ಕನ್ನಡ ಸುದ್ದಿ  /  ಜೀವನಶೈಲಿ  /  Health Tips: ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸಿ ಫಲವತ್ತತೆಯನ್ನು ಹೆಚ್ಚಿಸುವ ಆಹಾರ ಪದಾರ್ಥಗಳಿವು

Health Tips: ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸಿ ಫಲವತ್ತತೆಯನ್ನು ಹೆಚ್ಚಿಸುವ ಆಹಾರ ಪದಾರ್ಥಗಳಿವು

HT Kannada Desk HT Kannada

Jan 21, 2024 07:15 AM IST

ದೇಹದ ಫಲವತ್ತತ್ತೆ ಹೆಚ್ಚಿಸುವ ಆಹಾರ ಪದಾರ್ಥಗಳು

  • Health Tips:  ಸಕ್ಕರೆ ಅಂಶವನ್ನು ಸರಿಯಾಗಿ ಕಾಪಾಡಿಕೊಂಡಾಗ ಮಾತ್ರ ಗರ್ಭ ಧರಿಸುವ ಸಾಧ್ಯತೆಗಳು ಹೆಚ್ಚಿರುತ್ತದೆ. ಹೀಗಾಗಿ ದೇಹದಲ್ಲಿ ಫಲವತ್ತತೆ ಪ್ರಮಾಣವನ್ನೂ ಹೆಚ್ಚಿಸಿ ಸಕ್ಕರೆ ಅಂಶವನ್ನೂ ನಿಯಂತ್ರಣದಲ್ಲಿಡುವ ಆಹಾರ ಪದಾರ್ಥಗಳು ಯಾವುದು ಎಂಬುದಕ್ಕೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ದೇಹದ ಫಲವತ್ತತ್ತೆ ಹೆಚ್ಚಿಸುವ ಆಹಾರ ಪದಾರ್ಥಗಳು
ದೇಹದ ಫಲವತ್ತತ್ತೆ ಹೆಚ್ಚಿಸುವ ಆಹಾರ ಪದಾರ್ಥಗಳು

Health Tips: ಪುರುಷರು ಹಾಗೂ ಮಹಿಳೆಯರಲ್ಲಿ ಸಂತಾನೋತ್ಪತ್ತಿಯು ಸೂಕ್ತವಾಗಿ ಇರಬೇಕು ಎಂದರೆ ದೇಹದಲ್ಲಿ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವೆನಿಸುತ್ತದೆ. ಹೀಗಾಗಿ ಅತಿಯಾದ ಸಕ್ಕರೆ ಅಂಶವುಳ್ಳ ಆಹಾರವನ್ನು ಸೇವಿಸುವುದು ಒಳ್ಳೆಯದಲ್ಲ ