Yash: ಪವರ್‌ಫುಲ್ ಅಪ್‌ಡೇಟ್ ನೀಡುವುದಾಗಿ ಮಾಹಿತಿ ನೀಡಿದ ಯಶ್; ಅಭಿಮಾನಿಗಳ ಮನದಲ್ಲಿ ಮೂಡಿದೆ ನಾನಾ ಪ್ರಶ್ನೆ
ಕೆಜಿಎಫ್ ನಟ ಯಶ್ ಇನ್‌ಸ್ಟಾಗ್ರಾಂನಲ್ಲಿ ಹೊಸ ವಿಡಿಯೋವೊಂದನ್ನು ಅಪ್‌ಲೋಡ್ ಮಾಡಿದ್ದಾರೆ. ಇದು ಮುಂದಿನ ಸಿನಿಮಾದ ಅಪ್‌ಡೇಟಾ? ಯಾವುದಾದರೂ ಹೊಸ ಬ್ರ್ಯಾಂಡ್‌ನ ಜಾಹೀರಾತ? ಹೀಗೆ ಹಲವು ಪ್ರಶ್ನೆಗಳು ನೆಟ್ಟಿಗರಲ್ಲಿ ಮೂಡಿದೆ.
ಬೆಂಗಳೂರು: ಕೆಜಿಎಫ್ ನಟ ಯಶ್ ಇನ್‌ಸ್ಟಾಗ್ರಾಂನಲ್ಲಿ ಹೊಸ ವಿಡಿಯೋವೊಂದನ್ನು ಅಪ್‌ಲೋಡ್ ಮಾಡಿದ್ದಾರೆ. ಇದು ಮುಂದಿನ ಸಿನಿಮಾದ ಅಪ್‌ಡೇಟಾ? ಯಾವುದಾದರೂ ಹೊಸ ಬ್ರ್ಯಾಂಡ್‌ನ ಜಾಹೀರಾತ? ಹೀಗೆ ಹಲವು ಪ್ರಶ್ನೆಗಳು ನೆಟ್ಟಿಗರಲ್ಲಿ ಮೂಡಿದೆ. "ತಪ್ಪಿಸಿಕೊಳ್ಳಲಾಗದ ಪ್ರಶ್ನೆಗಳು, ಅಂತಹ ಪವರ್‌ಫುಲ್ ಅಪ್‌ಡೇಟ್‌ಗಾಗಿ ಕಾಯಿರಿ, ಕಮ್ಮಿಂಗ್ ಸೂನ್" ಎಂದು ಕ್ಯಾಪ್ಷನ್ ಬರೆದಿದ್ದಾರೆ.
ಈ ಪೋಸ್ಟ್‌ಗೆ ಅನ್‌ಅವಾಯ್ಡೇಬಲ್‌ಕ್ವಾರೀಸ್, ಆಡ್ ಎಂಬೆರಡು ಹ್ಯಾಷ್‌ಟ್ಯಾಗ್ ಬಳಸಿದ್ದಾರೆ. ಹೀಗಾಗಿ, ಇದು ಜಾಹೀರಾತು ಆಗಿರಬಹುದು ಎಂಬ ಸಂದೇಹ ಎಲ್ಲರಲ್ಲಿಯೂ ಮೂಡಿದೆ. ಕೆಲವು ಅಭಿಮಾನಿಗಳು "ಟಾಕ್ಸಿಕ್ ಅಪ್‌ಡೇಟ್" ಆಗಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಬಾಸ್ ಈಸ್ ಬ್ಯಾಕ್, ರಾಕಿಬಾಯ್ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
ಈ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಮಾತ್ರ ಪೋಸ್ಟ್ ಮಾಡಲಾಗಿದೆ. ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿಲ್ಲ. ಹೀಗಾಗಿ, ಇದು ಯಾವುದೋ ಪ್ರಮುಖ ಬ್ರ್ಯಾಂಡ್‌ಗೆ ಸಂಬಂಧಪಟ್ಟ ವಿಡಿಯೋ ಆಗಿರಬಹುದು. ಟಾಕ್ಸಿಕ್ ಅಥವಾ ಬೇರೆ ಯಾವುದೇ ಪ್ರಮುಖ ಅಪ್‌ಡೇಟ್ ಅನ್ನು ಎಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಯಶ್ ಹಂಚಿಕೊಳ್ಳುವುದು ಸಾಮಾನ್ಯ.
