ಕನ್ನಡ ಸುದ್ದಿ  /  ಕರ್ನಾಟಕ  /  Kashi Yatra Package Details: ಕರ್ನಾಟಕ- ಕಾಶಿ ಯಾತ್ರಾ ಪ್ಯಾಕೇಜ್‌ ಸೇವೆಯಲ್ಲಿ ಏನೇನಿವೆ? ಏನಿಲ್ಲ ಇಲ್ಲಿದೆ ಮಾಹಿತಿ

Kashi yatra package details: ಕರ್ನಾಟಕ- ಕಾಶಿ ಯಾತ್ರಾ ಪ್ಯಾಕೇಜ್‌ ಸೇವೆಯಲ್ಲಿ ಏನೇನಿವೆ? ಏನಿಲ್ಲ ಇಲ್ಲಿದೆ ಮಾಹಿತಿ

Kashi yatra package details: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಕಾಶಿ ಯಾತ್ರೆಯ ಮೊದಲ ರೈಲು ನವೆಂಬರ್‌ 11ರಂದು ಹೊರಡಲಿದೆ. ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ಯಾತ್ರೆಗೆ ಈಗಾಗಲೇ ಬುಕ್ಕಿಂಗ್‌ ಶುರುವಾಗಿದೆ. ಈ ಯಾತ್ರಾ ಪ್ಯಾಕೇಜ್‌ನಲ್ಲಿ ಏನೇನು ಸೇವೆ, ಸೌಲಭ್ಯಗಳಿವೆ ಎಂಬ ಕುತೂಹಲ ಸಹಜ. ಅದರ ವಿವರ ಇಲ್ಲಿಗೆ ಗಮನಿಸಿ.

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್  ಯಾತ್ರೆಯ ಮೊದಲ ರೈಲು ನವೆಂಬರ್‌ 11ರಂದು ಹೊರಡಲಿದೆ.
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ಯಾತ್ರೆಯ ಮೊದಲ ರೈಲು ನವೆಂಬರ್‌ 11ರಂದು ಹೊರಡಲಿದೆ.

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಕಾಶಿ ಯಾತ್ರೆಯ ಮೊದಲ ರೈಲು ನವೆಂಬರ್‌ 11ರಂದು ಹೊರಡಲಿದೆ. ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ಯಾತ್ರೆಗೆ ಈಗಾಗಲೇ ಬುಕ್ಕಿಂಗ್‌ ಶುರುವಾಗಿದೆ. ಈ ಯಾತ್ರಾ ಪ್ಯಾಕೇಜ್‌ನಲ್ಲಿ ಏನೇನು ಸೇವೆ, ಸೌಲಭ್ಯಗಳಿವೆ ಎಂಬ ಕುತೂಹಲ ಸಹಜ. ಅದರ ವಿವರ ಇಲ್ಲಿಗೆ ಗಮನಿಸಿ.

ಕಾಶಿ ಯಾತ್ರಾ ಪ್ಯಾಕೇಜ್‌ ಸೇವೆಯಲ್ಲಿ ಏನೇನು ಒಳಗೊಂಡಿವೆ?

