ಕನ್ನಡ ಸುದ್ದಿ  /  ಮನರಂಜನೆ  /  Mission Raniganj Collection: ಮಿಷನ್‌ ರಾಣಿಗಂಜ್‌ ಚೆನ್ನಾಗಿದ್ರು, ಹಣ ಮಾತ್ರ ಹರಿದು ಬರ್ತಿಲ್ಲ; ಹೀನಾಯ ಸ್ಥಿತಿಯಲ್ಲಿ ಅಕ್ಷಯ್‌ ಸಿನಿಮಾ

Mission Raniganj Collection: ಮಿಷನ್‌ ರಾಣಿಗಂಜ್‌ ಚೆನ್ನಾಗಿದ್ರು, ಹಣ ಮಾತ್ರ ಹರಿದು ಬರ್ತಿಲ್ಲ; ಹೀನಾಯ ಸ್ಥಿತಿಯಲ್ಲಿ ಅಕ್ಷಯ್‌ ಸಿನಿಮಾ

Oct 07, 2023 10:12 AM IST

Mission Raniganj Collection: ಮಿಷನ್‌ ರಾಣಿಗಂಜ್‌ ಚೆನ್ನಾಗಿದ್ರು, ಹಣ ಮಾತ್ರ ಹರಿದು ಬರ್ತಿಲ್ಲ; ಹೀನಾಯ ಸ್ಥಿತಿಯಲ್ಲಿ ಅಕ್ಷಯ್‌ ಸಿನಿಮಾ

    • Mission Raniganj Box office Collection day 1: ಶುಕ್ರವಾರ (ಅ. 6) ಬಿಡುಗಡೆಯಾದ ಅಕ್ಷಯ್‌ ಕುಮಾರ್‌ ನಟನೆಯ ಮಿಷನ್‌ ರಾಣಿಗಂಜ್‌ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕರೂ, ಕಲೆಕ್ಷನ್‌ ವಿಚಾರದಲ್ಲಿ ಸಿನಿಮಾ ನೆಲಕ್ಕಚ್ಚಿದೆ. ಮೊದಲ ದಿನವೇ ಕನಿಷ್ಠ ಮೊತ್ತವನ್ನು ಗಳಿಸಿದೆ.
Mission Raniganj Collection: ಮಿಷನ್‌ ರಾಣಿಗಂಜ್‌ ಚೆನ್ನಾಗಿದ್ರು, ಹಣ ಮಾತ್ರ ಹರಿದು ಬರ್ತಿಲ್ಲ; ಹೀನಾಯ ಸ್ಥಿತಿಯಲ್ಲಿ ಅಕ್ಷಯ್‌ ಸಿನಿಮಾ
Mission Raniganj Collection: ಮಿಷನ್‌ ರಾಣಿಗಂಜ್‌ ಚೆನ್ನಾಗಿದ್ರು, ಹಣ ಮಾತ್ರ ಹರಿದು ಬರ್ತಿಲ್ಲ; ಹೀನಾಯ ಸ್ಥಿತಿಯಲ್ಲಿ ಅಕ್ಷಯ್‌ ಸಿನಿಮಾ

Mission Raniganj Collection: ಟ್ರೇಲರ್‌ ಮೂಲಕ ಬಹುನಿರೀಕ್ಷೆ ಮೂಡಿಸಿದ್ದ ಅಕ್ಷಯ್‌ ಕುಮಾರ್‌ ನಟನೆಯ ಮಿಷನ್‌ ರಾಣಿಗಂಜ್‌ ಸಿನಿಮಾ ಅ.6ರಂದು ಬಿಡುಗಡೆ ಆಗಿದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗಿದ್ದು, ಸಿನಿಮಾ ಮೂಡಿ ಬಂದ ರೀತಿ, ನಿರ್ದೇಶಕರ ಈ ಸಾಹಸಕ್ಕೂ ಪೂರ್ಣಾಂಕ ಸಿಕ್ಕಿತ್ತು. ಆದರೆ, ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವಿಚಾರದಲ್ಲಿ ಮಾತ್ರ ಸಿನಿಮಾ ಹೀನಾಯ ಸೋಲನುಭವಿಸಿದೆ.

