ಕನ್ನಡ ಸುದ್ದಿ  /  ಮನರಂಜನೆ  /  Ott Release This Week: ‘ಅಮರ್ ಸಿಂಗ್ ಚಮ್ಕಿಲಾ’ದಿಂದ ‘ಪ್ರೇಮಲು’ವರೆಗೆ; ಈ ವಾರ ಪ್ರಸಾರ ಕಾಣಲಿರುವ ಟಾಪ್‌ 7 Ott ಸಿನಿಮಾಗಳಿವು

OTT Release This Week: ‘ಅಮರ್ ಸಿಂಗ್ ಚಮ್ಕಿಲಾ’ದಿಂದ ‘ಪ್ರೇಮಲು’ವರೆಗೆ; ಈ ವಾರ ಪ್ರಸಾರ ಕಾಣಲಿರುವ ಟಾಪ್‌ 7 OTT ಸಿನಿಮಾಗಳಿವು

Apr 11, 2024 08:57 AM IST

OTT Release This Week: ‘ಅಮರ್ ಸಿಂಗ್ ಚಮ್ಕಿಲಾ’ದಿಂದ ‘ಪ್ರೇಮಲು’ ವರೆಗೆ; ಈ ವಾರ ಪ್ರಸಾರ ಕಾಣಲಿರುವ ಟಾಪ್‌ 7 OTT ಸಿನಿಮಾಗಳಿವು

    • OTT Release This Week: ಈ ವಾರ ಹತ್ತು ಹಲವು ಸಿನಿಮಾಗಳು, ವೆಬ್‌ ಸಿರೀಸ್‌ಗಳು ಒಟಿಟಿ ಅಂಗಳ ಪ್ರವೇಶಿಸಲಿವೆ. ಆ ಪೈಕಿ ಆಯ್ದ 7 ಸಿನಿಮಾಗಳ ಮಾಹಿತಿ ಇಲ್ಲಿದೆ. 
OTT Release This Week: ‘ಅಮರ್ ಸಿಂಗ್ ಚಮ್ಕಿಲಾ’ದಿಂದ ‘ಪ್ರೇಮಲು’ ವರೆಗೆ; ಈ ವಾರ ಪ್ರಸಾರ ಕಾಣಲಿರುವ ಟಾಪ್‌ 7 OTT ಸಿನಿಮಾಗಳಿವು
OTT Release This Week: ‘ಅಮರ್ ಸಿಂಗ್ ಚಮ್ಕಿಲಾ’ದಿಂದ ‘ಪ್ರೇಮಲು’ ವರೆಗೆ; ಈ ವಾರ ಪ್ರಸಾರ ಕಾಣಲಿರುವ ಟಾಪ್‌ 7 OTT ಸಿನಿಮಾಗಳಿವು

OTT Release This Week: ಈ ವಾರ ಹಲವಾರು ಸಿನಿಮಾಗಳು OTT ಅಂಗಳವನ್ನು ಪ್ರವೇಶಿಸಲಿವೆ. ಸಿನಿಮಾಗಳ ಜತೆಗೆ ವೆಬ್ ಸರಣಿಗಳು ಬೇರೆ ಬೇರೆ ಒಟಿಟಿ ವೇದಿಕೆಗಳಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿವೆ. ಅಮರ್ ಸಿಂಗ್ ಚಮ್ಕಿಲಾ ಚಿತ್ರ ನೇರವಾಗಿ OTTಯಲ್ಲಿ ಸ್ಟ್ರೀಮ್ ಆಗಲಿದೆ. ಪ್ರೇಮಲು, ಗಾಮಿ, ಓಂ ಭೀಮ್ ಬುಷ್‌ನಂತಹ ಸೂಪರ್ ಹಿಟ್ ಚಿತ್ರಗಳೂ ಏಪ್ರಿಲ್ ಎರಡನೇ ವಾರದಲ್ಲಿ ಬಿಡುಗಡೆಯಾಗಲಿವೆ. ಹಾಗಾದರೆ. ಈ ವಾರ OTT ಗಳಿಗೆ ಬರಲಿರುವ ಟಾಪ್ 7 OTT ಸಿನಿಮಾಗಳು ಯಾವುವು? ಇಲ್ಲಿದೆ ಮಾಹಿತಿ.