  • 3AC ವರ್ಗದಲ್ಲಿ ಭಾರತ್ ಗೌರವ್ ವಿಶೇಷ ಪ್ರವಾಸಿ ರೈಲಿನಲ್ಲಿ ರೈಲು ಪ್ರಯಾಣ.
  • ಟ್ವಿನ್/ಟ್ರಿಪಲ್ ಶೇರ್‌ನಲ್ಲಿ ನಾನ್-ಎಸಿ ರೂಮ್‌ಗಳಲ್ಲಿ ಹೋಟೆಲ್‌ಗಳಲ್ಲಿ ರಾತ್ರಿ ವಾಸ್ತವ್ಯದ ಅವಕಾಶ.
  • ನಾನ್-ಎಸಿ ರೂಮ್‌ಗಳಲ್ಲಿ ಹೋಟೆಲ್‌ಗಳಲ್ಲಿ ಪ್ರಯಾಣದ ಪ್ರಕಾರ ಫ್ರೆಶ್‌ ಆಗುವುದಕ್ಕೆ ಅವಕಾಶ.
  • ಎಲ್ಲ ಊಟೋಪಚಾರ (ಸಸ್ಯಾಹಾರಿ ಮಾತ್ರ).
  • ನಾನ್-ಎಸಿ ಬಸ್ಸುಗಳ ಮೂಲಕ ರಸ್ತೆ ಪ್ರಯಾಣ ಮತ್ತು ದೃಶ್ಯವೀಕ್ಷಣೆ.
  • ಪ್ರಯಾಣಿಕರಿಗೆ ಪ್ರಯಾಣ ವಿಮೆ.
  • ರೈಲಿನಲ್ಲಿ ಭದ್ರತೆ.
  • ಅನ್ವಯವಾಗುವ ಎಲ್ಲ ತೆರಿಗೆಗಳು.

ಕಾಶಿ ಯಾತ್ರಾ ಪ್ಯಾಕೇಜ್‌ ಸೇವೆಯಲ್ಲಿ ಇಲ್ಲದೇ ಇರುವುದೇನು?

  • ದೋಣಿ ವಿಹಾರ, ಸಾಹಸ ಕ್ರೀಡೆ ಇತ್ಯಾದಿ.
  • ಊಟದಲ್ಲಿ ಆಯ್ಕೆ ಇಲ್ಲ. ಮೊದಲೇ ನಿಗದಿಪಡಿಸಿದ ಮೆನು ಪ್ರಕಾರ ಊಟ ಇರಲಿದೆ.
  • ಯಾವುದೇ ಕೊಠಡಿ ಸೇವೆ (ರೂಮ್‌ ಸರ್ವೀಸ್‌)ಗೆ ಶುಲ್ಕ ಇರಲಿದೆ.
  • ಪ್ರೇಕ್ಷಣೀಯ ಸ್ಥಳಗಳ ವೆಚ್ಚ, ಪ್ರವೇಶ ಮತ್ತು ಸ್ಥಳೀಯ ಮಾರ್ಗದರ್ಶಕರು ಇತ್ಯಾದಿಗಳನ್ನು ಪ್ರವಾಸದ ಟಿಕೆಟ್‌ ದರದಲ್ಲಿ ಸೇರಿಸಿಲ್ಲ.
  • ಚಾಲಕರು, ಮಾಣಿಗಳು, ಮಾರ್ಗದರ್ಶಿಗಳು, ಏಜೆಂಟ್‌ಗಳಿಗೆ ಟಿಪ್ಸ್‌, ಇಂಧನ ಸರ್ಚಾರ್ಜ್ ಇತ್ಯಾದಿಗಳನ್ನು ಪ್ರವಾಸದ ಟಿಕೆಟ್‌ ದರದಲ್ಲಿ ಸೇರಿಸಿಲ್ಲ.
  • ಒದಗಿಸಿದ ನಿಯಮಿತ ಮೆನುಗಳಲ್ಲಿಲ್ಲದ ಲಾಂಡ್ರಿ ವೆಚ್ಚಗಳು, ವೈನ್‌ಗಳು, ಖನಿಜಯುಕ್ತ ನೀರು, ಆಹಾರ ಮತ್ತು ಪಾನೀಯಗಳಂತಹ ವೈಯಕ್ತಿಕ ಸ್ವಭಾವದ ಯಾವುದೇ ವೆಚ್ಚಗಳು ಪ್ರತ್ಯೇಕ
  • ಈ ಪಟ್ಟಿಯಲ್ಲಿ ಇಲ್ಲದೇ ಇರುವುದು ಕೂಡ ಯಾತ್ರಾ ಸಂದರ್ಭದಲ್ಲಿ ಇರಲ್ಲ.

