ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಏಟು ತಿಂದರೂ ತಪ್ಪು ಒಪ್ಪದ ಕನ್ನಿಕಾ, ಸಾಕ್ಷಿ ಹುಡುಕಲು ಭಾಗ್ಯಾಗೆ ಬೇರೆ ದಾರಿ ಏನಿದೆ?; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಏಟು ತಿಂದರೂ ತಪ್ಪು ಒಪ್ಪದ ಕನ್ನಿಕಾ, ಸಾಕ್ಷಿ ಹುಡುಕಲು ಭಾಗ್ಯಾಗೆ ಬೇರೆ ದಾರಿ ಏನಿದೆ?; ಭಾಗ್ಯಲಕ್ಷ್ಮೀ ಧಾರಾವಾಹಿ

Rakshitha Sowmya HT Kannada

Mar 28, 2024 08:30 AM IST

ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 27ರ ಸಂಚಿಕೆ

  • Bhagyalakshmi Serial Today Episode: ಕನ್ನಿಕಾಳನ್ನು ಹುಡುಕಿಕೊಂಡು ಬರ್ತ್‌ಡೇ ಪಾರ್ಟಿಗೆ ಬರುವ ಭಾಗ್ಯಾ ಆಕೆಯನ್ನು ನೋಡುತ್ತಿದ್ದಂತೆ ಕಪಾಳಮೋಕ್ಷ ಮಾಡುತ್ತಾಳೆ. ಆದರೆ ಭಾಗ್ಯಾ ಎಷ್ಟು ಕೇಳಿದರೂ ಕನ್ನಿಕಾ ಮಾತ್ರ ತಪ್ಪು ಒಪ್ಪುವುದಿಲ್ಲ. ಅಮ್ಮ ಮಗಳು ಕಾಪಿ ಮಾಡಿ ನನ್ನ ಮೇಲೆ ಗೂಬೆ ಕೂರಿಸುತ್ತಿದ್ದೀರ ಎಂದು ಕನ್ನಿಕಾ ಸಿಡಿಮಿಡಿಗೊಳ್ಳುತ್ತಾಳೆ. 

ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 27ರ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 27ರ ಸಂಚಿಕೆ (PC: Colors Kannada)

Bhagyalakshmi Serial: ಭಾಗ್ಯಾ, ತನ್ವಿ ಪರೀಕ್ಷೆ ಬರೆಯಲು ಹೇಗೆಲ್ಲಾ ಅಡ್ಡಿ ಮಾಡಬಹುದೋ ಕನ್ನಿಕಾ ಅಷ್ಟು ಸಮಸ್ಯೆ ಕೊಡುತ್ತಿದ್ದಾಳೆ. ಇಷ್ಟು ದಿನಗಳ ಕಾಲ ಓದಿನ ಕಡೆ ಗಮನ ನೀಡದ ತನ್ವಿ ಈಗ ಅಮ್ಮನ ಮೇಲಿನ ಚಾಲೆಂಜ್‌ಗಾಗಿ ಪರೀಕ್ಷೆ ಬರೆಯಲು ಕಾಯುತ್ತಿದ್ದಾಳೆ. ಎಲ್ಲವನ್ನೂ ಓದಿಕೊಂಡು ಬಂದರೂ ಭಾಗ್ಯಾ, ತನ್ವಿ ಮೇಲೆ ಕಾಪಿ ಮಾಡಿದ ಆರೋಪ ಎದುರಾಗಿದೆ.

ಟ್ರೆಂಡಿಂಗ್​ ಸುದ್ದಿ

ಆಹ್ವಾನ ಪತ್ರಿಕೆ ಇರುವ ಬ್ಯಾಗ್‌ ಕದಿಯಲು ಭಾಗ್ಯಾ ರೂಮ್‌ಗೆ ಅತ್ತೆ ಸುನಂದಾಳನ್ನು ಕಳಿಸಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾದ ಮೊದಲ ಹಾಡು ಬಿಡುಗಡೆ; ಬಾಯಿಗೆ ಬಾರದೆ ಮಾತು ಹಾಡನ್ನು ಕೇಳೋಣ ಬನ್ನಿ

