ಕನ್ನಡ ಸುದ್ದಿ  /  ಕರ್ನಾಟಕ  /  Kashi Yatra Booking Explainer: ಕರ್ನಾಟಕ-ಕಾಶಿ ದರ್ಶನ್‌ ಯಾತ್ರೆ ಟಿಕೆಟ್‌ ಬುಕ್ಕಿಂಗ್‌; ಇಲ್ಲಿದೆ ಪ್ರವಾಸ ಯೋಜನೆ, ಟಿಕೆಟ್‌ ದರ ವಿವರ

Kashi Yatra Booking Explainer: ಕರ್ನಾಟಕ-ಕಾಶಿ ದರ್ಶನ್‌ ಯಾತ್ರೆ ಟಿಕೆಟ್‌ ಬುಕ್ಕಿಂಗ್‌; ಇಲ್ಲಿದೆ ಪ್ರವಾಸ ಯೋಜನೆ, ಟಿಕೆಟ್‌ ದರ ವಿವರ

HT Kannada Desk HT Kannada

Nov 03, 2022 02:36 PM IST

ಕರ್ನಾಟಕ- ಭಾರತ್‌ ಗೌರವ್‌ ಕಾಶಿ ದರ್ಶನ್‌

    • Kashi Yatra Booking Explainer : ಕರ್ನಾಟಕ-ಭಾರತ್‌ ಗೌರವ್‌ ಕಾಶಿ ದರ್ಶನ್‌ ಯಾತ್ರೆ ಬುಕ್ಕಿಂಗ್‌ ಶುರುವಾಗಿದೆ. ನ.11ಕ್ಕೆ ಭಾರತ್‌ ಗೌರವ್‌ ರೈಲು ಬೆಂಗಳೂರಿನಿಂದ ಹೊರಡಲಿದೆ. ಏಳು ರಾತ್ರಿ/ ಎಂಟು ಹಗಲುಗಳ ಅವಧಿಯ ಪ್ರವಾಸ ಇದು. ಈ ಯಾತ್ರಾ ಪ್ಯಾಕೇಜ್‌ನ ಸಂಪೂರ್ಣ ವಿವರ ಇಲ್ಲಿದೆ ಗಮನಿಸಿ. 
ಕರ್ನಾಟಕ- ಭಾರತ್‌ ಗೌರವ್‌ ಕಾಶಿ ದರ್ಶನ್‌
ಕರ್ನಾಟಕ- ಭಾರತ್‌ ಗೌರವ್‌ ಕಾಶಿ ದರ್ಶನ್‌

ರಾಜ್ಯ ಸರ್ಕಾರದ ಬಹುನಿರೀಕ್ಷಿತ ಮತ್ತು ಮಹತ್ವಾಕಾಂಕ್ಷೆಯ ಕರ್ನಾಟಕ- ಭಾರತ್‌ ಗೌರವ್‌ ಕಾಶಿ ದರ್ಶನ್‌ ಯಾತ್ರೆಗೆ ಮುಂಗಡ ಬುಕ್ಕಿಂಗ್‌ ಶುರುವಾಗಿದೆ. ನವೆಂಬರ್‌ 11ಕ್ಕೆ ರೈಲು ಬೆಂಗಳೂರಿನಿಂದ ಹೊರಡಲಿದೆ. ಅಯೋಧ್ಯೆ, ಪ್ರಯಾಗರಾಜ್‌ ಮತ್ತು ವಾರಾಣಸಿಗೆ ಯಾತ್ರಿಕರನ್ನು ಕರೆದೊಯ್ಯಲಿದೆ. ಈ ಪ್ರವಾಸಕ್ಕೆ ರಾಜ್ಯ ಸರ್ಕಾರ 5,000 ರೂಪಾಯಿ ಸಹಾಯಧನವನ್ನೂ ಕೊಡುತ್ತಿದೆ.

