ಕನ್ನಡ ಸುದ್ದಿ  /  ಮನರಂಜನೆ  /  Darshan: ಪುಣ್ಯಾತ್ಮ ಊರಿಗೆ ಕಾಲಿಟ್ಟ, ಮಳೆಯೂ ಬಂತು! ಮಂಡ್ಯದ ಮಳವಳ್ಳಿಯಲ್ಲಿ ದರ್ಶನ್‌ ಪ್ರಚಾರಕ್ಕೆ ತಂಪೆರೆದ ಮೊದಲ ಮಳೆ, ಫ್ಯಾನ್ಸ್‌ ಸಂಭ್ರಮ

Darshan: ಪುಣ್ಯಾತ್ಮ ಊರಿಗೆ ಕಾಲಿಟ್ಟ, ಮಳೆಯೂ ಬಂತು! ಮಂಡ್ಯದ ಮಳವಳ್ಳಿಯಲ್ಲಿ ದರ್ಶನ್‌ ಪ್ರಚಾರಕ್ಕೆ ತಂಪೆರೆದ ಮೊದಲ ಮಳೆ, ಫ್ಯಾನ್ಸ್‌ ಸಂಭ್ರಮ

Apr 19, 2024 04:21 PM IST

Darshan: ಪುಣ್ಯಾತ್ಮ ಊರಿಗೆ ಕಾಲಿಟ್ಟ, ಮಳೆಯೂ ಬಂತು! ಮಂಡ್ಯದಲ್ಲಿ ದರ್ಶನ್‌ ಪ್ರಚಾರಕ್ಕೆ ತಂಪೆರೆದ ಮೊದಲ ಮಳೆ, ಫ್ಯಾನ್ಸ್‌ ಸಂಭ್ರಮ

    • ಮಂಡ್ಯ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಪರವಾಗಿ ನಟ ದರ್ಶನ್‌ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಮಳವಳ್ಳಿಯಲ್ಲಿ ಹೀಗೆ ಪ್ರಚಾರದಲ್ಲಿದ್ದಾಗ ಮಳೆಯ ಆಗಮನವೂ ಆಗಿದೆ. ಮೊದಲ ಮಳೆಗೆ ಜನರೂ ಸಂಭ್ರಮದಲ್ಲಿ ಕುಣಿದಿದ್ದಾರೆ. ಪುಣ್ಯಾತ್ಮ ದರ್ಶನ್ ಕಾಲ್ಗುಣ ಎಂದೂ ಫ್ಯಾನ್ಸ್‌ ಕಾಮೆಂಟ್‌ ಹಾಕುತ್ತಿದ್ದಾರೆ.  
Darshan: ಪುಣ್ಯಾತ್ಮ ಊರಿಗೆ ಕಾಲಿಟ್ಟ, ಮಳೆಯೂ ಬಂತು! ಮಂಡ್ಯದಲ್ಲಿ ದರ್ಶನ್‌ ಪ್ರಚಾರಕ್ಕೆ ತಂಪೆರೆದ ಮೊದಲ ಮಳೆ, ಫ್ಯಾನ್ಸ್‌ ಸಂಭ್ರಮ
Darshan: ಪುಣ್ಯಾತ್ಮ ಊರಿಗೆ ಕಾಲಿಟ್ಟ, ಮಳೆಯೂ ಬಂತು! ಮಂಡ್ಯದಲ್ಲಿ ದರ್ಶನ್‌ ಪ್ರಚಾರಕ್ಕೆ ತಂಪೆರೆದ ಮೊದಲ ಮಳೆ, ಫ್ಯಾನ್ಸ್‌ ಸಂಭ್ರಮ

