ಕನ್ನಡ ಸುದ್ದಿ  /  ಮನರಂಜನೆ  /  ಬಾಕ್ಸ್‌ ಆಫೀಸ್‌ನಲ್ಲಿ ಸಿಕ್ಸರ್‌ ಹೊಡೆಯದ ಲಾಲ್‌ ಸಲಾಮ್‌; 3ರಿಂದ ಒಂದಕ್ಕಿಳಿದ ರಜನಿಕಾಂತ್‌ ಸಿನಿಮಾ

ಬಾಕ್ಸ್‌ ಆಫೀಸ್‌ನಲ್ಲಿ ಸಿಕ್ಸರ್‌ ಹೊಡೆಯದ ಲಾಲ್‌ ಸಲಾಮ್‌; 3ರಿಂದ ಒಂದಕ್ಕಿಳಿದ ರಜನಿಕಾಂತ್‌ ಸಿನಿಮಾ

Praveen Chandra B HT Kannada

Feb 13, 2024 04:36 PM IST

ಲಾಲ್‌ ಸಲಾಮ್-‌ ರಜನಿಕಾಂತ್‌

    • Lal Salaam box office collection day 4: ರಜನಿಕಾಂತ್‌ ಅತಿಥಿ ಪಾತ್ರದಲ್ಲಿ ನಟಿಸಿರುವ, ಐಶ್ವರ್ಯಾ ರಜನಿಕಾಂತ್‌ ನಿರ್ದೇಶನದ ಲಾಲ್‌ ಸಲಾಮ್‌ ಸಿನಿಮಾದ ಬಾಕ್ಸ್‌ ಆಫೀಸ್‌ ಗಳಿಕೆ ನಾಲ್ಕೇ ದಿನದಲ್ಲಿ ಗಮನಾರ್ಹ ಇಳಿಕೆ ಕಂಡಿದೆ. ನಾಲ್ಕನೇ ದಿನ ಸುಮಾರು 1 ಕೋಟಿ ರೂಪಾಯಿ ಆಸುಪಾಸಿನಲ್ಲಿ ಗಳಿಕೆ ಮಾಡಿದೆ.
ಲಾಲ್‌ ಸಲಾಮ್-‌ ರಜನಿಕಾಂತ್‌
ಲಾಲ್‌ ಸಲಾಮ್-‌ ರಜನಿಕಾಂತ್‌

ಸೂಪರ್‌ಸ್ಟಾರ್‌ ರಜನಿಕಾಂತ್‌ ಸಿನಿಮಾವೆಂದರೆ ಬಾಕ್ಸ್‌ ಆಫೀಸ್‌ನಲ್ಲಿ ಚಿಂದಿ ಉಡಾಯಿಸುವುದು ಸಾಮಾನ್ಯ. ಆದರೆ, ರಜನಿಕಾಂತ್‌ ಅತಿಥಿಪಾತ್ರದಲ್ಲಿ ನಟಿಸಿರುವ ಲಾಲ್‌ ಸಲಾಮ್‌ ಸಿನಿಮಾವು ವಿಮರ್ಶಕರಿಂದ ಮೆಚ್ಚುಗೆ ಪಡೆದರೂ ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿಲ್ಲ. ಈ ಸಿನಿಮಾದಲ್ಲಿ ರಜನಿಕಾಂತ್‌ ಜತೆಗೆ ವಿಷ್ಣು ವಿಶಾಲ್‌ ಮತ್ತು ವಿಕ್ರಾಂತ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಫೆಬ್ರವರಿ 9ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಕ್ರಿಕೆಟ್‌ ಮತ್ತು ಧರ್ಮದ ವಿಚಾರವನ್ನು ಹೊಂದಿತ್ತು. ಜತೆಗೆ, ರಜನಿಕಾಂತ್‌ ಈ ಸಿನಿಮಾದ ಮೂಲಕ ಸಾಮರಸ್ಯದ ಪಾಠ ಮಾಡಿದ್ದರು.

