ಕನ್ನಡ ಸುದ್ದಿ  /  ಮನರಂಜನೆ  /  Sreeleela Telugu Movie: ಟಾಲಿವುಡ್‌ ಹಿರಿಯ ಸ್ಟಾರ್‌ ನಟನೊಂದಿಗೆ ಕೈ ಜೋಡಿಸಿದ ಶ್ರೀಲೀಲಾ.. ಚಿತ್ರದಲ್ಲಿ ಆಕೆ ಮಾಡ್ತಿರೋದು ಯಾವ ಪಾತ್ರ?

Sreeleela Telugu movie: ಟಾಲಿವುಡ್‌ ಹಿರಿಯ ಸ್ಟಾರ್‌ ನಟನೊಂದಿಗೆ ಕೈ ಜೋಡಿಸಿದ ಶ್ರೀಲೀಲಾ.. ಚಿತ್ರದಲ್ಲಿ ಆಕೆ ಮಾಡ್ತಿರೋದು ಯಾವ ಪಾತ್ರ?

HT Kannada Desk HT Kannada

Mar 10, 2023 06:11 AM IST

ನಂದಮೂರಿ ಬಾಲಕೃಷ್ಣ ಜೊತೆ ಶ್ರೀಲೀಲಾ

    • ಸದ್ಯಕ್ಕೆ ಶ್ರೀಲೀಲಾ ತೆಲುಗಿನ ಹೊಸ ಸಿನಿಮಾಗೆ ಆಯ್ಕೆ ಆಗಿದ್ದಾರೆ. ಅದೂ ಕೂಡಾ ಶ್ರೀಲೀಲಾ, ತೆಲುಗು ಚಿತ್ರರಂಗದ ಹಿರಿಯ ಸ್ಟಾರ್‌ ನಟನೊಂದಿಗೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಸುದ್ದಿಯನ್ನು ನಿರ್ದೇಶಕ ಅನಿಲ್‌ ರಾವಿಪುಡಿ ತಮ್ಮ ಟ್ವಿಟ್ಟರ್‌ನಲ್ಲಿ ಕನ್ಫರ್ಮ್‌ ಮಾಡಿದ್ದಾರೆ.
ನಂದಮೂರಿ ಬಾಲಕೃಷ್ಣ ಜೊತೆ ಶ್ರೀಲೀಲಾ
ನಂದಮೂರಿ ಬಾಲಕೃಷ್ಣ ಜೊತೆ ಶ್ರೀಲೀಲಾ (PC: Anil Ravipudi Twitter)

ಟಾಲಿವುಡ್‌ನಲ್ಲಿ ಶ್ರೀಲೀಲಾ ಹವಾ ಜೋರಾಗಿದೆ. 'ಪೆಳ್ಳಿ ಸಂದಡಿ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ತೆರಳಿದ ಈ ಚೆಲುವೆ ಈಗ ಕನ್ನಡ ಸಿನಿಮಾಗಳಿಗಿಂತ ಹೆಚ್ಛಾಗಿ ತೆಲುಗಿನಲ್ಲೇ ಹೆಚ್ಚು ಬ್ಯುಸಿ ಆಗಿದ್ದಾರೆ. ಶ್ರೀಲೀಲಾ, ಟಾಲಿವುಡ್‌ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಜೊತೆ ಹೆಜ್ಜೆ ಹಾಕಲಿದ್ಧಾರೆ ಎಂಬ ಮಾತು ಇತ್ತೀಚೆಗೆ ಕೇಳಿಬಂದಿತ್ತು. ಆದರೆ ಈ ಸುದ್ದಿ ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ.

ಟ್ರೆಂಡಿಂಗ್​ ಸುದ್ದಿ

ಶಿವಶರಣ ಮೋಳಿಗೆ ಮಾರಯ್ಯ ಸಿನಿಮಾಕ್ಕೆ ಕೊಪ್ಪಳ ಶ್ರೀಗವಿ ಸಿದ್ದೇಶ್ವರ ಮಠದ ಶ್ರೀಗಳಿಂದ ಚಾಲನೆ, ಶರಣ ತತ್ತ್ವಕ್ಕೆ ಮನಸೋತ ಕಾಶ್ಮೀರದ ರಾಜನ ಕಥೆ

