ಕನ್ನಡ ಸುದ್ದಿ  /  ಮನರಂಜನೆ  /  ಕೆಟಿಎಂ ಸಿನಿಮಾ ಫೆ 16ರಂದು ಬಿಡುಗಡೆ: ದಿಯಾ ನಟನ ಸಿನಿಮಾಕ್ಕೆ ಶುಭ ಹಾರೈಸಿದ ರಶ್ಮಿಕಾ ಮಂದಣ್ಣ, ರಿಷಬ್‌ ಶೆಟ್ಟಿ

ಕೆಟಿಎಂ ಸಿನಿಮಾ ಫೆ 16ರಂದು ಬಿಡುಗಡೆ: ದಿಯಾ ನಟನ ಸಿನಿಮಾಕ್ಕೆ ಶುಭ ಹಾರೈಸಿದ ರಶ್ಮಿಕಾ ಮಂದಣ್ಣ, ರಿಷಬ್‌ ಶೆಟ್ಟಿ

Praveen Chandra B HT Kannada

Feb 07, 2024 10:58 AM IST

ಕೆಟಿಎಂ ಸಿನಿಮಾ ಫೆ 16ರಂದು ಬಿಡುಗಡೆ: ದಿಯಾ ನಟನ ಸಿನಿಮಾಕ್ಕೆ ಶುಭ ಹಾರೈಸಿದ ರಶ್ಮಿಕಾ ಮಂದಣ್ಣ, ರಿಷಬ್‌ ಶೆಟ್ಟಿ

    • Deekshith Shetty KTM Movie: ದಿಯಾ ಮೂಲಕ ಜನಪ್ರಿಯತೆ ಪಡೆದ ನಟ ದೀಕ್ಷಿತ್‌ ಶೆಟ್ಟಿ ನಟನೆಯ ಕೆಟಿಎಂ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಕೆಟಿಎಂ ಸಿನಿಮಾ ಫೆಬ್ರವರಿ 16ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಮತ್ತು ರಿಷಬ್‌ ಶೆಟ್ಟಿ ಶುಭ ಹಾರೈಸಿದ್ದಾರೆ.
ಕೆಟಿಎಂ ಸಿನಿಮಾ ಫೆ 16ರಂದು ಬಿಡುಗಡೆ: ದಿಯಾ ನಟನ ಸಿನಿಮಾಕ್ಕೆ ಶುಭ ಹಾರೈಸಿದ ರಶ್ಮಿಕಾ ಮಂದಣ್ಣ, ರಿಷಬ್‌ ಶೆಟ್ಟಿ
ಕೆಟಿಎಂ ಸಿನಿಮಾ ಫೆ 16ರಂದು ಬಿಡುಗಡೆ: ದಿಯಾ ನಟನ ಸಿನಿಮಾಕ್ಕೆ ಶುಭ ಹಾರೈಸಿದ ರಶ್ಮಿಕಾ ಮಂದಣ್ಣ, ರಿಷಬ್‌ ಶೆಟ್ಟಿ

ಬೆಂಗಳೂರು: ಕೆಟಿಎಂ ಸಿನಿಮಾ ಫೆಬ್ರವರಿ 16ರಂದು ಬಿಡುಗಡೆಯಾಗಲಿದೆ. ಪ್ರೇಮಿಗಳ ದಿನ ಕಳೆದ ಬಳಿಕ ಬಿಡುಗಡೆಯಾಗುವ ಈ ಸಿನಿಮಾದಲ್ಲಿ ಕಾಡುವ ಪ್ರೇಮಕಥೆ ಇರುವುದು ಪಕ್ಕಾ ಆಗಿದೆ. ಈಗಾಗಲೇ ಟ್ರೇಲರ್‌ನಲ್ಲಿ ಭಗ್ನಪ್ರೇಮಿಯೊಬ್ಬನ ಹಳೆ ಪ್ರೇಮಕಥೆಯ ಝಲಕ್‌ ನೀಡಲಾಗಿದೆ. "ಈ ಟ್ರೇಲರ್‌ ನೋಡಿದಾಗಲೇ ಕಣ್ಣಂಚಲ್ಲಿ ನೀರುಬಂತು, ಸಿನಿಮಾ ಹೇಗಿರಬಹುದು?" ಎಂದು ಸಾಕಷ್ಟು ಜನರು ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿದ್ದಾರೆ. "ಎಷ್ಟು ಬಾರಿ ನೋಡಿದರೂ ಸಾಲುತ್ತಿಲ್ಲ, ಮಾಯಾವಿ ಟ್ರೇಲರ್‌ ಇದು" ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಎಂಡೊಮೆಟ್ರಿಯೋಸಿಸ್ ಶಸ್ತ್ರಚಿಕಿತ್ಸೆಗೆ ಒಳಗಾದ ನಟಿ ಶಮಿತಾ ಶೆಟ್ಟಿ; ಏನಿದು ಕಾಯಿಲೆ? ಮಹಿಳೆಯರೇ ಎಚ್ಚರವಹಿಸಿ ಎಂದ ಶಿಲ್ಪಾ ಶೆಟ್ಟಿ ಸಹೋದರಿ

