Seetha Rama Serial: ನನಗೆ ರಾಮ್ ಬೇಕು, ಆದ್ರೆ ರಾಮ್ ಅಪ್ಪ ಆಗೋದು ಬೇಡ! ಸಿಹಿಯ ನಿರ್ಧಾರಕ್ಕೆ ತಲೆಬಾಗ್ತಾನಾ ಶ್ರೀರಾಮ?
ಸಿಹಿಯ ಮುಂದೆ ತಮ್ಮಿಬ್ಬರ ನಡುವಿನ ಪ್ರೀತಿ ವಿಷಯವನ್ನು ಪ್ರಸ್ತಾಪಿಸಿದ್ದಾನೆ ರಾಮ. ನಿಮ್ಮಿಬ್ಬರನ್ನು ಚೆನ್ನಾಗಿ ನೋಡ್ಕೋತಿನಿ, ನಾನು ನಿನಗೆ ಅಪ್ಪಾನೂ ಆಗ್ತಿನಿ ಎಂದಿದ್ದಾನೆ. ಆದರೆ, ಸಿಹಿ ಮಾತ್ರ ನನಗೆ ರಾಮ್ ಬೇಕು, ಆದ್ರೆ ರಾಮ್ ಅಪ್ಪ ಆಗೋದು ಬೇಡ ಎಂದಿದ್ದಾಳೆ.
Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಸೀತಾ ಮತ್ತು ರಾಮನ ನಡುವಿನ ಪ್ರೀತಿಗೆ ಅಧಿಕೃತ ಒಪ್ಪಿಗೆಯ ಮುದ್ರೆ ಬಿದ್ದಿದೆ. ಅಶೋಕ ಮತ್ತು ಪ್ರಿಯಾ ಜೋಡಿಯ ಪ್ರೀತಿಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದರೆ, ಸೀತಾ ಮಾತ್ರ ಸಿಹಿಯ ಉತ್ತರಕ್ಕೆ ಎದುರು ನೋಡುತ್ತಿದ್ದಾಳೆ. ನನಗಿಂತ ನಿಮ್ಮನ್ನು ಅಪ್ಪನಾಗಿ ಸಿಹಿ ಒಪ್ಪಬೇಕು ಎಂದು ಸೀತಾ ರಾಮನ ಮುಂದೆ ಹೇಳಿದ್ದಾಳೆ. ಸಿಹಿಗೆ ನಾನಂದ್ರೆ ತುಂಬ ಇಷ್ಟ, ಖಂಡಿತ ಅವಳು ನನ್ನನ್ನು ಅಪ್ಪನಾಗಿ ಸ್ವೀಕರಿಸ್ತಾಳೆ ಅನ್ನೋ ಭರವಸೆ ರಾಮನದ್ದು.
ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಿಹಿಯ ಜತೆಗೆ ತಮ್ಮಿಬ್ಬರ ವಿಚಾರವನ್ನು ಹೇಳಿಕೊಳ್ಳಲೆಂದೇ ರಾಮನ ಆಗಮನವಾಗಿದೆ. ಸಿಹಿಯೂ ಕೂಡಾ ರಾಮ್‌ನನ್ನು ನೋಡಿದ ಕೂಡಲೇ ಫ್ರೆಂಡ್ ಎಂದು ಓಡಿ ಬಂದು ತಬ್ಬಿಕೊಂಡಿದ್ದಾಳೆ. ಆಕೆಯನ್ನು ಮತ್ತೊಂದು ಕಡೆ ಕರೆದೊಯ್ದು, ಈ ವಿಚಾರವನ್ನು ನಿಧಾನಕ್ಕೆ ಆಕೆ ಬಳಿ ಹೇಳಲು ಶುರು ಮಾಡಿದ್ದಾನೆ. ಸುತ್ತಿ ಬಳಸಿ, ನನಗೆ ನೀನೂ ಬೇಕು ಸೀತಮ್ಮನೂ ಬೇಕು. ಮೂರು ಜನ ಒಟ್ಟಿಗೆ ಇರೋಣ್ವಾ ಎಂದಿದ್ದಾನೆ.
