ಕನ್ನಡ ಸುದ್ದಿ  /  ಮನರಂಜನೆ  /  ‘ಹೀರೋಯಿನ್‌ ಕೊರಳಿಗೆ ತಾಳಿ ಬಿತ್ತು ಅಂದ್ರೆ ಆಕೆ ಕಥೆ ಮುಗೀತು ಎಂದರ್ಥ! ಆ ಮರ್ಯಾದೆ ಮತ್ತೆ ಸಿಗಲ್ಲ’; ಹೇಮಾ ಪ್ರಭಾತ್‌ ಕೆಟ್ಟ ಅನುಭವ

‘ಹೀರೋಯಿನ್‌ ಕೊರಳಿಗೆ ತಾಳಿ ಬಿತ್ತು ಅಂದ್ರೆ ಆಕೆ ಕಥೆ ಮುಗೀತು ಎಂದರ್ಥ! ಆ ಮರ್ಯಾದೆ ಮತ್ತೆ ಸಿಗಲ್ಲ’; ಹೇಮಾ ಪ್ರಭಾತ್‌ ಕೆಟ್ಟ ಅನುಭವ

Apr 28, 2024 12:47 PM IST

‘ಹೀರೋಯಿನ್‌ ಕೊರಳಿಗೆ ತಾಳಿ ಬಿತ್ತು ಅಂದ್ರೆ ಆಕೆ ಕಥೆ ಮುಗೀತು ಎಂದರ್ಥ, ಆ ಮರ್ಯಾದೆ ಮತ್ತೆ ಸಿಗಲ್ಲ’; ಹೇಮಾ ಪ್ರಭಾತ್‌ ಕೆಟ್ಟ ಅನುಭವ

    • ಅಮೆರಿಕಾ ಅಮೆರಿಕಾ ಸಿನಿಮಾ ನಟಿ ಹೇಮಾ ಪ್ರಭಾತ್‌ ನಟಿಸಿದ್ದು ಬೆರಳೆಣಿಕೆ ಸಿನಿಮಾಗಳಾದರೂ, ಎಲ್ಲವೂ ಕನ್ನಡಿಗರ ನೆನಪಿನಲ್ಲಿ ಉಳಿದಿವೆ. ಆದರೆ, ಇದೇ ನಟಿ ಸಿನಿಮಾರಂಗವನ್ನೇ ಬಿಡಲು ಅಂದಿನ ಆ ಘಟನೆಗಳೇ ಕಾರಣ
‘ಹೀರೋಯಿನ್‌ ಕೊರಳಿಗೆ ತಾಳಿ ಬಿತ್ತು ಅಂದ್ರೆ ಆಕೆ ಕಥೆ ಮುಗೀತು ಎಂದರ್ಥ, ಆ ಮರ್ಯಾದೆ ಮತ್ತೆ ಸಿಗಲ್ಲ’; ಹೇಮಾ ಪ್ರಭಾತ್‌ ಕೆಟ್ಟ ಅನುಭವ
‘ಹೀರೋಯಿನ್‌ ಕೊರಳಿಗೆ ತಾಳಿ ಬಿತ್ತು ಅಂದ್ರೆ ಆಕೆ ಕಥೆ ಮುಗೀತು ಎಂದರ್ಥ, ಆ ಮರ್ಯಾದೆ ಮತ್ತೆ ಸಿಗಲ್ಲ’; ಹೇಮಾ ಪ್ರಭಾತ್‌ ಕೆಟ್ಟ ಅನುಭವ

Hema Prabhath: ಸ್ಯಾಂಡಲ್‌ವುಡ್‌ನಲ್ಲಿ ಬೆರಳೆಣಿಕೆ ಸಿನಿಮಾ ಮಾಡಿದರೂ, ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ನಟಿ ಹೇಮಾ ಪ್ರಭಾತ್ (ಹೇಮಾ ಪಂಚಮುಖಿ). 1992ರಲ್ಲಿ ಜೀವನ ಚೈತ್ರ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದ ಹೇಮಾ, ಅದಾದ ಮೇಲೆ ನಾಯಕಿಯಾಗಿಯೂ ಹಲವು ಸಿನಿಮಾಗಳಲ್ಲಿ ನಟಿಸಿದರು. ಅಮೆರಿಕಾ ಅಮೆರಿಕಾ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿತು. ಇನ್ನೇನು ನಾಯಕಿಯಾಗಿ ಅವಕಾಶಗಳು ಶುರುವಾದವು ಎನ್ನುತ್ತಿರುವಾಗಲೇ, ಕೆಟ್ಟ ಅನುಭವಗಳನ್ನೂ ಹೇಮಾ ಎದುರಿಸಬೇಕಾಯ್ತು. ಅದಕ್ಕೆ ಕಾರಣವಾಗಿದ್ದೇ ಮದುವೆ!

