ಕನ್ನಡ ಸುದ್ದಿ  /  ಕರ್ನಾಟಕ  /  Hassan Sex Scandal; ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಸಂಚಲನ, ಬಿಜೆಪಿ ನಾಯಕ ದೇವರಾಜೇ ಗೌಡರ ತುರ್ತು ರಹಸ್ಯ ಪತ್ರ ವೈರಲ್, 5 ಅಂಶಗಳು

Hassan Sex scandal; ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಸಂಚಲನ, ಬಿಜೆಪಿ ನಾಯಕ ದೇವರಾಜೇ ಗೌಡರ ತುರ್ತು ರಹಸ್ಯ ಪತ್ರ ವೈರಲ್, 5 ಅಂಶಗಳು

Umesh Kumar S HT Kannada

Apr 29, 2024 03:44 PM IST

Hassan Sex scandal; ಪ್ರಜ್ವಲ್ ರೇವಣ್ಣ (ಎಡ ಚಿತ್ರ) ಪೆನ್‌ಡ್ರೈವ್‌ ದೇಶದ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ನಡುವೆ, ಬಿಜೆಪಿ ನಾಯಕ ದೇವರಾಜೇ ಗೌಡ ತುರ್ತು ರಹಸ್ಯ ಪತ್ರ (ಬಲ ಚಿತ್ರ) ವೈರಲ್ ಆಗಿದೆ.

  • ಲೋಕಸಭಾ ಚುನಾವಣೆಯ ನಡುವೆ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ರಾಜಕೀಯವಾಗಿ ಸಂಚಲನ ಮೂಡಿಸಿದೆ. ಲೈಂಗಿಕ ಹಗರಣಗಳ ಕುರಿತಾದ ಪೆನ್‌ಡ್ರೈವ್ ಕುರಿತು ಬಿಜೆಪಿ ನಾಯಕ ದೇವರಾಜೇ ಗೌಡ ತುರ್ತು ರಹಸ್ಯ ಪತ್ರ ವೈರಲ್ ಆಗಿದೆ. ಈ ಪತ್ರದಲ್ಲಿ ಏನಿದೆ? 5 ಅಂಶಗಳ ವಿವರಣೆ ಇಲ್ಲಿದೆ.

Hassan Sex scandal; ಪ್ರಜ್ವಲ್ ರೇವಣ್ಣ (ಎಡ ಚಿತ್ರ) ಪೆನ್‌ಡ್ರೈವ್‌ ದೇಶದ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ನಡುವೆ,  ಬಿಜೆಪಿ ನಾಯಕ ದೇವರಾಜೇ ಗೌಡ ತುರ್ತು ರಹಸ್ಯ ಪತ್ರ (ಬಲ ಚಿತ್ರ) ವೈರಲ್ ಆಗಿದೆ.
Hassan Sex scandal; ಪ್ರಜ್ವಲ್ ರೇವಣ್ಣ (ಎಡ ಚಿತ್ರ) ಪೆನ್‌ಡ್ರೈವ್‌ ದೇಶದ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ನಡುವೆ, ಬಿಜೆಪಿ ನಾಯಕ ದೇವರಾಜೇ ಗೌಡ ತುರ್ತು ರಹಸ್ಯ ಪತ್ರ (ಬಲ ಚಿತ್ರ) ವೈರಲ್ ಆಗಿದೆ.

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಲೈಂಗಿಕ ಹಗರಣದ ಕೇಸ್ ದಾಖಲಾದ ಬಳಿಕ, ಅಶ್ಲೀಲ ವಿಡಿಯೋ ಸೇರಿ ಅನೇಕ ವಿಚಾರಗಳು ಚರ್ಚೆಗೊಳಗಾಗುತ್ತಿವೆ. ಇವುಗಳ ಪೈಕಿ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ಪೆನ್‌ಡ್ರೈವ್ ಉಪಸ್ಥಿತಿಯ ಕುರಿತು ಹಾಸನದ ಬಿಜೆಪಿ ನಾಯಕ ಜಿ ದೇವರಾಜೇಗೌಡ ಕಳೆದ ವರ್ಷ ಡಿಸೆಂಬರ್‌ನಲ್ಲಿ ಬರೆದ ಪತ್ರ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಟ್ರೆಂಡಿಂಗ್​ ಸುದ್ದಿ

Prajwal Revanna: ಪ್ರಜ್ವಲ್‌ ರೇವಣ್ಣ ಬಂಧಿಸಿ ಕರೆ ತನ್ನಿ; ಸಿಎಂಗೆ ಪತ್ರ ಬರೆದ ಕರ್ನಾಟಕದ ಚಿಂತಕರು, ಸಾಹಿತಿಗಳು

ಹಾಸನ ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣ ಇಂದು ತಡರಾತ್ರಿ ಬೆಂಗಳೂರಿಗೆ ವಾಪಸ್‌ ಎನ್ನುತ್ತಿದೆ ವರದಿ, ಲುಫ್ತಾನ್ಸಾ ಟಿಕೆಟ್‌ ವೈರಲ್‌