ರಾಮನ ಮಾತಿಗೆ ಸಿಹಿಯ ಮೌನ
ನಿಮ್ಮಿಬ್ಬರನ್ನು ತುಂಬ ಚೆನ್ನಾಗಿ ನೋಡ್ಕೋತಿನಿ. ಚೂರು ಹರ್ಟ್ ಆಗದೇ ಇರೋ ರೀತಿ ನೋಡ್ಕೋತಿನಿ. ನೀನು ಒಪ್ಪೋದಾದ್ರೆ, ನಾನು ನಿಮ್ಮ ಅಮ್ಮ, ಸೀತಮ್ಮನ್ನ ಮದುವೆ ಆಗಬಹುದಾ ಎಂದು ಕೇಳಿಯೇ ಬಿಟ್ಟಿದ್ದಾನೆ ರಾಮ್. ರಾಮನ ಮಾತು ಕೇಳಿ ಸಿಹಿ ಅರೇ ಕ್ಷಣ ಶಾಕ್ ಆಗಿದ್ದಾಳೆ. ಅಷ್ಟೇ ಅಲ್ಲದೆ ಸೀತಮ್ಮನ ಮದುವೆಯಾದರೆ, ನಂಗೆ ಅಪ್ಪ ಆಗ್ತಿಯಾ ಎಂದು ಸಿಹಿ ರಾಮನ ಬಳಿ ಕೇಳಿದ್ದಾಳೆ. ಅದಕ್ಕೆ, ನೀನು ಯಾವತ್ತಿದ್ದರೂ ನನ್ನ ಮಗಳೇ ಎಂದಿದ್ದಾನೆ ರಾಮ.
ನನಗೆ ಅಪ್ಪ ಬೇಡ ಎಂದ ಸಿಹಿ
ಸಿಹಿ ಮನಸ್ಸಿನಲ್ಲಿನ ದುಗುಡವೇ ಬೇರೆ. ಸಿಹಿಗೆ ಸೀತಮ್ಮನೇ ಎಲ್ಲ. ಆ ಪುಟಾಣಿ ಅಪ್ಪನನ್ನು ನೋಡಿಯೇ ಇಲ್ಲ. ಅಪ್ಪನ ಪ್ರೀತಿಯ ಬಗ್ಗೆಯೂ ಆಕೆಗೆ ತಿಳಿದಿಲ್ಲ. ಅಪ್ಪ ಹೇಗಿರ್ತಾನೆ ಅನ್ನೋ ಕಲ್ಪನೆಯೂ ಆಕೆಗಿಲ್ಲ. ಸಿಹಿಯ ತಲೆಯಲ್ಲಿರುವುದು ಅಪ್ಪ ಅಂದ್ರೆ ಬಿಟ್ಟು ಹೋಗುವವನು ಎಂದರ್ಥ. ಹೀಗಿರುವಾಗ ನಾನು ಸೀತಮ್ಮನನ್ನು ಮದುವೆ ಆಗ್ತಿನಿ ಅಂತಂದ್ರೆ, ಆ ಮಾತಿಗೆ ನನಗೆ ಅಪ್ಪ ಬೇಡ. ನನಗೆ ನನ್ನ ಫ್ರೆಂಡ್ ಬೇಕು, ಆದರೆ ರಾಮ್ ಅಪ್ಪ ಆಗುವುದು ಬೇಡ ಎಂದಿದ್ದಾಳೆ. ಸಿಹಿಯ ಈ ಮಾತು ರಾಮ ಮತ್ತು ಸೀತಾಗೂ ಕೊಂಚ ಟೆನ್ಷನ್ ಕೊಟ್ಟಿದೆ. ಈ ನಡುವೆ ನೀನೂ ಒಂಚೂರು ವಿಚಾರಿಸು ಎಂದು ಸಿಹಿಗೆ ಟೈಮ್ ಕೊಟ್ಟಿದ್ದಾನೆ ರಾಮ.
