ಕನ್ನಡ ಸುದ್ದಿ  /  ಮನರಂಜನೆ  /  Kaatera: ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ರಿಷಬ್‌ ಶೆಟ್ಟಿ; ಕಾಂತಾರ ನಟನಿಗೆ ಧನ್ಯವಾದ ಹೇಳಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌

Kaatera: ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ರಿಷಬ್‌ ಶೆಟ್ಟಿ; ಕಾಂತಾರ ನಟನಿಗೆ ಧನ್ಯವಾದ ಹೇಳಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌

Praveen Chandra B HT Kannada

Dec 19, 2023 12:50 PM IST

Kaatera: ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ರಿಷಬ್‌ ಶೆಟ್ಟಿ; ಧನ್ಯವಾದ ಹೇಳಿದ ದರ್ಶನ್‌ (ಸಂಗ್ರಹ ಚಿತ್ರ)

    • ಕಾಟೇರ ಸಿನಿಮಾದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ ಕಾಂತಾರ ನಟ, ನಿರ್ದೇಶಕ ರಿಷಬ್‌ ಶೆಟ್ಟಿಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಧನ್ಯವಾದ ತಿಳಿಸಿದ್ದಾರೆ. ಕಾಟೇರಾ ಸಿನಿಮಾದ ಟ್ರೈಲರ್‌ ಕುರಿತು ರಿಷಬ್‌ ಶೆಟ್ಟಿ ಏನು ಹೇಳಿದ್ದಾರೆ? ಉಳಿದ ನಟನಟಿಯರು ಏನು ಹೇಳಿದ್ದಾರೆ ಎಂಬ ವಿವರ ಇಲ್ಲಿದ್ದಾರೆ.
Kaatera: ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ರಿಷಬ್‌ ಶೆಟ್ಟಿ; ಧನ್ಯವಾದ ಹೇಳಿದ ದರ್ಶನ್‌ (ಸಂಗ್ರಹ ಚಿತ್ರ)
Kaatera: ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ರಿಷಬ್‌ ಶೆಟ್ಟಿ; ಧನ್ಯವಾದ ಹೇಳಿದ ದರ್ಶನ್‌ (ಸಂಗ್ರಹ ಚಿತ್ರ)

ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಸಾಕಷ್ಟು ಒಳ್ಳೆಯ ಬೆಳವಣಿಗೆಯಾಗುತ್ತಿದೆ. ಇತರೆ ನಟರ ಸಿನಿಮಾಗಳ ಕುರಿತು ಮೆಚ್ಚುಗೆಯ ಮಾತುಗಳನ್ನಾಡುವ ಮೂಲಕ ಪ್ರೋತ್ಸಾಹ ನೀಡುವ ಗುಣ ಹೆಚ್ಚುತ್ತಿದೆ. ಇತ್ತೀಚೆಗೆ ಕನ್ನಡದಲ್ಲಿ ಬಿಡುಗಡೆಯಾಗುವ ಸಿನಿಮಾಗಳಿಗೆ ಬೆಸ್ಟ್‌ ಆಫ್‌ ಲಕ್‌ ಎಂದು ಹೇಳುವ ಮೂಲಕ ಸಿನಿಮಾ ಕಲಾವಿದರು ಒಬ್ಬರಿಗೊಬ್ಬರು ಪ್ರೋತ್ಸಾಹ ನೀಡುತ್ತಿದ್ದಾರೆ. ಇದರಿಂದ ಅಭಿಮಾನಿಗಳಲ್ಲೂ ತಮ್ಮ ನೆಚ್ಚಿನ ನಟರು ಮತ್ತು ಇತರೆ ನಟರ ಸಿನಿಮಾಗಳ ಕುರಿತು ಆಸಕ್ತಿ ಹೆಚ್ಚುತ್ತಿದೆ. ಲಕ್ಷಾಂತರ ಫ್ಯಾನ್ಸ್‌ ಇರುವ ಕನ್ನಡ ಸೆಲೆಬ್ರಿಟಿಗಳು ಒಬ್ಬರಿಗೊಬ್ಬರು ಪ್ರೋತ್ಸಾಹ ನೀಡುವ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ಸಿನಿಮಾದ ಕುರಿತು ಮಾಹಿತಿ ಹೆಚ್ಚಿನ ಜನರಿಗೆ ತಲುಪಲು ನೆರವಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಸಂಗೀತಾ ಶೃಂಗೇರಿಗೆ ಹುಟ್ಟುಹಬ್ಬದ ಸಂಭ್ರಮ; ಡ್ರೋನ್‌ ಪ್ರತಾಪ್‌ಗೆ ರಾಖಿ ಕಟ್ಟಿ ಕಾಲಿಗೆ ಬಿದ್ದು ನಮಸ್ಕರಿಸಿದ 777 ಚಾರ್ಲಿ ಚೆಲುವೆ

ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಜತೆ ಕಿಶನ್‌ ಬಿಳಗಲಿ ನೀರಾಟ; ಯಾಕೆ ಗುರು ನಮ್‌ ಹೊಟ್ಟೆ ಉರಿಸ್ತಿಯಾ ಅಂದ್ರು ಫ್ಯಾನ್ಸ್‌

ರೌಡಿಗಳಿಂದ ಪಾರ್ಥನಿಗೆ ಪೆಟ್ಟು, ಜೈದೇವ್‌ ಮೇಲೆ ಶಕುಂತಲಾಗೆ ಸಿಟ್ಟು; ಗೌತಮ್‌-ಭೂಮಿಕಾರಿಗೆ ಚಿಕ್ಕಮಗಳೂರಿನಲ್ಲಿ ಹನಿಮೂನ್‌, ಅಮೃತಧಾರೆ ಸ್ಟೋರಿ

Brundavana Serial: ಪುಷ್ಪಾಳ ಚಿಂತೆಗೆ ಕಾರಣವಾಗಿದೆ ಭಾರ್ಗವಿ ಮಾತು; ಸತ್ಯಮೂರ್ತಿ ಕೈಯಲ್ಲಿ ಸಿಕ್ಕಿ ಬಿದ್ರು ಸಹನಾ-ಆಕಾಶ್‌

ಕಾಟೇರ ಟ್ರೈಲರ್‌ ಸೂಪರ್‌ ಎಂದ ರಿಷಬ್‌ ಶೆಟ್ಟಿ

ಕಾಟೇರ ಟ್ರೈಲರ್ ಸದ್ದು ಜೋರಾಗಿದೆ, ದರ್ಶನ್ ಸರ್ ಹೊಸ ಮಾಸ್ ಲುಕ್ ಅಭಿಮಾನಿಗಳಿಗೆ ಹಬ್ಬ ಆಗಲಿದೆ. ತರುಣ್ ಸುಧೀರ್, ರಾಕ್ಲೈನ್ ವೆಂಕಟೇಶ್ ಸರ್ ಗೆ ಅಭಿನಂದನೆಗಳು. ಕಾಟೇರ ಚಿತ್ರಕ್ಕೆ ಅತ್ಯುತ್ತಮ ಅಭೂತಪೂರ್ವ ಯಶಸ್ಸು ಸಿಗಲೆಂದು ಆಶಿಸುತ್ತೇನೆ ಎಂದು ನಟ ರಿಷಬ್‌ ಶೆಟ್ಟಿ ಅವರು ಕಾಟೇರ ಟ್ರೈಲರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದಕ್ಕೆ ದಚ್ಚು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು, "ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ" ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ ರಂಗದ ಖ್ಯಾತ ನಟ ಅಭಿಮಾನಿಗಳ ಪಾಲಿನ ಡಿ-ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಕ್‌ಲೈನ್ ವೆಂಕಟೇಶ ಅವರ ನಿರ್ಮಾಪಣೆ ಹಾಗೂ ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ "ಕಾಟೇರ" ಸಿನಿಮಾದ ಟ್ರೈಲರ್ ಪ್ರೀ-ರಿಲೀಸ್ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆದಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿನಿಮಾ ತಂಡಕ್ಕೆ ಶುಭ ಹಾರೈಸಿದೆನು ಎಂದು ರಾಜಕಾರಣಿ ಪ್ರಹ್ಲಾದ್‌ ಜೋಶಿ ಟ್ವಿಟ್‌ ಮಾಡಿದ್ದರು. ಇವರಿಗೂ ದರ್ಶನ್‌ ಧನ್ಯವಾದ ತಿಳಿಸಿದ್ದಾರೆ.

