ಕನ್ನಡ ಸುದ್ದಿ  /  ಕರ್ನಾಟಕ  /  Who Was Bks Varma: ಕಲೆಗೆ ಜೀವ ತುಂಬಿದ ಚಿತ್ರಕಲಾ ಪ್ರಪಂಚದ ಕಲಾತಪಸ್ವಿ ಕಣ್ಮರೆ; ಹೆಸರಿಗೆ ʻವರ್ಮಾʼ ಸೇರಿದ್ದು ಹೇಗೆ? ಮೂಲ ಹೆಸರೇನು?

Who was BKS Varma: ಕಲೆಗೆ ಜೀವ ತುಂಬಿದ ಚಿತ್ರಕಲಾ ಪ್ರಪಂಚದ ಕಲಾತಪಸ್ವಿ ಕಣ್ಮರೆ; ಹೆಸರಿಗೆ ʻವರ್ಮಾʼ ಸೇರಿದ್ದು ಹೇಗೆ? ಮೂಲ ಹೆಸರೇನು?

HT Kannada Desk HT Kannada

Feb 06, 2023 11:47 AM IST

ಡಾ.ಬಿ.ಕೆ.ಎಸ್.ವರ್ಮ (1949-2023)

  • BKS Varma profile: ಅವರ ಕಲಾಕೃತಿಗಳಲ್ಲಿ ಒಂದು ಜೀವಂತಿಕೆ ಇತ್ತು. ದೇವರ, ಸಂತರ ಚಿತ್ರಗಳಲ್ಲಿ ಒಂದು ಆರಾಧನೆಯ ಭಕ್ತಿ ಭಾವ ಸ್ಫುರಿಸುವ ನೋಟವಿತ್ತು. ಇತ್ತೀಚಿನವರೆಗೂ ಚಿತ್ರ ಬರೆಯುತ್ತ ಇದ್ದವರು ವರ್ಮ. ಕೌಟುಂಬಿಕವಾಗಿಯೂ ಅವರಿಗೆ ಸಂಗೀತ, ಕಲೆಗಳ ವಾತಾವರಣ ಸಿಕ್ಕಿತ್ತು. ಇಂದು ಇಹಲೋಕ ತ್ಯಜಿಸಿದ ಅವರ ಬದುಕಿನ ಕಡೆಗೊಂದು ಕಿರುನೋಟ.

ಡಾ.ಬಿ.ಕೆ.ಎಸ್.ವರ್ಮ (1949-2023)
ಡಾ.ಬಿ.ಕೆ.ಎಸ್.ವರ್ಮ (1949-2023)

ಟ್ರೆಂಡಿಂಗ್​ ಸುದ್ದಿ

Indian Railways: ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಬೀದರ್‌ನ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ, ಯಾವ ರೈಲು, ಎಲ್ಲಿಯವರೆಗೆ

Bangalore News: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿ ವೇಗವಾಗಿ ವಾಹನ ಚಾಲನೆ ಮಾಡಿದರೆ ದಂಡ ಕಟ್ಟ ಬೇಕಾದೀತು, ಹುಷಾರು

ನಮ್ಮಲ್ಲಿ ಒಳಜಗಳ ಇಲ್ಲ, ನಮ್ಮ ಸರ್ಕಾರ ಉರುಳಿಸಿಕೊಳ್ಳಲು ಯಾರಿಂದಲೂ ಆಗೋಲ್ಲ: ಸಿಎಂ ಸಿದ್ದರಾಮಯ್ಯ

