logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  G20 Summit:ಜಿ20 ಸಭೆಗೆ ಅದ್ಭುತ ತಯಾರಿ ; ದಂಗಾಗಿಸುತ್ತೆ ಸಭೆ ನಡೆಯಲಿರುವ ಪ್ರಗತಿ ಮೈದಾನದ ಐಇಸಿಸಿ ಸೆಂಟರ್

G20 summit:ಜಿ20 ಸಭೆಗೆ ಅದ್ಭುತ ತಯಾರಿ ; ದಂಗಾಗಿಸುತ್ತೆ ಸಭೆ ನಡೆಯಲಿರುವ ಪ್ರಗತಿ ಮೈದಾನದ ಐಇಸಿಸಿ ಸೆಂಟರ್

Jul 25, 2023 05:38 PM IST

  • ಸೆಪ್ಟೆಂಬರ್ ನಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಪ್ರತಿಷ್ಠಿತ ಜಿ20 ಸಭೆಗೆ ಭರ್ಜರಿ ತಯಾರಿ ನಡೆಸಲಾಗುತ್ತಿದೆ. ದೆಹಲಿಯಲ್ಲಿ ನಡೆಯಲಿರುವ ಈ ಮಹತ್ವದ ಸಭೆ ಪ್ರಗತಿ ಮೈದಾನದ ಐಇಸಿಸಿ ಸೆಂಟರ್ ನಲ್ಲಿ ನಡೆಯಲಿದೆ. ಈ ಹಿಂದೆ ಐಟಿಪಿಒ ಕಾಂಪ್ಲೆಕ್ಸ್ ಆಗಿದ್ದ ಈ ಸ್ಥಳ ಈಗ ಐಇಸಿಸಿ ಸೆಂಟರ್ ಆಗಿ ರೂಪುಗೊಂಡಿದೆ. ಈ ಐಇಸಿಸಿ ಸುಮಾರು 123 ಎಕರೆಯಷ್ಟು ವಿಸ್ತೀರ್ಣ ಹೊಂದಿದೆ. ಅಂತರಾಷ್ಟ್ರೀಯ ಸಭೆಗಳು, ಕಾನ್ಫರೆನ್ಸ್​ಗಳು, ಪ್ರದರ್ಶನಗಳನ್ನು ನಡೆಸಲು ಅತಿದೊಡ್ಡ ಕಾಂಪ್ಲೆಕ್ಸ್ ನಿರ್ಮಿಸಲಾಗಿದೆ. ವಿಶ್ವದ 10 ಅಗ್ರಮಾನ್ಯ ಪ್ರದರ್ಶನ ಸ್ಥಳಗಳಲ್ಲಿ ಐಇಸಿಸಿ ಕೂಡ ಇದೆ. ಜರ್ಮನಿಯ ಐತಿಹಾಸಿಕ ಹಾನೋವರ್ ಎಕ್ಸಿಬಿಶನ್ ಸೆಂಟರ್, ಚೀನಾದ ಶಾಂಘೈನಲ್ಲಿರುವ ನ್ಯಾಷನಲ್ ಎಕ್ಸಿಬಿಶನ್ ಅಂಡ್ ಕನ್ವೆನ್ಷನ್ ಸೆಂಟರ್ ನಂತೆ ಭಾರತದ ಇಂಟರ್ನ್ಯಾಷನ್ ಎಕ್ಸಿಬಿಶನ್ ಅಂಡ್ ಕನ್ವೆನ್ಷನ್ ಸೆಂಟರ್ ಕೂಡ ಸೇರ್ಪಡೆಯಾಗಲಿದೆ.