ಕಾಶಿ ಯಾತ್ರಾ ಟೆಕೆಟ್‌ ರದ್ದುಗೊಳಿಸಿದರೆ ದುಡ್ಡು ವಾಪಸ್‌ ಸಿಗುತ್ತಾ?

  • ಪ್ರಯಾಣದ ಪ್ರಾರಂಭಕ್ಕಿಂತ ಮೊದಲು 15 ದಿನಗಳವರೆಗೆ (ನಿರ್ಗಮನದ ದಿನಾಂಕವನ್ನು ಹೊರತುಪಡಿಸಿ) ಪ್ರತಿ ಪ್ರಯಾಣಿಕರ ಟಿಕೆಟ್‌ದರಲ್ಲಿ 250 ರೂಪಾಯಿ ಕಡಿತಗೊಳಿಸಿ ಉಳಿದ ಹಣ ವಾಪಸ್‌ ಸಿಗಲಿದೆ.
  • ಪ್ರಯಾಣದ ಪ್ರಾರಂಭಕ್ಕಿಂತ ಮೊದಲು 08-14 ದಿನಗಳವರೆಗೆ (ನಿರ್ಗಮನದ ದಿನಾಂಕವನ್ನು ಹೊರತುಪಡಿಸಿ) ಪ್ಯಾಕೇಜ್ ವೆಚ್ಚದ 25 % ಕಡಿತಗೊಳಿಸಿ ಉಳಿದ ಹಣ ವಾಪಸ್‌ ಸಿಗಲಿದೆ.
  • ಪ್ರಯಾಣದ ಪ್ರಾರಂಭಕ್ಕಿಂತ ಮೊದಲು 04-07 ದಿನಗಳವರೆಗೆ (ನಿರ್ಗಮನದ ದಿನಾಂಕವನ್ನು ಹೊರತುಪಡಿಸಿ) ಪ್ಯಾಕೇಜ್ ವೆಚ್ಚದ 50 % ಕಡಿತಗೊಳಿಸಿ ಉಳಿದ ಹಣ ವಾಪಸ್‌ ಸಿಗಲಿದೆ.
  • ಪ್ರಯಾಣದ ಪ್ರಾರಂಭಕ್ಕಿಂತ ಮೊದಲು 04 ದಿನಗಳಿಗಿಂತ ಕಡಿಮೆ ಇದ್ದರೆ ಟಿಕೆಟ್‌ ದುಡ್ಡು ವಾಪಸ್‌ ಸಿಗಲ್ಲ.

