ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಲ್ಲಿ ಅನಧಿಕೃತ ಬಡಾವಣೆಗಳ ಅಬ್ಬರ, ನಿವೇಶನ ಖರೀದಿಸುವಾಗ ಇರಲಿ ಎಚ್ಚರ

Bangalore News: ಬೆಂಗಳೂರಲ್ಲಿ ಅನಧಿಕೃತ ಬಡಾವಣೆಗಳ ಅಬ್ಬರ, ನಿವೇಶನ ಖರೀದಿಸುವಾಗ ಇರಲಿ ಎಚ್ಚರ

Umesha Bhatta P H HT Kannada

Apr 28, 2024 08:44 PM IST

ನಿವೇಶನ ಖರೀದಿ ಮುನ್ನ ಬೆಂಗಳೂರಿನಲ್ಲಿ ಎಚ್ಚರಿಕೆ ವಹಿಸುವುದು ಅತ್ಯಗತ್ಯ

    • ಬೆಂಗಳೂರಿನಲ್ಲಿ ನಿವೇಶನ ಖರೀದಿಗೆ ಮುಂದಾಗಿದ್ದೀರಾ? ಒಂದು ಕ್ಷಣ ತಾಳಿ, ಈ ಲೇಖನ ಓದಿ ನಂತರ ಮುಂದುವರೆಯಿರಿ; ಎಂತಹ ಬಡಾವಣೆಯಲ್ಲಿ ನಿವೇಶನ ಖರೀದಿಸಬೇಕು? ಏನೆಲ್ಲಾ ದಾಖಲೆಗಳನ್ನು ಪರಿಶೀಲಿಸಬೇಕು? ನಿಮ್ಮ ಗೊಂದಲಗಳಿಗೆ ಇಲ್ಲಿದೆ ಉತ್ತರ.
    • ವರದಿ: ಎಚ್‌.ಮಾರುತಿ. ಬೆಂಗಳೂರು
ನಿವೇಶನ ಖರೀದಿ ಮುನ್ನ ಬೆಂಗಳೂರಿನಲ್ಲಿ ಎಚ್ಚರಿಕೆ ವಹಿಸುವುದು ಅತ್ಯಗತ್ಯ
ನಿವೇಶನ ಖರೀದಿ ಮುನ್ನ ಬೆಂಗಳೂರಿನಲ್ಲಿ ಎಚ್ಚರಿಕೆ ವಹಿಸುವುದು ಅತ್ಯಗತ್ಯ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಾಲ್ಕೂ ದಿಕ್ಕುಗಳಲ್ಲಿ ಎಗ್ಗಿಲ್ಲದೆ ಬೆಳೆಯುತ್ತಿದೆ. ಎಲ್ಲಿ ನೋಡಿದರೂ ಲೇ ಔಟ್ ಗಳ ನಿರ್ಮಾಣ ಇಲ್ಲವೇ ಗಗನಚುಂಬಿ ಕಟ್ಟಡಗಳು ತಲೆ ಎತ್ತುತ್ತಲೇ ಇವೆ. ಈ ಎಲ್ಲ ಲೇ ಔಟ್ ಗಳು ಮತ್ತು ಗಗನಚುಂಬಿ ಕಟ್ಟಡಗಳು ಸಕ್ರಮ ಪ್ರಾಧಿಕಾರದಿಂದ ಪರವಾನಗಿ ಪಡೆದುಕೊಂಡಿವೆಯೇ ಎಂದು ಪರಿಶೀಲಿಸಿದರೆ ನಕಾರಾತ್ಮಕ ಉತ್ತರ ದೊರೆಯುತ್ತದೆ. ಇತ್ತೀಚೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 279 ಅನಧಿಕೃತ ಬಡಾವಣೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಬಡಾವಣೆಗಳಲ್ಲಿ ಮನೆ ಅಥವಾ ನಿವೇಶನ ಖರೀದಿಸದಂತೆ ಎಚ್ಚರಿಕೆ ನೀಡಿದೆ. ಅಕ್ರಮ ಲೇ ಔಟ್ ಗಳೆಂದರೆ ಯಾವುವು ಎಂಬ ಪ್ರಶ್ನೆ ಸಹಜವಾಗಿಯೇ ಗ್ರಾಹಕರಲ್ಲಿ ಉದ್ಭವಿಸುತ್ತದೆ. ಭೂ ಬಳಕೆ ಬದಲಾವಣೆಗೆ ಬಿಡಿಎಯಿಂದ ಭೂ ಪರಿವರ್ತನೆಗೆ ಅನುಮತಿ.ಪಡೆದುಕೊಳ್ಳದೇ ಇರುವುದು, ಭೂ ಪರಿವರ್ತನೆಗೆ ಜಿಲ್ಲಾಧಿಕಾರಿಗಳ ಒಪ್ಪಿಗೆ ಮತ್ತು ಲೇ ಔಟ್ ರಚನೆಗೆ ಬಿಡಿಎ ಅನುಮೋದನೆ ಕಡ್ಡಾಯವಾಗಿರುತ್ತದೆ. ಆದರೆ ರಿಯಲ್ ಎಸ್ಟೇಟ್ ಉದ್ದಿಮೆದಾರರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಗ್ರಾಹಕರನ್ನು ಮೋಸಗೊಳಿಸುವ ಉದಾಹರಣೆಗಳೇ ಹೆಚ್ಚು.

