ಕನ್ನಡ ಸುದ್ದಿ  /  ಮನರಂಜನೆ  /  Sreeleela With Pawan Kalyan: ಪವನ್‌ ಕಲ್ಯಾಣ್‌ ಜೊತೆ ತೆರೆ ಹಂಚಿಕೊಳ್ತಿದ್ದಾರಂತೆ ಶ್ರೀಲೀಲಾ.. ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ!

Sreeleela with Pawan Kalyan: ಪವನ್‌ ಕಲ್ಯಾಣ್‌ ಜೊತೆ ತೆರೆ ಹಂಚಿಕೊಳ್ತಿದ್ದಾರಂತೆ ಶ್ರೀಲೀಲಾ.. ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ!

ಮಹೇಶ್‌ ಬಾಬು ಹಾಗೂ ತ್ರಿವಿಕ್ರಮ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಿನಿಮಾಗೆ ಶ್ರೀಲೀಲಾ ನಾಯಕಿಯಾಗಿರುವುದರಿಂದ ಶ್ರೀಲೀಲಾ ಈ ಸಿನಿಮಾದಲ್ಲಿ ಐಟಮ್‌ ಡ್ಯಾನ್ಸ್‌ ಮಾಡಲು ಒಪ್ಪಿರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಎಲ್ಲಾ ಓಕೆ ಆದರೆ ಬೆಳ್ಳಿ ತೆರೆ ಮೇಲೆ ಅಭಿಮಾನಿಗಳು ಶ್ರೀಲೀಲಾ ಹಾಗೂ ಪವನ್‌ ಕಲ್ಯಾಣ್‌ ಡ್ಯಾನ್ಸ್‌ ನೋಡಬಹುದು.

ಪವನ್‌ ಕಲ್ಯಾಣ್‌, ಶ್ರೀಲೀಲಾ
ಪವನ್‌ ಕಲ್ಯಾಣ್‌, ಶ್ರೀಲೀಲಾ

ಮುದ್ದು ಹುಡುಗಿ ಶ್ರೀಲೀಲಾ ಈಗ ಕನ್ನಡಕ್ಕಿಂತ ಟಾಲಿವುಡ್‌ನಲ್ಲೇ ಹೆಚ್ಚು ಬ್ಯುಸಿ ಇದ್ದಾರೆ. 'ಪೆಳ್ಳಿ ಸಂದಡಿ' ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಈ ಚೆಲುವೆ ಈ ತೆಲುಗು ಸ್ಟಾರ್‌ ನಟರ ಜೊತೆ ನಟಿಸಲು ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ಧಾರೆ. ಇದೀಗ ಈ ಕಿಸ್‌ ಹುಡುಗಿ ತೆಲುಗು ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರಂತೆ.

ಟ್ರೆಂಡಿಂಗ್​ ಸುದ್ದಿ

ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಯಾವುದಾದ್ರೂ ಸಿನಿಮಾ ರಿಲೀಸ್‌ ಆಗ್ತಿದೆ ಎಂದರೆ ಸಾಕು ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಾರೆ. ಅಭಿಮಾನಿಗಳ ಆಸೆಯನ್ನು ನಿರಾಶೆ ಮಾಡಬಾರದು ಎಂಬ ಕಾರಣಕ್ಕೆ ಈಗ ಪವನ್‌ ಕಲ್ಯಾಣ್‌ ರಾಜಕೀಯದ ಜೊತೆಗೆ ಸಿನಿಮಾಗಳಲ್ಲಿ ಕೂಡಾ ಬ್ಯುಸಿ ಇದ್ದಾರೆ. ಈಗಾಗಲೇ ಅವರು ಹರೀಶ್ ಶಂಕರ್ ಮತ್ತು ಸುಜೀತ್ ಅವರಂತ ನಿರ್ದೇಶಕರ ಸಿನಿಮಾಗಳಲ್ಲಿ ನಟಿಸಲು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಇತ್ತೀಚೆಗೆ ತಮ್ಮ ಸೋದರಳಿಯ ಸಾಯಿ‌ ಧರಮ್‌ ತೇಜ್ ಜೊತೆ ಒಂದು ರೀಮೇಕ್‌ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಅನೌನ್ಸ್‌ ಮಾಡಿದ್ದರು. ಈ ಚಿತ್ರವನ್ನು ಸಮುದ್ರಖನಿ ನಿರ್ದೇಶಿಸುತ್ತಿದ್ದು, ತ್ರಿವಿಕ್ರಮ್ ಕಥೆ ಬರೆದಿದ್ದಾರೆ. ಇದು ತಮಿಳಿನ 'ವಿನೋದ ಸೀತ್ಯಂ' ರೀಮೇಕ್‌ ಆಗಿದೆ. ಮೊದಲ ಬಾರಿಗೆ ಪವನ್‌ ಕಲ್ಯಾಣ್‌ ಹಾಗೂ ಸಾಯಿ ಧರಮ್‌ ತೇಜ್‌ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಐಟಂ ನಂಬರ್‌ನಲ್ಲಿ ಶ್ರೀಲೀಲಾ

