ಕನ್ನಡ ಸುದ್ದಿ  /  ಕರ್ನಾಟಕ  /  ಇಸ್ರೋ ಚಂದ್ರಯಾನ 3ರ ಸಂದೇಶ ವಾಹಕದ ರೂವಾರಿ ವಿಜಯನಗರ ಕೊಟ್ಟೂರಿನ ಡಾ ಬಿ ಹೆಚ್ ಎಂ ದಾರುಕೇಶ್

ಇಸ್ರೋ ಚಂದ್ರಯಾನ 3ರ ಸಂದೇಶ ವಾಹಕದ ರೂವಾರಿ ವಿಜಯನಗರ ಕೊಟ್ಟೂರಿನ ಡಾ ಬಿ ಹೆಚ್ ಎಂ ದಾರುಕೇಶ್

HT Kannada Desk HT Kannada

Aug 23, 2023 10:56 PM IST

ಇಸ್ರೋ ಚಂದ್ರಯಾನ 3ರ ಸಂದೇಶ ವಾಹಕದ ರೂವಾರಿ ವಿಜಯನಗರ ಕೊಟ್ಟೂರಿನ ಡಾ ಬಿ ಹೆಚ್ ಎಂ ದಾರುಕೇಶ್

  • ಇಸ್ರೋ ಚಂದ್ರಯಾನಕ್ಕೆ ಆಂಪ್ಲಿಫೈಯರ್ ರೂಪಿಸುವುಲ್ಲಿ ಪ್ರಮುಖ ಪಾತ್ರವಹಿಸಿದವರು ಕರ್ನಾಟಕದ ವಿಜಯನಗರ ಜಿಲ್ಲೆ ಕೊಟ್ಟೂರಿನ ಡಾ.ದಾರುಕೇಶ್. ಅವರ ಕಿರುಪರಿಚಯ ಹೀಗಿದೆ.

ಇಸ್ರೋ ಚಂದ್ರಯಾನ 3ರ ಸಂದೇಶ ವಾಹಕದ ರೂವಾರಿ ವಿಜಯನಗರ ಕೊಟ್ಟೂರಿನ ಡಾ ಬಿ ಹೆಚ್ ಎಂ ದಾರುಕೇಶ್
ಇಸ್ರೋ ಚಂದ್ರಯಾನ 3ರ ಸಂದೇಶ ವಾಹಕದ ರೂವಾರಿ ವಿಜಯನಗರ ಕೊಟ್ಟೂರಿನ ಡಾ ಬಿ ಹೆಚ್ ಎಂ ದಾರುಕೇಶ್

ಐತಿಹಾಸಿಕ ಚಂದ್ರಯಾನ 3ರ ಯಶಸ್ಸು, ಸಂಭ್ರಮ ಎಲ್ಲೆಡೆ ಕಾಣಿಸುತ್ತಿದೆ. ಚಂದ್ರಯಾನ 3ಕ್ಕಾಗಿ ಕೆಲಸ ಮಾಡಿದವರನ್ನು, ಪರಿಶ್ರಮ ಪಟ್ಟವರನ್ನು ಗುರುತಿಸುವ ಕೆಲಸ ನಡೆದಿದೆ. ಚಂದ್ರಯಾನ 3ರ ಬಹುಮುಖ್ಯ ಭಾಗವಾದ ಆಂಪ್ಲಿಫೈಯರ್ ರಚಿಸಿ ಕೊಟ್ಟದ್ದು ವಿಜಯನಗರ ಜಿಲ್ಲೆಯ ಕೊಟ್ಟೂರಿನ ವಿಜ್ಞಾನಿ ಡಾ.ಬಿ.ಎಚ್‍.ಎಂ. ದಾರುಕೇಶ್ ಎಂಬ ಹೆಮ್ಮೆಯ ವಿವರ ಬಹಿರಂಗವಾಗಿದೆ.

