ಕನ್ನಡ ಸುದ್ದಿ  /  ಮನರಂಜನೆ  /  Vidya Balan: ಪಾರ್ನ್‌ ವಿಡಿಯೋ ವೀಕ್ಷಣೆ ಮತ್ತು ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡಿದ ನಟಿ ವಿದ್ಯಾ ಬಾಲನ್‌

Vidya Balan: ಪಾರ್ನ್‌ ವಿಡಿಯೋ ವೀಕ್ಷಣೆ ಮತ್ತು ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡಿದ ನಟಿ ವಿದ್ಯಾ ಬಾಲನ್‌

ದೋ ಔರ್‌ ದೋ ಪ್ಯಾರ್‌ ಸಿನಿಮಾ ಮೂಲಕ ಚಿತ್ರಮಂದಿರಕ್ಕೆ ಬಂದಿದ್ದಾರೆ ನಟಿ ವಿದ್ಯಾ ಬಾಲನ್.‌ ಈ ನಡುವೆ ಚಿತ್ರದ ಪ್ರಚಾರದ ನಿಮಿತ್ತ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ನಡುವೆ ಸಂದರ್ಶನವೊಂದರಲ್ಲಿ ಲೈಂಗಿಕತೆ ಮತ್ತು ಪಾರ್ನ್‌ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

Vidya Balan: ಪಾರ್ನ್‌ ವಿಡಿಯೋ ವೀಕ್ಷಣೆ ಮತ್ತು ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡಿದ ವಿದ್ಯಾ ಬಾಲನ್‌
Vidya Balan: ಪಾರ್ನ್‌ ವಿಡಿಯೋ ವೀಕ್ಷಣೆ ಮತ್ತು ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡಿದ ವಿದ್ಯಾ ಬಾಲನ್‌

Vidya Balan: ಬಾಲಿವುಡ್ ನಟಿ ವಿದ್ಯಾ ಬಾಲನ್ ಅಭಿನಯದ 'ದೋ ಔರ್ ದೋ ಪ್ಯಾರ್' ಚಿತ್ರ ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗಿರುವಾಗ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿದ್ಯಾ ಬಾಲನ್ ಒಂದರ ಹಿಂದೆ ಒಂದರಂತೆ ಹಲವು ಸಂದರ್ಶನಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ವಿದ್ಯಾ ಬಾಲನ್ ಪೋರ್ನ್‌ ಸಿನಿಮಾಗಳು ಮತ್ತು ಲೈಂಗಿಕತೆಯ ಕುರಿತು ತಮ್ಮ ಬೋಲ್ಡ್‌ ಅಭಿಪ್ರಾಯಗಳನ್ನು ಅಳುಕಿಲ್ಲದೇ ಹೇಳಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಅಶ್ಲೀಲ ಕಲ್ಪನೆ ನನಗಿಷ್ಟವಿಲ್ಲ..

ಸಮದೀಶ್‌ ಭಾಟಿಯಾ ಅವರ ಅನ್‌ಫಿಲ್ಟರ್ಡ್‌ ಬೈ ಸಮ್‌ದೀಶ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಕೊಂಚ ಬೋಲ್ಡ್‌ ಆಗಿಯೇ ಮಾತನಾಡಿದ್ದಾರೆ ವಿದ್ಯಾ. ನೀವು ಪಾರ್ನ್ ನೋಡುತ್ತೀರಾ? ಎಂದು ನಿರೂಪಕ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ನಟಿ ವಿದ್ಯಾ ಬಾಲನ್, ನಾನು ಪಾರ್ನ್ ನೋಡುವುದಿಲ್ಲ ಎಂದಿದ್ದಾರೆ. "ನಿಜ ಹೇಳಬೇಕೆಂದರೆ, ನಾನು ಅಶ್ಲೀಲ ಕಲ್ಪನೆಯನ್ನು ಎಂದಿಗೂ ಇಷ್ಟಪಟ್ಟಿಲ್ಲ. ಅಂಥ ಸಿನಿಮಾಗಳನ್ನು ನೋಡಿಯೂ ಇಲ್ಲ" ಎಂದಿದ್ದಾರೆ.

ಪಾರ್ನ್‌ ಸಿನಿಮಾ ನೋಡಿದ್ದೀರಾ?

