logo
ಕನ್ನಡ ಸುದ್ದಿ  /  ಮನರಂಜನೆ  /  Lakshmi Nivasa Serial: ಮನೆಯ ನೆಟ್‌ವರ್ಕ್‌ ಕಟ್‌ ಮಾಡಿದ ಸೈಕೋ ಜಯಂತ್; ಬಂಗಾರದ ಪಂಜರದಲ್ಲಿ ಹಳಿ ತಪ್ಪುತ್ತಿದೆ ಜಾನು ಬದುಕು

Lakshmi Nivasa Serial: ಮನೆಯ ನೆಟ್‌ವರ್ಕ್‌ ಕಟ್‌ ಮಾಡಿದ ಸೈಕೋ ಜಯಂತ್; ಬಂಗಾರದ ಪಂಜರದಲ್ಲಿ ಹಳಿ ತಪ್ಪುತ್ತಿದೆ ಜಾನು ಬದುಕು

May 16, 2024 06:30 AM IST

google News

Lakshmi Nivasa Serial: ಮನೆಯ ನೆಟ್‌ವರ್ಕ್‌ ಕಟ್‌ ಮಾಡಿದ ಸೈಕೋ ಜಯಂತ್; ಬಂಗಾರದ ಪಂಜರದಲ್ಲಿ ಹಳಿ ತಪ್ಪುತ್ತಿದೆ ಜಾನು ಬದುಕು

    • ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತನ ಅತಿಯಾದ ಪ್ರೀತಿ ಎಲ್ಲೆ ಮೀರುತ್ತಿದೆ. ಮನೆಯಲ್ಲಿನ ಆಕೆಯ ಚಲನ ವಲನದ ಮೇಲೆ ಕಣ್ಣಿಟ್ಟದ್ದ ಸೈಕೂ, ಈಗ ಪತ್ನಿ ಜಾಸ್ತಿ ಹೊತ್ತು ಫೋನ್‌ನಲ್ಲಿ ಮಾತನಾಡ್ತಾಳೆ ಅಂತ ಇಡೀ ಮನೆಯ ನೆಟ್‌ವರ್ಕ್‌ ಕಟ್‌ ಮಾಡಿಸಿ ಖುಷಿಪಟ್ಟಿದ್ದಾನೆ. 
Lakshmi Nivasa Serial: ಮನೆಯ ನೆಟ್‌ವರ್ಕ್‌ ಕಟ್‌ ಮಾಡಿದ ಸೈಕೋ ಜಯಂತ್; ಬಂಗಾರದ ಪಂಜರದಲ್ಲಿ ಹಳಿ ತಪ್ಪುತ್ತಿದೆ ಜಾನು ಬದುಕು
Lakshmi Nivasa Serial: ಮನೆಯ ನೆಟ್‌ವರ್ಕ್‌ ಕಟ್‌ ಮಾಡಿದ ಸೈಕೋ ಜಯಂತ್; ಬಂಗಾರದ ಪಂಜರದಲ್ಲಿ ಹಳಿ ತಪ್ಪುತ್ತಿದೆ ಜಾನು ಬದುಕು

Lakshmi Nivasa Serial: ಲಕ್ಷ್ಮೀ ನಿವಾಸ ಸೀರಿಯಲ್‌ ದಿನದಿಂದ ದಿನಕ್ಕೆ ಕುತೂಹಲದತ್ತ ಸಾಗುತ್ತಿದೆ. ಅದರಲ್ಲೂ ಜಯಂತ್‌ ಮತ್ತು ಜಾನು ಮದುವೆ ಆದ ಮೇಲಂತೂ ಜಾನು ಬದುಕು ಹೇಗೆ ಒಮ್ಮಿಂದೊಮ್ಮೆಲೇ ಬದಲಾಯ್ತೋ ಈ ಸೀರಿಯಲ್‌ ವೀಕ್ಷಕರ ಮನಸ್ಥಿತಿಯೂ ಒಮ್ಮೆಗೆ ಬದಲಾಗಿದೆ. ಅದಕ್ಕೆ ಕಾರಣ ಜಯಂತನ ವರ್ತನೆ! ಒಂದು ರೀತಿ ಅನುಮಾನ ಪಿಶಾಚಿಯಾಗಿಯೇ ವರ್ತಿಸುತ್ತಿದ್ದಾನೆ. ಜಾನ್ವಿ ಮೇಲೆ ಹದ್ದಿನ ಕಣ್ಣಿಟ್ಟಿದ್ದಾನೆ. ಆಕೆಯ ಸೂಕ್ಷ್ಮ ಚಲನ ವಲನವನ್ನೂ ಗಮನಿಸುತ್ತಿದ್ದಾನೆ.

