ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಸಿಹಿ ಹುಟ್ಟಿನ ಸತ್ಯ ಮುಚ್ಚಿಟ್ಟ ಚಿಕ್ಕಿಯ ಪ್ಲಾನ್‌ ಏನು? ಸೀತಾ ರಾಮನ ಹಾದಿಗೆ ಮುಳ್ಳಾಗ್ತಿದ್ದಾಳೆ ಊಸರವಳ್ಳಿ ಭಾರ್ಗವಿ

Seetha Rama Serial: ಸಿಹಿ ಹುಟ್ಟಿನ ಸತ್ಯ ಮುಚ್ಚಿಟ್ಟ ಚಿಕ್ಕಿಯ ಪ್ಲಾನ್‌ ಏನು? ಸೀತಾ ರಾಮನ ಹಾದಿಗೆ ಮುಳ್ಳಾಗ್ತಿದ್ದಾಳೆ ಊಸರವಳ್ಳಿ ಭಾರ್ಗವಿ

ಶತಾಯ ಗತಾಯ ರಾಮ ಮತ್ತು ಸೀತಾ ಮದುವೆ ಮುರಿಯುವ ಪ್ಲಾನ್‌ ಹಾಕುತ್ತಿದ್ದಾಳೆ ಭಾರ್ಗವಿ. ಆಸ್ತಿಯನ್ನೂ ತನಗೇ ದಕ್ಕಬೇಕು ಎಂದೂ ಷಡ್ಯಂತ್ರ ಹೆಣೆಯುತ್ತಿದ್ದಾಳೆ. ಆದರೆ ಅದೇ ರಾಮನಿಗೆ ಒಳ್ಳೆಯದಾಗಬೇಕೆಂದು ಹಲವರು ಅವನ ಬೆನ್ನಿಗಿದ್ದಾರೆ.

Seetha Rama Serial: ಸಿಹಿ ಹುಟ್ಟಿನ ಸತ್ಯ ಮುಚ್ಚಿಟ್ಟ ಚಿಕ್ಕಿಯ  ಪ್ಲಾನ್‌ ಏನು? ಸೀತಾ ರಾಮನ ಹಾದಿಗೆ ಮುಳ್ಳಾಗ್ತಿದ್ದಾಳೆ ಊಸರವಳ್ಳಿ ಭಾರ್ಗವಿ
Seetha Rama Serial: ಸಿಹಿ ಹುಟ್ಟಿನ ಸತ್ಯ ಮುಚ್ಚಿಟ್ಟ ಚಿಕ್ಕಿಯ ಪ್ಲಾನ್‌ ಏನು? ಸೀತಾ ರಾಮನ ಹಾದಿಗೆ ಮುಳ್ಳಾಗ್ತಿದ್ದಾಳೆ ಊಸರವಳ್ಳಿ ಭಾರ್ಗವಿ

Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಆಸ್ತಿಯ ವಿಚಾರಕ್ಕೆ ಭಾರ್ಗವಿ ರೌದ್ರಾವತಾರ ತಾಳಿದ್ದಾಳೆ. ಮಾವಯ್ಯ ಸೂರ್ಯ ಪ್ರಕಾಶ್‌ ವಿಲ್‌ ವಿಚಾರವಾಗಿ ಲಾಯರ್‌ ಹತ್ತಿರ ಮಾತನಾಡಿದ್ದನ್ನು ಅಲ್ಲೇ ನಿಂತು ಕೇಳಿಸಿಕೊಂಡಿದ್ದಾಳೆ ಭಾರ್ಗವಿ. ಮಾವಯ್ಯನ ವಿರುದ್ಧ ಮನದಲ್ಲೇ ಕತ್ತಿ ಮಸಿಯುತ್ತಿರುವ ಆಕೆ, ಅದ್ಹೇಗೆ ಈ ಆಸ್ತಿ ಆ ರಾಮನ ಪಾಲಾಗುತ್ತೆ ನಾನೂ ನೋಡ್ತಿನಿ ಎಂದುಕೊಂಡಿದ್ದಾಳೆ. ಇತ್ತ ಅರ್ಧ ಆಸ್ತಿ ರಾಮನಿಗೆ ಇನ್ನರ್ಧ ವಿಶ್ವ ಮತ್ತು ಸತ್ಯನಿಗೆ ಸೇರಬೇಕು ಎಂದಿದ್ದಾನೆ ಸೂರ್ಯ ಪ್ರಕಾಶ್‌.

ಟ್ರೆಂಡಿಂಗ್​ ಸುದ್ದಿ

ಇದೆಲ್ಲದರ ನಡುವೆ ಆದಷ್ಟು ಬೇಗ ಸೀತಾ ರಾಮನ ಮದುವೆಯನ್ನೂ ಮಾಡುವ ಕಾತರ, ಆತುರ ತಾತನಿಗೆ ಹೆಚ್ಚಾಗಿದೆ. ಈ ನಡುವೆ ಭಾರ್ಗವಿ ಈ ಮದುವೆ ನಡೆಯಬಾರದು ಎಂದು ಈಗಾಗಲೇ ಕಳ್ಳಾಟ ಆರಂಭಿಸಿದ್ದಾಳೆ. ನಮ್ಮಿಬ್ಬರ ವಿಚಾರ ತಾತನಿಗೆ ಗೊತ್ತಿದೆ ಎಂಬ ಭ್ರಮೆಯಲ್ಲಿರುವ ಸೀತಾ ಮತ್ತು ರಾಮನಿಗೆ, ಅಸಲಿ ವಿಚಾರ ಇನ್ನೂ ಗೊತ್ತಾಗಿಲ್ಲ. ಇನ್ನೇನು ಆದಷ್ಟು ಬೇಗ ನಮ್ಮ ಮದುವೆ ಆಗಲಿದೆ ಎಂದೇ ಖುಷಿಯಲ್ಲಿದೆ ಆ ಜೋಡಿ.