ಟ್ರೆಂಡಿಂಗ್​ ಸುದ್ದಿ

Prajwal Revanna: ಪ್ರಜ್ವಲ್‌ ರೇವಣ್ಣ ಬಂಧಿಸಿ ಕರೆ ತನ್ನಿ; ಸಿಎಂಗೆ ಪತ್ರ ಬರೆದ ಕರ್ನಾಟಕದ ಚಿಂತಕರು, ಸಾಹಿತಿಗಳು

ಹಾಸನ ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣ ಇಂದು ತಡರಾತ್ರಿ ಬೆಂಗಳೂರಿಗೆ ವಾಪಸ್‌ ಎನ್ನುತ್ತಿದೆ ವರದಿ, ಲುಫ್ತಾನ್ಸಾ ಟಿಕೆಟ್‌ ವೈರಲ್‌

Bangalore Water: ಬೆಂಗಳೂರು ಸರ್ಕಾರಿ ಶಾಲೆ, ಸಂಸ್ಥೆಗಳಲ್ಲೂ ಮಳೆ ಕೊಯ್ಲು, ಇಂಗುಗುಂಡಿ; ಜಲಮಂಡಳಿ ಯೋಜನೆ

ಭಾರತೀಯ ರೈಲ್ವೆ ಮಾಹಿತಿ; ನೈಋತ್ಯ ರೈಲ್ವೆಯಿಂದ ಪ್ರಯಾಣಿಕ ದಟ್ಟಣೆ ನಿವಾರಣೆಗೆ 4 ಬೇಸಿಗೆ ವಿಶೇಷ ರೈಲುಗಳು, 26 ರೈಲುಗಳ ಅವಧಿ ವಿಸ್ತರಣೆ

ಕಾಶಿ ಯಾತ್ರಾ ಪ್ಯಾಕೇಜ್‌ನ ಮುಖ್ಯಾಂಶಗಳು

ಪ್ರವಾಸದ ಹೆಸರು - ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್

ಪ್ರವಾಸದ ಅವಧಿ (ಬೆಂಗಳೂರಿನಿಂದ)- 07 ರಾತ್ರಿಗಳು/08 ದಿನಗಳು

ನಿರ್ಗಮನ ದಿನಾಂಕ - ನವೆಂಬರ್‌ 11 ಮತ್ತು 23

ಪ್ರವಾಸ ಮಾರ್ಗ- ಬೆಂಗಳೂರು - ವಾರಣಾಸಿ - ಅಯೋಧ್ಯೆ - ಪ್ರಯಾಗರಾಜ್ - ಬೆಂಗಳೂರು

ರೈಲು ಹತ್ತಲು ಮತ್ತು ಇಳಿಯಲು ಅವಕಾಶ ಎಲ್ಲೆಲ್ಲಿ?: ಬೆಂಗಳೂರು, ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ರಾಯಬಾಗ

ಸಂದರ್ಶಿಸುವ ಯಾತ್ರಾಸ್ಥಳಗಳು ಯಾವುವು?

ವಾರಾಣಸಿ: ತುಳಸಿ ಮಾನಸ ದೇವಸ್ಥಾನ, ಸಂಕಷ್ಟ ಮೋಚನ್ ಹನುಮಾನ್ ದೇವಸ್ಥಾನ, ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಗಂಗಾ ಆರತಿ.

ಅಯೋಧ್ಯೆ: ರಾಮ ಜನ್ಮಭೂಮಿ ದೇವಸ್ಥಾನ, ಹನುಮಾನ್ ಗರ್ಹಿ, ಸರಯುಘಾಟ್.

ಪ್ರಯಾಗರಾಜ್: ಗಂಗಾ-ಯಮುನಾ ಸಂಗಮ, ಹನುಮಾನ್ ದೇವಸ್ಥಾನ.

