ಕನ್ನಡ ಸುದ್ದಿ  /  ಮನರಂಜನೆ  /  ಗರಡಿ ಚಿತ್ರದ ಟ್ರೈಲರ್‌ ಬಿಡುಗಡೆ: ಟ್ರೈಲರ್‌ ಬಿಡುಗಡೆ ಮಾಡಿದ್ದು ದರ್ಶನ್‌ ಅಲ್ಲ; ಇಲ್ಲಿದೆ ಕನ್ನಡ ಸಿನಿಮಾ ಗರಡಿ ಟ್ರೈಲರ್‌ ವಿಮರ್ಶೆ

ಗರಡಿ ಚಿತ್ರದ ಟ್ರೈಲರ್‌ ಬಿಡುಗಡೆ: ಟ್ರೈಲರ್‌ ಬಿಡುಗಡೆ ಮಾಡಿದ್ದು ದರ್ಶನ್‌ ಅಲ್ಲ; ಇಲ್ಲಿದೆ ಕನ್ನಡ ಸಿನಿಮಾ ಗರಡಿ ಟ್ರೈಲರ್‌ ವಿಮರ್ಶೆ

Praveen Chandra B HT Kannada

Nov 02, 2023 06:48 AM IST

ಗರಡಿ ಚಿತ್ರದ ಟ್ರೈಲರ್‌ ಬಿಡುಗಡೆ

    • Garadi Movie Trailer Launch Event: ಯಶಸ್‌ ಸೂರ್ಯ ನಾಯಕ ನಟನಾಗಿ ನಟಿಸಿರುವ, ಯೋಗರಾಜ್‌ ಭಟ್‌ ನಿರ್ದೇಶನದ ಸ್ಯಾಂಡಲ್‌ವುಡ್‌ ಚಿತ್ರ ಗರಡಿ ಟ್ರೈಲರ್‌ ಬಿಡುಗಡೆಯಾಗಿದೆ. ಆದರೆ, ಈ ಟ್ರೈಲರ್‌ ಅನ್ನು ಚಾಲೆಂಜಿಗ್‌ ಸ್ಟಾರ್‌ ದರ್ಶನ್‌ ಬಿಡುಗಡೆ ಮಾಡದೆ ಬೇರೆ ಒಬ್ಬರ ಮೂಲಕ ಬಿಡುಗಡೆ ಮಾಡಿಸಿದ್ದಾರೆ. ಅಂದಹಾಗೆ, ಗರಡಿ ಚಿತ್ರದ ಟ್ರೈಲರ್‌ ಹೇಗಿದೆ? ಇಲ್ಲಿದೆ ವಿಮರ್ಶೆ.
ಗರಡಿ ಚಿತ್ರದ ಟ್ರೈಲರ್‌ ಬಿಡುಗಡೆ
ಗರಡಿ ಚಿತ್ರದ ಟ್ರೈಲರ್‌ ಬಿಡುಗಡೆ

ರಾಣೆಬೆನ್ನೂರು: ಯೋಗರಾಜ್‌ ಭಟ್‌ ನಿರ್ದೇಶನದ ಕನ್ನಡ ಚಲನಚಿತ್ರ ಗರಡಿಯ ಟ್ರೈಲರ್‌ ಬಿಡುಗಡೆ ಸಮಾರಂಭ ಭಾನುವಾರ ಸಂಜೆ ರಾಣೆಬೆನ್ನೂರಿನಲ್ಲಿ ಅದ್ಧೂರಿಯಾಗಿ ನಡೆದಿದೆ. ಚಾಲೆಂಜಿಗ್‌ ಸ್ಟಾರ್‌ ದರ್ಶನ್‌ ಈ ಚಿತ್ರದ ಟ್ರೈಲರ್‌ ಬಿಡುಗಡೆ ಮಾಡದೆ, ಸಮಾರಂಭಕ್ಕೆ ಬಂದಿದ್ದ ಸಾಮಾನ್ಯ ವ್ಯಕ್ತಿಯೊಬ್ಬರ ಮೂಲಕ ಬಿಡುಗಡೆ ಮಾಡಿಸಿದ್ದಾರೆ. ಸಭಿಕರ ಸಾಲಿನ ಮುಂಭಾಗದಲ್ಲಿ ಕುಳಿತಿದ್ದ, ಸೌಮ್ಯ ಎಂಬ ಯುವತಿಯ ಕೈಯಿಂದ ಗರಡಿ ಚಿತ್ರದ ಟ್ರೈಲರ್‌ ಬಿಡುಗಡೆ ಮಾಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

