ಕನ್ನಡ ಸುದ್ದಿ  /  ಜೀವನಶೈಲಿ  /  Breast Milk: ತಾಯಿಹಾಲಿನ ಕೊರತೆಯಿಂದ ಮಗುವಿನ ಬೆಳವಣಿಗೆಗೆ ತೊಂದರೆ ಆಗಿದ್ಯಾ, ಎದೆಹಾಲು ಹೆಚ್ಚಲು ಇಲ್ಲಿದೆ 5 ಮನೆಮದ್ದು

Breast Milk: ತಾಯಿಹಾಲಿನ ಕೊರತೆಯಿಂದ ಮಗುವಿನ ಬೆಳವಣಿಗೆಗೆ ತೊಂದರೆ ಆಗಿದ್ಯಾ, ಎದೆಹಾಲು ಹೆಚ್ಚಲು ಇಲ್ಲಿದೆ 5 ಮನೆಮದ್ದು

Reshma HT Kannada

Apr 28, 2024 04:50 PM IST

ಎದೆಹಾಲು ಹೆಚ್ಚಿಸಿಕೊಳ್ಳಲು ಇಲ್ಲಿದೆ 5 ಮನೆಮದ್ದು

    • ಎದೆಹಾಲಿನ ಕೊರತೆಯಿಂದ ಮಗುವಿನ ಬೆಳವಣಿಗೆ ಕುಂಠಿತವಾಗಿದ್ಯಾ? ಎದೆಹಾಲು ಹೆಚ್ಚಲು ವೈದ್ಯರು ನೀಡಿರುವ ಔಷಧಿಗಳು ಪ್ರಯೋಜನಕ್ಕೆ ಬರ್ತಾ ಇಲ್ಲ, ಹಾಗಿದ್ರೆ ನೀವು ಈ 5 ಮನೆಮದ್ದುಗಳನ್ನು ಟ್ರೈ ಮಾಡಿ. ಇದು ನೈಸರ್ಗಿಕ ಎದೆಹಾಲು ಹೆಚ್ಚಲು ಸಹಾಯ ಮಾಡುತ್ತದೆ.
ಎದೆಹಾಲು ಹೆಚ್ಚಿಸಿಕೊಳ್ಳಲು ಇಲ್ಲಿದೆ 5 ಮನೆಮದ್ದು
ಎದೆಹಾಲು ಹೆಚ್ಚಿಸಿಕೊಳ್ಳಲು ಇಲ್ಲಿದೆ 5 ಮನೆಮದ್ದು

ಇತ್ತೀಚಿನ ತಾಯಂದಿರು ಮಗುವಿಗೆ ಹಾಲೂಡಿಸಲು ಎದೆಹಾಲಿನ ಕೊರತೆ ಎದುರಿಸುತ್ತಿದ್ದಾರೆ. ಮಗುವಿಗೆ ಅವಶ್ಯ ಇರುವಷ್ಟು ಹಾಲಿಲ್ಲದೇ ಮಗುವಿನ ಬೆಳವಣಿಗೆಗೆ ತೊಂದರೆ ಎದುರಾಗುತ್ತಿದೆ. ಮಗು ಆರೋಗ್ಯವಾಗಿರಲು ಹಾಗೂ ಅಭಿವೃದ್ಧಿ ಹೊಂದಲು ಎದೆಹಾಲು ಅತ್ಯಗತ್ಯ. ನೀವು ಮತ್ತು ನಿಮ್ಮ ಮಗುವಿಗೆ ಶುಶ್ರೂಷೆ ಮಾಡಲು ಉತ್ತಮವಾದ ಪೌಷ್ಟಿಕ ಹಾಗೂ ಸಮತೋಲಿತ ಆಹಾರವು ಬಹಳ ಮುಖ್ಯವಾಗುತ್ತದೆ. ಗ್ಯಾಲಕ್ಟೋಗೋಗ್‌ಗಳು ಎದೆಹಾಲಿನ ಉತ್ಪಾದನೆಯನ್ನು ಹೆಚ್ಚಿಸುವ ಆಹಾರಗಳಾಗಿವೆ. ಆದರೆ ನೀವು ಸ್ತನ್ಯಪಾನ ಹೆಚ್ಚಿಸಿಕೊಳ್ಳಲು ಯಾವುದೇ ಗಿಡಮೂಲಿಕೆ ಚಿಕಿತ್ಸೆಯನ್ನು ಬಳಸುವ ಮೊದಲು ನಿಮ್ಮ ವೈದ್ಯರ ಅನುಮೋದನೆಯನ್ನು ಪಡೆದುಕೊಳ್ಳಿ. ಎದೆಹಾಲು ಹೆಚ್ಚಿಸಲು ನೆರವಾಗುವ ಕೆಲಸ ಮನೆಮದ್ದುಗಳು ಇಲ್ಲಿವೆ ನೋಡಿ.