ಟ್ರೆಂಡಿಂಗ್​ ಸುದ್ದಿ

SM Krishna: ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣಗೆ ಆರೋಗ್ಯ ಸ್ಥಿರ; ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ

Viral Photo: ಟೊಮೆಟೊ ಕದ್ರೆ ಹುಷಾರ್: ಬೆಂಗಳೂರು ತರಕಾರಿ ಮಳಿಗೆಯಲ್ಲಿ ರಾರಾಜಿಸುತ್ತಿದೆ ಕೆಂಗಣ್ಣು ಬೀರಿದ ಮಹಿಳೆ ಫೋಟೊ

Bengaluru Temperature: ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ ಎಫೆಕ್ಟ್; ಮಾರ್ಚ್ ಬಳಿಕ ಅತಿ ಕಡಿಮೆ ತಾಪಮಾನ ದಾಖಲು

Comedk Exam 2024: ಇಂದು ಕಾಮೆಡ್-ಕೆ ಆನ್‌ಲೈನ್ ಪರೀಕ್ಷೆ; ಪ್ರವೇಶ ಪತ್ರದ ಲಿಂಕ್, ಪರೀಕ್ಷಾ ಸಮಯ ಸೇರಿ ಸಂಪೂರ್ಣ ಮಾಹಿತಿ

ಏಷ್ಯಾನೆಟ್ ಸುವರ್ಣ ನ್ಯೂಸ್ ‍ವೆಬ್‍ತಾಣ ಕಳೆದ ತಿಂಗಳು ಮಾಡಿದ ವರದಿ ಪ್ರಕಾರ, ಚಂದ್ರನ ದಕ್ಷಿಣ ಧ್ರುವದ ಮೇಲ್ಮೈನಲ್ಲಿ ಇಳಿದ ರೋವರ್ ನಿಂದ ಸಂದೇಶ ಪಡೆಯುವುದರಿಂದ ಹಿಡಿದು ಚಂದ್ರಯಾನ 3ರಲ್ಲಿ ಪ್ರತಿ ಹಂತದಲ್ಲಿ ಬಳಕೆಯಾದ ಆಂಪ್ಲಿಫೈಯರ್ ಬಹುಮುಖ್ಯ ಭಾಗ. ಚಂದ್ರಯಾನದ ಉಡಾವಣೆಗೆ ಈ ಆಂಪ್ಲಿಫೈಯರ್ ಒದಗಿಸುವುದಕ್ಕೆ ಯಾವ ದೇಶಗಳೂ ಮುಂದಾಗಲಿಲ್ಲ. ಜಪಾನ್‍ ಆಂಪ್ಲಿಫೈಯರ್ ನೀಡಿತಾದರೂ ಅದನ್ನು ಬಳಸಿಕೊಂಡು ಚಂದ್ರಯಾನ 3 ಕೈಗೊಳ್ಳುವುದಕ್ಕೆ ಇಸ್ರೋ ಧೈರ್ಯ ಮಾಡಲಿಲ್ಲ.

ಇಸ್ರೋ ತನ್ನ ವಿಜ್ಞಾನಿಗಳ ತಂಡವನ್ನೇ ಆಂಪ್ಲಿಫೈಯರ್ ಸಿದ್ಧಪಡಿಸಲು ಬಳಸಿಕೊಳ್ಳಲು ನಿರ್ಧರಿಸಿತ್ತು. ಇದರ ಹೊಣೆಗಾರಿಕೆಯನ್ನು ವಿಜ್ಞಾನಿ ಡಾ.ಬಿ.ಎಚ್‍.ಎಂ. ದಾರುಕೇಶ್ ಅವರಿಗೆ ವಹಿಸಿತು. ಚಂದ್ರಯಾನ 1, ಚಂದ್ರಯಾನ 2, ಚಂದ್ರಯಾನ 3ರ ಆಂಪ್ಲಿಫೈಯರ್ ಅಭಿವೃದ್ಧಿಪಡಿಸಿಕೊಡುವಲ್ಲಿ ದಾರುಕೇಶ್ ಪ್ರಮುಖ ಪಾತ್ರವಹಿಸಿದರು.