ಅಪಘಾತದಲ್ಲಿ ಮೃತಪಟ್ಟ ಪವಿತ್ರಾ ಜಯರಾಮ್‌ ನೆನೆದು ಪತಿ ಚಂದ್ರಕಾಂತ್‌ ಭಾವುಕ ಬರಹ; ಚಂದು ಅಣ್ಣನ ಅಳು ನೋಡಲಾಗುತ್ತಿಲ್ಲ ಎದ್ದು ಬಾ ಅಕ್ಕ

ನೈಂಟಿ ಬಿಡಿ ಮನೀಗ್ ನಡಿ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌; ವೈಜನಾಥ ಬಿರಾದಾರ್ ನಟನೆಯ ಸಿನಿಮಾ ಇಲ್ಲಿದೆ ಉಚಿತವಾಗಿ ನೋಡಿ

ಕನ್ನಿಕಾ ಎಲ್ಲಿದ್ಧಾಳೆ ತಿಳಿದುಕೊಂಡ ಭಾಗ್ಯಾ ಆಕೆಯನ್ನು ಭೇಟಿ ಮಾಡಲು ಹೋಗುತ್ತಾಳೆ. ಬರ್ತ್‌ಡೇ ಪಾರ್ಟಿ ಖುಷಿಯಲ್ಲಿರುವ ಕನ್ನಿಕಾ ಭಾಗ್ಯಾಳನ್ನು ನೋಡಿ ಶಾಕ್‌ ಆಗುತ್ತಾಳೆ. ಕೋಪದಿಂದ ಒಳಗೆ ಬರುವ ಭಾಗ್ಯಾ ಕೋಪದಿಂದ ಕನ್ನಿಕಾ ಕೆನ್ನೆಗೆ ಬಾರಿಸುತ್ತಾಳೆ. ಶಾಲೆಗೆ ಸೇರಿ ಒಂದು ವರ್ಷವಾಯ್ತು. ಮೊದಲ ದಿನದಿಂದ ಇಲ್ಲಿವರೆಗೂ ನನಗೆ ತೊಂದರೆ ಕೊಡುತ್ತಾ ಬಂದಿದ್ದೀಯ. ನಿನಗೆ ಕೋಪ ಇದ್ದರೆ ನನ್ನ ಮೇಲೆ ತೀರಿಸಿಕೋ, ನನ್ನ ವಿರುದ್ಧ ಹೋರಾಡು. ಅದನ್ನು ಬಿಟ್ಟು ಆ ಪುಟ್ಟ ಹುಡುಗಿಯ ಮೇಲೆ ಏಕೆ ಇಷ್ಟು ಹಟ. ವಿದ್ಯಾಸಂಸ್ಥೆಯನ್ನು ನೋಡಿಕೊಳ್ಳಲು ನಿನಗೆ ಅರ್ಹತೆಯೇ ಇಲ್ಲ. ನಿನ್ನನ್ನು ಮಾತ್ರ ನಾನು ಸುಮ್ಮನೆ ಬಿಡುವುದಿಲ್ಲ. ಇಷ್ಟು ದಿನ ಸುಮ್ಮನಿದ್ದೆ ಆದರೆ ಇನ್ಮುದೆ ನಾನು ಸಹಿಸುವುದಿಲ್ಲ. ನಿಜ ಹೇಳು ಡೆಸ್ಕ್‌ ಮೇಲೆ ಏಕೆ ಬರೆಸಿದೆ? ಎಂದು ಕೇಳುತ್ತಾಳೆ.

