ಕನ್ನಡ ಸುದ್ದಿ  /  ಮನರಂಜನೆ  /  Mission Raniganj: ಸೋತ ಅಕ್ಷಯ್‌ಗೆ ಕೈ ಹಿಡಿಯುತ್ತಾ ಮಿಷನ್‌ ರಾಣಿಗಂಜ್‌? ಕಲ್ಲಿದ್ದಲು ಗಣಿಯ ಕರಾಳ ಕಥೆ ಹೇಳಲು ಬರ್ತಿದ್ದಾರೆ ಕಿಲಾಡಿ

Mission Raniganj: ಸೋತ ಅಕ್ಷಯ್‌ಗೆ ಕೈ ಹಿಡಿಯುತ್ತಾ ಮಿಷನ್‌ ರಾಣಿಗಂಜ್‌? ಕಲ್ಲಿದ್ದಲು ಗಣಿಯ ಕರಾಳ ಕಥೆ ಹೇಳಲು ಬರ್ತಿದ್ದಾರೆ ಕಿಲಾಡಿ

Oct 06, 2023 06:15 AM IST

Mission Raniganj: ಸೋತ ಅಕ್ಷಯ್‌ಗೆ ಕೈ ಹಿಡಿಯುತ್ತಾ ಮಿಷನ್‌ ರಾಣಿಗಂಜ್‌? ಕಲ್ಲಿದ್ದಲು ಗಣಿಯ ಕರಾಳ ಕಥೆ ಹೇಳಲು ಬರ್ತಿದ್ದಾರೆ ಕಿಲಾಡಿ

    • ನಟ ಅಕ್ಷಯ್‌ ಕುಮಾರ್‌ ಇದೀಗ ಮಿಷನ್‌ ರಾಣಿಗಂಜ್‌ ಸಿನಿಮಾ ಮೂಲಕ ಮತ್ತೆ ಆಗಮಿಸಿದ್ದಾರೆ. ಈ ಸಲ ಕಲ್ಲಿದ್ದಲು ಗಣಿಯಲ್ಲಿ ನಡೆದ ದುರಂತದ ಕಥೆಯೊಂದಿಗೆ ಬರುತ್ತಿದ್ದಾರೆ. ಇಂದು (ಅ. 6) ಈ ಸಿನಿಮಾ ಬಿಡುಗಡೆ ಆಗಿದೆ. 
Mission Raniganj: ಸೋತ ಅಕ್ಷಯ್‌ಗೆ ಕೈ ಹಿಡಿಯುತ್ತಾ ಮಿಷನ್‌ ರಾಣಿಗಂಜ್‌? ಕಲ್ಲಿದ್ದಲು ಗಣಿಯ ಕರಾಳ ಕಥೆ ಹೇಳಲು ಬರ್ತಿದ್ದಾರೆ ಕಿಲಾಡಿ
Mission Raniganj: ಸೋತ ಅಕ್ಷಯ್‌ಗೆ ಕೈ ಹಿಡಿಯುತ್ತಾ ಮಿಷನ್‌ ರಾಣಿಗಂಜ್‌? ಕಲ್ಲಿದ್ದಲು ಗಣಿಯ ಕರಾಳ ಕಥೆ ಹೇಳಲು ಬರ್ತಿದ್ದಾರೆ ಕಿಲಾಡಿ

Mission Raniganj: ನಟ ಅಕ್ಷಯ್‌ ಕುಮಾರ್‌ ಮತ್ತೊಂದು ಬಯೋಪಿಕ್‌ ಹಿಡಿದು ಬಂದಿದ್ದಾರೆ. ಈಗಾಗಲೇ ಹಲವು ಯಶಸ್ವಿ ಬಯೋಪಿಕ್‌ ಮಾಡಿ, ಗೆಲುವು ಕಂಡ ಅಕ್ಷಯ್‌ ಇದೀಗ, ಮಿಷನ್‌ ರಾಣಿಗಂಜ್‌ (Mission Raniganj: The Great Bharat Rescue) ಹೆಸರಿನಲ್ಲಿ ಜಶ್ವಂತ್‌ ಸಿಂಗ್‌ ಗಿಲ್‌ ಎಂಬ ಮೈನಿಂಗ್‌ ಇಂಜಿನಿಯರ್‌ ಆಗಿ ಬದಲಾಗಿದ್ದಾರೆ. ಇಂದು (ಅ. 6) ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಇತ್ತೀಚೆಗಷ್ಟೇ OMG 2 ಸಿನಿಮಾ ಮೂಲಕ ಆಗಮಿಸಿದ್ದ ಅಕ್ಷಯ್‌ ಕುಮಾರ್‌ಗೆ ಆ ಸಿನಿಮಾ ನಿರೀಕ್ಷಿತ ಗೆಲುವು ತಂದುಕೊಟ್ಟಿರಲಿಲ್ಲ. ಇದೀಗ ಮಿಷನ್‌ ರಾಣಿಗಂಜ್‌ ಹಿಡಿದು ಪ್ರೇಕ್ಷಕನ ಮುಂದೆ ಬಂದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕನ್ನಡ ಕಿರುತೆರೆಯಲ್ಲಿ ಮರ್ಯಾದಾ ಪುರುಷೋತ್ತಮನ ಜೀವನಗಾಥೆ; ಶ್ರೀಮದ್‌ ರಾಮಾಯಣ ಮಹಾಕಾವ್ಯ ಎಲ್ಲಿ, ಯಾವಾಗಿನಿಂದ ಶುರು?