ರಣಬೀರ್‌ ಕಪೂರ್‌ ನಟನೆಯ ರಾಮಾಯಣದ ಬಜೆಟ್‌ ಬರೋಬ್ಬರಿ 835 ಕೋಟಿ ರೂ.; ಈ ಸಿನಿಮಾ ಬಿಡುಗಡೆ ಯಾವಾಗ? ಇಲ್ಲಿದೆ ವಿವರ

ಸಂಗೀತಾ ಶೃಂಗೇರಿಗೆ ಹುಟ್ಟುಹಬ್ಬದ ಸಂಭ್ರಮ; ಡ್ರೋನ್‌ ಪ್ರತಾಪ್‌ಗೆ ರಾಖಿ ಕಟ್ಟಿ ಕಾಲಿಗೆ ಬಿದ್ದು ನಮಸ್ಕರಿಸಿದ 777 ಚಾರ್ಲಿ ಚೆಲುವೆ

ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಜತೆ ಕಿಶನ್‌ ಬಿಳಗಲಿ ನೀರಾಟ; ಯಾಕೆ ಗುರು ನಮ್‌ ಹೊಟ್ಟೆ ಉರಿಸ್ತಿಯಾ ಅಂದ್ರು ಫ್ಯಾನ್ಸ್‌

ಸದ್ಯಕ್ಕೆ ಶ್ರೀಲೀಲಾ ತೆಲುಗಿನ ಹೊಸ ಸಿನಿಮಾಗೆ ಆಯ್ಕೆ ಆಗಿದ್ದಾರೆ. ಅದೂ ಕೂಡಾ ಶ್ರೀಲೀಲಾ, ತೆಲುಗು ಚಿತ್ರರಂಗದ ಹಿರಿಯ ಸ್ಟಾರ್‌ ನಟನೊಂದಿಗೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಸುದ್ದಿಯನ್ನು ನಿರ್ದೇಶಕ ಅನಿಲ್‌ ರಾವಿಪುಡಿ ತಮ್ಮ ಟ್ವಿಟ್ಟರ್‌ನಲ್ಲಿ ಕನ್ಫರ್ಮ್‌ ಮಾಡಿದ್ದಾರೆ. ಇದು ಶ್ರೀಲೀಲಾ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಫೋಟೋದಲ್ಲಿ ಶ್ರೀಲೀಲಾ, ಆ ಸ್ಟಾರ್‌ ನಟನ ಕೈ ಹಿಡಿದು ಥಂಬ್‌ ಕೊಟ್ಟಿದ್ದಾರೆ. ಜೊತೆಗೆ ಕಣ್ಣು ಹೊಡೆಯವ ಪೋಸ್‌ ನೀಡಿದ್ದಾರೆ. ಫೋಟೋ ಬಹಳ ಕುತೂಹಲ ಮೂಡಿಸಿದೆ. ಅಂದ ಹಾಗೆ ಶ್ರೀಲೀಲಾ ನಟಿಸುತ್ತಿರುವುದು ನಂದಮೂರಿ ಬಾಲಕೃಷ್ಣ ಅವರ ಜೊತೆ. ಇದು ಬಾಲಯ್ಯ ಅಭಿನಯದ 108ನೇ ಸಿನಿಮಾ.