Darshan: ನಟ ದರ್ಶನ್‌ ಕಳೆದ ಕೆಲ ದಿನಗಳಿಂದ ಶೂಟಿಂಗ್‌ನಿಂದ ದೂರವೇ ಉಳಿದಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಡೆವಿಲ್‌ ಸಿನಿಮಾದ ಚಿತ್ರೀಕರಣದಲ್ಲಿ ದರ್ಶನ್‌ ಭಾಗವಹಿಸಬೇಕಿತ್ತು. ಒಂದಷ್ಟು ದಿನಗಳ ಕೆಲಸವೂ ಮುಗಿದಿರುತ್ತಿತ್ತು. ಆದರೆ, ಕೈಗೆ ಫ್ರ್ಯಾಕ್ಚರ್‌ ಆದ ಹಿನ್ನೆಲೆಯಲ್ಲಿ ಶೂಟಿಂಗ್‌ಗೆ ಬ್ರೇಕ್‌ ಹಾಕಬೇಕಾಯ್ತು. ಅದಾದ ಮೇಲೆ ಕೈ ನೋವಿನ ನಡುವೆಯೂ ಮಂಡ್ಯದಲ್ಲಿ ಸುಮಲತಾ ಅಂಬರೀಶ್‌ ಅವರ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದರು. ಅದಾದ ಮೇಲೆ ಕೈಗೆ ಸರ್ಜರಿ ಮಾಡಿಸಿಕೊಂಡು ಮರಳಿದರು.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾದ ಮೊದಲ ಹಾಡು ಬಿಡುಗಡೆ; ಬಾಯಿಗೆ ಬಾರದೆ ಮಾತು ಹಾಡನ್ನು ಕೇಳೋಣ ಬನ್ನಿ

ಅಪಘಾತದಲ್ಲಿ ಮೃತಪಟ್ಟ ಪವಿತ್ರಾ ಜಯರಾಮ್‌ ನೆನೆದು ಪತಿ ಚಂದ್ರಕಾಂತ್‌ ಭಾವುಕ ಬರಹ; ಚಂದು ಅಣ್ಣನ ಅಳು ನೋಡಲಾಗುತ್ತಿಲ್ಲ ಎದ್ದು ಬಾ ಅಕ್ಕ

ನೈಂಟಿ ಬಿಡಿ ಮನೀಗ್ ನಡಿ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌; ವೈಜನಾಥ ಬಿರಾದಾರ್ ನಟನೆಯ ಸಿನಿಮಾ ಇಲ್ಲಿದೆ ಉಚಿತವಾಗಿ ನೋಡಿ

ಟರ್ಬೊ ಟ್ರೇಲರ್‌ ಬಿಡುಗಡೆ: ಮಮ್ಮುಟ್ಟಿ ಜತೆ ರಾಜ್‌ ಬಿ ಶೆಟ್ಟಿ ನಟಿಸಿರುವ ಪ್ಯಾನ್‌ ಇಂಡಿಯಾ ಚಿತ್ರ ಮುಂದಿನ ವಾರ ರಿಲೀಸ್‌

ಇನ್ನೇನು ಕೊಂಚ ರೆಸ್ಟ್‌ ಮಾಡಿದರಾಯ್ತು ಎನ್ನುವಷ್ಟರಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್‌ ಅವರ ಸಾವಾಯಿತು. ಕೈ ನೋವಿನ ನಡುವೆಯೇ ಆಪ್ತ ನಿರ್ಮಾಪಕರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ಇದಾದ ಬಳಿಕ ಕರ್ನಾಟಕದ ಕುಳ್ಳ ದ್ವಾರಕೀಶ್‌ ಅವರ ಸಾವಿನಿಂದಲೂ ದರ್ಶನ್‌ ಕೊಂಚ ನಲುಗಿದರು. ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಮರಳಿದರು. ಈ ನಡುವೆ ಈಗ ಚುನಾವಣೆಯ ಪ್ರಚಾರ ಕಣಕ್ಕೂ ಧುಮುಕಿದ್ದಾರೆ ದರ್ಶನ್‌. ಮಂಡ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಕಣಕ್ಕೆ ಇಳಿದಿದ್ದಾರೆ.

ಕಳೆದ ಬಾರಿ ಬಿಜೆಪಿ ಈ ಸಲ ಕಾಂಗ್ರೆಸ್‌

ದರ್ಶನ್‌ ಈ ಹಿಂದೆ ಹೇಳಿದಂತೆ, ನಾನು ಯಾವುದೇ ಕಾರಣಕ್ಕೂ ಪಕ್ಷ ನೋಡಿ ಪ್ರಚಾರಕ್ಕೆ ಬರುವುದಿಲ್ಲ. ಅದರ ಬದಲಿಗೆ ವ್ಯಕ್ತಿ ನೋಡಿ ಪ್ರಚಾರಕ್ಕೆ ಬರುವೆ ಎಂದಿದ್ದರು. ಅದರಂತೆ ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಶ್‌ ಪರವಾಗಿ ದರ್ಶನ್‌ ಮತ್ತು ಯಶ್‌ ಮಂಡ್ಯ ಜಿಲ್ಲೆಯಾದ್ಯಂತ ಸಂಚರಿಸಿ ಬಿರುಸಿನ ಪ್ರಚಾರ ನಡೆಸಿದ್ದರು. ಅದರ ಪರಿಣಾಮ ಬಹುಮತದಿಂದಲೇ ಸುಮಲತಾ ಗೆದ್ದು ಬೀಗಿದ್ದರು. ಈಗ ಇದೇ ದರ್ಶನ್‌, ಈ ಸಲ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್‌ ಚಂದ್ರ) ಪರವಾಗಿ ಕ್ಯಾಂಪೇನ್‌ ಆರಂಭಿಸಿದ್ದಾರೆ.

