ಕನ್ನಡ ಸುದ್ದಿ  /  ಕರ್ನಾಟಕ  /  Kalaburagi News: ಕಳಪೆ ಬೀಜ, ರಸಗೊಬ್ಬರ ಪೂರೈಕೆ ಕಂಡು ಬಂದರೆ ಕ್ರಿಮಿನಲ್ ಕೇಸ್ ದಾಖಲಿಸಿ; ಶಾಸಕ ಅಲ್ಲಮಪ್ರಭು ಪಾಟೀಲ್ ಸೂಚನೆ

Kalaburagi News: ಕಳಪೆ ಬೀಜ, ರಸಗೊಬ್ಬರ ಪೂರೈಕೆ ಕಂಡು ಬಂದರೆ ಕ್ರಿಮಿನಲ್ ಕೇಸ್ ದಾಖಲಿಸಿ; ಶಾಸಕ ಅಲ್ಲಮಪ್ರಭು ಪಾಟೀಲ್ ಸೂಚನೆ

HT Kannada Desk HT Kannada

Jun 06, 2023 07:15 AM IST

ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ತಾಲೂಕು ಪಂಚಾಯಿತಿಯಲ್ಲಿ ಸೋಮವಾರ (ಜೂ.5) ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ

  • Kalaburagi News: ಕಲಬುರಗಿ ತಾಲೂಕು ಪಂಚಾಯಿತಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್‌ ಅವರು ಕಳಪೆ ಬೀಜ-ರಸಗೊಬ್ಬರ ಪೂರೈಕೆ ಆಗದಂತೆ ಎಚ್ಚರಿಕೆ ವಹಿಸಬೇಕು ಕೃಷಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ತಾಲೂಕು ಪಂಚಾಯಿತಿಯಲ್ಲಿ ಸೋಮವಾರ (ಜೂ.5) ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ
ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ತಾಲೂಕು ಪಂಚಾಯಿತಿಯಲ್ಲಿ ಸೋಮವಾರ (ಜೂ.5) ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ (SB Reddy)

ಕಲಬುರಗಿ: ಮುಂಗಾರು ಮಳೆ ಇನ್ನೇನು ಆರಂಭವಾಗಲಿದೆ. ರೈತರಿಗೆ ನಿಗದಿತ ಸಮಯಕ್ಕೆ ಬೀಜ-ರಸಗೊಬ್ಬರ ಪೂರೈಕೆ ಮಾಡಬೇಕು. ಯಾವುದೇ ಕಾರಣಕ್ಕೂ ಕಳಪೆ ಬೀಜ-ರಸಗೊಬ್ಬರ ಪೂರೈಕೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಕೃಷಿ ಅಧಿಕಾರಿಗೆ ಎಚ್ಚರಿಕೆ ನೀಡಿದರು.

ಟ್ರೆಂಡಿಂಗ್​ ಸುದ್ದಿ

Prajwal Revanna: ಪ್ರಜ್ವಲ್‌ ರೇವಣ್ಣ ಬಂಧಿಸಿ ಕರೆ ತನ್ನಿ; ಸಿಎಂಗೆ ಪತ್ರ ಬರೆದ ಕರ್ನಾಟಕದ ಚಿಂತಕರು, ಸಾಹಿತಿಗಳು

ಹಾಸನ ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣ ಇಂದು ತಡರಾತ್ರಿ ಬೆಂಗಳೂರಿಗೆ ವಾಪಸ್‌ ಎನ್ನುತ್ತಿದೆ ವರದಿ, ಲುಫ್ತಾನ್ಸಾ ಟಿಕೆಟ್‌ ವೈರಲ್‌

Bangalore Water: ಬೆಂಗಳೂರು ಸರ್ಕಾರಿ ಶಾಲೆ, ಸಂಸ್ಥೆಗಳಲ್ಲೂ ಮಳೆ ಕೊಯ್ಲು, ಇಂಗುಗುಂಡಿ; ಜಲಮಂಡಳಿ ಯೋಜನೆ

ಭಾರತೀಯ ರೈಲ್ವೆ ಮಾಹಿತಿ; ನೈಋತ್ಯ ರೈಲ್ವೆಯಿಂದ ಪ್ರಯಾಣಿಕ ದಟ್ಟಣೆ ನಿವಾರಣೆಗೆ 4 ಬೇಸಿಗೆ ವಿಶೇಷ ರೈಲುಗಳು, 26 ರೈಲುಗಳ ಅವಧಿ ವಿಸ್ತರಣೆ