Bangalore Water: ಬೆಂಗಳೂರು ಸರ್ಕಾರಿ ಶಾಲೆ, ಸಂಸ್ಥೆಗಳಲ್ಲೂ ಮಳೆ ಕೊಯ್ಲು, ಇಂಗುಗುಂಡಿ; ಜಲಮಂಡಳಿ ಯೋಜನೆ

ಭಾರತೀಯ ರೈಲ್ವೆ ಮಾಹಿತಿ; ನೈಋತ್ಯ ರೈಲ್ವೆಯಿಂದ ಪ್ರಯಾಣಿಕ ದಟ್ಟಣೆ ನಿವಾರಣೆಗೆ 4 ಬೇಸಿಗೆ ವಿಶೇಷ ರೈಲುಗಳು, 26 ರೈಲುಗಳ ಅವಧಿ ವಿಸ್ತರಣೆ

ಸೋಷಿಯಲ್ ಮೀಡಿಯಾದಲ್ಲಿ ಲಭ್ಯವಿರುವ ಪತ್ರದಲ್ಲಿರುವಂತೆ, ಜಿ ದೇವರಾಜೇಗೌಡ ಅವರು ಈ ಪತ್ರವನ್ನು ಬಿಜೆಪಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಬರೆದಿದ್ದಾರೆ. ಎರಡು ಪುಟದ ಪತ್ರವು “ತುರ್ತು ರಹಸ್ಯ ಪತ್ರ” ಎಂಬ ಶೀರ್ಷಿಕೆಯೊಂದಿಗೆ ಶುರುವಾಗಿದೆ.

ಭಾರತೀಯ ಜನತಾ ಪಕ್ಷ ತಮ್ಮ ಎನ್.ಡಿ.ಎ ಮೈತ್ರಿ ಕೂಟಕ್ಕೆ ಕರ್ನಾಟಕ ರಾಜ್ಯದಲ್ಲಿರುವ ಪ್ರಾದೇಶಿಕ ಪಕ್ಷವಾದ ಜಾತ್ಯಾತೀತ ಜನತಾದಳವನ್ನು ಸೇರ್ಪಡೆ ಮಾಡಿಕೊಳ್ಳುವಾಗ ಎಚ್ಚರ ವಹಿಸಿ ಪಕ್ಷದ ತತ್ವ ಸಿದ್ಧಾಂತಗಳನ್ನು ಪಾಲನೆ ಮಾಡಿ ಆರೋಗ್ಯಕರ ತೀರ್ಮಾನ ಕೈಗೊಳ್ಳುವ ಬಗ್ಗೆ ಕೇಂದ್ರದ ನಾಯಕರಿಗೆ ವರದಿ ನೀಡುವ ಕುರಿತು ಮನವಿ ಎಂಬ ವಿಷಯ ಒಕ್ಕಣೆಯೊಂದಿಗೆ ವಿವರವನ್ನು ಒದಗಿಸಿದ್ದಾರೆ ದೇವರಾಜೇಗೌಡ.

ಜಿ ದೇವರಾಜೇಗೌಡ ಬರೆದ ತುರ್ತು ರಹಸ್ಯ ಪತ್ರದಲ್ಲಿ ಏನಿದೆ - 5 ಅಂಶಗಳ ವಿವರ

1) ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಜಿ.ದೇವರಾಜೇ ಗೌಡ ಅವರು 2023ರ ಡಿಸೆಂಬರ್ 8ರಂದು ಬರೆದ ಪತ್ರದ ಆರಂಭದಲ್ಲಿ ತಮ್ಮನ್ನು ತಾವು ಪರಿಚಯಿಸಿಕೊಂಡಿದ್ದು, ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ 2023 ರ ಚುನಾವಣೆಯಲ್ಲಿ ಹೊಳೇನರಸೀಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಹಲವಾರು ಕಾರಣಗಳಿಂದ ಪರಾಜಯಗೊಂಡಿರುತ್ತೇನೆ" ಎಂದು ಹೇಳಿಕೊಂಡಿದ್ದಾರೆ

2) ಪಕ್ಷದ ವರಿಷ್ಠರು ಕರ್ನಾಟಕದಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡುವ ಬಗ್ಗೆ ಚರ್ಚಿಸುತ್ತಿರುವುದು ಮಾಧ್ಯಮಗಳ ಮೂಲಕ ಗಮನಸೆಳೆದಿದೆ. ಜೆಡಿಎಸ್ ನಾಯಕರು ಕೂಡ ಮೈತ್ರಿ ವಿಚಾರ ಬಹಿರಂಗಪಡಿಸಿದ್ದಾರೆ. ಬಿಜೆಪಿ ಜಗತ್ತಿನಲ್ಲೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ರಾಷ್ಟ್ರದಲ್ಲಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿಯು ಸತ್ಯ ಧರ್ಮ ಹಾಗೂ ಸಂಸ್ಕೃತಿ ಮತ್ತು ಸ್ತ್ರೀ ಕುಲವನ್ನು ಪೂಜ್ಯ ಭಾವನೆಯನ್ನು ಹೊಂದಿದೆ. ದೇಶದ ಮಹಿಳಯರ ಹೃದಯವನ್ನೂ ಗೆದ್ದುಕೊಂಡಿದೆ.

3) ಆದರೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವಾಗ ಹಾಸನದ ಹೆಚ್‌.ಡಿ ರೇವಣ್ಣನವರ ಕುಟುಂಬದ ಸದಸ್ಯರು (ಪ್ರಜ್ವಲ್ ರೇವಣ್ಣ) ಅಪಹರಣ, ಹಲ್ಲೆ, ಮೋಸ, ವಂಚನೆ, ದರೋಡೆ ಮುಂತಾದ ಗಂಭೀರ ಪ್ರಕರಣಗಳ ಜೊತೆಗೆ ಇಡೀ ಸಮಾಜವೇ ತಲೆ ತಗ್ಗಿಸುವಂತಹ ಮಹಿಳೆಯರ ಅತ್ಯಾಚಾರ ಹಾಗೂ ಹೆಣ್ಣ ಮಕ್ಕಳ 2976 ನೀಲಿ ಚಿತ್ರಗಳಲ್ಲಿ (ಸರ್ಕಾರಿ ಅಧಿಕಾರಿಗಳು ಸೇರಿ) ಭಾಗಿಯಾಗಿ ಅವರೇ ವಿಡಿಯೋ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಇಟ್ಟುಕೊಂಡು, ನಂತರ ಅವರನ್ನು ಬ್ಲ್ಯಾಕ್‌ಮೇಲ್‌ ಮಾಡಿ ನಿರಂತರ ಲೈಂಗಿಕ ದೌರ್ಜನ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಎಲ್ಲ ವಿಡಿಯೋ, ಫೋಟೋಗಳಿರುವ ಪೆನ್‌ಡ್ರೈವ್ ಸಿಕ್ಕಿದೆ ಎಂದು ದೇವರಾಜೇಗೌಡ ಪತ್ರದಲ್ಲಿ ಬರೆದಿದ್ದಾರೆ.

4) ಇದರ ಮತ್ತೊಂದು ಪೆನ್‌ಡ್ರೈವ್ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರ ಕೈಸೇರಿದೆ. ಇದು ಬಹಳ ಗಂಭೀರ ವಿಚಾರ. ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು, ಜೆಡಿಎಸ್ ಅಭ್ಯರ್ಥಿಯನ್ನು ಹಾಸನದಲ್ಲಿ ಕಣಕ್ಕೆ ಇಳಿಸಿದರೆ, ಈ ಪೆನ್‌ಡ್ರೈವ್ ಅನ್ನೇ ಬ್ರಹ್ಮಾಸ್ತ್ರವನ್ನು ಅವರು ಬಳಸಲಿದ್ದಾರೆ. ಇದರಿಂದ ಪಕ್ಷಕ್ಕೆ ಶಾಶ್ವತ ಕಳಂಕ ಉಂಟಾಗಲಿದೆ. ರಾಷ್ಟ್ರಮಟ್ಟದಲ್ಲಿಯೂ ಪಕ್ಷಕ್ಕೆ, ಅದರ ವರ್ಚಸ್ಸಿಗೆ ದೊಡ್ಡ ಹೊಡೆತ ಉಂಟಾಗಲಿದೆ ಎಂದು ದೇವರಾಜೇಗೌಡ ಎಚ್ಚರಿಸಿರುವುದು ಕಂಡುಬಂದಿದೆ.

5) ಪಕ್ಷದ ರಾಷ್ಟ್ರೀಯ ನಾಯಕರು ಬಯಸಿದರೆ ಈ ವಿಡಿಯೋ ದಾಖಲೆ ಒದಗಿಸುವುದಾಗಿ ಹೇಳಿಕೊಂಡಿರುವ ದೇವರಾಜೇಗೌಡ ಅವರು, ಪಕ್ಷದ ರಾಜ್ಯ ಅಧ್ಯಕ್ಷರಾದ ಬಿವೈ ವಿಜಯೇಂದ್ರ ಅವರು ಈ ಪತ್ರವನ್ನು ಕಡೆಗಣಿಸದೇ ಪಕ್ಷದ ರಾಷ್ಟ್ರೀಯ ನಾಯಕರ ಗಮನಸೆಳೆದು ಹಾಸನದಲ್ಲಿ ಎಚ್ ಡಿ ರೇವಣ್ಣ ಕುಟುಂಬ ಸದಸ್ಯರ ಜೊತೆಗೆ ಮೈತ್ರಿ ಮಾಡದಂತೆ ಗಮನಿಸಿಕೊಳ್ಳಬೇಕು ಎಂದು ಮನವಿ ಮಾಡಿರುವುದು ಗಮನಸೆಳೆದಿದೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

ಇದನ್ನೂ ಓದಿ| ಜೆಡಿಎಸ್‌ನಿಂದ ಪ್ರಜ್ವಲ್‌ ರೇವಣ್ಣ ಉಚ್ಚಾಟನೆ, ಮಾಜಿ ಪ್ರಧಾನಿ ದೇವೇಗೌಡ ಆದೇಶ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