ಟ್ರೆಂಡಿಂಗ್​ ಸುದ್ದಿ

ಸೀತಾ ರಾಮ ಸೀರಿಯಲ್‌ ದೃಶ್ಯದಲ್ಲಿ ಹೆಲ್ಮೆಟ್‌ ಧರಿಸದೇ ಪ್ರಯಾಣ; ನಟಿ ವೈಷ್ಣವಿ ಗೌಡಗೆ ದಂಡ ವಿಧಿಸಿದ ಟ್ರಾಫಿಕ್‌ ಪೊಲೀಸರು

ಗೌರಿ ಚಿತ್ರದಿಂದ ಹೊರಬಂತು ‘ಒಳ್ಳೆ ಟೈಮ್‌ ಬರುತ್ತೆ’ ಹಾಡು; ಚಂದನ್‌ ಶೆಟ್ಟಿ ಕಂಠಕ್ಕೆ ಸಮರ್ಜಿತ್‌ ಲಂಕೇಶ್‌ ಡಾನ್ಸ್‌

ಸಾವು ಕೈ ಬೀಸಿ ಕರಿಯುತ್ತಿತ್ತು, ಆಗ ಆ ದೇವರು ಕೈ ಹಿಡಿದ; ಮತಾಂತರದಿಂದ ಬದುಕೇ ಬದಲಾಯ್ತೆಂದ ಶ್ರೀರಾಮಚಂದ್ರ ನಟಿ ಮೋಹಿನಿ

Abbabba OTT: ಒಟಿಟಿಗೆ ಬಂತು ಕಾಮಿಡಿ ಕಚಗುಳಿ ಇಡುವ ಅಬ್ಬಬ್ಬ ಸಿನಿಮಾ; ಯಾವ ಫ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಣೆಗೆ ಲಭ್ಯ?

ಲಾಲ್‌ ಸಲಾಮ್‌ ಬಾಕ್ಸ್‌ ಆಫೀಸ್‌ ವರದಿ

ರಜನಿಕಾಂತ್‌ ನಟನೆಯ ಲಾಲ್‌ ಸಲಾಂ ಸಿನಿಮಾವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಾಲ್ಕನೇ ದಿನ 1.13 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೊದಲ ದಿನ ಈ ಸಿನಿಮಾ 3.55 ಕೋಟಿ ರೂಪಾಆಯಿ ಗಳಿಕೆ ಮಾಡಿತ್ತು. ಎರಡನೇ ದಿನ 3.25 ಕೋಟಿ ರೂಪಾಯಿ ಗಳಿಸಿತ್ತು. ಮೂರನೇ ದಿನ 3.15 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ವೀಕೆಂಡ್‌ ಮುಗಿದು ಸೋಮವಾರ ಬಂದಿರುವುದರಿಂದ ಲಾಲ್‌ ಸಲಾಮ್‌ ಗಳಿಕೆ ಮೂರರಿಂದ 1ಕ್ಕೆ ಇಳಿದಿದೆ. ಅಂದರೆ, ನಾಲ್ಕನೇ ದಿನ ಬಾಕ್ಸ್‌ ಆಫೀಸ್‌ನಲ್ಲಿ ಕೇವಲ 1.13 ಕೋಟಿ ರೂಪಾಯಿ ಗಲೀಕೆ ಮಾಡಿದೆ. ಸೋಮವಾರ ಲಾಲ್‌ ಸಲಾಂ ಸಿನಿಮಾದ ತಮಿಳು ಶೋಗಳಿಗೆ ಶೇಕಡ 14.58 ಆಕ್ಯುಪೆನ್ಸಿ ಇತ್ತು. ತೆಲುಗು ಶೋಗಳಿಗೆ ಶೇಕಡ 17.40 ಆಕ್ಯುಪೆನ್ಸಿ ಇತ್ತು. ಅಂದರೆ, ಥಿಯೇಟರ್‌ನಲ್ಲಿ ಸರಾಸರಿ ಇಷ್ಟು ಪರ್ಸೆಂಟ್‌ ಫುಲ್‌ ಆಗಿತ್ತು.