ಟ್ರೆಂಡಿಂಗ್​ ಸುದ್ದಿ

Bangalore News: ಬೆಂಗಳೂರು ಉದ್ಯಮಿ ಪುತ್ರಿ ಪ್ರೇಮಕಥನ; ಮನೆಯಲ್ಲಿದ್ದ1 ಕೋಟಿ ರೂ. ಜತೆ ಪರಾರಿ

Bangalore rains: ಬೆಂಗಳೂರಿನಲ್ಲಿ ನಿಲ್ಲದ ಮಳೆ, ಇನ್ನೂ ಎರಡು ದಿನ ಮಳೆ ಮುನ್ಸೂಚನೆ

Hassan Scandal: ಹಾಸನ ಸಂತ್ರಸ್ತೆ ಅಪಹರಣ ಪ್ರಕರಣ, ಮಾಜಿ ಸಚಿವ ರೇವಣ್ಣಗೆ ಜಾಮೀನು ಮಂಜೂರು, ಬಿಡುಗಡೆ ಯಾವಾಗ?

Vande Bharath Train: ತಿರುವನಂತಪುರಂ ಮಂಗಳೂರು ವಂದೇ ಭಾರತ್‌ ರೈಲು ಸಂಚಾರ ಸಮಯದಲ್ಲಿ ಬದಲಾವಣೆ

ಖರೀದಿಯ ಕಷ್ಟಗಳು ಅನೇಕ

ಶೇ.90ರಷ್ಟು ಗ್ರಾಹಕರಿಗೆ ಯಾವ ರೀತಿಯ ಲೇ ಔಟ್ ಗಳಲ್ಲಿ ನಿವೇಶನಗಳ್ನು ಖರೀದಿಸಬೇಕು ಎಂಬ ಮೂಲಭೂತ ಜ್ಞಾನವೇ ಇರುವುದಿಲ್ಲ. ತಿಳಿದುಕೊಳ್ಳುವ ಗೋಜಿಗೂ ಹೋಗುವುದಿಲ್ಲ. ಆಕರ್ಷಕ ಜಾಹೀರಾತು ಅಥವಾ ಮಧ್ಯವರ್ತಿಗಳ ಮಾತಿಗೆ ಮರುಳಾಗಿ ಮೋಸ ಹೋಗುವವರೇ ಹೆಚ್ಚು.

ಲೇ ಔಟ್ ನಿರ್ಮಾಣಕ್ಕೆ ಮೊದಲಿಗೆ ಭೂ ಪರಿವರ್ತನೆ ಪ್ರಮಾಣಪತ್ರ ಮುಖ್ಯ. ಭೂ ಮಾಲೀಕರು.ತಮ್ಮ ಕೃಷಿ ಭೂಮಿಯನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಲು ಪರಿವರ್ತನೆಗೆ ಜಿಲ್ಲಾಧಿಕಾರಿಗಳ ಮುಂದೆ ಅರ್ಜಿ ಸಲ್ಲಿಸಬೇಕು. ಅವರು ಅನುಮೋದನೆ ನೀಡಿದರೆ ಮಾತ್ರ ಕಾನೂನು ಬದ್ಧವಾಗುತ್ತದೆ.