ಎಲ್ಲೆಲ್ಲಿ ಪ್ರಚಾರ ಮಾಡಿದ್ರು

ಗುರುವಾರದಿಂದಲೇ ಬೆಳಗ್ಗೆ 9:30ರಿಂದ ಮಂಡ್ಯ ಜಿಲ್ಲೆಯ ಹಲಗೂರಿನಿಂದ ಶುರುವಾದ ಪ್ರಚಾರ, ಹುಸ್ಕೂರು, ಮಳವಳ್ಳಿ, ಬೆಳಕವಾಡಿ, ಬೊಪ್ಪೇಗೌಡನಪುರ, ಸರಗೂರು ಸೇರಿ ಹತ್ತಾರು ಗ್ರಾಮಗಳಿಗೆ ತೆರಳಿ ತೆರೆದ ವಾಹನವನ್ನೇರಿ ಅಪಾರ ಜನಬೆಂಬಲದ ಜತೆಗೆ ಸ್ಟಾರ್‌ ಚಂದ್ರು ಅವರನ್ನು ಗೆಲ್ಲಿಸಿ ಎಂದು ಪ್ರಚಾರ ಮಾಡಿದ್ದಾರೆ. ದರ್ಶನ್‌ ಆಗಮಿಸಿದ ಸುದ್ದಿ ತಿಳಿದ ಫ್ಯಾನ್ಸ್‌ ದಂಡೇ ಹರಿದು ಬಂದಿತ್ತು. ಹೋದಲ್ಲೆಲ್ಲ ಜೈ ಡಿ ಬಾಸ್‌ ಜೈ ಡಿಬಾಸ್‌ ಎಂಬ ಜೈಘೋಷ ಮೊಳಗಿದವು. ಈ ನಡುವೆ ಮಂಡ್ಯ ಜಿಲ್ಲೆ ಮೇಲೆ ಮಳೆರಾಯ ತನ್ನ ಕೃಪೆಯನ್ನೂ ತೋರಿದ.

ಪುಣ್ಯಾತ್ಮ ಕಾಲಿಟ್ಟ ಮಳೆ ಬಂತು

ಇನ್ನು ಈ ಸಲ ರಾಜ್ಯ ಬರಗಾಲ ಅನುಭವಿಸಿದೆ. ಕಳೆದ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ನೀರಿನ ಅಭಾವ ತಲೆದೂರಿತ್ತು. ಈ ನಡುವೆ ಬಿರು ಬೇಸಿಗೆಯಲ್ಲೂ ರಾಜ್ಯದ ಹಲವೆಡೆ ಮಳೆರಾಯ ಕಾದ ನೆಲವನ್ನು ತಂಪು ಮಾಡುತ್ತಿದ್ದಾನೆ. ಆದರೆ, ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಮಳೆಯಾದ ಉದಾಹರಣೆ ಇರಲಿಲ್ಲ. ಹೀಗಿರುವಾಗಲೇ ನಟ ದರ್ಶನ್‌ ಮಂಡ್ಯದಲ್ಲಿ ಅಬ್ಬರದ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಜೋರು ಮಳೆ ಸುರಿದಿದೆ. ಮಳೆಯ ನಡುವೆಯೇ ದರ್ಶನ್‌ ಮಾತು ಕೇಳಿದ್ದಾರೆ ಮತದಾರರು. ಈ ಮಳೆಯ ವಿಡಿಯೋವನ್ನು ಪೋಸ್ಟ್‌ ಮಾಡಿದ ಕೆಲವರು ಪುಣ್ಯಾತ್ಮ ಊರಿಗೆ ಕಾಲಿಟ್ಟ, ಮಳೆಯೂ ಬಂತು ಎಂದು ಸಂಭ್ರಮಿಸುತ್ತಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