ಇದೀಗ ಈ ಚಿತ್ರದ ಬಗ್ಗೆ ಹೊಸ ಅಪ್‌ಡೇಟ್‌ ಕೇಳಿಬಂದಿದೆ. ಶ್ರೀಲೀಲಾ ಕೂಡಾ ಈ ರೀಮೇಕ್‌ ಸಿನಿಮಾದಲ್ಲಿ ನಟಿಸಲಿದ್ದಾರಂತೆ. ಅದರೆ ಅವರು ಇಡೀ ಸಿನಿಮಾದಲ್ಲಿ ಇರುವುದಿಲ್ಲ. ಬದಲಿಗೆ ಅವರು ಒಂದು ಐಟಮ್‌ ನಂಬರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. 'ಧಮಾಕಾ' ಚಿತ್ರದ ಮೂಲಕ ಸೂಪರ್ ಸಕ್ಸಸ್ ಪಡೆದ ಕ್ಯೂಟಿ ಶ್ರೀಲೀಲಾ ಅವರನ್ನು ಪವನ್‌ ಕಲ್ಯಾಣ್‌ ಸಿನಿಮಾ ತಂಡ ಸಂಪರ್ಕಿಸಿದ್ದು ಆಕೆ ಕೂಡಾ ಒಪ್ಪಿದ್ದಾರಂತೆ. ಆದರೆ ಈ ವಿಚಾರದ ಬಗ್ಗೆ ಚಿತ್ರತಂಡ ಆಗಲೀ ಶ್ರೀಲೀಲಾ ಆಗಲಿ ಅಧಿಕೃತವಾಗಿ ಅನೌನ್ಸ್‌ ಮಾಡಿಲ್ಲ.

ಮಹೇಶ್‌ ಬಾಬು ಹಾಗೂ ತ್ರಿವಿಕ್ರಮ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಿನಿಮಾಗೆ ಶ್ರೀಲೀಲಾ ನಾಯಕಿಯಾಗಿರುವುದರಿಂದ ಶ್ರೀಲೀಲಾ ಈ ಸಿನಿಮಾದಲ್ಲಿ ಐಟಮ್‌ ಡ್ಯಾನ್ಸ್‌ ಮಾಡಲು ಒಪ್ಪಿರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಎಲ್ಲಾ ಓಕೆ ಆದರೆ ಬೆಳ್ಳಿ ತೆರೆ ಮೇಲೆ ಅಭಿಮಾನಿಗಳು ಶ್ರೀಲೀಲಾ ಹಾಗೂ ಪವನ್‌ ಕಲ್ಯಾಣ್‌ ಡ್ಯಾನ್ಸ್‌ ನೋಡಬಹುದು. ಈ ರೀಮೇಕ್‌ ಚಿತ್ರವನ್ನು ಜೀ ಸ್ಟುಡಿಯೋಸ್ ಮತ್ತು ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಟಿಜಿ ವಿಶ್ವಪ್ರಸಾದ್ ನಿರ್ಮಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಎಸ್.‌ ತಮನ್‌ ಸಂಗೀತ ನೀಡುತ್ತಿದ್ದಾರೆ. ವಿಶೇಷ ಎಂದರೆ ಈ ಚಿತ್ರದಲ್ಲಿ ಪವನ್ ಕಲ್ಯಾಣ್, ದೇವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಒಟ್ಟಿನಲ್ಲಿ ಈ ಸಿನಿಮಾದ ಮುಂದಿನ ಅಪ್‌ಡೇಟ್‌ ಪಡೆಯಲು ಫ್ಯಾನ್ಸ್‌ ಎದುರು ನೋಡುತ್ತಿದ್ದಾರೆ.

ಬಾಲಯ್ಯ 108ನೇ ಚಿತ್ರಕ್ಕೆ ಶ್ರೀಲೀಲಾ ನಾಯಕಿ

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಂದಮುರಿ ಬಾಲಕೃಷ್ಣ 108ನೇ ಸಿನಿಮಾ ಅದ್ದೂರಿಯಾಗಿ ಸೆಟ್ಟೇರಿತ್ತು. ಬಾಲಕೃಷ್ಣ 108ನೇ ಚಿತ್ರಕ್ಕೆ ಅನಿಲ್ ರವಿಪುಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಇಬ್ಬರ ಕ್ರೇಜಿ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ಪ್ಯಾನ್ ಇಂಡಿಯಾ ಚಿತ್ರಕ್ಕೆ ಶೈನ್ ಸ್ಕ್ರೀನ್ಸ್ ಬ್ಯಾನರ್ ನಡಿ ಸಾಹು ಗರಪಟಿ ಮತ್ತು ಹರೀಶ್ ಪೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ.

ಆಕ್ಷನ್ ಹಾಗೂ ಮಾಸ್ ಎಲಿಮೆಂಟ್ ಒಳಗೊಂಡ ಈ ಚಿತ್ರಕ್ಕೆ ಬಾಲಕೃಷ್ಣ ಅವರ ಮಾಸ್ ಇಮೇಜ್, ಸ್ಟಾರ್ ಡಮ್ ಗಮನದಲ್ಲಿಟ್ಟುಕೊಂಡು ಅನಿಲ್ ರವಿಪುಡಿ ಪವರ್ ಫುಲ್ ಕಥೆ ಹೆಣೆದಿದ್ದಾರೆ. ಚಿತ್ರದಲ್ಲಿ ಶ್ರೀಲೀಲಾ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ. ಬಾಲಯ್ಯ ಹಾಗೂ ಶ್ರೀಲೀಲಾ ಕಾಂಬಿನೇಶನ್‌ ತೆರೆ ಮೇಲೆ ಹೇಗೆ ವರ್ಕೌಟ್‌ ಆಗಲಿದೆ ಕಾದು ನೋಡಬೇಕು.

IPL_Entry_Point