ಲಾಲ್‌ ಸಲಾಮ್‌ ಸಿನಿಮಾದ ಬಗ್ಗೆ

ಲೈಕಾ ಪ್ರೊಡಕ್ಷನ್‌ ನಿರ್ಮಾಣದ ಮತ್ತು ರಜನಿಕಾಂತ್‌ ನಟನೆಯ ಲಾಲ್‌ ಸಲಾಮ್‌ ಸಿನಿಮಾ ಫೆಬ್ರವರಿ 9ರಂದು ಬಿಡುಗಡೆಯಾಗಿದೆ. ಲಾಲ್‌ ಸಲಾಮ್‌ನಲ್ಲಿ ರಜನಿಕಾಂತ್‌ ಅವರರು ಮೊಯ್ದೀನ್‌ ಬಾವಾ ಆಗಿ ಕಾಣಿಸಿಕೊಂಡಿದ್ದಾರೆ. ಲಾಲ್‌ ಸಲಾಮ್‌ ಸಿನಿಮಾದಲ್ಲಿ ವಿಷ್ಣು ವಿಶಾಲ್‌ ಮತ್ತು ವಿಕ್ರಾಂತ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಐಶ್ವರ್ಯಾ ರಜನಿಕಾಂತ್‌ ಅವರು ಈ ಹಿಂದೆ ವೈ ರಾಜಾ ವೈ ಎಂಬ ತಮಿಳು ಸಾಹಸ ರೋಚಕ ಸಿನಿಮಾ ನಿರ್ದೇಶನ ಮಾಡಿದ್ದಾರು. ಈ ಸಿನಿಮಾದಲ್ಲಿ ಧನುಷ್‌ ನಾಯಕ ನಟನಾಗಿ ಪ್ರೇಕ್ಷಕರನ್ನು ರಂಜಿಸಿದ್ದರು. ಧನುಷ್‌ ಮತ್ತು ಐಶ್ವರ್ಯಾ ರಜನಿಕಾಂತ್‌ ವಿವಾಹವಾಗಿದ್ದರು. ಸುಮಾರು ಒಂದು ವರ್ಷದ ಹಿಂದೆ ಇವರಿಬ್ಬರು ಡಿವೋರ್ಸ್‌ ಪಡೆದಿದ್ದಾರೆ.

ಲಾಲ್‌ ಸಲಾಮ್‌ ಸಿನಿಮಾ ವಿಮರ್ಶೆ

ರಜನಿಕಾಂತ್ ಅವರು ಮೊಯಿದ್ದೀನ್ ಭಾಯ್ ಎಂಬ ಮುಸ್ಲಿಂ ನಾಯಕನ ಪಾತ್ರದಲ್ಲಿ ಜೀವಿಸಿದ್ದಾರೆ. ಈ ಪಾತ್ರದಲ್ಲಿ ಇವರನ್ನು ನೋಡಲು ನಿಜಕ್ಕೂ ಖುಷಿಯಾಗುತ್ತದೆ. ಅವರಿಗೆ ನೀಡಲಾದ ಕೆಲವೊಂದು ಸಂಭಾಷಣೆಗಳಲ್ಲಿ ಅವರ ವೈಯಕ್ತಿಕ ನಂಬಿಕೆಗಳನ್ನೂ ಸ್ಪಷ್ಟವಾಗಿ ಹೇಳಿಸಿದಂತೆ ಇದೆ. ಈ ಸಂಭಾಷಣೆಗಳು ಈಗಿನ ಕಾಲಕ್ಕೂ ಅರ್ಥಪೂರ್ಣವಾಗಿ ಕಾಣಿಸಿದೆ. ಇವು ಗೂಸ್ ಬಂಪ್ ಅಥವಾ ರೋಮಾಂಚನ ಉಂಟು ಮಾಡುವ ಕ್ಷಣವೂ ಹೌದು. ಸಿನಿಮಾದ ಮೊದಲಾರ್ಧವು ಹಳ್ಳಿ, ಅಲ್ಲಿನ ಜನರು, ಅಲ್ಲಿರುವ ಹಿಂದೂ ಮತ್ತು ಮುಸ್ಲಿಂ ಜನರ ಸಂಬಂಧದ ಸುತ್ತ ಸುತ್ತುತ್ತದೆ. ಇದೇ ಸಂದರ್ಭದಲ್ಲಿ ತಿರು ಮತ್ತು ಶಂಶು ನಡುವಿನ ಪ್ರತಿಸ್ಪರ್ಧೆಯೂ ಇರುತ್ತದೆ. ದ್ವಿತೀಯಾರ್ಧದಲ್ಲಿ ಚಿತ್ರ ಇನ್ನಷ್ಟು ವೇಗ ಪಡೆಯುತ್ತದೆ. ರಜನಿಕಾಂತ್‌ ತಮ್ಮ ಅಮೋಘ ನಟನೆಯಿಂದ ಸೆಳೆಯುತ್ತಾರೆ. ಪೂರ್ತಿ ವಿಮರ್ಶೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