ಕನ್ನಡ ಸುದ್ದಿ  /  ಮನರಂಜನೆ  /  Mission Raniganj Review: ಅಕ್ಷಯ್‌ ಕುಮಾರ್ ಅಭಿನಯದ ಮಿಷನ್‌ ರಾಣಿಗಂಜ್‌ ಮೆಚ್ಚಿದ ಪ್ರೇಕ್ಷಕ; ಚಿತ್ರಕ್ಕೆ ಸಿಕ್ತು ಬಹುಪರಾಕ್‌‌

Mission Raniganj Review: ಅಕ್ಷಯ್‌ ಕುಮಾರ್ ಅಭಿನಯದ ಮಿಷನ್‌ ರಾಣಿಗಂಜ್‌ ಮೆಚ್ಚಿದ ಪ್ರೇಕ್ಷಕ; ಚಿತ್ರಕ್ಕೆ ಸಿಕ್ತು ಬಹುಪರಾಕ್‌‌

Oct 06, 2023 05:48 AM IST

ಅಕ್ಷಯ್‌ ಕುಮಾರ್ ಮಿಷನ್‌ ರಾಣಿಗಂಜ್‌ ಮೆಚ್ಚಿದ ಪ್ರೇಕ್ಷಕ; ಚಿತ್ರಕ್ಕೆ ಸಿಕ್ತು ಬಹುಪರಾಕ್‌‌

    • ಬಾಲಿವುಡ್‌ ಕಿಲಾಡಿ ಅಕ್ಷಯ್‌ ಕುಮಾರ್‌ ಗೆಲುವಿನ ನಗೆ ಬೀರಿದ್ದಾರೆ. ಈ ಹಿಂದಿನ ಸರಣಿ ಸಿನಿಮಾಗಳ ಸೋಲಿನ ಬಳಿಕ ಮತ್ತೆ ಎದ್ದು ಬಂದಿದ್ದಾರೆ. ಮಿಷನ್‌ ರಾಣಿಗಂಜ್‌ ಸಿನಿಮಾ ಪ್ರೇಕ್ಷಕರ ಹೃದಯ ಮುಟ್ಟಿದೆ. ಚಿತ್ರಕ್ಕೆ ಪಾಸಿಟಿವ್‌ ಪ್ರತಿಕ್ರಿಯೆ ಲಭ್ಯವಾಗಿದೆ. ಹೀಗಿದೆ ಟ್ವಿಟರ್‌ ರಿವ್ಯೂ.  
ಅಕ್ಷಯ್‌ ಕುಮಾರ್ ಮಿಷನ್‌ ರಾಣಿಗಂಜ್‌ ಮೆಚ್ಚಿದ ಪ್ರೇಕ್ಷಕ; ಚಿತ್ರಕ್ಕೆ ಸಿಕ್ತು ಬಹುಪರಾಕ್‌‌
ಅಕ್ಷಯ್‌ ಕುಮಾರ್ ಮಿಷನ್‌ ರಾಣಿಗಂಜ್‌ ಮೆಚ್ಚಿದ ಪ್ರೇಕ್ಷಕ; ಚಿತ್ರಕ್ಕೆ ಸಿಕ್ತು ಬಹುಪರಾಕ್‌‌

Mission Raniganj Twitter Review: ಶತಾಯ ಗತಾಯ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದರು ಬಾಲಿವುಡ್ ನಟ ಅಕ್ಷಯ್‌ ಕುಮಾರ್.‌ ಅದರಂತೆ, ಇಂದು (ಅ. 6) ತೆರೆಕಂಡ ಮಿಷನ್‌ ರಾಣಿಗಂಜ್‌ ಸಿನಿಮಾಕ್ಕೆ ಪ್ರೇಕ್ಷಕ ಬಹುಪರಾಕ್‌ ಹೇಳಿದ್ದಾನೆ. ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕ ಪೂರ್ಣಾಂಕ ನೀಡಿದ್ದಾನೆ. ಈ ಮೂಲಕ ಅಕ್ಷಯ್‌ಗೆ ಗೆಲುವಿನ ಹಳಿಗೆ ಮರಳಿದ್ದಾರೆ. 

ಟ್ರೆಂಡಿಂಗ್​ ಸುದ್ದಿ

Lakshmi Nivasa Serial: ಮನೆಯ ನೆಟ್‌ವರ್ಕ್‌ ಕಟ್‌ ಮಾಡಿದ ಸೈಕೋ ಜಯಂತ್; ಬಂಗಾರದ ಪಂಜರದಲ್ಲಿ ಹಳಿ ತಪ್ಪುತ್ತಿದೆ ಜಾನು ಬದುಕು

Hari Om OTT: ವಯಸ್ಕರ ಕಂಟೆಂಟ್‌ ನೀಡೋ ಕಂಪನಿಯಿಂದ ಪೌರಾಣಿಕ ಒಟಿಟಿ ಹರಿ ಓಂ ಆರಂಭ; ಹಿರಿಯ ನಾಗರಿಕರು, ಯುವಕರು, ಮಕ್ಕಳೇ ಪ್ರಮುಖ ಟಾರ್ಗೆಟ್‌

ಅವಳು ಕೊನೆಗೂ ತಾಯಿ ಆದಳು, ಆರು ಪುಟಾಣಿಗಳೂ ಮಡಿಲು ಸೇರಿದವು; ಮೈಸೂರಿಗೆ ಓಡೋಡಿ ಬಂದು ಸಿಹಿ ಸುದ್ದಿ ಕೊಟ್ಟ ರಕ್ಷಿತ್‌ ಶೆಟ್ಟಿ

Explainer: 4 ತಿಂಗಳಲ್ಲಿ ಮಲಯಾಳಂ ಚಿತ್ರರಂಗ ಗಳಿಸಿದ್ದು 1000 ಕೋಟಿ, ಕನ್ನಡ ಚಿತ್ರರಂಗ 100 ಕೋಟಿನೂ ದಾಟಿಲ್ವಲ್ಲ ಗುರೂ! ಹಿಂಗಾದ್ರೆ ಹೆಂಗೇ?

