ಕನ್ನಡ ಸುದ್ದಿ  /  ಕರ್ನಾಟಕ  /  ಮಳೆಯಿಲ್ಲದೆ ಸೊರಗುತ್ತಿರುವ ನದಿಗಳು; ಏಪ್ರಿಲ್ 28ರ ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ

ಮಳೆಯಿಲ್ಲದೆ ಸೊರಗುತ್ತಿರುವ ನದಿಗಳು; ಏಪ್ರಿಲ್ 28ರ ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ

Raghavendra M Y HT Kannada

Apr 28, 2024 10:12 AM IST

ಮಂಡ್ಯ ಜಿಲ್ಲೆ ಕೃಷ್ಣರಾಜಸಾಗರ ಹಲವು ಜಿಲ್ಲೆಗಳ ಜೀವ ನಾಡಿ. ನೀರಿನ ದಾಹ ನೀಗಿಸುವ ಜಲದೇವತೆ. ಈ ಬಾರಿ ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಕೊರತೆ ಇದೆ. ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ವಿವರ ಇಲ್ಲಿದೆ.

    • ಮಳೆ ಕೊರತೆ ಹಾಗೂ ತಾಪಮಾನ ಹೆಚ್ಚಾಗುತ್ತಿರುವ ಪರಿಣಾಮವಾಗಿ ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಕೆಆರ್‌ಎಸ್‌ನಿಂದ ವರಾಹಿ ವರೆಗೆ ರಾಜ್ಯದ ಯಾವ ಡ್ಯಾಮ್‌ನಲ್ಲಿ ಎಷ್ಟು ನೀರಿದೆ ಅನ್ನೋದರ ವಿವರ ಇಲ್ಲಿದೆ.
ಮಂಡ್ಯ ಜಿಲ್ಲೆ ಕೃಷ್ಣರಾಜಸಾಗರ ಹಲವು ಜಿಲ್ಲೆಗಳ ಜೀವ ನಾಡಿ. ನೀರಿನ ದಾಹ ನೀಗಿಸುವ ಜಲದೇವತೆ. ಈ ಬಾರಿ ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಕೊರತೆ ಇದೆ. ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ವಿವರ ಇಲ್ಲಿದೆ.
ಮಂಡ್ಯ ಜಿಲ್ಲೆ ಕೃಷ್ಣರಾಜಸಾಗರ ಹಲವು ಜಿಲ್ಲೆಗಳ ಜೀವ ನಾಡಿ. ನೀರಿನ ದಾಹ ನೀಗಿಸುವ ಜಲದೇವತೆ. ಈ ಬಾರಿ ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಕೊರತೆ ಇದೆ. ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ವಿವರ ಇಲ್ಲಿದೆ.

ಬೆಂಗಳೂರು: ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇತ್ತೀಚೆಗೆ ಭಾರಿ ಮಳೆಯಾಗಿತ್ತು (Karnataka Rain). ಇದರಿಂದ ಕೆಲವೊಂದು ಜಲಾಶಯಗಳಿಗೆ (Reservoirs) ಅಲ್ಪ ಸ್ವಲ್ಪ ನೀರು ಕೂಡ ಬಂದಿತ್ತು. ಆದರೆ ಮಳೆ ಕಡಿಮೆಯಾಗಿದೆ (Rain Shortage). ಮತ್ತೆ ರಣ ಬಿಸಲು, ಬಿಸಿ ಗಾಳಿ (Heat Wave) ಮುಂದುವರಿದ ಪರಿಣಾಮ ಡ್ಯಾಮ್‌ಗಳಲ್ಲಿ ನೀರಿನ ಮಟ್ಟವು ಆತಂಕಕಾರಿಯಾಗಿ ಕುಸಿಯುತ್ತಿದೆ. ಜಲಾಶಯಗಳ ಒಟ್ಟು ಸಾಮಾರ್ಥ್ಯದ ಶೇಕಡಾ 25ಕ್ಕಿಂತ ಕಡಿಮೆ ಮಟ್ಟಕ್ಕೆ ಬಂದಿವೆ. ನೀರಿನ ಕೊರತೆ ನಗರ ಹಾಗೂ ಗ್ರಾಮೀಣ ಪ್ರದೇಶದ ಜನರ ಮೇಲೆ ಪರಿಣಾಮ ಬೀರಿದೆ. ಅದರಲ್ಲೂ ವಿಶೇಷವಾಗಿ ಕೃಷಿ ಚಟುವಟಿಕೆಗಳಿಗೆ ಹೊಡೆತೆ ನೀಡುತ್ತದೆ.

