಕ್‌‌ ಎಂದು ಶೀರ್ಷಿಕೆ ಇಡಲಾಗಿದೆ. 2025ರಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದೆ. 
(8 / 8)

    ಹಂಚಿಕೊಳ್ಳಲು ಲೇಖನಗಳು