ಟ್ರೆಂಡಿಂಗ್​ ಸುದ್ದಿ

ಪ್ರತಿದಿನ ಎಳನೀರು ಕುಡಿದು ಬೇಸರವಾಗಿದ್ಯಾ? ಆರೋಗ್ಯ ವೃದ್ಧಿಸಿಕೊಳ್ಳಲು ಎಳನೀರನ್ನು ಹೀಗೂ ಬಳಸಬಹುದು

Left Handed: ಎಡಗೈ ಬಳಕೆ ಮಾಡುವವರು ಬುದ್ಧಿವಂತರಾ? ಇವರ ಬಗ್ಗೆ ನಿಮಗೆ ತಿಳಿದಿರದ 10 ಆಸಕ್ತಿಕರ ವಿಚಾರಗಳು ಇಲ್ಲಿವೆ

Summer Tips: ಬೇಸಿಗೆಯಲ್ಲಿ ದಿನಕ್ಕೊಂದು ಮೊಟ್ಟೆ ತಿನ್ಬೇಕು ಅಂತಾರೆ ತಜ್ಞರು, ಇದಕ್ಕೆ ಕಾರಣಗಳು ಹೀಗಿವೆ

ಹಸು, ಎಮ್ಮೆ ಹಾಲಿಗೆ ಪರ್ಯಾಯ ಡೈರಿ ಉತ್ಪನ್ನ ಮಾರುಕಟ್ಟೆಯಲ್ಲಿ ಲಭ್ಯ: ಸೂಕ್ತವಾದ ಹಾಲನ್ನು ಆರಿಸುವುದು ಹೇಗೆ?

ಮೆಂತ್ಯೆ

ಎದೆಹಾಲು ಉತ್ಪಾದಿಸುವ ಆಹಾರ ಉತ್ಪನ್ನಗಳಲ್ಲಿ ಮೆಂತ್ಯೆ ಪ್ರಮುಖದ್ದು. ಮೆಂತ್ಯೆವನ್ನು ಪೂರಕ ಆಹಾರವಾಗಿ ಹಾಗೂ ಮಾತ್ರೆಗಳ ರೂಪದಲ್ಲಿ ನೀಡಲಾಗುತ್ತದೆ. ಇದನ್ನು ರಾತ್ರಿಯಿಡೀ ಒಂದು ಲೋಹ ನೀರಿನಲ್ಲಿ ನೆನೆಸಿಟ್ಟು ಸೇವಿಸಬಹುದು. ಬೆಳಿಗ್ಗೆ ಆ ನೀರನ್ನು ಸೋಸಿಕೊಂಡು ಕುಡಿಯಬಹುದು.

