ಕನ್ನಡ ಸುದ್ದಿ  /  ಮನರಂಜನೆ  /  Alia Bhatt: ನಾಯಿಗೆ ರಾಕ್ಷಸಿ ಕೆಲಸದಾಕೆಯಿಂದ ಕ್ರೂರ ಹೊಡೆತ; ಇಂತಹ ಹೃದಯ ಹೀನರನ್ನು ಕಂಡರೆ... ಆಲಿಯಾ ಭಟ್‌ ಪ್ರತಿಕ್ರಿಯೆ

Alia Bhatt: ನಾಯಿಗೆ ರಾಕ್ಷಸಿ ಕೆಲಸದಾಕೆಯಿಂದ ಕ್ರೂರ ಹೊಡೆತ; ಇಂತಹ ಹೃದಯ ಹೀನರನ್ನು ಕಂಡರೆ... ಆಲಿಯಾ ಭಟ್‌ ಪ್ರತಿಕ್ರಿಯೆ

ನಾಯಿಗೆ ಕೆಲಸದಾಕೆಯು ಕ್ರೂರವಾಗಿ ಹೊಡೆಯುವ ವಿಡಿಯೋವನ್ನು ಪ್ರಾಣಿಪ್ರಿಯೆ ಬಾಲಿವುಡ್‌ ನಟಿ ಆಲಿಯಾ ಭಟ್‌ ಹಂಚಿಕೊಂಡಿದ್ದಾರೆ. ಇಂತಹ ಕ್ರೂರರು ಕಂಡರೆ ತಕ್ಷಣ ವಿಡಿಯೋ ಮಾಡಿ, ಇಂತವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದಿದ್ದಾರೆ.

ಮುಂಬೈ ಬೀದಿಯಲ್ಲಿ ಕೆಲಸದಾಕೆಯಿಂದ ನಾಯಿಗೆ ಥಳಿತ
ಮುಂಬೈ ಬೀದಿಯಲ್ಲಿ ಕೆಲಸದಾಕೆಯಿಂದ ನಾಯಿಗೆ ಥಳಿತ

ಬಹುತೇಕ ನಟಿಯರಿಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಮನೆಯ ಒಬ್ಬರು ಸದಸ್ಯರಂತೆ ನಾಯಿಯನ್ನು ನೋಡಿಕೊಳ್ಳುತ್ತಾರೆ. ಕೆಲವು ನಟಿಯರು ಪ್ರಾಣಿಗಳ ಬಗ್ಗೆ ವಿಶೇಷವಾದ ಪ್ರೀತಿಯನ್ನಿಟ್ಟುಕೊಂಡಿದ್ದಾರೆ. ಬೀದಿನಾಯಿಗಳ ರಕ್ಷಣೆ, ಗಾಯಗೊಂಡ ಪ್ರಾಣಿಗಳ ಕುರಿತು ಕಾಳಜಿ ಇತ್ಯಾದಿಗಳಲ್ಲಿ ತೊಡಗಿದ್ದಾರೆ. ಬಾಲಿವುಡ್‌ ನಟಿ ಆಲಿಯಾ ಭಟ್‌ಗೂ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಇತ್ತೀಚೆಗೆ ಗೂಳಿಯೊಂದು ಬೀದಿನಾಯಿಗಳ ಮೇಲೆ ದಾಳಿ ಮಾಡುತ್ತಿದ್ದಾಗ ಬಾಲಕನೊಬ್ಬ ಆ ನಾಯಿಗಳನ್ನು ರಕ್ಷಣೆ ಮಾಡುವ ವಿಡಿಯೋವನ್ನು ನಟಿ ಅನುಷ್ಕಾ ಶರ್ಮಾ ಹಂಚಿಕೊಂಡಿದ್ದರು. ಇದೀಗ ಆಲಿಯಾ ಭಟ್‌ ಕೂಡ ಪ್ರಾಣಿಗಳ ಕುರಿತು ಪ್ರೀತಿ ವ್ಯಕ್ತಪಡಿಸಿ ವಿಡಿಯೋವೊಂದನ್ನು ಮರುಪೋಸ್ಟ್‌ ಮಾಡಿದ್ದಾರೆ. ನಾಯಿಯೊಂದಕ್ಕೆ ಕೆಲಸದಾಕೆ ಹೊಡೆಯುತ್ತಿದ್ದ ವಿಡಿಯೋಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸೋಫಿ ಚೌಧರಿ ಎಂಬ ಗಾಯಕಿಯು ಈ ವಿಡಿಯೋವನ್ನು ಹಂಚಿಕೊಂಡಿದ್ದರು.