QPL 2024: ಕ್ವೀನ್ಸ್‌ ಪ್ರೀಮಿಯರ್‌ ಲೀಗ್‌ ಶುರು; ಬ್ಯಾಟು ಬಾಲು ಹಿಡಿದು ಕ್ರಿಕೆಟ್ ಆಡಲು ಹೊರಟ ಕಿರುತೆರೆ, ಹಿರಿತೆರೆ ಹೆಣ್ಮಕ್ಕಳು

ಸೀತಾ ರಾಮ ಸೀರಿಯಲ್‌ ದೃಶ್ಯದಲ್ಲಿ ಹೆಲ್ಮೆಟ್‌ ಧರಿಸದೇ ಪ್ರಯಾಣ; ನಟಿ ವೈಷ್ಣವಿ ಗೌಡಗೆ ದಂಡ ವಿಧಿಸಿದ ಟ್ರಾಫಿಕ್‌ ಪೊಲೀಸರು

Pavitra Jayaram: ಭೀಕರ ರಸ್ತೆ ಅಪಘಾತದಲ್ಲಿ ಜೀ ಕನ್ನಡದ ತ್ರಿನಯನಿ ಧಾರಾವಾಹಿ ನಟಿ ಪವಿತ್ರಾ ಜಯರಾಂ ಸಾವು

ಗೌರಿ ಚಿತ್ರದಿಂದ ಹೊರಬಂತು ‘ಒಳ್ಳೆ ಟೈಮ್‌ ಬರುತ್ತೆ’ ಹಾಡು; ಚಂದನ್‌ ಶೆಟ್ಟಿ ಕಂಠಕ್ಕೆ ಸಮರ್ಜಿತ್‌ ಲಂಕೇಶ್‌ ಡಾನ್ಸ್‌

ವಿಶೇಷ ವ್ಯಕ್ತಿಯಿಂದ ಟ್ರೈಲರ್‌ ಬಿಡುಗಡೆ ಮಾಡಿಸಿದ ದರ್ಶನ್‌

ಗರಡಿ ಚಿತ್ರದ ಟ್ರೈಲರ್‌ ಅನ್ನು ನಟ ದರ್ಶನ್‌ ಅವರು ಬಿಡುಗಡೆ ಮಾಡಲಿದ್ದಾರೆ ಎಂದು ಆಂಕರ್‌ ಅನುಶ್ರೀ ನಿರೂಪಣೆ ಮಾಡಿದಾಗ ನಟ ದರ್ಶನ್‌ "ನಮ್ಮ ಸಿನಿಮಾದ ಟ್ರೈಲರ್‌ ನಾವೇ ಬಿಡುಗಡೆ ಮಾಡಿದರೆ ಹೇಗೆ, ಸೌಮ್ಯ ವೇದಿಕೆ ಮೇಲೆ ಬಾರಮ್ಮ" ಎಂದು ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಸೌಮ್ಯರನ್ನು ನಟ ದರ್ಶನ್‌ ವೇದಿಕೆಗೆ ಆಹ್ವಾನಿಸಿದರು. ವೇದಿಕೆಗೆ ಸೌಮ್ಯರನ್ನು ಕೈ ಹಿಡಿದು ಆಹ್ವಾನಿಸಿದ ನಟ ದರ್ಶನ್‌ "ಪ್ಲೇ ಮಾಡು ಚಿನ್ನ" ಎಂದು ಟ್ರೈಲರ್‌ ಲಾಂಚ್‌ ಮಾಡಿಸಿದರು.