ಸೋಂಪಿನ ಚಹಾ

ಎದೆಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಮತ್ತೊಂದು ಸಾಂಪ್ರದಾಯಿಕ ಚಿಕಿತ್ಸಾ ವಿಧಾನ ಇದಾಗಿದೆ. ಫೆನ್ನೆಲ್‌ ಬೀಜಗಳ ಬಳಕೆಯು ಮಗುವಿನ ಉದರ ಶೂಲೆ ಹಾಗೂ ಗ್ಯಾಸ್‌ನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಗೂ ಉತ್ತಮವಾಗಿರುವ ಕಾರಣ ಎದೆಹಾಲಿನ ಮೂಲಕ ಇದರ ಅಂಶಗಳು ಮಗುವಿನ ದೇಹ ಸೇರುತ್ತದೆ. ಈ ಬಗ್ಗೆ ಯಾವುದೇ ಪುರಾವೆಗಳು ಎಲ್ಲ ಎಂದರೂ ಇದನ್ನು ಹಿಂದಿನಿಂದಲೂ ಮನೆಮದ್ದಿನ ರೂಪದಲ್ಲಿ ಬಳಸುತ್ತಿದ್ದರು.

ಎಳ್ಳಿನ ಲಡ್ಡು

ಎಳ್ಳು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಎದೆಹಾಲೂಡಿಸುವ ತಾಯಂದಿರಿಗೆ ಕ್ಯಾಲ್ಸಿಯಂ ಬಹಳ ಮುಖ್ಯ. ಇದು ತಾಯಿಯ ಆರೋಗ್ಯ ಹಾಗೂ ಮಗುವಿನ ಬೆಳವಣಿಗೆ ಎರಡಕ್ಕೂ ಅವಶ್ಯ. ಆ ಕಾರಣಕ್ಕೆ ಸ್ತನ್ಯಪಾನ ಮಾಡಿಸುವ ತಾಯಂದಿರು ಇದರ ಸೇವನೆಗೆ ಹೆಚ್ಚು ಒತ್ತು ನೀಡುತ್ತಾರೆ.

ನುಗ್ಗೆಕಾಯಿ ರಸ

ಗ್ಯಾಲಕ್ಟಾಗೋಗ್ ಎಂದು ಪ್ರಸಿದ್ಧವಾಗಿರುವ ಡ್ರಮ್ ಸ್ಟಿಕ್ ಹಾಲಿನ ಉತ್ಪಾದನೆಯನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಹೊಂದಿದೆ. ಅದನ್ನು ಸಾರು, ಸಾಂಬಾರ್‌, ಸೂಪ್‌ ರೂಪದಲ್ಲಿ ತಿನ್ನಬಹುದು. ತಾಜಾ ನುಗ್ಗೆಕಾಯಿಯಿಂದ ಜ್ಯೂಸ್‌ ಮಾಡಿ ಇದನ್ನು ಪ್ರತಿದಿನ ಅರ್ಧ ಗ್ಲಾಸ್‌ನಷ್ಟು ಒಂದು ತಿಂಗಳ ಕಾಲ ಸೇವಿಸಿ. ಎದೆಹಾಲು ಹಾಲು ಹೆಚ್ಚಲು ನುಗ್ಗೆಕಾಯಿ ಜ್ಯೂಸ್‌ ಅನ್ನು ದಿನಕ್ಕೆ ಎರಡು ಬಾರಿ ಸೇವಿಸುವುದು ಉತ್ತಮ.

ಮಸೂಲ್‌ ದಾಲ್‌

ಮಸೂಲ್‌ ದಾಲ್‌ ಗ್ಯಾಲಕ್ಟಾಗೋಸ್‌ ಎಂಬ ಖ್ಯಾತಿ ಹೊಂದಿದೆ. ಇದು ಎದೆಹಾಲಿನ ಉತ್ಪತ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ಸೂಪ್‌ ಅಥವಾ ಸಾಂಬಾರ್‌ ರೂಪದಲ್ಲಿ ಸೇವಿಸಬಹುದು. ಇದಕ್ಕೆ ಒಂದು ಚಮಚ ತುಪ್ಪ ಹಾಗೂ ಚಿಟಿಕೆ ಕಾಳುಮೆಣಸು ಹಾಗೂ ಉಪ್ಪು ಸೇರಿಸಿ ತಿನ್ನುವುದರಿಂದ ಎದೆಹಾಲು ಹೆಚ್ಚುತ್ತದೆ.

    ಹಂಚಿಕೊಳ್ಳಲು ಲೇಖನಗಳು