ಕನ್ನಡ ಸುದ್ದಿ  /  ಮನರಂಜನೆ  /  Rashmika Vs Sreeleela: ರಶ್ಮಿಕಾ ಮಂದಣ್ಣನನ್ನು ಹಿಂದಿಕ್ಕಲು ಶ್ರೀಲೀಲಾ ಎಂಟ್ರಿ... ಟಾಲಿವುಡ್‌ನಾದ್ಯಂತ ಇದೇ ಸುದ್ದಿ!

Rashmika vs Sreeleela: ರಶ್ಮಿಕಾ ಮಂದಣ್ಣನನ್ನು ಹಿಂದಿಕ್ಕಲು ಶ್ರೀಲೀಲಾ ಎಂಟ್ರಿ... ಟಾಲಿವುಡ್‌ನಾದ್ಯಂತ ಇದೇ ಸುದ್ದಿ!

ಕಳೆದ ವರ್ಷ ಮಾರ್ಚ್‌ನಲ್ಲಿ ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾ ತೆರೆ ಕಂಡಿತ್ತು. ಸದ್ಯಕ್ಕೆ ರಶ್ಮಿಕಾ, ಅಲ್ಲು ಅರ್ಜುನ್‌ ಜೊತೆ ಪುಷ್ಪ ಸೀಕ್ವೆಲ್‌ನಲ್ಲಿ ನಟಿಸುತ್ತಿದ್ದಾರೆ. ಇದನ್ನು ಹೊರತುಪಡಿಸಿ ಅವರ ಕೈಯ್ಯಲ್ಲಿ ಹೊಸ ತೆಲುಗು ಸಿನಿಮಾಗಳು ಇಲ್ಲವೇ ಇಲ್ಲ.

ರಶ್ಮಿಕಾ ಮಂದಣ್ಣ, ಶ್ರೀಲೀಲಾ
ರಶ್ಮಿಕಾ ಮಂದಣ್ಣ, ಶ್ರೀಲೀಲಾ

ಚಲೋ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಹೇಶ್‌ ಬಾಬು, ನಾನಿ, ಅಲ್ಲು ಅರ್ಜುನ್‌ ಸೇರಿದಂತೆ ಸ್ಟಾರ್‌ ನಟರೊಂದಿಗೆ ಆಕ್ಟ್‌ ಮಾಡಿದ್ದಾರೆ. ಲಕ್ಷಾಂತರ ಮಂದಿ ತೆಲುಗು ಅಭಿಮಾನಿಗಳನ್ನು ಕೂಡಾ ಗಳಿಸಿದ್ದಾರೆ. ಆದರೆ ಇದೀಗ ತೆಲುಗು ಚಿತ್ರರಂಗದಲ್ಲಿ ರಶ್ಮಿಕಾಗೆ ಬೇಡಿಕೆ ಕಡಿಮೆ ಆಗಿದ್ಯಾ ಎಂಬ ಚರ್ಚೆ ಶುರುವಾಗಿದೆ.