Blink OTT: ಭಾರತದ ಒಟಿಟಿಯಲ್ಲೂ ಬಿಡುಗಡೆಯಾಯ್ತು ಬ್ಲಿಂಕ್‌ ಸಿನಿಮಾ; ದೀಕ್ಷಿತ್‌ ಶೆಟ್ಟಿ‌ ನಟನೆಯ ಸಿನಿಮಾಕ್ಕೆ ಒಟಿಟಿ ವೀಕ್ಷಕರಿಂದ ಬಹುಪರಾಕ್‌

ಮೊಬೈಲ್‌ ಗೀಳು, ಯುವಜನತೆಯ ಗೋಳು; ಚಂದನ್‌ ಶೆಟ್ಟಿ ನಟನೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಟ್ರೇಲರ್‌ ಬಿಡುಗಡೆ

AR Rahman: ಅಮ್ಮನ ಚಿನ್ನಾಭರಣ ಗಿರವಿಗಿಟ್ಟು ಮ್ಯೂಸಿಕ್‌ ಸ್ಟುಡಿಯೋಗೆ ಮೊದಲ ಸಂಗೀತ ಸಲಕರಣೆ ಖರೀದಿಸಿದ್ರಂತೆ ಎಆರ್‌ ರೆಹಮಾನ್‌

ಏನಿದು ಮಿಷನ್‌ ರಾಣಿಗಂಜ್‌

1989ರಲ್ಲಿ ಪಶ್ಚಿಮ ಬಂಗಾಲದ ರಾಣಿಗಂಜ್‌ ಅನ್ನೋ ಊರಲ್ಲಿ ಕಲ್ಲಿದ್ದಲು ಗಣಿಯಲ್ಲಿ ನಡೆದ ದುರಂತದಲ್ಲಿ 65 ಜನರ ಪ್ರಾಣ ಉಳಿಸಿದ ಒಂದು ಬೃಹತ್‌ ರಕ್ಷಣಾ ಕಾರ್ಯಾಚರಣೆಯೇ ಈ ಸಿನಿಮಾದ ಮೂಲ ಎಳೆ. ಗಣಿಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು, ಮೈನಿಂಗ್‌ ಎಂಜಿನಿಯರ್‌ ಜಸ್ವಂತ್‌ ಸಿಂಗ್‌ ಗಿಲ್‌ ತಮ್ಮ ಪ್ರಾಣ ಒತ್ತೆಯಿಟ್ಟು ರಕ್ಷಣೆ ಮಾಡಿದ್ದರು. ಆದರೂ ದುರದೃಷ್ಟವಶಾತ್‌ 6 ಜನರ ಉಸಿರು ಚೆಲ್ಲಿದ್ದರು. ಆಗಿನ ಕಾಲದಲ್ಲಿ ಈ ವಿಚಾರ ಹೆಚ್ಚು ಮುನ್ನೆಲೆಗೆ ಬಾರದಿದ್ದರೂ, ತೆರೆಮರೆಯಲ್ಲಿಯೇ ಹೀರೋ ಆಗಿ ಮಿಂಚಿದ್ದರು ಜಶ್ವಂತ್. ‌1991ರಲ್ಲಿ ರಾಷ್ಟ್ರಪತಿಗಳಿಂದ ಸರ್ವೋತ್ತಮ ಜೀವನ ರಕ್ಷಾ ಪದಕ ಪ್ರಶಸ್ತಿಯೂ ಮುಡಿಗೇರಿತ್ತು. ಇದೀಗ ಇದೇ ಘಟನೆಯನ್ನು ಸಿನಿಮಾ ರೂಪಕ್ಕೆ ತರಲಾಗಿದೆ.