ಇದ್ಯಾವುದೋ ಪ್ರಮುಖ ಬ್ರಾಂಡ್‌ನ ಜಾಹೀರಾತು ಆಗಿರಬಹುದು ಎನ್ನಲಾಗುತ್ತಿದೆ. ಕೆಜಿಎಫ್ ಯಶಸ್ಸಿನ ಬಳಿಕ ಜಾಗತಿಕವಾಗಿ ಖ್ಯಾತಿ ಪಡೆದಿದ್ದಾರೆ. ದೊಡ್ಡ ದೊಡ್ಡ ಕಂಪನಿಗಳು ಜಾಹೀರಾತು ಆಫರ್ ನೀಡುತ್ತವೆ. ಇದೇ ರೀತಿ ಯಾವುದಾದರೂ ಪ್ರಮುಖ ಕಂಪನಿ ಜತೆ ಪಾಲುದಾರಿಕೆ ಮಾಡಿರಬಹುದು ಎನ್ನಲಾಗುತ್ತಿದೆ.
ಯಶ್ ಅವರು ಕೆಜಿಎಫ್ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ನಟರಾಗಿ ಹೊರಹೊಮ್ಮಿದ್ದಾರೆ. ನವೀನ್ ಕುಮಾರ್ ಗೌಡ ಆಗಿದ್ದವರು ಯಶ್ ಆಗಿ ಸ್ಯಾಂಡಲ್‌ವುಡ್‌ಗೆ ಹಲವು ಜನಪ್ರಿಯ ಸಿನಿಮಾಗಳನ್ನು ನೀಡಿದ್ದಾರೆ. ಜಂಭದ ಹುಡುಗಿ, ಮೊಗ್ಗಿನ ಮನಸ್ಸು, ರಾಕಿ, ಕಳ್ಳರ ಸಂಎ, ಗೋಕುಲ, ತಮಸ್ಸು, ಮೊದಲ ಸಲ, ರಾಜಧಾನಿ, ಕಿರಾತಕ, ಲಕ್ಕಿ, ಜಾನು, ಡ್ರಾಮಾ, ಚಂದ್ರ, ಗೂಗ್ಲಿ ಹೀಗೆ ಕನ್ನಡದಲ್ಲಿ ಹಲವು ಸಿನಿಮಾ ನೀಡಿದ್ದಾರೆ. ರಾಜಾಹುಲಿ, ಗಜಕೇಸರಿ, ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ, ಮಾಸ್ಟರ್ ಪೀಸ್, ಸಂತು ಸ್ಟ್ರೈಟ್ ಫಾರ್ವರ್ಡ್, ಕೆಜಿಎಫ್ ಒಂದು ಕೆಜಿಎಫ್ 2 ಹೀಗೆ ಹಲವು ಸಿನಿಮಾದಲ್ಲಿ ನಟಿಸಿದ್ದರು.
ಕೆಜಿಎಫ್ ಯಶಸ್ಸು ಬಳಿಕ ಅತ್ಯಂತ ಎಚ್ಚರಿಕೆಯಿಂದ ಟಾಕ್ಸಿಕ್ ಸಿನಿಮಾ ಘೋಷಣೆ ಮಾಡಿದ್ದಾರೆ. ಇತ್ತೀಚೆಗೆ ಯಶ್ ತನ್ನ 19ನೇ ಸಿನಿಮಾದ ಹೆಸರನ್ನು ರಿವೀಲ್ ಮಾಡಿದ್ದರು. ತನ್ನ ಮುಂದಿನ ಸಿನಿಮಾ ಟಾಕ್ಸಿಕ್ ಎಂದಿದ್ದರು. ಇದೇ ಸಮಯದಲ್ಲಿ ಟಾಕ್ಸಿಕ್ ಸಿನಿಮಾದ ಟೈಟಲ್ ವಿಡಿಯೋ ಲಾಂಚ್ ಮಾಡಲಾಗಿತ್ತು. ಟಾಕ್ಸಿಕ್ ಸಿನಿಮಾ ಇಂಗ್ಲಿಷ್, ಕನ್ನಡ, ತೆಲುಗು, ಮಲಯಾಳಂ, ಹಿಂದಿ, ತಮಿಳು ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಯಶ್ ಟಾಕ್ಸಿಕ್ ಸಿನಿಮಾಕ್ಕೆ ಮಲಯಾಳಂ ಚಿತ್ರರಂಗದ ನಿರ್ದೇಶಕಿ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.