ನಂದಮೂರಿ ಬಾಲಕೃಷ್ಣ ಅವರೊಂದಿಗೆ ಶ್ರೀಲೀಲಾ ನಟಿಸಲಿದ್ದಾರೆ ಎಂಬ ಮಾತು ಬಹಳ ದಿನಗಳಿಂದ ಕೇಳಿಬಂದಿತ್ತು. ಇದೀಗ ಅದು ಅಧಿಕೃತವಾಗಿ ಅನೌನ್ಸ್‌ ಆಗಿದೆ. ಈ ಚಿತ್ರದಲ್ಲಿ ಶ್ರೀಲೀಲಾ, ಬಾಲಕೃಷ್ಣ ಪುತ್ರಿಯಾಗಿ ನಟಿಸುತ್ತಿದ್ದಾರೆ ಎಂದು ಚಿತ್ರತಂಡ ಹೇಳಿದೆ. ಬಾಲಕೃಷ್ಣ ಕೈ ಹಿಡಿದಿರುವ ಫೋಟೋ ಹಂಚಿಕೊಂಡಿರುವ ಅನಿಲ್‌ ರಾವಿಪುಡಿ, ಚಿತ್ರತಂಡಕ್ಕೆ ಶ್ರೀಲೀಲಾ ಅವರನ್ನು ಸ್ವಾಗತಿಸಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರು ಫೈನಲ್‌ ಆಗಿಲ್ಲ. ಸದ್ಯಕ್ಕೆ NBK 108 ಟೈಟಲ್‌ನೊಂದಿಗೆ ಶೂಟಿಂಗ್‌ ನಡೆಯುತ್ತಿದೆ. ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಚಿತ್ರೀಕರಣಕ್ಕೆ ಶ್ರೀಲೀಲಾ ಹಾಜರಾಗಿದ್ದಾರೆ. ಇದೇ ಚಿತ್ರದಲ್ಲಿ ಬಾಲಿವುಡ್‌ ಖ್ಯಾತ ನಟಿ ನೋರಾ ಫತೇಹಿ ವಿಲನ್‌ ಆಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಶೈನ್‌ ಸ್ಕ್ರೀನ್‌ ಬ್ಯಾನರ್‌ ಅಡಿಯಲ್ಲಿ ಸಿನಿಮಾ ತಯಾರಾಗುತ್ತಿದ್ದು ಚಿತ್ರದ ಹಾಡುಗಳಿಗೆ ಎಸ್.‌ ತಮನ್‌ ಸಂಗೀತ ನೀಡುತ್ತಿದ್ದಾರೆ.

ಶ್ರೀಲೀಲಾ ಕುರಿತಾದ ಮತ್ತಷ್ಟು ಸುದ್ದಿಗಳು ಇಲ್ಲಿವೆ

ರಶ್ಮಿಕಾ ಮಂದಣ್ಣನನ್ನು ಹಿಂದಿಕ್ಕಲು ಶ್ರೀಲೀಲಾ ಎಂಟ್ರಿ... ಟಾಲಿವುಡ್‌ನಾದ್ಯಂತ ಇದೇ ಸುದ್ದಿ!

ಚಲೋ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಹೇಶ್‌ ಬಾಬು, ನಾನಿ, ಅಲ್ಲು ಅರ್ಜುನ್‌ ಸೇರಿದಂತೆ ಸ್ಟಾರ್‌ ನಟರೊಂದಿಗೆ ಆಕ್ಟ್‌ ಮಾಡಿದ್ದಾರೆ. ಲಕ್ಷಾಂತರ ಮಂದಿ ತೆಲುಗು ಅಭಿಮಾನಿಗಳನ್ನು ಕೂಡಾ ಗಳಿಸಿದ್ದಾರೆ. ಆದರೆ ಇದೀಗ ತೆಲುಗು ಚಿತ್ರರಂಗದಲ್ಲಿ ರಶ್ಮಿಕಾಗೆ ಬೇಡಿಕೆ ಕಡಿಮೆ ಆಗಿದ್ಯಾ ಎಂಬ ಚರ್ಚೆ ಶುರುವಾಗಿದೆ. ಪೂರ್ತಿ ಸ್ಟೋರಿ ಓದಲು ಈ ಲಿಂಕ್‌ ಒತ್ತಿ.

ಪವನ್‌ ಕಲ್ಯಾಣ್‌ ಜೊತೆ ತೆರೆ ಹಂಚಿಕೊಳ್ತಿದ್ದಾರಂತೆ ಶ್ರೀಲೀಲಾ.. ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ!

ಮುದ್ದು ಹುಡುಗಿ ಶ್ರೀಲೀಲಾ ಈಗ ಕನ್ನಡಕ್ಕಿಂತ ಟಾಲಿವುಡ್‌ನಲ್ಲೇ ಹೆಚ್ಚು ಬ್ಯುಸಿ ಇದ್ದಾರೆ. 'ಪೆಳ್ಳಿ ಸಂದಡಿ' ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಈ ಚೆಲುವೆ ಈ ತೆಲುಗು ಸ್ಟಾರ್‌ ನಟರ ಜೊತೆ ನಟಿಸಲು ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ಧಾರೆ. ಇದೀಗ ಈ ಕಿಸ್‌ ಹುಡುಗಿ ತೆಲುಗು ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರಂತೆ. ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲಿಂಕ್‌ ಒತ್ತಿ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