ದಾರುಕೇಶ್‍ ಮೂಲ ಹೂವಿನಹಡಗಲಿ

ಇಸ್ರೋ ವಿಜ್ಞಾನಿ ಡಾ.ದಾರುಕೇಶ್ ವಿಜಯನಗರ ಜಿಲ್ಲೆ ಹೂವಿನಹಡಗಲಿ ಮೂಲದವರು. ಸುವರ್ಣಮ್ಮ ಮತ್ತು ಮಹದೇವಯ್ಯ ದಂಪತಿಯ ಹಿರಿಯ ಮಗ. 1979ರ ಆ.6ರಂದು ಜನಿಸಿದರು. ತಂದೆ ಮಹದೇವಯ್ಯ ಕೂಡ್ಲಿಗಿ ತಾಲೂಕು ಶಿವಪುರ ಗೊಲ್ಲರಹಟ್ಟಿಯ ಏಕೋಪಾಧ್ಯಾಯ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಇದೇ ಶಾಲೆಯಲ್ಲಿ ಒಂದನೇ ತರಗತಿಯಿಂದ ನಾಲ್ಕನೇ ತರಗತಿವರಗೆ ಓದಿದ ದಾರುಕೇಶ್ ಆನಂತರ ಕೊಟ್ಟೂರು ನಾಗರಾಜ ಸರ್ಕಾರಿ ಪ್ರಾಥಮಿಕ ಶಾಲೆ, ಬಳಿಕ ಬಾಯ್ಸ್ ಹೈಸ್ಕೂಲ್‍, ಪಿಯುಸಿಯಲ್ಲಿ ವಿಜ್ಞಾನ, ಬಿಎಸ್‍ಸಿ, ಎಂಎಸ್‍ಸಿ, ಪಿಎಚ್‍ಡಿ ವ್ಯಾಸಂಗ ಪೂರ್ಣಗೊಳಿಸಿದರು.

ಇಸ್ರೋದಲ್ಲಿ ಎರಡೂವರೆ ದಶಕದ ಸೇವೆ

ಎಂಎಸ್‍ಸಿ ವಿದ್ಯಾರ್ಥಿಯಾಗಿದ್ದಾಗಲೇ ಅಹಮದಾಬಾದ್ ಫಿಸಿಕಲ್ ರೀಸರ್ಚ್ ಲ್ಯಾಬ್‍ನಲ್ಲಿ ನೀಡುವ 2 ತಿಂಗಳ ತರಬೇತಿಗೆ ದಾರುಕೇಶ್ ಆಯ್ಕೆಯಾಗಿದ್ದರು. ಈ ರೀತಿ ಆಯ್ಕೆಯಾದ ದೇಶದ 25 ವಿದ್ಯಾರ್ಥಿಗಳ ಪೈಕಿ ಇವರೂ ಒಬ್ಬರಾಗಿದ್ದರು. ಬಳಿಕ ದಾರುಕೇಶ್ ಅವರು ಭೌತಶಾಸ್ತ್ರದ ಕಡೆಗೆ ಆಸಕ್ತರಾದರು. 1998ರಲ್ಲಿ ಇಸ್ರೋ ವಿಜ್ಞಾನಿಯಾಗಿ ನೇಮಕವಾದರು. ಅಲ್ಲಿಂದೀಚೆಗೆ ಸಂಸ್ಥೆಯಲ್ಲಿ ಹಲವು ಹೊಣೆಗಾರಿಕೆಗಳನ್ನು ಸಮರ್ಥವಾಗಿ ನಿಭಾಯಿಸಿದರು. ಸದ್ಯ ಬೆಂಗಳೂರು ಇಸ್ರೋ ಕಚೇರಿಯಲ್ಲಿ ಸಹ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

(ವರದಿ – ಮಾರುತಿ ಎಚ್. ಬೆಂಗಳೂರು)

(India News, Science and Technology News, Isro News, and Explainers from Hindustan Times Kannada. ಭಾರತದ, ವಿವಿಧ ರಾಷ್ಟ್ರಗಳ ಬಾಹ್ಯಾಕಾಶ ವಿದ್ಯಮಾನದ ಮತ್ತಷ್ಟು ಮಾಹಿತಿಗೆ kannada.hindustantimes.com ಜಾಲತಾಣ ನೋಡಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