"ಸಂಗೊಳ್ಳಿ ರಾಯಣ್ಣನ ಬಗ್ಗೆ ನಿಮಗೆಲ್ಲರಿಗೂ ಪ್ರೀತಿಯಿದೆ. ಅಂತಹ ಸಂಗೊಳ್ಳಿ ರಾಯಣ್ಣ, ಯುಜಮಾನ ನಮ್ಮ ಚಿತ್ರದ ಬೆನ್ನೆಲುಬು. ತಮ್ಮ ಸಾವಿರಾರು ಅಭಿಮಾನಿಗಳನ್ನು ಭೇಟಿ ಮಾಡುವ ಸಲುವಾಗಿ ನಿನ್ನೆ ರಾತ್ರಿ ಗುಜರಾತ್‌ನಲ್ಲಿ ಶೂಟಿಂಗ್‌ ಮುಗಿಸಿಕೊಂಡು ಇಲ್ಲಿಗೆ ಬಂದಿದ್ದಾರೆ. ಇದೇ ರೀತಿ ನಮ್ಮ ಪಕ್ಕದ ಊರಿನ ಯೋಗರಾಜ್‌ ಭಟ್ಟರು, ಇವರಿಬ್ಬರು ಸೇರಿ ಉತ್ತರ ಕರ್ನಾಟಕದ ಮಣ್ಣಿನ ಸೊಗಸನ್ನು ಇಟ್ಟುಕೊಂಡು ಚಿತ್ರ ಮಾಡಿದ್ದಾರೆ. ಮೊದಲಿನ ಗರಡಿ ಈಗ ಜಿಮ್‌ ಆಗಿ ಪರಿವರ್ತನೆಯಾಗಿದೆ. ಮತ್ತೆ ಜಿಮ್‌ ಗರಡಿಯಾಗಿ ಪರಿವರ್ತನೆಯಾಗಲಿದೆ. ಒಂದು ಉತ್ತಮವಾದ ಚಿತ್ರ ಈ ಗರಡಿ" ಎಂದು ಬಿಸಿ ಪಾಟೀಲ್‌ ಅಭಿಪ್ರಾಯಪಟ್ಟಿದ್ದಾರೆ.