ಟ್ರೆಂಡಿಂಗ್​ ಸುದ್ದಿ

QPL 2024: ಕ್ವೀನ್ಸ್‌ ಪ್ರೀಮಿಯರ್‌ ಲೀಗ್‌ ಶುರು; ಬ್ಯಾಟು ಬಾಲು ಹಿಡಿದು ಕ್ರಿಕೆಟ್ ಆಡಲು ಹೊರಟ ಕಿರುತೆರೆ, ಹಿರಿತೆರೆ ಹೆಣ್ಮಕ್ಕಳು

ಸೀತಾ ರಾಮ ಸೀರಿಯಲ್‌ ದೃಶ್ಯದಲ್ಲಿ ಹೆಲ್ಮೆಟ್‌ ಧರಿಸದೇ ಪ್ರಯಾಣ; ನಟಿ ವೈಷ್ಣವಿ ಗೌಡಗೆ ದಂಡ ವಿಧಿಸಿದ ಟ್ರಾಫಿಕ್‌ ಪೊಲೀಸರು

Pavitra Jayaram: ಭೀಕರ ರಸ್ತೆ ಅಪಘಾತದಲ್ಲಿ ಜೀ ಕನ್ನಡದ ತ್ರಿನಯನಿ ಧಾರಾವಾಹಿ ನಟಿ ಪವಿತ್ರಾ ಜಯರಾಂ ಸಾವು

ಗೌರಿ ಚಿತ್ರದಿಂದ ಹೊರಬಂತು ‘ಒಳ್ಳೆ ಟೈಮ್‌ ಬರುತ್ತೆ’ ಹಾಡು; ಚಂದನ್‌ ಶೆಟ್ಟಿ ಕಂಠಕ್ಕೆ ಸಮರ್ಜಿತ್‌ ಲಂಕೇಶ್‌ ಡಾನ್ಸ್‌

ಸಂಭ್ರಮ ಮತ್ತು ರವಿಮಾಮ ಸಿನಿಮಾ ಸಂದರ್ಭದಲ್ಲಿ ಆದ ಘಟನೆಗಳು ಹೇಮಾ ಅವರ ಮೇಲೆ ಗಾಢ ಪರಿಣಾಮವನ್ನೇ ಬೀರಿದವು. ಈ ಸಿನಿಮಾಗಳು ಶುರುವಾಗುವುದಕ್ಕೂ ಆರು ತಿಂಗಳ ಹಿಂದಷ್ಟೇ ಹೇಮಾ ಅವರ ಮದುವೆಯಾಗಿತ್ತು. ಮದುವೆ ಬಳಿಕ ಒಳ್ಳೆಯ ಕಥೆಗಾಗಿ ಕಾದಿದ್ದಾಗ ಸಿಕ್ಕ ಅವಕಾಶಗಳೇ ಸಂಭ್ರಮ ಮತ್ತು ರವಿಮಾಮ ಸಿನಿಮಾ. ಈ ಸಿನಿಮಾಗಳ ಶೂಟಿಂಗ್‌ ಸಮಯದಲ್ಲಿ ನಾಯಕಿ ಪಟ್ಟ ಕಳಚಿ ಒಳ್ಳೇ ಪಾತ್ರ ಎಂಬ ಕಾರಣಕ್ಕೆ ಸಪೋರ್ಟಿಂಗ್‌ ಪಾತ್ರವನ್ನು ಒಪ್ಪಿಕೊಂಡಿದ್ದರು ಹೇಮಾ. ಆಗ ಅವರು ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ. ಈ ಬಗ್ಗೆ ಚಿತ್ರಲೋಕ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