ಟ್ರೆಂಡಿಂಗ್​ ಸುದ್ದಿ

Karnataka Rains: ಹುಬ್ಬಳ್ಳಿ ಧಾರವಾಡ, ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆ, ಕೊಚ್ಚಿ ಹೋದ ಕಾರುಗಳು

Bangalore News: ಮಳೆ ತಾರದ ವಿದೇಶಿ ಮರ ಬೆಂಗಳೂರಲ್ಲಿ ಬೆಳೆಸುವುದಕ್ಕೆ ವಿರೋಧ, ದೇಸಿ ಮರಕ್ಕೆ ಒತ್ತು ನೀಡಲು ಸಲಹೆ

SM Krishna: ಮಾಜಿ ಸಿಎಂ ಎಸ್‌ಎಂ ಕೃಷ್ಣ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ

Mangalore News: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲಭಿಸಿತು ಪ್ರತಿಷ್ಠಿತ ಪ್ರಶಸ್ತಿ

ಕಳೆದ ವರ್ಷದ ಇದೇ ಅವಧಿಯಲ್ಲಿ ಕರ್ನಾಟಕದ ಪ್ರಮುಖ 14 ಜಲಾಶಯಗಳಲ್ಲಿ ಒಟ್ಟಾರೆಯಾಗಿ 269 ಟಿಎಂಸಿಯಷ್ಟು ನೀರಿನ ಸಂಗ್ರಹವಿತ್ತು. ಆದರೆ 2024ರ ಏಪ್ರಿಲ್ ತಿಂಗಳಲ್ಲಿ ಕೇವಲ 217.75 ಟಿಎಂಸಿಗೆ ಇಳಿಕೆಯಾಗಿದೆ. ಈ ಡ್ಯಾಮ್‌ಗಳಲ್ಲಿ ಒಟ್ಟು 895.62 ಟಿಎಂಸಿ ಸಂಗ್ರಹದ ಸಾಮರ್ಥ್ಯವಿದೆ. ಆದರೆ ಮಳೆ ಕೊರತೆ ಹಾಗೂ ಹೆಚ್ಚಾಗುತ್ತಿರುವ ತಾಪಮಾನದಿಂದಾಗಿ ಈ ಬಾರಿ ಶೇಕಡಾ 25 ರಷ್ಟು ಮಾತ್ರ (217.75 ಟಿಎಂಸಿ) ನೀರಿನ ಸಂಗ್ರಹವಿದೆ.

ಮಾರ್ಚ್‌ನಿಂದ ಮೇ ವರೆಗೆ ಜಲಾಶಯಗಳ ನೀರಿನ ಮಟ್ಟದ ಕುಸಿತವು ಪ್ರಸ್ತುತ ನೀರಿನ ಬಿಕ್ಕಟ್ಟನ್ನು ಉಲ್ಬಣಗೊಳಿಸುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಮಾಜಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ. ನಿಗದಿತ ಪ್ರಮಾಣದಲ್ಲಿ ಮಳೆಬಾರದಿರುವುದೇ ಈ ಎಲ್ಲಾ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿದೆ. ಪ್ರಸ್ತುತ ಕರ್ನಾಟಕದ ಯಾವ ಡ್ಯಾಮ್‌ನಲ್ಲಿ ಎಷ್ಟು ನೀರಿದೆ ಅನ್ನೋದರ ವಿವರ ಇಲ್ಲಿದೆ.