ಕಾಶಿ ಯಾತ್ರೆ ಎಷ್ಟು ದಿನ? ಹೀಗಿರಲಿದೆ ಯಾತ್ರೆ

ಕರ್ನಾಟಕ- ಭಾರತ್‌ ಗೌರವ್‌ ಕಾಶಿ ದರ್ಶನ್‌ ಯಾತ್ರೆಯ ರೈಲು ಬೆಂಗಳೂರಿನಿಂದ ಅಪರಾಹ್ನ 1 ಗಂಟೆಗೆ ಹೊರಡಲಿದೆ. ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ರಾಯಬಾಗ ನಿಲ್ದಾಣಗಳಲ್ಲಿ ಪ್ರವಾಸಿಗರಿಗೆ ರೈಲು ಏರಲು ಅವಕಾಶವಿದೆ. ಮೂರನೇ ದಿನ ವಾರಾಣಸಿ ತಲುಪುತ್ತದೆ. ನಾಲ್ಕನೇ ದಿನ ಪೂರ್ತಿ ವಾರಾಣಸಿಯಲ್ಲಿ ಸುತ್ತಾಟ. ಬಳಿಕ ಐದನೇ ದಿನ ಮುಂಜಾನೆ ಅಯೋಧ್ಯೆಗೆ ಪ್ರಯಾಣ. ಸರಯೂ ಆರತಿ ನೋಡಿಕೊಂಡು ರಾತ್ರಿ ಪ್ರಯಾಗರಾಜ್‌ ಕಡೆಗೆ ಪ್ರಯಾಣ. ಆರನೇ ದಿನ ಬೆಳಗ್ಗೆ ಪ್ರಯಾಗರಾಜ್‌ಗೆ ರೈಲು ತಲುಪಲಿದೆ. ಮಧ್ಯಾಹ್ನ ತನಕ ಪ್ರಯಾಗರಾಜ್‌ನಲ್ಲಿ ಸುತ್ತಾಟ. ಬಳಿಕ ರೈಲು ಹತ್ತಿ ಬೆಂಗಳೂರಿಗೆ ವಾಪಸ್‌ ಪ್ರಯಾಣ. ಎಂಟನೇ ದಿನ ಅಪರಾಹ್ನ 1.30ಕ್ಕೆ ರೈಲು ಬೆಂಗಳೂರಿಗೆ ತಲುಪಲಿದೆ.

ದಿನ ನಿತ್ಯದ ಪ್ರವಾಸ ವಿವರಕ್ಕೆ ಈ ಕೊಂಡಿ ಕ್ಲಿಕ್‌ ಮಾಡಿ - ಕಾಶಿ ಯಾತ್ರೆ ಎಷ್ಟು ದಿನ? ಹೀಗಿರಲಿದೆ ಯಾತ್ರೆ

ಕಾಶಿ ಯಾತ್ರಾ ಪ್ಯಾಕೇಜ್‌ ಸೇವೆಯಲ್ಲಿ ಏನೇನು ಒಳಗೊಂಡಿವೆ? ಮತ್ತು ಏನಿರಲ್ಲ?

ಕರ್ನಾಟಕ- ಭಾರತ್‌ ಗೌರವ್‌ ಕಾಶಿ ದರ್ಶನ್‌ ಯಾತ್ರೆಯ ಪ್ಯಾಕೇಜ್‌ ಪ್ರವಾಸದಲ್ಲಿ ಯಾತ್ರಿಕರಿಗೆ 3AC ವರ್ಗದ ಕೋಚ್‌ ಸೌಲಭ್ಯ ಇರಲಿದೆ. ಉಳಿದಂತೆ, ಹೋಟೆಲ್‌, ಊಟ, ಉಪಾಹಾರ ಇತ್ಯಾದಿಗಳು ಇರಲಿವೆ. ಸೈಟ್‌ ಸೀಯಿಂಗ್‌ಗೆ ಹೋಗುವಾಗ ಸಾಮಾನ್ಯ ಬಸ್‌ಗಳಲ್ಲಿ ಪ್ರಯಾಣವಿರಲಿದೆ. ಆದರೆ, ದೋಣಿ ವಿಹಾರ, ಸಾಹಸ ಕ್ರೀಡೆ ಮತ್ತು ಇತರೆ ಸೇವೆಗಳಿಗೆ ಪ್ರತ್ಯೇಕ ಶುಲ್ಕ ಪಾವತಿಸಬೇಕಾದೀತು.

