ಕನ್ನಡ ಸುದ್ದಿ  /  ಕ್ರೀಡೆ  /  ಆಟಗಾರ್ತಿಯರ ಮೇಲೆ ಹಲ್ಲೆ; ಕಾರ್ಯಕಾರಿ ಸಮಿತಿ ಸದಸ್ಯ ದೀಪಕ್ ಶರ್ಮಾ ಅಮಾನತುಗೊಳಿಸಿದ ಎಐಎಫ್ಎಫ್

ಆಟಗಾರ್ತಿಯರ ಮೇಲೆ ಹಲ್ಲೆ; ಕಾರ್ಯಕಾರಿ ಸಮಿತಿ ಸದಸ್ಯ ದೀಪಕ್ ಶರ್ಮಾ ಅಮಾನತುಗೊಳಿಸಿದ ಎಐಎಫ್ಎಫ್

Jayaraj HT Kannada

Apr 02, 2024 10:35 PM IST

ದೀಪಕ್ ಶರ್ಮಾ ಅಮಾನತುಗೊಳಿಸಿದ ಎಐಎಫ್ಎಫ್

    • Deepak Sharma: ಇಬ್ಬರು ಫುಟ್ಬಾಲ್ ಆಟಗಾರ್ತಿಯರ ಮೇಲೆ ದೈಹಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಎಐಎಫ್ಎಫ್ ಕಾರ್ಯಕಾರಿ ಸಮಿತಿ ಸದಸ್ಯ ದೀಪಕ್ ಶರ್ಮಾ ಅವರನ್ನು ಅಮಾನತುಗೊಳಿಸಲಾಗಿದೆ. 2 ದಿನಗಳ ಹಿಂದಷ್ಟೇ ಗೋವಾ ಪೊಲೀಸರು ಅವರನ್ನು ಬಂಧಿಸಿದ್ದರು.
ದೀಪಕ್ ಶರ್ಮಾ ಅಮಾನತುಗೊಳಿಸಿದ ಎಐಎಫ್ಎಫ್
ದೀಪಕ್ ಶರ್ಮಾ ಅಮಾನತುಗೊಳಿಸಿದ ಎಐಎಫ್ಎಫ್ (ANI)

ಇಬ್ಬರು ಫುಟ್ಬಾಲ್ ಆಟಗಾರ್ತಿಯರ ಮೇಲೆ ದೈಹಿಕ ಹಲ್ಲೆ ನಡೆಸಿದ ಆರೋಪದ ಮೇಲೆ,ಅಖಿಲ ಭಾರತ ಫುಟ್ಬಾಲ್ ಒಕ್ಕೂಟ (All India Football Federation -AIFF) ತನ್ನ ಕಾರ್ಯಕಾರಿ ಸಮಿತಿ ಸದಸ್ಯ ದೀಪಕ್ ಶರ್ಮಾ (Deepak Sharma) ಅವರನ್ನು ಅಮಾನತುಗೊಳಿಸಿದೆ. ಏಪ್ರಿಲ್ 2ರ ಮಂಗಳವಾರ ಈ ಕುರಿತು ಆದೇಶ ಹೊರಡಿಸಿರುವ ಎಐಎಫ್ಎಫ್, ಮುಂದಿನ ಸೂಚನೆ ಬರುವವರೆಗೆ ಸಂಸ್ಪೆಂಡ್‌ ಮಾಡಿರುವುದಾಗಿ ತಿಳಿಸಿದೆ.

ಟ್ರೆಂಡಿಂಗ್​ ಸುದ್ದಿ

ರೆಸ್ಲರ್ ಅಮನ್ ಸೆಹ್ರಾವತ್​ಗೆ ಪ್ಯಾರಿಸ್ ಒಲಿಂಪಿಕ್ಸ್​ ಟಿಕೆಟ್; ಮೊದಲ ಬಾರಿಗೆ ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ

ದೋಹಾ ಡೈಮಂಡ್ ಲೀಗ್​​​ 2024: ನೀರಜ್ ಚೋಪ್ರಾಗೆ 2ನೇ ಸ್ಥಾನ; ಕೇವಲ 2 ಸೆಂಟಿ ಮೀಟರ್​​ಗಳಲ್ಲಿ ತಪ್ಪಿತು ಮೊದಲ ಸ್ಥಾನ

Brij Bhushan Singh: ಬ್ರಿಜ್​ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಎಂದ ದೆಹಲಿ ಕೋರ್ಟ್

ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್​ಶಿಪ್​​; ಬೆಂಗಳೂರಿನ ದೇವಿಕಾ ದೇಸಾಯಿ, ದಿಶಾ ಮೋಹನ್ ಆಯ್ಕೆ

ಗೋವಾ ಫುಟ್ಬಾಲ್ ಅಸೋಸಿಯೇಷನ್ ದೂರು ನೀಡಿದ‌ ಬಳಿಕ, ಗೋವಾ ಪೊಲೀಸರು ದೀಪಕ್ ಶರ್ಮಾ ಅವರನ್ನು ಬಂಧಿಸಿದ್ದರು. ಅದರ ಬೆನ್ನಲ್ಲೇ ಅವರನ್ನು ಅಮಾನತು ಮಾಡಲಾಗಿದೆ. ಖಡ್ ಎಫ್ ಸಿಯ ಇಬ್ಬರು ಆಟಗಾರ್ತಿಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಶರ್ಮಾ ಅವರನ್ನು ಅರೆಸ್ಟ್‌ ಮಾಡಲಾಗಿತ್ತು. ಆದರೂ, ಆ ಬಳಿಕ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಬಂಧನ ಬಳಿಕ ಇದೀಗ ಸಂಸ್ಪೆಂಡ್‌ ಮಾಡಲಾಗಿದೆ.

ಶರ್ಮಾ ಅವರು ಕುಡಿದ ಅಮಲಿನಲ್ಲಿದ್ದರು. ಘಟನೆ ವೇಳೆ ಜೀವ ಭಯ ಉಂಟಾಗಿತ್ತು ಎಂದು ಇಬ್ಬರು ಆಟಗಾರರು ಎಐಎಫ್ಎಫ್‌ಗೆ ಕಳುಹಿಸಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ | ಲಕ್ನೋ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ; ಅಲ್ಜಾರಿ ಜೋಸೆಫ್ ಔಟ್, ಆಡುವ ಬಳಗಕ್ಕೆ ರೀಸ್ ಟೋಪ್ಲಿ

“ಎಐಎಫ್‌ಎಫ್ ಕಾರ್ಯಕಾರಿ ಸಮಿತಿಯು ದೀಪಕ್ ಶರ್ಮಾ ಅವರನ್ನು ಮುಂದಿನ ಸೂಚನೆ ನೀಡುವವರೆಗೂ ಫುಟ್‌ಬಾಲ್ ಸಂಬಂಧಿತ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಅಮಾನತುಗೊಳಿಸಲು ನಿರ್ಧರಿಸಿದೆ,” ಎಂದು ಎಐಎಫ್‌ಎಫ್ ಪ್ರಕಟಣೆಯಲ್ಲಿ ತಿಳಿಸಿದೆ. ದೀಪಕ್ ಶರ್ಮಾ ಹಿಮಾಚಲ ಪ್ರದೇಶ ಫುಟ್‌ಬಾಲ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೂಡಾ ಆಗಿದ್ದಾರೆ.

ಇಂಡಿಯನ್ ವಿಮೆನ್ಸ್ ಫುಟ್ಬಾಲ್ (IWL) ಲೀಗ್‌ನ ಎರಡನೇ ಆವೃತ್ತಿಯಲ್ಲಿ, ಆಟಗಾರ್ತಿಯರು ಹಿಮಾಚಲ ಪ್ರದೇಶ ಮೂಲದ ಕ್ಲಬ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆ ಕ್ಲಬ್ ಮಾಲೀಕರಾಗಿರುವ ಶರ್ಮಾ‌, ಮಾರ್ಚ್ 28ರಂದು ಆಟಗಾರ್ತಿಯರ ಕೋಣೆಗೆ ನುಗ್ಗಿ ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಸಿದ ಎಐಎಫ್ಎಫ್ ಸಮಿತಿಯು, ತನಿಖೆ ಮುಗಿಯುವವರೆಗೂ ಫುಟ್ಬಾಲ್ ಸಂಬಂಧಿತ ಚಟುವಟಿಕೆಗಳಿಂದ ದೂರವಿರಲು ಶರ್ಮಾಗೆ ಸೂಚಿಸಿತ್ತು.

ಘಟನೆ ಸಂಬಂಧ ತನಿಖೆ ನಡೆಸಲು ಮಾರ್ಚ್ 30ರಂದು ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯನ್ನು ವಿಸರ್ಜಿಸಲು ಎಐಎಫ್ಎಫ್ ನಿರ್ಧರಿಸಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