ಕಲಬುರಗಿ ತಾಲೂಕು ಪಂಚಾಯಿತಿಯಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ವರ್ಷ ಕಳಪೆ ಬೀಜ ಮತ್ತು ರಸಗೊಬ್ಬರ ಪೂರೈಕೆಯಾಗಿರುವುದರಿಂದ ಹಲವಾರು ರೈತರ ಬೆಳೆ ಹಾಳಾಗಿತ್ತು. ಇದರಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸಬೇಕಾಗಿತ್ತು. ಹೀಗಾಗಿ ಈ ಬಾರಿ ಇಂತಹ ಘಟನೆ ನಡೆಯದಂತೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಕಲಬುರಗಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಪರವಾನಿಗೆ ಹೊಂದಿರುವ ಬೀಜ, ರಸಗೊಬ್ಬರ ಅಂಗಡಿಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಬೇಕು. ಒಂದು ವೇಳೆ ಕಳಪೆ ಕಂಡು ಬಂದರೆ ಅಂತಹ ಅಂಗಡಿಗಳ ಪರವಾನಿಗೆ ರದ್ದು ಪಡಿಸಿ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ತಾಕೀತು ಮಾಡಿದರು.

ಒಂದೇ ವೇಳೆ ಕಳಪೆ ಮಟ್ಟದ ಬೀಜ, ರಸಗೊಬ್ಬರ ಪೂರೈಕೆ ಕಂಡು ಬಂದರೆ ಕೃಷಿ ಅಧಿಕಾರಿಯನ್ನೆ ಹೊಣೆಗಾರನಾಗಿ ಮಾಡಿ ಕ್ರಮಕೈಗೊಳ್ಳಬೇಕಾಗುತ್ತದೆ. ನಾನೇ ಖುದ್ದಾಗಿ ಅನಿರಿಕ್ಷಿತ ಅಂಗಡಿಗಳಿಗೆ ಭೇಟಿ ಸಹ ನೀಡುವುದಾಗಿ ಹೇಳಿದರು.

ನೆಟೆ ರೋಗ ಬರದಂತೆ ಎಚ್ಚರ ವಹಿಸಿ

ಕಳೆದ ವರ್ಷ ತೊಗರಿಗೆ ನೆಟೆ ರೋಗ ಬಂದಿರುವುದರಿಂದ ನೂರಾರು ರೈತರ ಬೆಳೆ ಹಾನಿಯಾಗಿತ್ತು. ಈ ವರ್ಷ ಈ ನೆಟೆ ರೋಗ ಬರದಂತೆ ಮುಂಜಾಗ್ರತ ಕ್ರಮವಾಗಿ ಅಗತ್ಯ ಕ್ರಿಮಿನಾಶಕ ಸಿಂಪರಣೆ ಮಾಡಲು ಕ್ರಮಕೈಗೊಳ್ಳಬೇಕು. ಇದಕ್ಕೆ ಅಗತ್ಯ ಕ್ರಿಮಿನಾಶಕ ಬೇಕಾದರೆ ಕೃಷಿ ಸಚಿವರನ್ನೊಂದಿಗೆ ಮಾತನಾಡಿ ಕ್ರಮಕೈಗೊಳ್ಳಲಾಗುವುದು. ಒಟ್ಟಾರೆ ಈ ಬಾರಿ ನೆಟೆ ರೋಗ ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಕೃಷಿ ಅಧಿಕಾರಿ ಚಂದ್ರಕಾಂತ ಜಿವಣಗಿ ಮಾತನಾಡಿ, ಕಳಪೆ ಬೀಜ, ರಸಗೊಬ್ಬರ ಪೂರೈಕೆ ಆಗದಂತೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ಈಗಾಗಲೇ ೮ ಅಂಗಡಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. 15 ದಿನಕ್ಕೊಮ್ಮೆ ನಮ್ಮ ತಂಡ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಾಂಪಲ್ ಪಡೆದು ಬೆಳೆಗಾಂವಿಗೆ ಪರೀಕ್ಷಾಲಯಕ್ಕೆ ಕಳುಹಿಸಿ ಕಳಪೆ ಕಂಡು ಬಂದರೆ ಅಂತಹ ಅಂಗಡಿಗಳ ಪರವಾನಿಗೆ ರದ್ದು ಪಡಿಸುವುದರ ಜೊತೆಗೆ ಕ್ರಿಮಿನಲ್ ಕೇಸ್ ದಾಖಲಿಸಲು ಕ್ರಮಕೈಗೊಳ್ಳಲಾಗುವುದು ಶಾಸಕರಿಗೆ ಮಾಹಿತಿ ನೀಡಿದರು.

ತಾಲೂಕಿನಲ್ಲಿ ಬೀಜ, ರಸಗೊಬ್ಬರ ಈಗಾಗಲೇ ದಾಸ್ತಾನು ಆಗಿದ್ದು, ಮುಂಗಾರು ಮಳೆ 9 ರಂದು ಬರುವ ನಿರೀಕ್ಷೆ ಇದೆ. ಮಳೆ ಬಂದ ಬಳಿಕ ಅವುಗಳನ್ನು ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಕೃಷಿ ಅಧಿಕಾರಿ ವಿವರಿಸಿದರು.