ಹೇಗಿದೆ ಗರಡಿ ಚಿತ್ರದ ಟ್ರೈಲರ್‌

ಗರಡಿ ಚಿತ್ರದ ಮೂಲಕ ಜನರಿಗೆ ಭರ್ಜರಿ ಮನರಂಜನೆ, ಸಾಹಸ, ಕನ್ನಡ ನಾಡಿನ ನೆಲದ ಸೊಗಡು, ಕೌತುಕದ ಕಥೆಯೊಂದನ್ನು ಉಣಬಡಿಸುವ ಎಲ್ಲಾ ಸೂಚನೆಗಳನ್ನು ಗರಡಿ ಚಿತ್ರದ ಟ್ರೈಲರ್‌ನಲ್ಲಿ ಕಾಣಬಹುದು. "ಮೈಯಲ್ಲಿ ಶಕ್ತಿ ಇದೆ ಎಂದು ಕ್ರಿಮಿನಲ್‌ ಕೆಲಸ ಮಾಡಬಾರದು ಪೈಲ್ವಾನ್‌ಗಳು. ಗರಡಿ ಮನೆ ಮರ್ಯಾದೆ ತೆಗಿಬಾರದು" ಎಂಬ ಮಾತಿನಿಂದಲೇ ಆರಂಭವಾಗುವ ಟ್ರೈಲರ್‌ ಈ ಚಿತ್ರದಲ್ಲಿ ಅಪರಾಧವೊಂದು ಘಟಿಸುವ ಸೂಚನೆ ನೀಡಲಾಗಿದೆ. "ಒಂದು ಕಾಲದಲ್ಲಿ ಗರಡಿ ಮನೆಯನ್ನು ಪೊಲೀಸ್‌ ಸ್ಟೇಷನ್‌ ಅನ್ನುತ್ತಿದ್ದರು. ಗರಡಿ ಊರು ಕಾಯುತ್ತಿತ್ತು. ಬಳಿಕ ಟ್ರೈಲರ್‌ ಗರಡಿ ಮನೆಯೊಳಗಿನ ಕುಸ್ತಿ, ಪ್ರೀತಿಕಥೆ, ಅಪರಾಧದ ಕುರಿತ ಹುಡುಕಾಟ ಇತ್ಯಾದಿಗಳತ್ತ ತೆರೆದುಕೊಳ್ಳುತ್ತದೆ. ಹಿನ್ನೆಲೆ ಸಂಗೀತ, ಸಿನಿಮಾಟೊಗ್ರಫಿಯೂ ಸೂಪರ್‌ ಆಗಿರಬಹುದಾದ ಸೂಚನೆಯನ್ನು ಟ್ರೈಲರ್‌ ನೀಡಿದೆ.

ಗರಡಿ ಚಿತ್ರದ ಟ್ರೈಲರ್‌ ವೀಕ್ಷಿಸಿ

ನಟ ಸೂರ್ಯ ಅವರು ಗರಡಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕ ನಟನಾಗಿ ಪ್ರವೇಶ ಮಾಡಿದ್ದಾರೆ. ನಟ ದರ್ಶನ್‌ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಗರಡಿ ಚಿತ್ರದ ಟ್ರೈಲರ್‌ನಲ್ಲೂ ನಟ ದರ್ಶನ್‌ ಕಾಣಿಸಿಕೊಂಡಿದ್ದಾರೆ. ಕನ್ನಡ ಗರಡಿ ಸಿನಿಮಾ ನವೆಂಬರ್‌ 10ರಂದು ಬಿಡುಗಡೆಯಾಗಲಿದೆ. ಸೌಮ್ಯ ಫಿಲಂಸ್‌ ಹಾಗೂ ಕೌರವ ಪ್ರೊಡಕ್ಷನ್‌ ಹೌಸ್‌ ಲಾಂಛನದಲ್ಲಿ ವನಜಾ ಪಾಟೀಲ್‌ ನಿರ್ಮಿಸಿದ ಗರಡಿ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸುರೇಶ್‌ ಸಂಕಲನ, ನಿರಂಜನ್‌ ಬಾಬು ಛಾಯಾಗ್ರಹಣ ಇರುವ ಈ ಚಿತ್ರದ ವಿತರಣಾ ಹಕ್ಕನ್ನು ರಿಲಯೆನ್ಸ್‌ ಎಂಟರ್‌ಟೇನ್‌ಮೆಂಟ್‌ ಪಡೆದಿದೆ. ಸೃಷ್ಟಿ ಪಾಟೀಲ್‌ ಅವರು ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಸೂರ್ಯ ನಾಯಕನಟನಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಸೋನಾಲ್‌ ಮೊಂತೆರೊ, ಬಿ.ಸಿ.ಪಾಟೀಲ್, ರವಿಶಂಕರ್, ಧರ್ಮಣ್ಣ, ಸುಜಯ್ ಬೇಲೂರು, ರಾಘವೇಂದ್ರ, ಚೆಲುವರಾಜ್, ತೇಜಸ್ವಿನಿ ಪ್ರಕಾಶ್, ನಯನ ಸೇರಿದಂತೆ ಹಲವು ಕಲಾವಿದದರು ಈ ಚಿತ್ರದಲ್ಲಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