ಯಾತ್ರಾ ಪ್ಯಾಕೇಜ್‌ನಲ್ಲಿ ಏನೇನು ಇರಲಿದೆ ಮತ್ತು ಇರಲ್ಲ ಎಂಬುದನ್ನು ತಿಳಿಯಲು ಈ ಕೊಂಡಿ ಕ್ಲಿಕ್‌ ಮಾಡಿ - ಕಾಶಿ ಯಾತ್ರಾ ಪ್ಯಾಕೇಜ್‌ ಸೇವೆಯಲ್ಲಿ ಏನೇನು ಒಳಗೊಂಡಿವೆ? ಮತ್ತು ಏನಿರಲ್ಲ?

ಕಾಶಿ ಯಾತ್ರಾ ಟೆಕೆಟ್‌ ರದ್ದುಗೊಳಿಸಿದರೆ ದುಡ್ಡು ವಾಪಸ್‌ ಸಿಗುತ್ತಾ?

ಕರ್ನಾಟಕ- ಭಾರತ್‌ ಗೌರವ್‌ ಕಾಶಿ ದರ್ಶನ್‌ ಯಾತ್ರೆಯ ಪ್ಯಾಕೇಜ್‌ ನಿಯಮದ ಪ್ರಕಾರ, ಪ್ರಯಾಣದ ಪ್ರಾರಂಭಕ್ಕಿಂತ ಮೊದಲು 15 ದಿನಗಳವರೆಗೆ (ನಿರ್ಗಮನದ ದಿನಾಂಕವನ್ನು ಹೊರತುಪಡಿಸಿ) ಪ್ರತಿ ಪ್ರಯಾಣಿಕರ ಟಿಕೆಟ್‌ದರಲ್ಲಿ 250 ರೂಪಾಯಿ ಕಡಿತಗೊಳಿಸಿ ಉಳಿದ ಹಣ ವಾಪಸ್‌ ಸಿಗಲಿದೆ. ಇನ್ನುಳಿದಂತೆ ದಿನ ಕಡಿಮೆಯಾದಂತೆ ಹಿಂದಕ್ಕೆ ಸಿಗುವ ಹಣ ಕಡಿಮೆಯಾಗಲಿದೆ. ಇದರ ವಿವರ ಓದಿಗೆ ಈ ಕೊಂಡಿ ಕ್ಲಿಕ್‌ ಮಾಡಿ - ಕಾಶಿ ಯಾತ್ರಾ ಟೆಕೆಟ್‌ ರದ್ದುಗೊಳಿಸಿದರೆ ದುಡ್ಡು ವಾಪಸ್‌ ಸಿಗುತ್ತಾ?