ಅಂದಹಾಗೆ, ಮಿಷನ್‌ ರಾಣಿಗಂಜ್‌ (Mission Raniganj: The Great Bharat Rescue) ಸಿನಿಮಾ ಓರ್ವ ಮೈನಿಂಗ್‌ ಎಂಜಿನಿಯರ್‌ ಕುರಿತ ಸಿನಿಮಾ. ಜಶ್ವಂತ್‌ ಸಿಂಗ್‌ ಗಿಲ್‌ ಎಂಬ ಮೈನಿಂಗ್‌ ಇಂಜಿನಿಯರ್‌ ಹೇಗೆ ತಮ್ಮ ಪ್ರಾಣ ಒತ್ತೆಯುಟ್ಟು ಗಣಿಯಲ್ಲಿ ಸಿಲುಕಿದ 65 ಜನ ಕಾರ್ಮಿಕರನ್ನು ರಕ್ಷಿಸುತ್ತಾರೆ ಎಂಬುದೇ ಈ ಸಿನಿಮಾದ ಒಂದೆಳೆ.

1989ರ ನವೆಂಬರ್‌ನಲ್ಲಿ ಪಶ್ಚಿಮ ಬಂಗಾಲದ ರಾಣಿಗಂಜ್‌ ಅನ್ನೋ ಊರಲ್ಲಿ ಕಲ್ಲಿದ್ದಲು ಗಣಿಯಲ್ಲಿ ದೊಡ್ಡ ದುರಂತವೊಂದು ಸಂಭವಿಸಿತ್ತು. ಅದರ ಸುತ್ತ ಇಡೀ ಸಿನಿಮಾ ಸಾಗಲಿದ್ದು, ನೋಡುಗನ ದೃಷ್ಟಿ ಬೇರೆಡೆಗೆ ಹರಿಯದಂತೆ, ಹಿಡಿದು ಕೂರಿಸುವ ಕೆಲಸ ಮಾಡಿದ್ದಾರೆ ನಿರ್ದೇಶಕ ಟಿನು ಸುರೇಶ್‌ ದೇಸಾಯಿ. 

ವಶು ಭಗ್ನಾನಿ ನಿರ್ಮಾಣದ ಈ ಸಿನಿಮಾದಲ್ಲಿ ಅಕ್ಷಯ್‌ ಕುಮಾರ್‌ಗೆ ಜೋಡಿಯಾಗಿ ಪರಿಣಿತಿ ಚೋಪ್ರಾ ನಟಿಸಿದ್ದಾರೆ. ಇನ್ನುಳಿದಂತೆ ಕುಮುದ್‌ ಮಿಶ್ರಾ, ಪವನ್‌ ಮಲ್ಹೋತ್ರಾ, ರವಿ ಕಿಶನ್‌ ಸೇರಿ ಹತ್ತಾರು ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ಹಾಗಾದರೆ ಈ ಸಿನಿಮಾ ನೋಡಿದ ಪ್ರೇಕ್ಷಕ ಏನಂದ? ಇಲ್ಲಿದೆ ಟ್ವಿಟರ್‌ ವಿಮರ್ಶೆ.

ಸಿನಿಮಾ ನೋಡಿದ ನೆಟ್ಟಿಗರು ಏನಂದ್ರು?

ನೋಡುಗನನ್ನು ಹಿಡಿದಿಡುವ ಎಲ್ಲ ಗುಣವೂ ಮಿಷನ್‌ ರಾಣಿಗಂಜ್‌ ಸಿನಿಮಾದಲ್ಲಿದೆ. ಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆ ಪವರ್‌ಫುಲ್‌ ಆಗಿದೆ. ಅಕ್ಷಯ್‌ ಕುಮಾರ್‌ ಅವರ ನಟನೆ ಟೆರಿಫಿಕ್‌. ಜಶ್ವಂತ್‌ ಸಿಂಗ್‌ ಗಿಲ್‌ ಅವರ ಸಾಹಸಕ್ಕೆ ನಮ್ಮದೂ ಸೆಲ್ಯೂಟ್‌

ಮಿಷನ್‌ ರಾಣಿಗಂಜ್‌ ಸಿನಿಮಾ ನಿಮ್ಮನ್ನು ಸೀಟಿನ ತುದಿಗೆ ತಂದು ಕೂರಿಸುವ ಸಿನಿಮಾ. ಭಾವನೆಗಳಿಗೂ ಇಲ್ಲಿ ನಿರ್ದೇಶಕರು ಜಾಗ ಮಾಡಿಕೊಟ್ಟಿದ್ದಾರೆ. ಗಣಿಯಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆ ಕುರಿತಾದ ಈ ಸಿನಿಮಾ ಅಧ್ಬುತವಾಗಿ ಮೂಡಿಬಂದಿದೆ. ಅಕ್ಷಯ್‌ ಕುಮಾರ್‌ ಈ ಸಿನಿಮಾ ಮೂಲಕ ಮತ್ತೊಮ್ಮೆ ಭಾರತ್‌ ಕುಮಾರ್‌ನಾಗಿ ಹೊರಹೊಮ್ಮಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