Hassan Scandal: 6 ದಿನ ಜೈಲು ವಾಸದ ನಂತರ ಜಾಮೀನಿನ ಮೇಲೆ ರೇವಣ್ಣ ಬಿಡುಗಡೆ

ಹೌದು. ಎಲ್ಲ ಕಲಾವಿದರಂತಲ್ಲ ಡಾ.ಬಿ.ಕೆ.ಎಸ್.ವರ್ಮ. ಅವರ ಕಲಾಕೃತಿಗಳಲ್ಲಿ ಒಂದು ಜೀವಂತಿಕೆ ಇತ್ತು. ದೇವರ, ಸಂತರ ಚಿತ್ರಗಳಲ್ಲಿ ಒಂದು ಆರಾಧನೆಯ ಭಕ್ತಿ ಭಾವ ಸ್ಫುರಿಸುವ ನೋಟವಿತ್ತು. ಇತ್ತೀಚಿನವರೆಗೂ ಚಿತ್ರ ಬರೆಯುತ್ತ ಇದ್ದವರು ವರ್ಮ. ಕೌಟುಂಬಿಕವಾಗಿಯೂ ಅವರಿಗೆ ಸಂಗೀತ, ಕಲೆಗಳ ವಾತಾವರಣ ಸಿಕ್ಕಿತ್ತು. ಇಂದು ಇಹಲೋಕ ತ್ಯಜಿಸಿದ ಅವರ ಬದುಕಿನ ಕಡೆಗೊಂದು ಕಿರುನೋಟ.

ಬಿಕೆಎಸ್‌ ವರ್ಮಾ ಅವರ ಮೂಲ ಹೆಸರು

ಬುಕ್ಕಸಾಗರ ಕೃಷ್ಣಯ್ಯ ಶ್ರೀನಿವಾಸ್

ಹುಟ್ಟಿದ್ದು

ಬೆಂಗಳೂರಿನ ಹೊರವಲಯದ ಅತ್ತಿಬೆಲೆ ತಾಲೂಕಿನ ಕರ್ನೂರು ಹುಟ್ಟೂರು. ಜನನ ವರ್ಷ 1949.

ತಂದೆ -ತಾಯಿ

ತಂದೆ - ಕೃಷ್ಣಮಾಚಾರ್ಯ, ಸಂಗೀತಗಾರರು

ತಾಯಿ - ಜಯಲಕ್ಷ್ಮಿ - ಕಲಾವಿದೆ

ಚಿತ್ರಕಲೆ ಕಡೆಗೆ ಸೆಳೆತ

ಬುಕ್ಕಸಾಗರ ಕೃಷ್ಣಯ್ಯ ಶ್ರೀನಿವಾಸ್ ಅವರಿಗೆ ಆರು ವರ್ಷ ವಯಸ್ಸು ಆಗ. ರೇಖಾ ಚಿತ್ರಗಳ ಕಡೆಗೆ ಸೆಳೆತ. ರೇಖಾ ಚಿತ್ರ ಕಲಿಕೆ ಶುರು.

ಕಲಾ ತರಬೇತಿ ಎಲ್ಲಿ ಶುರು ಯಾವಾಗ

ಬೆಂಗಳೂರಿನ ಕಲಾಮಂದಿರದಲ್ಲಿ ಎ.ಎನ್.ಸುಬ್ಬರಾವ್ ಮತ್ತು ದೇವನಹಳ್ಳಿಯ ಶಿಲ್ಪಿ ಎ.ಸಿ.ಹೆಚ್. ಆಚಾರ್ಯ ಅವರೇ ಬಿಕೆಎಸ್‌ ಅವರ ಗುರುಗಳು. 1962-68ರ ಕಾಲಘಟ್ಟದಲ್ಲಿ ಈ ಕಲಿಕೆ. ಎರಡು ಬಾರಿ ಭಾರತದಾದ್ಯಂತ ಪ್ರವಾಸ ಮಾಡಿ ಡಾ.ರಾಧಾಕೃಷ್ಣ (ಭಾರತದ ಮಾಜಿ ರಾಷ್ಟ್ರಪತಿ), ದೇವಿಪ್ರಸಾದ್ ರಾಯ್ ಚೌದ್ರಿ, ಜಾಮಿನಿ ರಾಯ್, ನಂದಲ್ ಬೋಸ್, ಕೆಕೆ ಹೆಬ್ಬಾರ್, ಎಂಎಫ್ ಹುಸೇನ್, ಪಣಿಕರ್, ರಾಷ್ಟ್ರಕವಿ ಕುವೆಂಪು, ಶಿವರಾಮ ಕಾರಂತರು ಸೇರಿ ಅನೇಕ ಗಣ್ಯರನ್ನು ಭೇಟಿಯಾದರು. ಭಾರತದಾದ್ಯಂತ ಅವರ ಪ್ರಯಾಣದ ಸಮಯದಲ್ಲಿ ಅವರು ಈ ಕ್ಷೇತ್ರದಲ್ಲಿ ಹೆಚ್ಚಿನ ಜ್ಞಾನ ಮತ್ತು ಅನುಭವವನ್ನು ಪಡೆಯಲು ಅಜಂತಾ, ಎಲ್ಲೋರಾ ಮತ್ತು ಅನೇಕ ಕಲಾ ವಸ್ತುಸಂಗ್ರಹಾಲಯಗಳು ಮತ್ತು ಗ್ಯಾಲರಿಗಳಿಗೆ ಭೇಟಿ ನೀಡಿದರು.