ಟ್ರೆಂಡಿಂಗ್​ ಸುದ್ದಿ

ಸಂಗೀತಾ ಶೃಂಗೇರಿಗೆ ಹುಟ್ಟುಹಬ್ಬದ ಸಂಭ್ರಮ; ಡ್ರೋನ್‌ ಪ್ರತಾಪ್‌ಗೆ ರಾಖಿ ಕಟ್ಟಿ ಕಾಲಿಗೆ ಬಿದ್ದು ನಮಸ್ಕರಿಸಿದ 777 ಚಾರ್ಲಿ ಚೆಲುವೆ

ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಜತೆ ಕಿಶನ್‌ ಬಿಳಗಲಿ ನೀರಾಟ; ಯಾಕೆ ಗುರು ನಮ್‌ ಹೊಟ್ಟೆ ಉರಿಸ್ತಿಯಾ ಅಂದ್ರು ಫ್ಯಾನ್ಸ್‌

ರೌಡಿಗಳಿಂದ ಪಾರ್ಥನಿಗೆ ಪೆಟ್ಟು, ಜೈದೇವ್‌ ಮೇಲೆ ಶಕುಂತಲಾಗೆ ಸಿಟ್ಟು; ಗೌತಮ್‌-ಭೂಮಿಕಾರಿಗೆ ಚಿಕ್ಕಮಗಳೂರಿನಲ್ಲಿ ಹನಿಮೂನ್‌, ಅಮೃತಧಾರೆ ಸ್ಟೋರಿ

Brundavana Serial: ಪುಷ್ಪಾಳ ಚಿಂತೆಗೆ ಕಾರಣವಾಗಿದೆ ಭಾರ್ಗವಿ ಮಾತು; ಸತ್ಯಮೂರ್ತಿ ಕೈಯಲ್ಲಿ ಸಿಕ್ಕಿ ಬಿದ್ರು ಸಹನಾ-ಆಕಾಶ್‌

  1. ಪ್ರೇಮಲು

ಥಿಯೇಟರ್‌ಗಳಲ್ಲಿ ಬ್ಲಾಕ್‌ಬಸ್ಟರ್ ಆಗಿರುವ ಮಲಯಾಳಂ ಚಿತ್ರ ಪ್ರೇಮಲು ಕೂಡ ಈ ವಾರವೇ OTT ನಲ್ಲಿ ಪಾದಾರ್ಪಣೆ ಮಾಡಲಿದೆ. ಪ್ರೇಮಲು ತೆಲುಗು ಆವೃತ್ತಿಯು ಏಪ್ರಿಲ್ 12ರಂದು ಆಹಾ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗಲಿದೆ. ಚಿತ್ರವು ಏಪ್ರಿಲ್ 12ರಂದು ಮಲಯಾಳಂ, ತಮಿಳು, ಕನ್ನಡ ಮತ್ತು ಹಿಂದಿಯಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ನೆಸ್ಲೇನ್ ಕೆ ಗೂಫರ್ ಮತ್ತು ಮಮಿತಾ ಬೈಜು ನಾಯಕಿಯರಾಗಿ ನಟಿಸಿರುವ ಪ್ರೇಮಲು ಚಿತ್ರವನ್ನು ಗಿರೀಶ್ ಎಡಿ ನಿರ್ದೇಶಿಸಿದ್ದಾರೆ.

2. ಪೊನ್ ಒಂಡ್ರು ಕಂಡೆನ್

ತಮಿಳು ಚಿತ್ರ ಪೊನ್ ಒಂಡ್ರು ಕಂಡೆನ್ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿಲ್ಲ. ಆದರೆ ನೇರವಾಗಿ ಜಿಯೋ ಸಿನಿಮಾ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಚಿತ್ರವು ಜಿಯೋ ಸಿನಿಮಾ ಒಟಿಟಿಯಲ್ಲಿ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ. ಅಶೋಕ್ ಸೆಲ್ವನ್, ವಸಂತ ರವಿ ಮತ್ತು ಐಶ್ವರ್ಯ ಲಕ್ಷ್ಮಿ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

3. ಗಾಮಿ

ಮಾಸ್ ಕಾ ದಾಸ್ ವಿಶ್ವಕ್ ಸೇನ್ ಅಭಿನಯದ ಗಾಮಿ ಏಪ್ರಿಲ್ 12 ರಂದು ಜೀ5 OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗಲಿದೆ. ತೆಲುಗು ಅಲ್ಲದೆ, ಈ ಸಾಹಸಮಯ ಥ್ರಿಲ್ಲರ್ ಸಿನಿಮಾ ತಮಿಳು ಮತ್ತು ಕನ್ನಡ ಭಾಷೆಗಳಲ್ಲಿಯೂ ಲಭ್ಯವಿರುತ್ತದೆ. ವಿದ್ಯಾಧರ್ ಕಹ್ಯಾ ನಿರ್ದೇಶಿಸಿದ ಗಾಮಿ ಮಾರ್ಚ್ 8 ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಗಳಿಕೆ ವಿಚಾರದಲ್ಲೂ ಯಶಸ್ಸು ಗಳಿಸಿತ್ತು.