ಕಾಶಿ ಯಾತ್ರಾ ಪ್ಯಾಕೇಜ್‌ನಲ್ಲಿ ಗಮನಿಸಬೇಕಾದ ಕೆಲವು ನಿಯಮಗಳು ಮತ್ತು ಷರತ್ತುಗಳು

  • ಎಲ್ಲ ಅತಿಥಿಗಳು ವೋಟರ್ ಐಡಿ/ಆಧಾರ್ ಕಾರ್ಡ್ ಮತ್ತು ಕೋವಿಡ್-19 ಅಂತಿಮ ಡೋಸ್ ಪ್ರಮಾಣಪತ್ರ ಕೊಂಡೊಯ್ಯಬೇಕು.
  • ಆಯ್ದ ಸ್ಥಳಗಳಲ್ಲಿರುವ ಕೆಲವು ಹೋಟೆಲ್‌ಗಳಲ್ಲಿ ಲಿಫ್ಟ್ ಸೌಲಭ್ಯ ಇಲ್ಲದಿರಬಹುದು.
  • ಪ್ರಯಾಣವು ತಾತ್ಕಾಲಿಕ ಮತ್ತು ರೈಲಿನ ಸುಗಮ ಮತ್ತು ಸಮಯೋಚಿತ ಚಾಲನೆಗೆ ಒಳಪಟ್ಟು ಬದಲಾಗಬಹುದು ಅಥವಾ ಮಾರ್ಪಡಾಗಬಹುದು. ರೈಲು ಪ್ರಯಾಣದ ಅಂತಿಮ ಸಮಯವನ್ನು ರೈಲ್ವೇ ಆದೇಶವನ್ನು ಆಧರಿಸಿರುತ್ತದೆ.
  • ಭಾರತ್ ಗೌರವ್ ಟೂರಿಸ್ಟ್ ರೈಲಿನ ಕಾರ್ಯಾಚರಣೆಯು ಕನಿಷ್ಠ ಸಂಖ್ಯೆಯ ಪ್ರಯಾಣಿಕರ ಕಾಯ್ದಿರಿಸುವಿಕೆಗೆ ಒಳಪಟ್ಟಿದ್ದು, ಅಷ್ಟು ಮುಂಗಡ ಬುಕ್ಕಿಂಗ್‌ ಆಗದೇ ಇದ್ದರೆ ಯಾತ್ರೆ ರದ್ದಾಗಬಹುದು ಅಥವಾ ಮುಂದೂಡಲ್ಪಡಬಹುದು.
  • ಅನಿವಾರ್ಯ ಸಂದರ್ಭಗಳಲ್ಲಿ ಪ್ರಯಾಣವನ್ನು ಬದಲಾಯಿಸುವ ಹಕ್ಕನ್ನು ಹೊಂದಿದೆ ಮತ್ತು ಪ್ರವಾಸದ ಅವಧಿಯಲ್ಲಿ ನಿಯಂತ್ರಣಕ್ಕೆ ಮೀರಿದ ಯಾವುದೇ ರೀತಿಯ ನೈಸರ್ಗಿಕ ವಿಪತ್ತುಗಳು/ ಮುಷ್ಕರಗಳು/ ರದ್ದತಿ/ ರೈಲಿನ ವಿಳಂಬ/ ದಂಗೆಗಳಿಗೆ IRCTC ಹೊಣೆ ಆಗಿರುವುದಿಲ್ಲ.
  • ರೈಲು ಹತ್ತುವ ಮೊದಲು ಪ್ರಯಾಣಿಕರು ತಮ್ಮ ವೈದ್ಯರಿಂದ ತಮ್ಮ ಶಾರೀರಿಕ/ಆರೋಗ್ಯದ ಸರಿಯಾದ ತಪಾಸಣೆ ಮಾಡಿಸಿ ಪ್ರಯಾಣಕ್ಕೆ ಫಿಟ್‌ ಎಂಬುದನ್ನು ದೃಢೀಕರಿಸಬೇಕು. ಅಸ್ತಮಾ ರೋಗಿಗಳ ಉಸಿರಾಟದ ಸಮಸ್ಯೆ/ ಇತರೆ ಯಾವುದೇ ದೈಹಿಕ ಸಮಸ್ಯೆಗಳು ಮತ್ತು ಪ್ರಯಾಣಿಕರ ಸಹಜ ಸಾವು, ಯೋಗ್ಯವಲ್ಲದ ಸಂದರ್ಭ/ಆರೋಗ್ಯ ಸಮಸ್ಯೆಗಳಾದ ಚಡಪಡಿಕೆ/ಆತಂಕ/ಅಸಾಧಾರಣ ಕಾರಣದಿಂದ ಯಾವುದೇ ಅನಾಹುತವಾದರೂ ಅದಕ್ಕೆ ಐಆರ್‌ಸಿಟಿಸಿ ಜವಾಬ್ದಾರಿ ಅಲ್ಲ.

ಕರ್ನಾಟಕ-ಕಾಶಿ ಯಾತ್ರೆ ಯಾತ್ರಿಕರು ಏನು ಮಾಡಬಹುದು ಏನು ಮಾಡಬಾರದು?

IPL_Entry_Point