1. ಕೆಆರ್‌ಎಸ್

ಗರಿಷ್ಠ ನೀರಿನ ಮಟ್ಟ - 38.04 ಮೀಟರ್

ಇಂದಿನ ನೀರಿನ ಮಟ್ಟ - 11.384 ಟಿಎಂಸಿ

ಒಳ ಹರಿವು - 75 ಕ್ಯೂಸೆಕ್

ಹೊರ ಹರಿವು - 934 ಕ್ಯೂಸೆಕ್

2. ಹಾರಂಗಿ ಜಲಾಶಯ

ಗರಿಷ್ಠ ನೀರಿನ ಮಟ್ಟ - 871.38 ಮೀಟರ್

ಇಂದಿನ ನೀರನ ಮಟ್ಟ - 3.006 ಟಿಎಂಸಿ

ಒಳ ಹರಿವು - 159 ಕ್ಯೂಸೆಕ್

ಹೊರ ಹರಿವು - 200 ಕ್ಯೂಸೆಕ್

3. ಆಲಮಟ್ಟಿ ಜಲಾಶಯ

ಗರಿಷ್ಠ ನೀರಿನ ಮಟ್ಟ - 519.60 ಮೀಟರ್

ಇಂದಿನ ನೀರನ ಮಟ್ಟ - 33.02 ಟಿಎಂಸಿ

ಒಳ ಹರಿವು - 0

ಹೊರ ಹರಿವು - 902 ಕ್ಯೂಸೆಕ್

4. ತುಂಗಭದ್ರಾ ಜಲಾಶಯ

ಗರಿಷ್ಠ ನೀರಿನ ಮಟ್ಟ - 497.71 ಮೀಟರ್

ಇಂದಿನ ನೀರನ ಮಟ್ಟ - 3.85 ಟಿಎಂಸಿ

ಒಳ ಹರಿವು - 0

ಹೊರ ಹರಿವು - 200 ಕ್ಯೂಸೆಕ್

5. ಮಲಪ್ರಭಾ ಜಲಾಶಯ

ಗರಿಷ್ಠ ನೀರಿನ ಮಟ್ಟ - 633.80 ಮೀಟರ್

ಇಂದಿನ ನೀರನ ಮಟ್ಟ - 8.37 ಟಿಎಂಸಿ

ಒಳ ಹರಿವು - 0

ಹೊರ ಹರಿವು -194 ಕ್ಯೂಸೆಕ್

6. ಲಿಂಗನಮಕ್ಕಿ ಜಲಾಶಯ

ಗರಿಷ್ಠ ನೀರಿನ ಮಟ್ಟ - 554.44 ಮೀಟರ್

ಇಂದಿನ ನೀರನ ಮಟ್ಟ - 23.34 ಟಿಎಂಸಿ

ಒಳ ಹರಿವು - 0

ಹೊರ ಹರಿವು - 3002 ಕ್ಯೂಸೆಕ್

7. ಕಬಿನಿ ಜಲಾಶಯ

ಗರಿಷ್ಠ ನೀರಿನ ಮಟ್ಟ - 698.13 ಮೀಟರ್

ಇಂದಿನ ನೀರನ ಮಟ್ಟ - 7.419 ಟಿಎಂಸಿ

ಒಳ ಹರಿವು - 29 ಕ್ಯೂಸೆಕ್

ಹೊರ ಹರಿವು - - 800 ಕ್ಯೂಸೆಕ್

8. ಭದ್ರಾ ಜಲಾಶಯ

ಗರಿಷ್ಠ ನೀರಿನ ಮಟ್ಟ - 657.73 ಮೀಟರ್

ಇಂದಿನ ನೀರನ ಮಟ್ಟ - 17.64 ಟಿಎಂಸಿ

ಒಳ ಹರಿವು - 77 ಕ್ಯೂಸೆಕ್

ಹೊರ ಹರಿವು - 1293 ಕ್ಯೂಸೆಕ್

9. ಘಟಪ್ರಭಾ ಜಲಾಶಯ

ಗರಿಷ್ಠ ನೀರಿನ ಮಟ್ಟ - 662.91 ಮೀಟರ್

ಇಂದಿನ ನೀರನ ಮಟ್ಟ - 19.73 ಟಿಎಂಸಿ

ಒಳ ಹರಿವು - 0

ಹೊರ ಹರಿವು - 2073

10. ಹೇಮಾವತಿ ಜಲಾಶಯ

ಗರಿಷ್ಠ ನೀರಿನ ಮಟ್ಟ - 890.58 ಮೀಟರ್

ಇಂದಿನ ನೀರನ ಮಟ್ಟ - 9.573 ಟಿಎಂಸಿ

ಒಳ ಹರಿವು - 9 ಕ್ಯೂಸೆಕ್

ಹೊರ ಹರಿವು - 330 ಕ್ಯೂಸೆಕ್

11. ಸುಫಾ ಜಲಾಶಯ

ಗರಿಷ್ಠ ನೀರಿನ ಮಟ್ಟ - 564.00 ಮೀಟರ್

ಇಂದಿನ ನೀರನ ಮಟ್ಟ - 43.26 ಟಿಎಂಸಿ

ಒಳ ಹರಿವು - 0

ಹೊರ ಹರಿವು - 3104 ಕ್ಯೂಸೆಕ್

12. ವರಾಹಿ ಜಲಾಶಯ

ಗರಿಷ್ಠ ನೀರಿನ ಮಟ್ಟ - 594.36 ಮೀಟರ್

ಇಂದಿನ ನೀರನ ಮಟ್ಟ - 5.22 ಟಿಎಂಸಿ

ಒಳ ಹರಿವು - 0

ಹೊರ ಹರಿವು - 0

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