ಬೆಂಗಳೂರು ವ್ಯಾಪ್ತಿಯಲ್ಲಾದರೆ ಬಿಡಿಎ ಮತ್ತು ಬೆಂಗಳೂರು ವ್ಯಾಪ್ತಿಯ ಹೊರಗಾದರೆ ಇತರೆ ಅರ್ಹ ಸಕ್ಷಮ ಪ್ರಾಧಿಕಾರದಿಂದ ಲೇ ಔಟ್ ನಿರ್ಮಾಣಕ್ಕೆ ಪ್ರಮಾಣ ಪತ್ರ ಪಡೆದುಕೊಳ್ಳಬೇಕು. ಆದರೆ ಬಹುತೇಕ ರಿಯಲ್ ಎಸ್ಟೇಟ್ ಉದ್ಯಮಿಗಳು ಪಂಚಾಯತ್ ಗಳಿಂದ ಪ್ರಮಾಣ ಪತ್ರ ಪಡೆದುಕೊಳ್ಳುತ್ತವೆ. ಅದರೆ ಪಂಚಾಯತಿಗಳಿಗೆ ಪ್ರಮಾಣ ಪತ್ರ ನೀಡುವ ಅಧಿಕಾರವೇ ಇರುವುದಿಲ್ಲ.

ಬಿಡಿಎ ಅಥವಾ ಬಿಎಂಆರ್ ಡಿಎ ವ್ಯಾಪ್ತಿಯೊಳಗೆ ಬರುವ ಪಂಚಾಯತ್ ಗಳಿಗೆ ಲೇಔಟ್ ನಿರ್ಮಾಣಕ್ಕೆ ಅನುಮತಿ ನೀಡುವ ಕಾನೂನುಬದ್ಧ ಅಧಿಕಾರವೇ ಇರುವುದಿಲ್ಲ ಎನ್ನುವುದು.ಬಹುತೇಕ ನಾಗರೀಕರಿಗೆ ಅರಿವು ಇರುವುದಿಲ್ಲ.

ಬಿಡಿಎ ಪ್ರಕಟಿಸಿರುವ ಪಟ್ಟಿ ಸಣ್ಣದು. ಇಂತಹ ನೂರಾರು ಲೇಔಟ್ ಗಳು ಬೆಂಗಳೂರು ಸುತ್ತಮುತ್ತ ನಾಯಿಕೊಡೆಗಳಂತೆ ತಲೆ ಎತ್ತಿವೆ. ಅಕ್ರಮ ಲೇ ಔಟ್ ಗಳನ್ನು ನಿರ್ಮಾಣ ಮಾಡಿ ಅಲ್ಲಿ ಗ್ರಾಹಕರು ಮನೆಗಳನ್ನು ಕಟ್ಟಿಕೊಂಡರೆ ನಂತರ ಅಕ್ರಮ ಸಕ್ರಮ ಅಡಿಯಲ್ಲಿ ಬಿಡಿಎ ಸಕ್ರಮಗೊಳಿಸುತ್ತದೆ ಎಂಬ ಭಾವನೆ ಬಿಲ್ಡರ್ ಗಳದ್ದು ಎಂದು ವಕೀಲರು ಅಭಿಪ್ರಾಯಪಡುತ್ತಾರೆ.

ಪಹಣಿ ಮತ್ತೊಂದು ಗೊಂದಲ

ಒಂದು ಬಾರಿ ಭೂ ಪರಿವರ್ತನೆಯಾದರೆ ದಾಖಲೆಗಳು ಯೋಜನಾ ಪ್ರಾಧಿಕಾರಕ್ಕೆ ಹಸ್ತಾಂತರವಾಗುತ್ತವೆ. ಭೂ ಪರಿವರ್ತನೆಯಾಗದಿದ್ದರೆ ಕಂದಾಯ ದಾಖಲೆಯಲ್ಲೇ ಉಳಿಯುತ್ತವೆ..ಪಹಣಿ ಮೂಲ ಮಾಲೀಕನ ಹೆಸರಿನಲ್ಲೇ ಇರುತ್ತದೆಯೇ ಹೊರತು ನಿವೇಶನ ಮಾಲೀಕನ ಹೆಸರಿಗೆ ವರ್ಗಾವಣೆಯಾಗುವುದಿಲ್ಲ. ಪಹಣಿಗೆ ಕನಿಷ್ಠ ಐದು ಗುಂಟೆ ಅಥವಾ 5445 ಚ.ಅಡಿ ಭೂಮಿ