ಭಾಗ್ಯಾಳಿಂದ ಏಟು ತಿಂದರೂ ನಿಜ ಒಪ್ಪದ ಕನ್ನಿಕಾ

ಆದರೆ ಭಾಗ್ಯಾ ಎಷ್ಟು ಏರುದನಿಯಲ್ಲಿ ಮಾತನಾಡಿದರೂ ಕನ್ನಿಕಾ ನಿಜ ಒಪ್ಪಿಕೊಳ್ಳುವುದಿಲ್ಲ, ನಾನು ಏನೂ ಮಾಡಿಲ್ಲ. ಪಾಸ್‌ ಆಗಬೇಕೆಂಬ ಉದ್ದೇಶದಿಂದ ಕಾಪಿ ಮಾಡ್ ಡಿಬಾರ್‌ ಆಗಿ ಈಗ ಆ ತಪ್ಪನ್ನು ನನ್ನ ಮೇಲೆ ಕಟ್ಟುತ್ತಿದ್ದೀಯ. ನೀನು ಈ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಬರೆಯಲು ಬಂದಾಗಲೇ ನಿನ್ನ ಕೈಲಿ ಏನೂ ಆಗುವುದಿಲ್ಲ ಎಂದು ನನಗೆ ಗೊತ್ತಿಯ್ತು. ನಾನೇ ತಪ್ಪು ಮಾಡಿದ್ದೇನೆಂದು ನಿನ್ನ ಬಳಿ ಏನು ಸಾಕ್ಷಿ ಇದೆ ಎಂದು ಕೇಳುತ್ತಾಳೆ. ನೀನು ದುಡ್ಡು ಕೊಟ್ಟು ಗಣಿತ ಲೆಕ್ಕ ಬರೆಸಿದ ವ್ಯಕ್ತಿ ಸಿಕ್ಕಿಹಾಕಿಕೊಂಡಿದ್ದಾನೆ. ನಾನು ಅವನ ಮೇಲೆ ಪೊಲೀಸರಿಗೆ ದೂರು ಕೊಟ್ಟಿದ್ದೇನೆ ಎನ್ನುತ್ತಾಳೆ. ಅಷ್ಟರಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಕರೆ ಮಾಡುತ್ತಾರೆ.

ನೀವು ದೂರು ಕೊಟ್ಟ ವ್ಯಕ್ತಿಯನ್ನು ನಾವು ವಿಚಾರಿಸಿದೆವು. ಆದರೆ ಆತ ಬಾಯಿ ಬಿಡುತ್ತಿಲ್ಲ. ನನಗೇನೂ ಗೊತ್ತಿಲ್ಲ ಎಂದೇ ಹೇಳುತ್ತಿದ್ದಾನೆ. ನಿಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಹೀಗೆ ಸುಳ್ಳು ಹೇಳುತ್ತಿಲ್ಲ ತಾನೇ ಎಂದು ಭಾಗ್ಯಾಳನ್ನು ಕೇಳುತ್ತಾರೆ. ಸರ್‌ ಕನ್ನಿಕಾ, ಆ ವ್ಯಕ್ತಿಯ ಬಳಿ ಮಾತನಾಡಿದ್ದನ್ನು ನಾನೇ ಕೇಳಿಸಿಕೊಂಡಿದ್ದೇನೆ ಎಂದು ಭಾಗ್ಯಾ ಹೇಳುತ್ತಾಳೆ. ಸರಿಯಾದ ಸಾಕ್ಷಿ ಇಲ್ಲದೆ ನಾವು ಆಕ್ಷನ್‌ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಇನ್ಸ್‌ಪೆಕ್ಟರ್‌ ಹೇಳುತ್ತಾರೆ. ಭಾಗ್ಯಾಗೆ ಏನು ಮಾಡುವುದು ತೋಚುವುದಿಲ್ಲ. ನನ್ನ ತಪ್ಪು ಯಾರಿಗೂ ತಿಳಿಯುವುದಿಲ್ಲ ಎಂಬ ಅಹಂಕಾರದಿಂದ ಕನ್ನಿಕಾ ಭಾಗ್ಯಾಳನ್ನು ಹೊರಗೆ ತಳ್ಳುತ್ತಾಳೆ. ಈ ವರ್ಷ ನಾನು ನನ್ನ ಮಗಳು ಪರೀಕ್ಷೆ ಬರೆಯುತ್ತೇವೆ. ಹಾಗೇ ನೀನು ಎಂದಿಗೂ ಪಾಸ್‌ ಆಗದ ಪರೀಕ್ಷೆ ಬರೆಸುತ್ತೇನೆ ಎಂದು ಭಾಗ್ಯಾ, ಕನ್ನಿಕಾಗೆ ಸವಾಲು ಹಾಕುತ್ತಾಳೆ.

ತಮ್ಮದು ತಪ್ಪಿಲ್ಲ ಎಂದು ಸಾಬೀತು ಮಾಡಲು ಭಾಗ್ಯಾ ಮುಂದೆ ಬೇರೆ ಏನು ದಾರಿ ಇದೆ? ಆಕೆ ಬೇರೆ ಏನು ಸಾಕ್ಷಿ ಹುಡುಕುತ್ತಾಳೆ ಅನ್ನೋದನ್ನು ಕಾದು ನೋಡಬೇಕು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