ಟಿನಿ ಸುರೇಶ್‌ ದೇಸಾಯಿ ಈ ಸಿನಿಮಾ ನಿರ್ದೇಶನ ಮಾಡಿದ್ದು, ವಶು ಭಗ್ನಾನಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಅಕ್ಷಯ್‌ ಕುಮಾರ್‌ಗೆ ಜೋಡಿಯಾಗಿ ಪರಿಣಿತಿ ಚೋಪ್ರಾ ನಟಿಸಿದ್ದಾರೆ. ಇನ್ನುಳಿದಂತೆ ಕುಮುದ್‌ ಮಿಶ್ರಾ, ಪವನ್‌ ಮಲ್ಹೋತ್ರಾ, ರವಿ ಕಿಶನ್‌ ಸೇರಿ ಹತ್ತಾರು ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ಆರಂಭದಲ್ಲಿ ಸಿನಿಮಾ ಘೋಷಣೆ ಆದಾಗ ಚಿತ್ರಕ್ಕೆ ಕ್ಯಾಪ್ಸುಲ್‌ ಗಿಲ್‌ ಎಂಬ ಶೀರ್ಷಿಕೆ ಇಡಲಾಗಿತ್ತು. ಅದಾದ ಬಳಿಕ ದಿ ಗ್ರೇಟ್‌ ಇಂಡಿಯನ್‌ ರೆಸ್ಕ್ಯೂ ಎಂಬ ಶೀರ್ಷಿಕೆ ಫಿಕ್ಸ್‌ ಆಯ್ತು. ಮೊನ್ನೆ ಮೊನ್ನೆ ಸೆಪ್ಟೆಂಬರ್‌ನಲ್ಲಿ ಮಿಷನ್‌ ರಾಣಿಗಂಜ್;‌ ದಿ ಗ್ರೇಟ್‌ ಭಾರತ್‌ ರೆಸ್ಕ್ಯೂ ಎಂಬ ಶೀರ್ಷಿಕೆ ಅಂತಿಮವಾಯ್ತು.

ಸೆನ್ಸಾರ್‌ ಮಂಡಳಿಯಿಂದ ಸಿಕ್ತು ವಿಶೇಷ ಗೌರವ

ಮಿಷನ್‌ ರಾಣಿಗಂಜ್‌ ಸಿನಿಮಾ ವೀಕ್ಷಣೆ ಮಾಡಿದ ಸೆನ್ಸಾರ್‌ ಮಂಡಳಿ ಇಡೀ ತಂಡಕ್ಕೆ ಎದ್ದು ನಿಂತು ಗೌರವ ಸಲ್ಲಿಸಿದೆ. ಈ ಹಿಂದಿನ ಅಕ್ಷಯ್‌ ಅವರ OMG 2 ಸಿನಿಮಾಕ್ಕೆ 27 ಕಟ್‌ ಹೇಳಿ, A ಪ್ರಮಾಣ ಪತ್ರ ನೀಡಿದ್ದ ಸೆನ್ಸಾರ್‌ ಮಂಡಳಿ ಇದೀಗ ರಾಣಿಗಂಜ್‌ ನೋಡಿ U/A ಪ್ರಮಾಣ ಪತ್ರ ನೀಡಿ ಸಿನಿಮಾವನ್ನು ಮೆಚ್ಚಿಕೊಂಡಿದೆ. ಇನ್ನು ಅಕ್ಷಯ್‌ ಅವರ ಅಪ್‌ಕಮಿಂಗ್‌ ಸಿನಿಮಾ ಬಗ್ಗೆ ಹೇಳುವುದಾದರೆ, ಟೈಗರ್‌ ಶ್ರಾಫ್‌ ಜತೆಗೆ ಬಡೇ ಮಿಯಾ ಚೋಟೇ ಮಿಯಾ ಸಿನಿಮಾದಲ್ಲಿಯೂ ಅಕ್ಷಯ್ ನಟಿಸುತ್ತಿದ್ದಾರೆ. ಸಿಂಗಂ ಅಗೇನ್‌ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ದಿನೇಶ್‌ ವಿಜಾನ್‌ ಅವರ ಸ್ಕೈ ಫೋರ್ಸ್‌ ಚಿತ್ರವೂ ಘೋಷಣೆ ಆಗಿದೆ. ವೆಲ್‌ಕಮ್‌ ಸಿನಿಮಾದ ಮೂರನೇ ಭಾಗಕ್ಕೂ ಡೇಟ್ಸ್‌ ನೀಡಿದ್ದಾರೆ ಅಕ್ಷಯ್.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