ಪತ್ನಿಯನ್ನು ಮಾತನಾಡಿಸಿದ ಸ್ನೇಹಿತನನ್ನೂ ಕೊಲೆ ಮಾಡುವ ಯತ್ನ ಮಾಡಿದ್ದಾನೆ. ಆಗೊಮ್ಮೆ ಈಗೊಮ್ಮೆ ಜಾನುಗೂ ಅತಿಯಾದ ಪ್ರೀತಿ ತೋರಿಸಿ ಇಕ್ಕಟ್ಟಿಗೂ ಸಿಲುಕಿಸಿದ್ದಾನೆ. ಒಂಟಿ ಮನೆ, ದೊಡ್ಡ ಬಿಜಿನೆಸ್‌ಮನ್‌ ಆದರೂ ಇಡೀ ಬಂಗಲೆಯಲ್ಲಿ ಜಾನು ಬಂಧಿ. ಹೊರ ಜಗತ್ತಿನ ನಂಟೇ ಕತ್ತರಿಸುತ್ತಿದ್ದಾನೆ ಜಯಂತ್.‌ ಬಂಗಾರದ ಪಂಜರದಲ್ಲಿ ಇಟ್ಟು ಪತ್ನಿಯನ್ನು ಸಾಕುತ್ತಿದ್ದಾನೆ. ಪತಿಯ ವರ್ತನೆ ಆಕೆಗೂ ಅಸಹನೀಯ ಅನಿಸಿದೆಯಾದರೂ, ಪತಿಯ ಪ್ರೀತಿಗೆ ಕರಿಗಿ ಹೋಗಿದ್ದಾಳೆ. ‌

ಅತಿಯಾಯ್ತು ಜಯಂತನ ಪ್ರೀತಿ

ಈ ನಡುವೆ ಮನೆಯಲ್ಲಿದ್ದಾಗ, ಪತಿ ಕೆಲಸಕ್ಕೆ ಹೊರನಡೆದಾಗ ಮನೆಯವರ ಜತೆಗೆ ಮಾತನಾಡುವುದೇ ಜಾನು ಕೆಲಸ. ಅದನ್ನು ಬಿಟ್ಟರೆ, ಅಲ್ಲೊಂದು ಟಿವಿಯೂ ಇಲ್ಲ. ಮನೆಯ ಗೇಟ್‌ಗೂ ಬೀಗ, ಮನೆತುಂಬ ಸಿಸಿಟಿವಿ, ಆಕೆ ಏನು ಮಾತನಾಡುತ್ತಾಳೆ ಎಂಬುದನ್ನು ಕೇಳಿವುದಕ್ಕೂ ಅಲ್ಲಲ್ಲಿ ಹಿಡನ್‌ ರೆಕಾರ್ಡರ್‌. ಹೀಗೆ ಅತಿಯಾದ ಪ್ರೀತಿಯಲ್ಲಿಯೇ ಆಕೆಯನ್ನು ನೋಡಿಕೊಳ್ಳುತ್ತಿದ್ದಾನೆ. ಹೀಗಿರುವಾಗಲೇ (ಮೇ 15) ಏಪಿಸೋಡ್‌ನಲ್ಲಿ ಜಯಂತನ ಈ ಅನುಮಾನ ಅದ್ಯಾಕೋ ಎಲ್ಲೆ ಮೀರಿದೆ. ‌

ಜಾನು ಫೋನ್‌ ನೆಟ್‌ವರ್ಕ್‌ ಕಟ್

ಜಾನ್ವಿ ಪದೇಪದೆ ಅವರ ಮನೆಯವರ ಜತೆಗೆ ಮಾತನಾಡುತ್ತಾಳೆ ಎಂಬ ಕಾರಣಕ್ಕೆ ಆಕೆಯ ಫೋನ್‌ನ ನೆಟ್‌ವರ್ಕ್‌ ಅನ್ನೇ ಕಡಿತಗೊಳಿಸಿದ್ದಾನೆ ಜಯಂತ್.‌ ಕೈಯಲ್ಲಿ ಫೋನ್‌ ಹಿಡಿದು ಒಂದಷ್ಟು ಬಾರಿ ಫೋನ್‌ ಕರೆ ಮಾಡಲು ಜಾನು ಪ್ರಯತ್ನಸಿದ್ದಾಳೆ. ಅದು ಹೋಗದೇ ಇರುವುದನ್ನು ಆಫೀಸ್‌ನಲ್ಲಿದ್ದುಕೊಂಡೇ ವೀಕ್ಷಿಸಿದ್ದಾನೆ. ನೀವು ಪದೇ ಪದೆ ಮನೆಯವರ ಜತೆ ಮಾತನಾಡುವುದು ನನಗಿಷ್ಟವಿಲ್ಲ. ಹಾಗಾಗಿ ಮಾತನಾಡದೇ ಇರುವ ರೀತಿ ಮಾಡಿದ್ದೇನೆ ಎಂದಿದ್ದಾನೆ.