ಶಿವಶರಣ ಮೋಳಿಗೆ ಮಾರಯ್ಯ ಸಿನಿಮಾಕ್ಕೆ ಕೊಪ್ಪಳ ಶ್ರೀಗವಿ ಸಿದ್ದೇಶ್ವರ ಮಠದ ಶ್ರೀಗಳಿಂದ ಚಾಲನೆ, ಶರಣ ತತ್ತ್ವಕ್ಕೆ ಮನಸೋತ ಕಾಶ್ಮೀರದ ರಾಜನ ಕಥೆ

ರಣಬೀರ್‌ ಕಪೂರ್‌ ನಟನೆಯ ರಾಮಾಯಣದ ಬಜೆಟ್‌ ಬರೋಬ್ಬರಿ 835 ಕೋಟಿ ರೂ.; ಈ ಸಿನಿಮಾ ಬಿಡುಗಡೆ ಯಾವಾಗ? ಇಲ್ಲಿದೆ ವಿವರ

ಸಂಗೀತಾ ಶೃಂಗೇರಿಗೆ ಹುಟ್ಟುಹಬ್ಬದ ಸಂಭ್ರಮ; ಡ್ರೋನ್‌ ಪ್ರತಾಪ್‌ಗೆ ರಾಖಿ ಕಟ್ಟಿ ಕಾಲಿಗೆ ಬಿದ್ದು ನಮಸ್ಕರಿಸಿದ 777 ಚಾರ್ಲಿ ಚೆಲುವೆ

ಕೆಟಿಎಂ ಸಿನಿಮಾಕ್ಕೆ ಶುಭ ಹಾರೈಸಿದ ರಿಷಬ್‌ ಶೆಟ್ಟಿ

ಕಾಂತಾರ ನಟ ರಿಷಬ್‌ ಶೆಟ್ಟಿ ಕೆಟಿಎಂ ಟ್ರೇಲರ್‌ ಮೆಚ್ಚಿಕೊಂಡಿದ್ದು, ಟ್ವಿಟ್ಟರ್‌ನಲ್ಲಿ ಶುಭ ಹಾರೈಸಿದ್ದಾರೆ. ಭಾವುಕ ಜಗತ್ತಿಗೆ ಹೆಜ್ಜೆ ಇಡುವ ಕೆಟಿಎಂ ಟ್ರೈಲರ್‌. ದೀಕ್ಷಿತ್‌ ಮತ್ತು ತಂಡಕ್ಕೆ ಶುಭ ಹಾರೈಸುವೆ" ಎಂದು ರಿಷಬ್‌ ಶೆಟ್ಟಿ ಟ್ವೀಟ್‌ ಮಾಡಿದ್ದಾರೆ.

ಶುಭ ಹಾರೈಸಿದ ರಶ್ಮಿಕಾ ಮಂದಣ್ಣ

ಟ್ರೇಲರ್‌ ನೋಡಿದಾಗಲೇ ಹಾರ್ಡ್‌ ವರ್ಕ್‌ ಕಾಣಿಸುತ್ತದೆ. ದೀಕ್ಷಿತ್‌ ಶೆಟ್ಟಿ ಮತ್ತು ಕೆಟಿಎಂನ ಎಲ್ಲಾ ತಂಡದ ಸದಸ್ಯರಿಗೆ ಆಲ್‌ ದಿ ಬೆಸ್ಟ್‌ ಎಂದು ರಶ್ಮಿಕಾ ಮಂದಣ್ಣ ಟ್ವೀಟ್‌ ಮಾಡಿದ್ದಾರೆ.