ಟ್ರೆಂಡಿಂಗ್​ ಸುದ್ದಿ

ಅವಳು ಕೊನೆಗೂ ತಾಯಿ ಆದಳು, ಆರು ಪುಟಾಣಿಗಳೂ ಮಡಿಲು ಸೇರಿದವು; ಮೈಸೂರಿಗೆ ಓಡೋಡಿ ಬಂದು ಸಿಹಿ ಸುದ್ದಿ ಕೊಟ್ಟ ರಕ್ಷಿತ್‌ ಶೆಟ್ಟಿ

Explainer: 4 ತಿಂಗಳಲ್ಲಿ ಮಲಯಾಳಂ ಚಿತ್ರರಂಗ ಗಳಿಸಿದ್ದು 1000 ಕೋಟಿ, ಕನ್ನಡ ಚಿತ್ರರಂಗ 100 ಕೋಟಿನೂ ದಾಟಿಲ್ವಲ್ಲ ಗುರೂ! ಹಿಂಗಾದ್ರೆ ಹೆಂಗೇ?

ಕನ್ನಡ ಕಿರುತೆರೆಯಲ್ಲಿ ಮರ್ಯಾದಾ ಪುರುಷೋತ್ತಮನ ಜೀವನಗಾಥೆ; ಶ್ರೀಮದ್‌ ರಾಮಾಯಣ ಮಹಾಕಾವ್ಯ ಎಲ್ಲಿ, ಯಾವಾಗಿನಿಂದ ಶುರು?

Blink OTT: ಭಾರತದ ಒಟಿಟಿಯಲ್ಲೂ ಬಿಡುಗಡೆಯಾಯ್ತು ಬ್ಲಿಂಕ್‌ ಸಿನಿಮಾ; ದೀಕ್ಷಿತ್‌ ಶೆಟ್ಟಿ‌ ನಟನೆಯ ಸಿನಿಮಾಕ್ಕೆ ಒಟಿಟಿ ವೀಕ್ಷಕರಿಂದ ಬಹುಪರಾಕ್‌

1989ರಲ್ಲಿ ಪಶ್ಚಿಮ ಬಂಗಾಲದ ರಾಣಿಗಂಜ್‌ನ ಮಹಾಬೀರ್‌ ಕಲ್ಲಿದ್ದಲು ಗಣಿಯಲ್ಲಿ ನಡೆದ ದುರಂತದಲ್ಲಿ 65 ಜನರ ಪ್ರಾಣ ಉಳಿಸಿದ ಬೃಹತ್‌ ರಕ್ಷಣಾ ಕಾರ್ಯಾಚರಣೆಯೇ ಈ ಸಿನಿಮಾದ ಮೂಲ ಎಳೆ. ಗಣಿಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು, ಮೈನಿಂಗ್‌ ಎಂಜಿನಿಯರ್‌ ಜಸ್ವಂತ್‌ ಸಿಂಗ್‌ ಗಿಲ್‌ ತಮ್ಮ ಪ್ರಾಣ ಒತ್ತೆಯಿಟ್ಟು ರಕ್ಷಣೆ ಮಾಡಿದ್ದರು. ಆ ರಕ್ಷಣಾ ಕಾರ್ಯಾಚರಣೆಯ ಮುಂದಾಳತ್ವ ವಹಿಸಿದ್ದ ಜಸ್ವಂತ್‌ ಸಿಂಗ್‌ ಗಿಲ್‌ ಪಾತ್ರವನ್ನೇ ಮಿಷನ್‌ ರಾಣಿಗಂಜ್‌ ಸಿನಿಮಾದಲ್ಲಿ ಅಕ್ಷಯ್‌ ನಿಭಾಯಿಸಿದ್ದಾರೆ.

ಆಗಿನ ಕಾಲದಲ್ಲಿ ಈ ವಿಚಾರ ಹೆಚ್ಚು ಮುನ್ನೆಲೆಗೆ ಬಾರದಿದ್ದರೂ, ತೆರೆಮರೆಯಲ್ಲಿಯೇ ಹೀರೋ ಆಗಿ ಮಿಂಚಿದ್ದರು ಜಶ್ವಂತ್. ‌1991ರಲ್ಲಿ ರಾಷ್ಟ್ರಪತಿಗಳಿಂದ ಸರ್ವೋತ್ತಮ ಜೀವನ ರಕ್ಷಾ ಪದಕ ಪ್ರಶಸ್ತಿಯೂ ಮುಡಿಗೇರಿತ್ತು. ಇದೇ ಘಟನೆಯನ್ನು ಸಿನಿಮಾ ರೂಪಕ್ಕೆ ತಂದಿದ್ದಾರೆ ನಿರ್ದೇಶಕ ಸುರೇಶ್ ದೇಸಾಯಿ. ನಿರ್ದೇಶಕರ ಈ ಸಾಹಸಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಆದರೆ, ಗಳಿಕೆ ಲೆಕ್ಕಾಚಾರದಲ್ಲಿ ನಿರೀಕ್ಷಿತ ಗುರಿ ತಲುಪಲು ಈ ಸಿನಿಮಾ ಹಿಂದೆ ಬಿದ್ದಿದೆ.