ಟ್ರೆಂಡಿಂಗ್​ ಸುದ್ದಿ

ಸೋಫಿ ಚೌಧರಿ ವಿಡಿಯೋ

ಮುಂಬೈ ಫೂಟ್‌ಫಾತ್‌ನಲ್ಲಿ ಮಹಿಳೆಯೊಬ್ಬಳು ನಾಯಿಯೊಂದಕ್ಕೆ ಹೊಡೆಯುವ ವಿಡಿಯೋವನ್ನು ಹಂಚಿಕೊಂಡಿದ್ದರು. "ಮಹಿಳೆಯೊಬ್ಬರು ನಾಯಿಗೆ ಬೆತ್ತದಿಂದ ಹೊಡೆಯುವ ವಿಡಿಯೋಕ್ಕೆ ಸಂಬಂಧಪಟ್ಟಂತೆ ಹೊಸ ಅಪ್‌ಡೇಟ್‌. ಈ ರಾಕ್ಷಸಿಯಿಂದ ಕ್ರೂರವಾಗಿ ಥಳಿಸಲ್ಪಟ್ಟ ಸುಂದರವಾದ ಬೀಗಲ್‌ ಬೀರಾನ ಮಾಲೀಕರ ಮಾಹಿತಿ ದೊರಕಿದೆ. ಪಾರ್ಥ್‌ ಮತ್ತು ಶ್ವೇತಾ ಅವರನ್ನು ಸಂಪರ್ಕಿಸಲು ಯಶಸ್ವಿಯಾಗಿದ್ದೇನೆ. ಅವರು ಈ ವಿಡಿಯೋ ನೋಡಿರಲಿಲ್ಲ. ಇದನ್ನು ನೋಡಿ ಆಘಾತ ವ್ಯಕ್ತಪಡಿಸಿದ್ದಾರೆ" ಎಂದು ಸೋಫಿಯಾ ಚೌಧರಿ ಪೋಸ್ಟ್‌ ಮಾಡಿದ್ದಾರೆ. ಇದೇ ಪೋಸ್ಟ್‌ ಅನ್ನು ಆಲಿಯಾ ಭಟ್‌ ಹಂಚಿಕೊಂಡಿದ್ದಾರೆ.

ಆಲಿಯಾ ಭಟ್‌ ಇನ್‌ಸ್ಟಾಗ್ರಾಂ ಸ್ಟೋರಿ
ಆಲಿಯಾ ಭಟ್‌ ಇನ್‌ಸ್ಟಾಗ್ರಾಂ ಸ್ಟೋರಿ

"ಈ ನಾಯಿಗೆ ಆರು ತಿಂಗಳ ಪ್ರಾಯವೆಂದು ನನಗೆ ಪಾರ್ಥ್‌ ಹೇಳಿದ್ದಾರೆ. ಈ ದಂಪತಿ ದುಬೈ ವಾಸಿಗಳು, ನಾಳೆ(ಶುಕ್ರವಾರ) ದುಬೈನಿಂದ ಬರಲಿದ್ದಾರೆ. ಈಗಲೂ ಆ ಕೆಲಸದಾಕೆ ಅವರ ಉದ್ಯೋಗಿ ಎಂಬ ಮಾಹಿತಿ ದೊರಕಿದೆ" ಎಂದು ನಿನ್ನೆ ಸೋಷಿಯಲ್‌ ಮೀಡಿಯಾದಲ್ಲಿ ಸೋಫಿ ಮಾಹಿತಿ ನೀಡಿದ್ದರು.

ಈಗ ಆ ನಾಯಿಯನ್ನು ಪ್ರಾಣಿ ಕಾಳಜಿ ಕೇಂದ್ರದಲ್ಲಿ ಸುರಕ್ಷಿತವಾಗಿಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. "ಬೀರಾ ಈಗ ಜೆಹಾನ್‌ ಕ್ಯಾನಿನ್‌ ಸೆಂಟರ್‌ (ಮುಂಬೈ)ನಲ್ಲಿ ಇದ್ದಾನೆ. ನಾಳೆ ಬಂದ ಪೆಟ್‌ ಮಾಲಿಕರು ಕೆಲಸದಾಕೆಯನ್ನು ಓಡಿಸಿ ಬೀರನ ಕಾಳಜಿ ವಹಿಸುವ ನಿರೀಕ್ಷೆಯಿದೆ" ಎಂದು ಸೋಫಿ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.

ಆಲಿಯಾ ಭಟ್‌ ಏನಂದ್ರು?

ಈ ವಿಡಿಯೋ ಪೋಸ್ಟ್‌ ಅನ್ನು ಆಲಿಯಾ ಭಟ್‌ ಹಂಚಿಕೊಂಡಿದ್ದರು. "ಮುಂದಿನ ಬಾರಿ ಈ ರೀತಿ ಯಾರಾದರೂ ಡಾಗ್‌/ಪೆಟ್‌ ಅಥವಾ ಯಾವುದೇ ಪ್ರಾಣಿಗೆ ಹೊಡೆಯುವುದನ್ನು ಕಂಡರೆ ತಕ್ಷಣ ವಿಡಿಯೋ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಹಂಚಿಕೊಳ್ಳಿ. ಇಂತಹ ಜನರಿಗೆ ಕಠಿಣ ಶಿಕ್ಷೆ ದೊರಕುವಂತೆ ಮಾಡಬೇಕು. ನಾವು ಮನುಷ್ಯತ್ವ ಕಳೆದುಕೊಳ್ಳಬಾರದು" ಎಂದು ಆಲಿಯಾ ಭಟ್‌ ಪೋಸ್ಟ್‌ ಮಾಡಿದ್ದರು.

ಈ ಹಿಂದೆಯೂ ಆಲಿಯಾ ಭಟ್‌ ಇದೇ ರೀತಿ ಕಾಳಜಿ ವ್ಯಕ್ತಪಡಿಸಿದ್ದರು. ಈ ವರ್ಷ ಫೆಬ್ರವರಿಯಲ್ಲಿ ಥಾಣೆಯಲ್ಲಿ ಪಶುಚಿಕಿತ್ಸೆ ಕೇಂದ್ರದ ಉದ್ಯೋಗಿಯೊಬ್ಬರು ನಾಯಿಗೆ ಹೊಡೆಯುವ ವಿಡಿಯೋ ವೈರಲ್‌ ಆಗಿತ್ತು. ಟೋಫೂ ಹೆಸರಿನ ನಾಯಿಗೆ ಇಬ್ಬರು ಉದ್ಯೋಗಿಗಳು ಮನಬಂದಂತೆ ಹೊಡೆಯುತ್ತಿದ್ದರು. "ಹೃದಯಹೀನರು" ಎಂದು ಈ ವಿಡಿಯೋವನ್ನು ಆಲಿಯಾ ಭಟ್‌ ಹಂಚಿಕೊಂಡಿದ್ದರು.

IPL_Entry_Point