ಇನ್ನೊಂದು ಕಡೆ ರಾಮ ಮತ್ತು ಸೀತಾಳ ನಡುವಿನ ಪ್ರೀತಿ ವಿಚಾರ ಚಾಂದಿನಿಗೂ ತಿಳಿದಿದೆ. ರಾಮನ ಮುಂದೆ ಬಂದು ನಿಂತು, ರಾಮ್ ನಾವಿಬ್ರೂ ಈಗ ದೂರವಾಗಿದ್ದೀವಿ. ಆದರೆ, ನಾವಿಬ್ಬರೂ ಪ್ರೀತಿ ಮಾಡಿದ್ದು ನಿಜ ಅಲ್ವಾ. ನಿಜವಾದ ಪ್ರೀತಿ ಅಂದ್ರೆ, ನಾವು ಪ್ರೀತಿಸಿದವ್ರು ಖುಷಿಯಾಗಿರಲಿ ಅನ್ನೋದು. ಹಠಕ್ಕೆ ಬೀಳೋದಲ್ಲ. ನನಗೆ ಗೊತ್ತಿದೆ ರಾಮ್, ನೀನು ಸೀತಾಳನ್ನು ಇಷ್ಟಪಡ್ತಿದ್ದೀಯಾ. ನೀವಿಬ್ಬರೂ ಪ್ರೀತಿಯಲ್ಲಿದ್ದೀರಿ ಎಂದು ಚಾಂದಿನಿ ರಾಮನ ಮುಂದೆ ಹೇಳಿದ್ದಾಳೆ. ಮತ್ತೊಂದು ಕಡೆ ಭಾರ್ಗವಿಯೂ ಚಾಂದಿನಿ ಜತೆ ಸೇರಿ ಹೊಸ ಸಂಚು ರೂಪಿಸುತ್ತಿದ್ದಾಳೆ.
ಸೀತಾಳ ಹಳೇ ಕಥೆ ರಿವೀಲ್ ಆಗಲಿದೆಯೇ?
ಈ ವರೆಗೂ ಸೀತಾ ರಾಮ ಧಾರಾವಾಹಿಯಲ್ಲಿ ಸೀತಾಳ ಹಿಂದಿನ ಕಥೆ ಹೊರಬಿದ್ದಿಲ್ಲ. ರಾಮನ ಹಳೇ ಪ್ರೇಮಿಯ ಕಥೆ ಬಿಚ್ಚಿಕೊಂಡಿದೆಯಾದರೂ, ಸೀತಾಳ ಗಂಡ ಯಾರು, ಸಿಹಿಯ ತಂದೆ ಎಲ್ಲಿದ್ದಾನೆ ಎಂಬ ಸಣ್ಣ ಸುಳಿವು ಈ ವರೆಗೂ ರಿವೀಲ್ ಆಗಿಲ್ಲ. ಇದೀಗ ಆ ಕೌತುಕವೂ ಹೊರಬೀಳುವ ಸಮಯ ಸನಿಹ ಬರುತ್ತಿದೆ.
ಸೀತಾ ರಾಮ ಧಾರಾವಾಹಿ ಪಾತ್ರವರ್ಗ
ನಿರ್ದೇಶಕ: ಮಧುಸೂಧನ್
ಗಗನ್ ಶ್ರೀನಿವಾಸ್: ಶ್ರೀರಾಮ (ನಾಯಕ)
ವೈಷ್ಣವಿ ಗೌಡ: ಸೀತಾ (ನಾಯಕ)
ರೀತು ಸಿಂಗ್: ಸಿಹಿ (ಸೀತಾ ಮಗಳು)
ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)
ಭಾರ್ಗವಿ: ಪೂಜಾ ಲೋಕೇಶ್ (ಶ್ರೀರಾಮನ ಚಿಕ್ಕಮ್ಮ)
ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್ ದೇಸಾಯಿ (ಶ್ರೀರಾಮನ ತಾತ)
ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)
ವಿಕಾಸ್ ಕಾರ್‌ಗೋಡ್: ಲಾಯರ್ ರುದ್ರಪ್ರತಾಪ್
ಸತೀಶ್ ಚಂದ್ರ: ಚರಣ್. ಡಿ
ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್ (ಶ್ರೀರಾಮನ ಚಿಕ್ಕಪ್ಪ)
ಜಯದೇವ್ ಮೋಹನ್: ಸತ್ಯಜೀತ್ (ಶ್ರೀರಾಮನ ಚಿಕ್ಕಪ್ಪ)
ವಿಭಾಗ