ಅವಶ್ಯಕತೆ ಇರುತ್ತದೆ. ಪರಿವರ್ತನಾ ಪ್ರಮಾಣ ಪತ್ರದ ಪ್ರಕಾರ ಕಂದಾಯ ಇಲಾಖೆಯ ಭೂಮಿ ಸಾಫ್ಟ್ ವೇರ್ ಪ್ರಕಾರ ಒಂದು ಪಹಣಿಯ ಹೆಸರಿನಲ್ಲಿರುವ ಇಡೀ ಭೂಮಿಯನ್ನು ಒಂದು ಯೂನಿಟ್ ಆಗಿ ಮಾರಾಟ ಮಾಡಬಹುದೇ ಹೊರತು ನಿವೇಶನಗಳಾಗಿ ಅಲ್ಲ ಎಂದು ಹೇಳುತ್ತದೆ ಅಂದರೆ ಲೇಔಟ್ ನಿರ್ಮಾಣಕ್ಕೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಇದ್ದರೆ ನಿವೇಶನಗಳು

ಪಹಣಿಯಲ್ಲಿ ಭೂ ಮಾಲೀಕನ ಹೆಸರಿನಲ್ಲೇ ಉಳಿಯುತ್ತವೆ. ಶಿವರಾಮ ಕಾರಂತ ಅಥವ ಕೆಂಪೇಗೌಡ ಬಡಾವಣೆಯಂತಹ ಬೃಹತ್ ಯೋಜನೆಗಳಿಗೆ ಜಮೀನುಗಳನ್ನು ಬಿಡಿಎ ವಶಪಡಿಸಿಕೊಳ್ಳಲು ಮುಂದಾದಾಗ ನಿವೇಶನಗಳ ಮಾಲೀಕರಿಗೆ ಪರಿಹಾರ ಸಿಗುವುದಿಲ್ಲ. ಪಹಣಿ ಯಾರ ಹೆಸರಿನಲ್ಲಿರುತ್ತದೆಯೋ ಅವರಿಗೆ ಪರಿಹಾರ ಹೋಗುತ್ತದೆ.

ಪ್ರಸ್ತುತ ಹೆಸರಿಸಿರುವ 279 ಲೇ ಔಟ್ ಗಳ ಭೌಗೋಳಿಕ ಸ್ಥಳ, ವಿಳಾಸ ಅಥವಾ ನಿವೇಶನ ಅಭಿವೃದ್ಧಿಪಡಿಸಿದ ಮಾಲೀಕನ ಹೆಸರನು ಬಿಡಿಎ ಎಲ್ಲಿಯೂ ಉಲ್ಲೇಖಿಸಿಲ್ಲ. ಕೇವಲ ಗ್ರಾಮ, ಹೋಬಳಿ ಮತ್ತು ಸರ್ವೇ ನಂಬರ್ ಮಾತ್ರ ಉಲ್ಲೇಖ ಮಾಡಿದೆ. ಸ್ಪಷ್ಟವಾಗಿ ಹೇಳದೆ ಇದ್ದರೆ ತಿಳಿಯುವುದಾದರೂ ಹೇಗೆ? ಸರ್ವೇ ನಂಬರ್ ಜೊತೆಗೆ ಲೇಔಟ್ ಗಳ ಹೆಸರು ಮತ್ತು ಮಾಲೀಕರ ಹೆಸರನ್ನೂ ಪ್ರಕಟಿಸಬೇಕಿತ್ತು ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.

ಜುಲೈ 2017ರ ನಂತರ ಎಲ್ಲಾ ಯೋಜನೆಗಳೂ ರೇರಾ ಅಡಿಯಲ್ಲಿ ನೋಂದಣಿಯಾಗಬೇಕು. ಭೂ ಪರಿವರ್ತನೆಯಾಗದಿದ್ದರೆ ರೇರಾ ಅನುಮತಿ ಸಿಗುವುದಿಲ್ಲ. ರೇರಾ ನೋಂದಣೀ ಇಲ್ಲ ಎಂದಾದಲ್ಲಿ ಆ ಬಡಾವಣೆ ಅಕ್ರಮ ಎಂದೇ ಅರ್ಥ ಎಂದು ವಕೀಲರು ಹೇಳುತ್ತಾರೆ.

(ವರದಿ: ಎಚ್‌.ಮಾರುತಿ, ಬೆಂಗಳೂರು)

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