“ನಾಯಕಿಯಾಗಿ ನಟಿಸುವ ಆಸೆ ಇತ್ತು. ಅದಕ್ಕಾಗಿಯೇ ಒಳ್ಳೊಳ್ಳೆ ಕಥೆಗಳಿಗೆ ಹುಡುಕಾಡುತ್ತಿದ್ದೆ. ಗ್ಲಾಮರಸ್‌ ರೋಲ್‌ ಪಾತ್ರ ಸಿಕ್ಕರೂ, ನಾನು ಅದರ ಕಡೆ ಹೋಗಲಿಲ್ಲ. ಆ ಸಮಯದಲ್ಲಿ ಸಂಭ್ರಮ ಸಿನಿಮಾ ಮಾಡಿದೆ. ಹೀರೋಯಿನ್‌ ಅನ್ನೋದು ಮುಖ್ಯ ಅಲ್ಲ. ಜನಕ್ಕೆ ನೀವು ನಿಮ್ಮ ಪಾತ್ರದ ಮೂಲಕ ಏನು ಹೇಳುತ್ತೀರಿ ಎಂಬುದು ಮುಖ್ಯ. ಅಲ್ಲಿ ನಾನು ಹೀರೋಯಿನ್ ಅಲ್ಲದಿದ್ದರೂ, ಹೀರೋಯಿನ್‌ ಅಕ್ಕನ ಪಾತ್ರ ಮಾಡಲು ಬಂದೆ. ಕೇವಲ ನನ್ನ ಮದುವೆ ಆಗಿ 6 ತಿಂಗಳು ಆಗಿತ್ತು. ಆಗ ಸಂಭ್ರಮ ಸಿನಿಮಾ ಮಾಡಿದ್ದೆ. ಅದೇ ರೀತಿ ರವಿಮಾಮ ಸಿನಿಮಾದಲ್ಲಿ ಸೆಕೆಂಡ್‌ ಲೀಡ್‌ ಪಾತ್ರ ಮಾಡಿದೆ. ರವಿಚಂದ್ರನ್‌ ತಂಗಿ ಪಾತ್ರ”

ಹೀರೋಯಿನ್‌ ಕೊರಳಿಗೆ ತಾಳಿ ಬಿದ್ದರೆ ಮುಗೀತು..

“ನಮ್ಮ ಸಿನಿಮಾಗಳಲ್ಲಿ ಆಗಿನ ಕಾಲದಲ್ಲಿ, ಒಂದು ಸಲ ನಿಮ್ಮ ಕೊರಳಿಗೆ ತಾಳಿ ಬಿದ್ದು ಬಿಟ್ಟರೆ ನೀವು ಹೀರೋಯಿನ್‌ ಅಲ್ಲ. ಹೀರೋಯಿನ್‌ ಆಗಿ ಪೀಕ್‌ನಲ್ಲಿ ಇರ್ತೀರಾ. ನಾಳೆನೇ ನಿಮ್ಮ ಮದುವೆ ಆದ್ರೆ ನೀವು ಹೀರೋಯಿನ್‌ ಅಲ್ಲ. ಆಗ ನೀವು ಬರೀ ಸಪೋರ್ಟಿಂಗ್‌ ಕ್ಯಾರೆಕ್ಟರ್‌. ಆದರೆ, ನಾನು ಹೀರೋಯಿನ್‌ಗೆ ಎಷ್ಟು ಎಫರ್ಟ್‌ ಹಾಕುತ್ತಿದ್ನೋ, ಸಪೋರ್ಟಿಂಗ್‌ ಪಾತ್ರಕ್ಕೂ ಅಷ್ಟೇ ನೀಡುತ್ತಿದ್ದೆ. ಆದರೆ, ಇಂಡಸ್ಟ್ರಿಯಲ್ಲಿ ಕೆಲವರು ನಿಮ್ಮನ್ನು ಟ್ರೀಟ್‌ ಮಾಡುವ ರೀತಿಯೇ ಬೇರೆ. ನಿಮ್ಮನ್ನು ನೋಡುವ ರೀತಿಯೇ ಬೇರೆ. ಆಗ ನಿಮಗೆ ಸಿಗುವ ಫೆಸಿಲಿಟಿಗಳೂ ಬೇರೆ. So Called You are not a heroin. ಆ ಟೈಟಲ್‌ ನಿಮಗೆ ಇರಲ್ಲ”