ಇತ್ತ ತನ್ನದೇ ಫೋನ್‌ ಏನೋ ಆಗಿರಬಹುದೆಂದು, ಫೋನ್‌ನಲ್ಲಿನ ಸಿಮ್‌ ತೆಗೆದು ಮತ್ತೆ ಹಾಕಿ ನೋಡಿದ್ದಾಳೆ. ಪದೇಪದೆ ಸ್ವಿಚ್‌ ಆಫ್‌ ಮಾಡಿ ಸಹ ನೋಡಿದ್ದಾಳೆ. ಆದರೆ, ಏನೇ ಮಾಡಿದರೂ, ಫೋನ್‌ ಕೆಲಸ ಮಾಡುತ್ತಿಲ್ಲ. ಆಕೆಯ ಪರದಾಟ ನೋಡಿ, ಇಲ್ಲಿ ಕುಹಕ ನಗೆ ಬೀರುತ್ತಿದ್ದಾನೆ ಜಯಂತ್. ‌ಪಾಪ ಇದು ತನ್ನ ಗಂಡನದ್ದೇ ಕೈವಾಡ ಎಂಬ ಸಣ್ಣ ಅನುಮಾನವೂ ಆಕೆಗಿಲ್ಲ.

ಲ್ಯಾಂಡ್‌ಲೈನ್‌ ನೋಡಿ ಕುಪಿತನಾದ ಜಯಂತ್

ನೀವು ನಿಮ್ಮ ಮನೆಯವರನ್ನು ಪ್ರೀತಿ ಮಾಡುವ ಹಾಗೆ ನನ್ನನ್ನು ಪ್ರೀತಿ ಮಾಡೋದೇ ಇಲ್ಲಲ್ವ? ಅದಕ್ಕೆ ಹೀಗೆ ಮಾಡಬೇಕಾಯ್ತು. ಇನ್ಮೇಲೆ ಏನೇ ವಿಷ್ಯಾ ಇದ್ದರೂ ನನ್ನ ಕಡೆಗೆ ಮಾತ್ರ ಹೇಳಿಕೊಳ್ಳಬೇಕು. ನಮ್ಮಿಬ್ಬರದ್ದೇ ಒಂದು ಪುಟ್ಟ ಪ್ರಪಂಚ. ಆ ಪ್ರಪಂಚದಲ್ಲಿ ಬೇರೆ ಯಾರಿಗೂ ಎಂಟ್ರಿ ಇಲ್ಲ ಎಂದು ತನಗೇ ತಾನೇ ಮಾತನಾಡುಕೊಳ್ಳುತ್ತಿದ್ದಾನೆ. ಈ ನಡುವೆ ಫೋನ್‌ ನೆಟ್‌ವರ್ಕ್‌ ಆಗದಿದ್ದಕ್ಕೆ ಬೇಸರದಲ್ಲಿದ್ದ ಜಾನುಗೆ ಲ್ಯಾಂಡ್‌ಲೈನ್‌ ಕಣ್ಣಿಗೆ ಬಿದ್ದಿದೆ. ಸದ್ಯ ಇದಾದ್ರೂ ವರ್ಕ್‌ ಆಗ್ತಿದೆ ಎಂದು ನಿಟ್ಟುಸಿರು ಬಿಟ್ಟಿದ್ದಾಳೆ. ಇತ್ತ ಜಯಂತ್‌ ಕೋಪ ನೆತ್ತಿಗೇರಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರವರ್ಗ

ನಿರ್ಮಾಣ; ಸಾಯಿ ನಿರ್ಮಲ ಪ್ರೊಡಕ್ಷನ್‌

ನಿರ್ದೇಶನ: ಆದರ್ಶ್ ಉಮೇಶ್ ಹೆಗಡೆ

ಶ್ವೇತಾ: ಲಕ್ಷ್ಮೀ

ಜಿಂಬೆ ಅಶೋಕ್‌: ಶ್ರೀನಿವಾಸ

ದೀಪಕ್‌ ಸುಬ್ರಹ್ಮಣ್ಯ: ಜಯಂತ್‌

ಚಂದನಾ ಅನಂತಕೃಷ್ಣ: ಜಾಹ್ನವಿ

ದಿಶಾ ಮದನ್:‌ ಭಾವನಾ

ಧನಂಜಯ್:‌ ಸಿದ್ದೇಗೌಡ

ಲಕ್ಷ್ಮೀ ಪಡಗೆರೆ

ಅಜಯ್‌ ರಾಜ್‌

ದಿವ್ಯಶ್ರೀ

ಮಧು ಹೆಗಡೆ

ರೂಪಿಕಾ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