ಸೀತಾ ಭೇಟಿಗೆ ತಾತನ ಡಿಮಾಂಡ್‌

ಈ ನಡುವೆ ಆದಷ್ಟು ಬೇಗ ಸೀತಾಳನ್ನು ನಾನು ಭೇಟಿಯಾಗಬೇಕು. ವ್ಯವಸ್ಥೆ ಮಾಡು ಎಂದು ತಾತ ರಾಮ್‌ ಮುಂದೆ ಹೇಳಿದ್ದಾನೆ. ನನಗೂ ಹುಷಾರಿಲ್ಲ, ಬಂದು ಭೇಟಿಯಾದರೆ ಒಳ್ಳೆಯದಲ್ಲವೇ. ಅಷ್ಟಕ್ಕೂ ಅವಳ ಫ್ಯಾಮಿಲಿ ಬಗ್ಗೆಯೂ ನಾನು ತಿಳಿದುಕೊಳ್ಳಬೇಕು ಎಂದಿದ್ದಾನೆ ತಾತ. ಇತ್ತ ಇರೋ ವಿಷ್ಯ ಹೇಳಲು ಮುಂದಾದ ರಾಮ್‌ನ ತಡೆಹಿಡಿದಿದ್ದಾಳೆ ಭಾರ್ಗವಿ. ಕೊನೆಗೇ ಈಗಲೇ ಇಲ್ಲಿಯೇ ಸೀತಾಳನ್ನು ಮನೆಗೆ ಕರೆಸಿಬಿಡು ಎಂದೂ ರಾಮ್‌ಗೆ ಆರ್ಡರ್‌ ಮಾಡಿದ್ದಾನೆ. ಸರಿ ಈಗಲೇ ಕರೆಸುವೆ, ನಾನೇ ಕರೆತರ್ತೀನಿ ಎಂದಿದ್ದಾನೆ ರಾಮ್.‌

ರಾಮನನ್ನು ಇಕ್ಕಟ್ಟಿಗೆ ಸಿಲುಕಿಸಿದ ಭಾರ್ಗವಿ

ಇನ್ನೊಂದು ಕಡೆ ಸೀತಾಗೆ ಮಗಳಿದ್ದಾಳೆ ಅನ್ನೋ ವಿಚಾರವನ್ನು ಭಾರ್ಗವಿ ತಾತನಿಗೆ ಹೇಳಿದ್ದಾಳೆ ಎಂದೇ ತಿಳಿದುಕೊಂಡಿದ್ದಾನೆ ರಾಮ. ಆದರೆ, ಮಾವಯ್ಯ ಸೂರ್ಯಪ್ರಕಾಶ್‌ನ ಆರೋಗ್ಯ ಹದಗೆಟ್ಟಿದ್ದರಿಂದ ಆ ವಿಚಾರವನ್ನು ನಾನು ಹೇಳಿಲ್ಲ, ಹೇಳಿದರೆ ಎಲ್ಲಿ ಹೆಚ್ಚು ಕಡಿಮೆ ಆಗುತ್ತೆನೋ ಅನ್ನೋ ಭಯ ಎಂದು ರಾಮ್‌ ಮುಂದೆ ಹೇಳಿ ಸಲೀಸಾಗಿ ಜಾರಿಕೊಂಡಿದ್ದಾಳೆ ಭಾರ್ಗವಿ. ಚಿಕ್ಕಿಯ ಈ ನಡೆ ರಾಮ್‌ಗೂ ಶಾಕ್‌ ನೀಡಿದೆ. ನಡೀರಿ ಈಗಲೇ ಈ ವಿಚಾರ ಹೇಳೋಣ ಎಂದು ಹೊರಟ ರಾಮನನ್ನೂ ಮತ್ತೆ ತಡೆದಿದ್ದಾಳೆ ಭಾರ್ಗವಿ.

ಇಂದ್ರಜೀತ್-‌ ವಾಣಿಯ ಮಗ ಶ್ರೀರಾಮ

ಸೀತಾ ರಾಮರ ಮದುವೆ ಆದರೆ ಎಲ್ಲಿ ಆಸ್ತಿ ತನ್ನ ಕೈ ತಪ್ಪುತ್ತೋ ಅನ್ನೋ ಭಯ ಭಾರ್ಗವಿಗಿದೆ. ಇನ್ನೊಂದು ಕಡೆಗೆ ರಾಮನ ಪೂರ್ವಾಪರವೂ ದಿನದಿಂದ ದಿನಕ್ಕೆ ವೀಕ್ಷಕರ ಅರಿವಿಗೆ ಬರುತ್ತಿದೆ. ಈ ಮೊದಲೆಲ್ಲ ರಾಮನ ತಾಯಿ ಯಾರು ಎಂದಾಗ ವಾಣಿಯ ಹೆಸರು ಮುನ್ನೆಲೆಗೆ ಬಂದಿತ್ತು. ಈಗ ರಾಮನ ತಂದೆಯ ಹೆಸರೂ ಗೊತ್ತಾಗಿದೆ. ರಾಮನ ತಂದೆಯ ಹೆಸರು ಇಂದ್ರಜೀತ್ ದೇಸಾಯಿ.‌ ಇಂದ್ರಜೀತ್‌ ಮತ್ತು ವಾಣಿಯ ಏಕೈಕ ಸುಪುತ್ರ ಶ್ರೀರಾಮ್‌ ದೇಸಾಯಿ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಶ್ರೀನಿವಾಸ್: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

IPL_Entry_Point