ಟ್ರೆಂಡಿಂಗ್​ ಸುದ್ದಿ

ಒಬ್ಬೊಬ್ಬರಿಗೆ ಒಂದೊಂದು ಕಾಲ ಎನ್ನುವಂತೆ ಇಷ್ಟು ದಿನಗಳ ಕಾಲ ರಶ್ಮಿಕಾ ಮಂದಣ್ಣ ಟಾಲಿವುಡ್‌ ಆಳಿದರು. ನಂತರ ತಮಿಳು ಈಗ ಬಾಲಿವುಡ್‌ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಕಳೆದ ವರ್ಷ ಮಾರ್ಚ್‌ನಲ್ಲಿ ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾ ತೆರೆ ಕಂಡಿತ್ತು. ಸದ್ಯಕ್ಕೆ ಅವರು, ಅಲ್ಲು ಅರ್ಜುನ್‌ ಜೊತೆ ಪುಷ್ಪ ಸೀಕ್ವೆಲ್‌ನಲ್ಲಿ ನಟಿಸುತ್ತಿದ್ದಾರೆ. ಇದನ್ನು ಹೊರತುಪಡಿಸಿ ಅವರ ಕೈಯ್ಯಲ್ಲಿ ಹೊಸ ತೆಲುಗು ಸಿನಿಮಾಗಳು ಇಲ್ಲವೇ ಇಲ್ಲ. ಜೊತೆಗೆ ರಶ್ಮಿಕಾ ಕಳೆದ ವರ್ಷ ಕಿರಿಕ್‌ ಪಾರ್ಟಿ ಟೀಮ್‌ ಬಗ್ಗೆ ಕೈ ಸನ್ನೆ ಮಾಡಿದ್ದ ವಿಚಾರ ತೆಲುಗು ಚಿತ್ರರಂಗದಲ್ಲಿ ಕೂಡಾ ಭಾರೀ ಚರ್ಚೆಯಾಗಿತ್ತು. ಈ ಕಾರಣಕ್ಕಾಗಿ ತೆಲುಗು ಮಂದಿ ಕೂಡಾ ರಶ್ಮಿಕಾಗೆ ಆಫರ್‌ ಕೊಡಲು ಮುಂದೆ ಬರುತ್ತಿಲ್ಲ ಎನ್ನಲಾಗುತ್ತಿದೆ.

ಇನ್ನು ರಶ್ಮಿಕಾ ಮಂದಣ್ಣಗೆ ಶ್ರೀಲೀಲಾ ಅವರೇ ಪೈಪೋಟಿ ಅಂತೆ. ಈ ಚೆಲುವೆ ಚಿತ್ರರಂಗಕ್ಕೆ ಬಂದಿದ್ದು ಕಿಸ್‌ ಚಿತ್ರದ ಮೂಲಕ. ಇದಾದ ನಂತರ ಭರಾಟೆ ಚಿತ್ರದಲ್ಲಿ ಶ್ರೀಮುರಳಿ ಜೊತೆ ಕಾಣಿಸಿಕೊಂಡ ಚೆಲುವೆ ನಂತರ ಪೆಳ್ಳಿ ಸಂದಡಿ ಮೂಲಕ ಟಾಲಿವುಡ್‌ಗೆ ಬಂದರು. ಸದ್ಯಕ್ಕೆ ಶ್ರೀಲೀಲಾ, ಕನ್ನಡಕ್ಕಿಂತ ತೆಲುಗಿನಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ. ಮಹೇಶ್‌ ಬಾಬು ಜೊತೆ ಹೆಸರಿಡದ ಒಂದು ಸಿನಿಮಾ, ಅನಗನಗಾ ಒಕ ರಾಜು, ಕನ್ನಡ ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗುತ್ತಿರುವ ಜೂನಿಯರ್‌, ಬೊಯಪಟಿ ಶ್ರೀನು ನಿರ್ದೇಶನದಲ್ಲಿ ಒಂದು ಸಿನಿಮಾಗಳಲ್ಲಿ ನಟಿಸಲು ಶ್ರೀಲೀಲಾ ಸಹಿ ಹಾಕಿದ್ದಾರಂತೆ. ಜೊತೆಗೆ ಈಗ ವಿಜಯ್‌ ದೇವರಕೊಂಡ ಜೊತೆ ಒಂದು ಸಿನಿಮಾದಲ್ಲಿ ನಟಿಸಲು ಒಪ್ಪಿದ್ದಾರಂತೆ.