ದಿಯಾದಿಂದ ಜನಪ್ರಿಯತೆ ಪಡೆದ ದೀಕ್ಷಿತ್‌

ಕನ್ನಡ ಮತ್ತು ತೆಲುಗು ಸಿನಿಮಾ/ಟಿವಿ ಶೋಗಳಲ್ಲಿ ನಟಿಸಿರುವ ದೀಕಷಿತ್‌ ಶೆಟ್ಟಿ ಅವರು ದಿಯಾ ಸಿನಿಮಾದ ಮೂಲಕ ಜನಪ್ರಿಯತೆ ಪಡೆದರು. ದಿಯಾ ಸಿನಿಮಾದ ನಟನೆಗಾಗಿ ಸೈಮಾ ಅತ್ಯುತ್ತಮ ಪೋಷಕ ನಟ ನಾಮನಿರ್ದೇಶನ ಪಡೆದರು. ದೀಕ್ಷಿತ್‌ ಶೆಟ್ಟಿ ಅವರು ಓ ಮೀನು, ದಿಯಾ, ಮೊಗ್ಗುರು ಮೊಣಗಲ್ಲು, ರೋಸ್‌ ವಿಲ್ಲಾ, ನವಬೆಳಕು, ಸ್ಮೈಲ್‌, ದಸರಾ(ತೆಲುಗು) ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಟಿಎಂ, ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಇವರ ಮುಂಬರುವ ಚಿತ್ರಗಳು.

ಸ್ಟಾರ್‌ ಸುವರ್ಣದ ಪ್ರೀತಿ ಎಂದರೇನು, ಉದಯ ಟೀವಿಯ ಸಾಕ್ಷಿ, ಜೀ ಕನ್ನಡದ ನಾಗಿಣಿ ಧಾರಾವಾಹಿಗಳಲ್ಲಿ, ತೆಲುಗಿನ ಮೀಟ್‌ ಕ್ಯೂಟ್‌ ಸೀರಿಸ್‌ನಲ್ಲೂ ನಟಿಸಿದ್ದಾರೆ.

ದಿಯಾ ಸಿನಿಮಾದ ಲವರ್‌ ಬಾಯ್‌ ದೀಕ್ಷಿತ್‌ ಶೆಟ್ಟಿ ಇದೀಗ ಈ ಪ್ರೇಮಿಗಳ ದಿನದ ಆಸುಪಾಸಿನಲ್ಲಿ ಲವರ್‌ ಬಾಯ್‌ ಆಗಿ ಮತ್ತೆ ಆಗಮಿಸುತ್ತಿದ್ದಾರೆ. ಅಂದಹಾಗೆ ದೀಕ್ಷಿತ್‌ ಶೆಟ್ಟಿ ಮಲಯಾಳಂ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಒಪ್ಪಿಸ್‌ ಸಿನಿಮಾದಲ್ಲಿ ನಟಿಸಲು ಒಪ್ಪಿದ್ದಾರೆ. ಈ ತಿಂಗಳಿನಿಂದಲೇ ಒಪ್ಪಿಸ್‌ ಶೂಟಿಂಗ್‌ ಆರಂಭವಾಗಲಿದೆ.

ಕೆಲವು ದಿನಗಳ ಹಿಂದೆ ಬಿಡುಗಡೆಯಾದ ಕೆಟಿಎಂ ಟೀಸರ್‌ ಕೂಡ ಸಿನಿಪ್ರಿಯರ ಗಮನ ಸೆಳೆದಿತ್ತು. ಇದಾದ ಬಳಿಕ ಕೆಟಿಎಂ ಸಿನಿಮಾದ ಹಾಡುಗಳೂ ಬಿಡುಗಡೆಯಾಗಿದ್ದವು. ಎರಡು ದಿನದ ಹಿಂದೆ ಕೆಟಿಎಂ ಸಿನಿಮಾದ ಮೂರನೇ ಹಾಡು ಎಲ್ಲೆಲ್ಲೂ ನೀನೇನೆ ಎಂಬ ಹಾಡು ಬಿಡುಗಡೆಯಾಗಿದೆ. ಇದು ಧನಂಜಯ್‌ ರಂಜನ್‌ ಸಾಹಿತ್ಯವಿರುವ, ಚೇತನ್‌ ರಾವ್‌, ಸಂಚಿತ್‌ ಹೆಗ್ಡೆ ಹಾಡಿರುವ ಹಾಡಿದು. ಅಂದಹಾಗೆ, ಕೆಟಿಎಂ ಸಿನಿಮಾದಲ್ಲಿ ಕಾಜಲ್‌ ಕುಂದರ್‌ ಮತ್ತು ಸಂಜನಾ ಎಂಬ ಇಬ್ಬರು ನಾಯಕಿಯರಿದ್ದಾರೆ. ಉಷಾ ಭಂಡಾರಿ, ಪ್ರಕಾಶ್‌ ತುಮ್ಮಿನಾಡು, ತುಕಾಲಿಸ ಂತು, ರಘು ರಾಮನಕೊಪ್ಪ, ಶಾನಿಲ್‌ ಗುರು, ಬಾಬು ಹಿರಣಯ್ಯ ಮಂತಾದವರು ನಟಿಸಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