ಬಿಕೆಎಸ್‌ ಹೆಸರಿನ ಜತೆಗೆ ʻವರ್ಮʼ ಸೇರಿಕೊಂಡದ್ದು ಹೇಗೆ?

ಚಿತ್ರಕಲೆಯಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದ ಬಿಕೆಎಸ್‌ ಅವರು, ಮೈಸೂರಿನ ಅರಮನೆಯಲ್ಲಿದ್ದ ರಾಜಾ ರವಿವರ್ಮಾ ಅವರ ಕಾಲಕೃತಿಗಳಿಂದ ತೀವ್ರ ಪ್ರಭಾವಿತರಾಗಿದ್ದರು. ರವಿ ವರ್ಮಾ ಅವರ ಕಲಾಕೃತಿಗಳ ಆರಾಧಕರಾಗಿ ಮಾರ್ಪಟ್ಟ ಅವರು ತಮ್ಮ ಮೂಲ ಹೆಸರಾದ ಬುಕ್ಕಸಾಗರ ಕೃಷ್ಣಯ್ಯ ಶ್ರೀನಿವಾಸ್ ಜತೆಗೆ ವರ್ಮಾ ಎಂಬ ಹೆಸರನ್ನೂ ಸೇರಿಸಿಕೊಂಡರು ಎನ್ನುತ್ತಿದೆ ಮಾಧ್ಯಮ ವರದಿಗಳು.

ಅಭಿನವ ರವಿವರ್ಮ ಎಂಬ ಬಯಾಗ್ರಫಿ

ಬಿಕೆಎಸ್‌ ವರ್ಮಾ ಅವರ ವ್ಯಕ್ತಿ ಚಿತ್ರವನ್ನು ಕಟ್ಟಿಕೊಡುವ ಅಭಿನವ ರವಿವರ್ಮ ಬಿಕೆಎಸ್‌ ವರ್ಮ ಎಂಬ ಪುಸ್ತಕವನ್ನು ಸುರೇಶ್‌ ಮೂನ ಅವರು ಬರೆದಿದ್ದರು. ಇದನ್ನು ಬೆಂಗಳೂರಿನ ಸಪ್ನಾ ಬುಕ್‌ ಹೌಸ್‌ 2010ರಲ್ಲಿ ಪ್ರಕಟಿಸಿದೆ.

ಕಲಾ ಬದುಕಿನ ಪ್ರಮುಖ ಘಟನಾವಳಿಗಳು

1986 - ಡಾ. ರೋರಿಚ್ ಮತ್ತು ದೇವಿಕಾರಾಣಿ ಉದ್ಘಾಟಿಸಿದ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಅವರು ಪರಿಸರ ವರ್ಣಚಿತ್ರಗಳ ಸರಣಿಯ ಕೃತಿಗಳ ಪ್ರದರ್ಶನವನ್ನು ನಡೆಸಿದರು. ಅದೇ ಸಮಯದಲ್ಲಿ ಅವರಿಗೆ "ರಾಜ್ಯ ಲಲಿತಕಲಾ ಅಕಾಡೆಮಿ ಪ್ರಶಸ್ತಿ" ನೀಡಿ ಗೌರವಿಸಲಾಗಿತ್ತು.