ಸಿತಾರಾ ಎಂಟರ್ಟೈನ್ಮೆಂಟ್‌ ಬ್ಯಾನರ್‌ ಅಡಿ ಗೌತಮ್‌ ತಿನ್ನನೂರಿ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರಂತೆ. ಕನ್ನಡದಿಂದ ತೆಲುಗಿಗೆ ಬಂದಿರುವ ಅನುಷ್ಕಾ ಶೆಟ್ಟಿ, ರಶ್ಮಿಕಾ ಮಂದಣ್ಣ, ನಭಾ ನಟೇಶ್‌ ಹಾಗೂ ಇನ್ನಿತರರು ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಇದೀಗ ಶ್ರೀಲೀಲಾ ಎಲ್ಲರನ್ನೂ ಹಿಂದಿಕ್ಕಿ ಟಾಲಿವುಡ್‌ನಲ್ಲಿ ತಮ್ಮ ಸ್ಥಾನ ಭದ್ರ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಚಿತ್ರರಂಗದಲ್ಲಿ ಆಕೆಗೆ ಯಾವ ರೀತಿ ಬ್ರೇಕ್‌ ಸಿಗಲಿದೆ ಎಂಬುದನ್ನು ಕಾದು ನೋಡಬೇಕು.

ಪವನ್‌ ಕಲ್ಯಾಣ್‌ ಜೊತೆ ಶ್ರೀಲೀಲಾ?

ಪವನ್‌ ಕಲ್ಯಾಣ್‌, ತಮ್ಮ ಸೋದರಳಿಯ ಸಾಯಿ ಧರಮ್‌ ತೇಜ್‌ ಜೊತೆ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದು ಈ ಚಿತ್ರದಲ್ಲಿ ಶ್ರೀಲೀಲಾ ಕೂಡಾ ನಟಿಸಲಿದ್ದಾರಂತೆ. ಅದರೆ ಅವರು ಇಡೀ ಸಿನಿಮಾದಲ್ಲಿ ಇರುವುದಿಲ್ಲ. ಬದಲಿಗೆ ಅವರು ಒಂದು ಐಟಮ್‌ ನಂಬರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. 'ಧಮಾಕಾ' ಚಿತ್ರದ ಮೂಲಕ ಸೂಪರ್ ಸಕ್ಸಸ್ ಪಡೆದ ಕ್ಯೂಟಿ ಶ್ರೀಲೀಲಾ ಅವರನ್ನು ಪವನ್‌ ಕಲ್ಯಾಣ್‌ ಸಿನಿಮಾ ತಂಡ ಸಂಪರ್ಕಿಸಿದ್ದು ಆಕೆ ಕೂಡಾ ಒಪ್ಪಿದ್ದಾರಂತೆ. ಆದರೆ ಈ ವಿಚಾರದ ಬಗ್ಗೆ ಚಿತ್ರತಂಡ ಆಗಲೀ ಶ್ರೀಲೀಲಾ ಆಗಲಿ ಅಧಿಕೃತವಾಗಿ ಅನೌನ್ಸ್‌ ಮಾಡಿಲ್ಲ.

ಮಹೇಶ್‌ ಬಾಬು ಹಾಗೂ ತ್ರಿವಿಕ್ರಮ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಿನಿಮಾಗೆ ಶ್ರೀಲೀಲಾ ನಾಯಕಿಯಾಗಿರುವುದರಿಂದ ಶ್ರೀಲೀಲಾ ಈ ಸಿನಿಮಾದಲ್ಲಿ ಐಟಮ್‌ ಡ್ಯಾನ್ಸ್‌ ಮಾಡಲು ಒಪ್ಪಿರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಎಲ್ಲಾ ಓಕೆ ಆದರೆ ಬೆಳ್ಳಿ ತೆರೆ ಮೇಲೆ ಅಭಿಮಾನಿಗಳು ಶ್ರೀಲೀಲಾ ಹಾಗೂ ಪವನ್‌ ಕಲ್ಯಾಣ್‌ ಡ್ಯಾನ್ಸ್‌ ನೋಡಬಹುದು. ಈ ರೀಮೇಕ್‌ ಚಿತ್ರವನ್ನು ಜೀ ಸ್ಟುಡಿಯೋಸ್ ಮತ್ತು ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಟಿಜಿ ವಿಶ್ವಪ್ರಸಾದ್ ನಿರ್ಮಿಸುತ್ತಿದ್ದಾರೆ.

IPL_Entry_Point