ಕಾಶಿ ಯಾತ್ರಾ ಪ್ಯಾಕೇಜ್‌ನಲ್ಲಿ ಗಮನಿಸಬೇಕಾದ ಕೆಲವು ನಿಯಮಗಳು ಮತ್ತು ಷರತ್ತುಗಳು

ಕರ್ನಾಟಕ- ಭಾರತ್‌ ಗೌರವ್‌ ಕಾಶಿ ದರ್ಶನ್‌ ಯಾತ್ರೆಯ ಪ್ಯಾಕೇಜ್‌ ನಿಯಮದ ಪ್ರಕಾರ, ಯಾತ್ರಿಕರು ಗಮನಿಸಬೇಕಾದ ಒಂದಷ್ಟು ಅಂಶಗಳಿವೆ. ಎಲ್ಲ ಅತಿಥಿಗಳು ವೋಟರ್ ಐಡಿ/ಆಧಾರ್ ಕಾರ್ಡ್ ಮತ್ತು ಕೋವಿಡ್-19 ಅಂತಿಮ ಡೋಸ್ ಪ್ರಮಾಣಪತ್ರ ಕೊಂಡೊಯ್ಯಬೇಕು. ಆಯ್ದ ಸ್ಥಳಗಳಲ್ಲಿರುವ ಕೆಲವು ಹೋಟೆಲ್‌ಗಳಲ್ಲಿ ಲಿಫ್ಟ್ ಸೌಲಭ್ಯ ಇಲ್ಲದಿರಬಹುದು ಎಂಬುದನ್ನೆಲ್ಲ ಗಮನದಲ್ಲಿಟ್ಟುಕೊಳ್ಳಬೇಕು. ಇದರ ವಿವರ ಓದಿಗೆ ಈ ಕೊಂಡಿ ಕ್ಲಿಕ್‌ ಮಾಡಿ ಕಾಶಿ ಯಾತ್ರಾ ಪ್ಯಾಕೇಜ್‌ನಲ್ಲಿ ಗಮನಿಸಬೇಕಾದ ಕೆಲವು ನಿಯಮಗಳು ಮತ್ತು ಷರತ್ತುಗಳು

ಕಾಶಿ ಯಾತ್ರೆ ಯಾತ್ರಿಕರು ಏನು ಮಾಡಬಹುದು ಏನು ಮಾಡಬಾರದು?

ಕಾಶಿ ಯಾತ್ರಾ ಪ್ಯಾಕೇಜ್‌ನಲ್ಲಿ ಪ್ರಯಾಣಿಸುವವರು ನಿಮ್ಮ ಪ್ರಯಾಣವನ್ನು ಉತ್ತಮ ಮತ್ತು ಆರಾಮದಾಯಕವಾಗಿಸಲು ದಯವಿಟ್ಟು ಈ ಕೆಳಗಿನ ಅಂಶಗಳನ್ನು ಅನುಸರಿಸಬೇಕು ಎಂದು ಐಆರ್‌ಸಿಟಿಸಿ ಹೇಳಿದೆ. ಆರೋಗ್ಯ ಸೇತು ಅಪ್ಲಿಕೇಶನ್‌ನ ಇನ್‌ಸ್ಟಾಲ್‌ ಮಾಡಿಕೊಳ್ಳಿ ಮತ್ತು ಅದನ್ನು ಬಳಸಿ. ಇದು ರೈಲ್ವೆ ಸಿಬ್ಬಂದಿ ಮತ್ತು ಪ್ರವಾಸಿಗರು ಎಲ್ಲರೂ ಕಡ್ಡಾಯ ಮಾಡಬೇಕು ಎಂಬುದು ಮೊದಲನೇ ಕಡ್ಡಾಯ ವಿಚಾರ. ಇದೇ ರೀತಿ 14 ಅಂಶಗಳನ್ನು ಪಟ್ಟಿ ಮಾಡಿದೆ. ಇದಲ್ಲದೆ, ವರ್ತನೆ ಮತ್ತು ಭಾಷಾ ಸಭ್ಯತೆಯ ಬಗ್ಗೆಯೂ ವಿವರ ನೀಡಿದೆ. ಅದರ ವಿವರ ಓದಿಗೆ ಈ ಕೊಂಡಿ ಕ್ಲಿಕ್‌ ಮಾಡಿ - ಕಾಶಿ ಯಾತ್ರೆ ಯಾತ್ರಿಕರು ಏನು ಮಾಡಬಹುದು ಏನು ಮಾಡಬಾರದು?

ಕಾಶಿ ಯಾತ್ರೆಗೆ ಹೋಗುವ ಮನಸ್ಸು ಮಾಡಿದರೆ ಇಲ್ಲಿದೆ ಐಆರ್‌ಸಿಟಿಯ ಟಿಕೆಟ್‌ ಬುಕ್ಕಿಂಗ್‌ ಲಿಂಕ್‌ ಇದನ್ನೇ ಕ್ಲಿಕ್‌ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