ಸಸಿಗಳನ್ನು ಬೆಳೆಸಿ

ಕಲಬುರಗಿ ತಾಲೂಕಿನಲ್ಲಿ ನೆಡುತೋಪು ಎಲ್ಲಿವೆ? ಇಲ್ಲದ ಹೋದಲ್ಲಿ ಸರ್ಕಾರಿ, ಗೈರಾಣಿ ಜಾಗದಲ್ಲಿ ಸಸಿಗಳನ್ನು ನೆಟ್ಟು ಇಂತಹ ನೆಡುತೋಪು ಅಭಿವೃದಧಿಪಡಿಸಿರಿ, ಅರಣ್ಯ ಇಲಾಖೆ ಕೆಲಸ ತುಂಬಾ ಇದೆ. ಅರಣ್ಯ ಸಚಿವರು ನಮ್ಮವರೇ ಬೀದರ್‍ನ ಖಂಡ್ರೆ ಇದ್ದಾರೆ. ಯೋಜನೆ ಸಿದ್ದಪಡಿಸಿಕೊಂಡು ಬನ್ನಿ. ನಾವು ಮಂಜೂರು ಆಡಿಸುತ್ತೇವೆ. ಕೆಲಸವಾಗಬೇಕು. ಹಗಲು ರಾತ್ರಿ ಓಡಾಡಿ ಅರಣ್ಯೀಕರಣಕ್ಕೆ ಮುಂದಾಗಿರಿ. ಕಲಬುರಗಿಯಲ್ಲಿ ಮೊದಲೇ ಅರಣ್ಯವಿಲ್ಲ. ಬೆಳೆಸುವ ಕೆಲಸವಾಗಲಿ, ಸಾರ್ವಜನಿಕರ ಸಹಕಾರವನ್ನೂ ಪಡೆಯಿರಿ ಎಂದರು.

ಕೆರೆಗಳ ಸ್ಥಾಪನೆಗೆ ಮುಂದಾಗಿ

ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಕೆರೆಗಳ ಸ್ಥಾಪನೆಗೆ ಮುಂದಾಗಬೇಕಿದೆ, ಸೂಕ್ತ ನಿವೇಶನ ಹುಡುಕುವಂತೆ ತಹಸೀಲ್ದಾರ್‍ಗೆ ಸೂಚಿಸಿದ ಶಾಸಕರು ಭೀಮಳ್ಳಿ ಸೇತುವೆ ಕಾಮಗಾರಿ ಎಲ್ಲಿಗೆ ಬಂದಿದೆ ? ಕಳೆದ ಮಲೆಗಾಳದಲ್ಲಿ ಹಳ್ಳದ ನೀರಿನಿಂದ ಹರಿದು ಹೋಗಿತ್ತು. ಜನ ಭಾರಿ ತೊಂದರೆ ಎದುರಿಸಿದ್ದಾರೆ. ಈ ಬಾರಿ ಅಲ್ಲಿನ ಸ್ಥಿತಿ ಹೇಗಿದೆ? ಎಂದು ಮಾಹಿತಿ ಪಡೆದರು.

ಪಾಣೆಗಾಂವ್, ಕಣ್ಣಿ, ಮಿಣಜಗಿ ಇಲ್ಲೆಲ ಮಳೆಗಾಲದಲ್ಲಿ ಹಲ್ಳಕ್ಕೆ ನೀರು ಬಂದು ಸಾಕಷ್ಟು ಜೀವಹಾನಿಯಾಗಿವೆ. ಈ ಬಾರಿ ಅದೇ ಪರಿಸ್ಥಿತಿ ಮರುಕಳಿಸಬಾದು. ಏನೆಲ್ಲಾ ಕೆಲಸವಾಗಬೇಕು ಅವುಳನ್ನು ಗಮನಕ್ಕೆ ತನ್ನಿ, ಬೇಗ ಮಾಡೋಣ. ಜನರ ಪ್ರಾಣಹಾನಿಗೆ ಅವಕಾಶ ಕೊಡಬೇಡಿ. ಜನರ ಜೀವ, ಆಸ್ತಿಪಾಸ್ತಿ ಮುಖ್ಯವೆಂದರು.

ಸಭೆಯಲ್ಲಿ ತಾಪಂ ಮುಖ್ಯಾಧಿಕಾರಿ ಈರಣ್ಣ ಕೌಲಗಿ, ತಹಸೀಲ್ದಾರ್, ಮಧುರಾಜ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

(ಎಸ್.ಬಿ.ರೆಡ್ಡಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