ಅಲ್ಲಿ ಕಲೆಗೆ ಮರ್ಯಾದೆ ಸಿಗಲಿಲ್ಲ

“ಆ ಸಿನಿಮಾ ಹೀರೋಯಿನ್‌ಗಿಂತ ಚೆನ್ನಾಗಿ ಮಾಡ್ತೀರಾ. ಒಳ್ಳೆಯ ಹೆಸರೂ ಬರುತ್ತೆ. ಆದರೆ, you are not a heroin. ಆ ಒಂದು ವಾತಾವರಣ ಇಷ್ಟ ಆಗಲಿಲ್ಲ. ನೀವು ಕಲಾವಿದೆಗೆ ಮರ್ಯಾದೆ ಕೊಡಬೇಕು. ಅವಳಲ್ಲಿರೋ ಕಲೆಗೆ ಮರ್ಯಾದೆ ಕೊಡಬೇಕು. Not that Status. ನಂಬರ್‌ 1, ನಂಬರ್‌ 2, ಹೀರೋ, ಹೀರೋಯಿನ್‌ ಅಲ್ಲವೇ ಅಲ್ಲ. ಅದಕ್ಕೆ ನೀವು ಮರ್ಯಾದೆ ಕೊಡೋದಲ್ಲ. ನನಗೆ ಅಲ್ಲಿನ ವಾತಾವರಣ ಯಾಕೋ ಹಿಡಿಸಲಿಲ್ಲ. ತಲೆ ಮೇಲೆ ಕೂರಿಸಿಕೊಂಡು ಓಡಾಡಬೇಕು ಅಂತ ನಾನು ಹೀರೋಯಿನ್‌ ಆದಾಗಲೂ ನಾನು ಬಯಸಿರಲಿಲ್ಲ. ನಾನು ಯಾವ ಅನುಕೂಲಗಳನ್ನೂ ಕೇಳಲ್ಲ”

ಮರ್ಯಾದೆ ಸಿಗದ ಸ್ಥಳದಲ್ಲಿ ನಾನೂ ಇರಲಿಲ್ಲ

"ಒಬ್ಬ ಕಲಾವಿದರಿಗೆ ಬೇಸಿಕ್‌ ಫೆಸಿಲಿಟಿಗಳು ಏನು ಬೇಕೋ ಅವನ್ನು ಕೇಳಿದ್ದೆ. ಆ ಮರ್ಯಾದೆ ಸಿಗಲಿಲ್ಲ ಅಂದರೆ, ಆ ಜಾಗದಲ್ಲಿ ನಾನು ಇರಲ್ಲ. ನನಗೆ ಬೇಕಾಗಿದ್ದು ನೀವು ಮಾಡಲ್ಲ ಅಂದ್ರೆ, ನಿಮ್ಮ ಜಾಗದಲ್ಲಿ ನಾನು ಇರಲ್ಲ. ನನ್ನ ಕಲೆಗೆ ಬೆಲೆ ಸಿಕ್ಕರೂ, ಶೂಟಿಂಗ್‌ ಮಾಡುವ ವಾತಾವರಣ ಮಾತ್ರ ನನಗೆ ಇಷ್ಟವಾಗಲಿಲ್ಲ. ಆ ಅನುಭವ ನನಗೆ ಸಂಭ್ರಮ ಮತ್ತು ರವಿಮಾಮ ಸಿನಿಮಾ ಮಾಡುವಾಗಲೂ ಆಯ್ತು. ವೇಹಿಕಲ್‌ ಇರುತ್ತಿರಲಿಲ್ಲ. ಸರಿಯಾದ ಊಟ, ಕಾಸ್ಟ್ಯೂಮ್‌ ಇರ್ತಿರಲಿಲ್ಲ. ಹಾಗಾಗಿ ಆವತ್ತು ನಾನೇ ಸಿನಿಮಾಗಳಿಂದ ಹಿಂದೆ ಸರಿದೆ. ಪಾತ್ರಕ್ಕೆ ಇಲ್ಲಿ ಗೌರವ ಇಲ್ಲ. ಯಾವಾಗ ಸೆಕೆಂಡ್‌ ಹೀರೋಯಿನ್‌, ಸೆಕೆಂಡ್‌ ಲೀಡ್‌ ಅಂತ ಬಂದು ಬಿಟ್ರೆ, ನಿಮ್ಮನ್ನು ನೋಡುವ ದೃಷ್ಟಿ, ಅಲ್ಲಿನ ವಾತಾವರಣವೇ ಬೇರೆ ಆಗುತ್ತೆ" ಎಂದಿದ್ದಾರೆ ಹೇಮಾ ಪ್ರಭಾತ್.‌

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