1987 - ಮೈಸೂರು ದಸರಾದ ಸಮಯದಲ್ಲಿ ಲಲಿತಕಲಾ ಅಕಾಡೆಮಿ ಕಲಾ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಅಲ್ಲಿ ಅವರ ಕೃತಿಗೆ "ಅತಿ ಉತ್ತಮ ಕಲಾ ಕೃತಿ ಪ್ರಶಸ್ತಿ" ನೀಡಿ ಗೌರವಿಸಲಾಯಿತು.

1988 - ಅವರ ಎರಡು ವರ್ಣಚಿತ್ರಗಳನ್ನು ರಷ್ಯಾ ಉತ್ಸವದಲ್ಲಿ ಭಾರತೀಯ ಉತ್ಸವಕ್ಕೆ ಆಯ್ಕೆ ಮಾಡಲಾಗಿತ್ತು.

1997 - ಕುವೈತ್‌ ರಾಯಭಾರ ಭವನದಲ್ಲಿ "ಆರ್ಟ್ ಫಾರ್ಮುಲಾ" ಕಾರ್ಯಕ್ರಮಕ್ಕಾಗಿ ಅವರನ್ನು ಆಹ್ವಾನಿಸಲಾಯಿತು, ಅದರಲ್ಲಿ ಅವರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದರು. ಅದೇ ಸಮಯದಲ್ಲಿ ಅವರನ್ನು ಬಹ್ರೇನ್ ಕಿಂಗ್ - ಬಿನ್ ಕಲಿಫಾ ಅವರು ಬಹ್ರೇನ್ ಆರ್ಟ್ಸ್ ಸೊಸೈಟಿಯಲ್ಲಿ "ಬಹ್ರೇನ್ ಪೀಸ್ 2000" ಕಾರ್ಯಕ್ರಮಕ್ಕಾಗಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲು ಆಹ್ವಾನಿಸಿದರು.

1999 - ಅವರು ಲಂಡನ್‌ಗೆ ಪ್ರಯಾಣಿಸಿದರು ಮತ್ತು ಅವರ ಕಲಾಕೃತಿಗಳನ್ನು "ಆರ್ಟ್ 'ಎನ್' ಹರಾಜು" - ಈಸ್ಟರ್ನ್ ಆರ್ಟ್ಸ್‌ನಲ್ಲಿ ಪ್ರಸ್ತುತಪಡಿಸಿದರು. ಅವರು ತಮ್ಮ ಕೃತಿಗಳನ್ನು ಲಂಡನ್‌ನ "ನೆಹರು ಕೇಂದ್ರ" ದಲ್ಲಿ ಪ್ರದರ್ಶಿಸಿದರು.

2000 - ಹ್ಯೂಸ್ಟನ್‌ನ "ವಿಶ್ವ ಕನ್ನಡ ಸಮ್ಮೇಳನ"ದಲ್ಲಿ ಭಾಗವಹಿಸಲು ಕರ್ನಾಟಕ ಸರ್ಕಾರದ ಕಡೆಯಿಂದ ಆಯ್ಕೆಯಾದರು. ಅಲ್ಲಿ ಅವರು "ಕಾವ್ಯ ಚಿತ್ರ"ವನ್ನು ಮಂಡಿಸಿದರು, ಅಮೆರಿಕಾದ ವಿವಿಧ ನಗರಗಳಲ್ಲಿ 30 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದರು.

2001 - ಕರ್ನಾಟಕ ಸರ್ಕಾರವು "ಕರ್ನಾಟಕ ರಾಜ್ಯ ಪುರಸ್ಕಾರ" ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅವರು ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