ಇದೇ ರೀತಿ ಶ್ರೀನಿ, ಡ್ಯಾನಿಶ್‌ ಸೇಠ್‌ ಸೇರಿದಂತೆ ಹಲವು ನಟರು, ನಿರ್ದೇಶಕರು ದರ್ಶನ್‌ ನಟನೆಯ ಕಾಟೇರ ಸಿನಿಮಾದ ಟ್ರೈಲರ್‌ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ತರುಣ್‌ ಸುದೀರ್‌ ನಿರ್ದೇಶನದ, ದರ್ಶನ್‌ ನಟನೆಯ ಬೃಹತ್‌ ಬ್ಲಾಕ್‌ಬಸ್ಟರ್‌ ಲೋಡಿಂಗ್‌ ಆಗುತ್ತಿದೆ" ಎಂದು ಪವನ್‌ ಕುಮಾರ್‌ ಒಡೆಯರ್‌ ಟ್ವೀಟ್‌ ಮಾಡಿದ್ದಾರೆ. ಮಾಸ್ ಗೆ ಇರೋದು ಒಂದೇ ಅಡ್ರೆಸ್ , ಅದು ಡಿ ಬಾಸ್ ಎಂದು ಮಂಸೋರೆ ಟ್ವೀಟ್‌ ಮಾಡಿದ್ದಾರೆ.

ಡಾಲಿ ಧನಂಜಯ್‌ ಕೂಡ ಕಾಟೇರ ಸಿನಿಮಾದ ಟ್ರೈಲರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಕಾಟೀರವು ರಾ, ಮಾಸ್‌ ಆಗಿದೆ. ಬಾಕ್ಸ್‌ ಆಫೀಸ್‌ ಲೂಟಿಯಾಗಲಿ" ಎಂದಿದ್ದಾರೆ. "ಇದರ ಟ್ರೇಲರ್‌ ಜೀವನಕ್ಕಿಂತ ದೊಡ್ಡದಾಗಿದೆ. ಈ ಸಿನಿಮಾ ಖಂಡಿತವಾಗಿಯೂ ಅಮೋಘವಾಗಿರಲಿದೆ. ತರುಣ್‌ ಸುಧೀರ್‌ ಅವರೇ ನಿಮ್ಮ ಕ್ರಿಯಾಶೀಲತೆ ನಮಗೆ ಅಚ್ಚರಿಯಾಗುತ್ತದೆ" ಎಂದು ಮೇಘನಾ ಗಾಂವ್ಕರ್‌ ಟ್ವೀಟ್‌ ಮಾಡಿದ್ದಾರೆ. ಹೀಗೆ ನಟ ರಿಷಬ್‌ ಶೆಟ್ಟ, ಧನಂಜಯ್‌ ಸೇರಿದಂತೆ ಸಾಕಷ್ಟು ಸಿನಿಮಾ ತಾರೆಯರು, ನಿರ್ದೇಶಕರು, ಅಭಿಮಾನಿಗಳು ಕಾಟೇರ ಸಿನಿಮಾಕ್ಕೆ ಶುಭ ಹಾರೈಸಿದ್ದಾರೆ. ಎಲ್ಲರಿಗೂ ದರ್ಶನ್‌ ತೂಗುದೀಪ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