"ಒಂದು ಸಿನಿಮಾದಲ್ಲಿ ಲೈಂಗಿಕ ದೃಶ್ಯಗಳಿವೆ, ಅದನ್ನು ಚೆನ್ನಾಗಿ ಶೂಟ್‌ ಮಾಡಿದ್ದಾರೆ ಎಂದರೆ ನೋಡುವೆ. ಆ ದೃಶ್ಯಗಳ ಹಿಂದೆ ಒಂದು ಬಲವಾದ ಕಥೆ ಇದೆ ಎಂದಾದರೆ, ನಾನು ಕೊನೇ ತನಕ ನೋಡುತ್ತೇನೆ. ಅದು ನನಗೆ ಸಮಸ್ಯೆ ಎಂದು ಅನಿಸುವುದಿಲ್ಲ. ಇನ್ನೊಂದು ವಿಚಾರ ಏನೆಂದರೆ ಪಾರ್ನ್‌ ಸಿನಿಮಾಗಳಲ್ಲಿ ಮಹಿಳೆಯರನ್ನು ಕೇವಲ ದೇಹದಂತೆ ಪ್ರದರ್ಶಿಸಲಾಗುತ್ತದೆ. ಹೆಣ್ಣನ್ನು ಕೇವಲ ಭೌತಿಕ ವಸ್ತುವನ್ನಾಗಿ ಬಿಂಬಿಸಲಾಗಿದೆ. ಅಲ್ಲಿ ಯಾವುದೇ ಕಥೆಯಿರುವುದಿಲ್ಲ. ಕೇವಲ ಲೈಂಗಿಕತೆ ಮಾತ್ರ ಕಾಣಿಸುತ್ತದೆ. ಪಾರ್ನ್ ನೋಡಲೇಬೇಕು ಎಂದು ನನಗೆ ಯಾವತ್ತೂ ಅನಿಸಿಲ್ಲ" ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಲೈಂಗಿಕತೆಯನ್ನು ನಾನು ಎಂಜಾಯ್‌ ಮಾಡಿದ್ದೇನೆ..

ಮುಂದುವರಿದು, ನಿಮ್ಮ ದೇಹದೊಂದಿಗಿನ ನಿಮ್ಮ ಸಂಬಂಧವು ಬದಲಾಗಿದೆಯೇ? ಎಂಬ ಪ್ರಶ್ನೆ ಮುಂದಿಟ್ಟಿದ್ದಾನೆ ನಿರೂಪಕ. ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯಾ ಬಾಲನ್, "ನಾನು ಯಾವಾಗಲೂ ಸೆಕ್ಸ್ ಅನ್ನು ಎಂಜಾಯ್ ಮಾಡಿದ್ದೇನೆ. ನನ್ನ ಭಾವೋದ್ರೇಕಗಳನ್ನು ಎಕ್ಸ್‌ಪ್ಲೋರ್‌ ಮಾಡಿದ್ದೇನೆ. ಅದನ್ನು ಹೇಳಿಕೊಳ್ಳಲು ನನಗೆ ಮುಜುಗರವಿಲ್ಲ" ಎಂದಿದ್ದಾರೆ. ಅಂದಹಾಗೆ, ದೋ ಔರ್‌ ದೋ ಪ್ಯಾರ್‌ ಚಿತ್ರವನ್ನು ಶ್ರೀಶ ಗಯಹಾ ಠಾಕೂರ್ತ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ವಿದ್ಯಾ ಬಾಲನ್‌, ಪ್ರತೀಕ್‌ ಗಾಂಧಿ, ಇಲಿಯಾನಾ ಡಿಕ್ರೂಜ್‌, ಸೇಂಧಿ ರಾಮ್‌ಮೂರ್ತಿ ತಾರಾಗಣದಲ್ಲಿದ್ದಾರೆ.

(This copy first appeared in Hindustan Times Kannada. To read more on OTT, please visit kannada.hindustantimes.com . ಮನರಂಜನೆ, ಓಟಿಟಿ ಕುರಿತ ಮತ್ತಷ್ಟು ಸುದ್ದಿ, ಮಾಹಿತಿ, ಫೋಟೊಗ್ಯಾಲರಿ, ವೆಬ್‌ಸ್ಟೋರಿ ನೋಡಲು ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ.)

IPL_Entry_Point