ಮೊದಲ ದಿನವೇ ಎರಡಂಕಿ ದಾಟದ ಅಕ್ಷಯ್‌ ಸಿನಿಮಾ

ನಟ ಅಕ್ಷಯ್‌ ಸಿನಿಮಾಗಳು ಇತ್ತೀಚಿನ ಕೆಲ ವರ್ಷಗಳಿಂದ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡುತ್ತಿಲ್ಲ. ಡಿಸೆಂಟ್‌ ಮೊತ್ತವನ್ನಷ್ಟೇ ಕಲೆ ಹಾಕಿ, ಬಂಡವಾಳ ಹೂಡಿದ ನಿರ್ಮಾಪಕರಿಗೆ ಮೋಸವಾಗದ ರೀತಿಯಲ್ಲಷ್ಟೇ ಇವರ ಸಿನಿಮಾಗಳು ವರ್ಕೌಟ್‌ ಆಗುತ್ತಿವೆ. ಈ ಹಿಂದಿನ OMG2 ಸಿನಿಮಾ ಸಹ ನಿರೀಕ್ಷೆ ಮೂಡಿಸಿದ್ದರೂ, ಗಳಿಕೆಯಲ್ಲಿ ಹಿಂದುಳಿದಿತ್ತು. ಇದೀಗ ಮಿಷನ್‌ ರಾಣಿಗಂಜ್‌ ಸಿನಿಮಾ ಸಹ ಅದೇ ಹಾದಿ ಹಿಡಿದಿದೆ. ಬಿಡುಗಡೆಯಾದ ಮೊದಲ ದಿನವೇ ಕೇವಲ 2.8 ಕೋಟಿ ರೂ. ಕಲೆ ಹಾಕಿದೆ.

ಮಿಷನ್‌ ರಾಣಿಗಂಜ್‌ ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನು ವಶು ಭಗ್ನಾನಿ ಹೊತ್ತಿದ್ದಾರೆ. ಅಕ್ಷಯ್‌ ಕುಮಾರ್‌ಗೆ ಜೋಡಿಯಾಗಿ ಪರಿಣಿತಿ ಚೋಪ್ರಾ ನಟಿಸಿದರೆ, ಇನ್ನುಳಿದಂತೆ ಕುಮುದ್‌ ಮಿಶ್ರಾ, ಪವನ್‌ ಮಲ್ಹೋತ್ರಾ, ರವಿ ಕಿಶನ್‌ ಸೇರಿ ಹತ್ತಾರು ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ಆರಂಭದಲ್ಲಿ ಸಿನಿಮಾ ಘೋಷಣೆ ಆದಾಗ ಚಿತ್ರಕ್ಕೆ ಕ್ಯಾಪ್ಸುಲ್‌ ಗಿಲ್‌ ಎಂಬ ಶೀರ್ಷಿಕೆ ಇಡಲಾಗಿತ್ತು. ಅದಾದ ಬಳಿಕ ದಿ ಗ್ರೇಟ್‌ ಇಂಡಿಯನ್‌ ರೆಸ್ಕ್ಯೂ ಎಂಬ ಶೀರ್ಷಿಕೆ ಫಿಕ್ಸ್‌ ಆಯ್ತು. ಮೊನ್ನೆ ಮೊನ್ನೆ ಸೆಪ್ಟೆಂಬರ್‌ನಲ್ಲಿ ಮಿಷನ್‌ ರಾಣಿಗಂಜ್;‌ ದಿ ಗ್ರೇಟ್‌ ಭಾರತ್‌ ರೆಸ್ಕ್ಯೂ ಎಂಬ ಶೀರ್ಷಿಕೆ ಅಂತಿಮವಾಯ್ತು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