4. ಲಾಲ್ ಸಲಾಂ

ಕಾಲಿವುಡ್ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಲಾಲ್ ಸಲಾಮ್ ಏಪ್ರಿಲ್ 12 ರಂದು ಸನ್‌ನೆಕ್ಸ್ಟ್ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗಲಿದೆ. ಐಶ್ವರ್ಯಾ ನಿರ್ದೇಶನದ ಈ ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕ್ರಿಕೆಟ್ ಮತ್ತು ಕೋಮು ಕಲಹದ ವಿಷಯದ ಸುತ್ತ ಸುತ್ತುವ ಲಾಲ್ ಸಲಾಮ್ ಚಿತ್ರಮಂದಿರಗಳಲ್ಲಿ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ.

5. ಓಂ ಭೀಮ್ ಬುಷ್

ಓಂ ಭೀಮ್ ಬುಶ್ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಏಪ್ರಿಲ್ 12 ರಂದು ಸ್ಟ್ರೀಮ್ ಆಗಲಿದೆ. ಶ್ರೀ ವಿಷ್ಣು, ರಾಹುಲ್ ರಾಮಕೃಷ್ಣ ಮತ್ತು ಪ್ರಿಯದರ್ಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಕಾಮಿಡಿ ಹಾರರ್ ಥ್ರಿಲ್ಲರ್‌ಗೆ ಚಿತ್ರಮಂದಿರಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ನಿರ್ದೇಶಕ ಶ್ರೀಹರ್ಷ ಕೋನಗಂಟಿ ನಿರ್ದೇಶನದ ಓಂ ಭೀಮ್ ಬುಷ್ ಮಾರ್ಚ್ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿತ್ತು.

6. ಶರ್ಮಾ ಮತ್ತು ಅಂಬಾನಿ

ಕ್ರೈಂ ಕಾಮಿಡಿ ಥ್ರಿಲ್ಲರ್ ಸಿನಿಮಾ ‘ಶರ್ಮಾ ಮತ್ತು ಅಂಬಾನಿ’ ಸಿನಿಮಾ ಸಹ ನೇರವಾಗಿ ಒಟಿಟಿಗೆ ಬರುತ್ತಿದೆ. ಈ ಸಿನಿಮಾ ಏಪ್ರಿಲ್ 11ರಂದು ETV ವಿನ್ OTT ನಲ್ಲಿ ಸ್ಟ್ರೀಮ್ ಆಗಲಿದೆ. ಭರತ್ ತಿಪ್ಪಿರೆಡ್ಡಿ, ಧನ್ಯ ಬಾಲಕೃಷ್ಣ ಮತ್ತು ಕೇಶವ್ ಕರಿ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಕಾರ್ತಿಕ್ ಸಾಯಿ ನಿರ್ದೇಶಿಸಿದ್ದಾರೆ.

7. ಅಮರ್ ಸಿಂಗ್ ಚಮ್ಕಿಲಾ

ಅಮರ್ ಸಿಂಗ್ ಚಮ್ಕಿಲಾ ಸಿನಿಮಾ ಏಪ್ರಿಲ್ 12 ರಂದು ನೆಟ್‌ಫ್ಲಿಕ್ಸ್ OTT ಪ್ಲಾಟ್‌ಫಾರ್ಮ್‌ನಲ್ಲಿ ನೇರವಾಗಿ ಸ್ಟ್ರೀಮ್ ಆಗಲಿದೆ. ಈ ಚಿತ್ರವು ಪಂಜಾಬಿ ಗಾಯಕ ಮತ್ತು ಸಂಗೀತಗಾರ ಅಮರ್ ಸಿಂಗ್ ಚಮ್ಕಿಲಾ ಅವರ ಜೀವನವನ್ನು ಆಧರಿಸಿದೆ. ಈ ಚಿತ್ರವನ್ನು ಇಮ್ತಿಯಾಜ್ ಅಲಿ ನಿರ್ದೇಶಿಸಿದ್ದಾರೆ ಮತ್ತು ಅಮರ್ ಸಿಂಗ್ ಪಾತ್ರವನ್ನು ದಿಲ್ಜಿತ್ ದೋಸಾಂಜೆ ನಿರ್ವಹಿಸಿದ್ದಾರೆ. ಏಪ್ರಿಲ್ 12 ರಿಂದ Netflixನಲ್ಲಿ ಅಮರ್ ಸಿಂಗ್ ಚಮ್ಕಿಲಾ ಚಿತ್ರವನ್ನು ವೀಕ್ಷಿಸಬಹುದು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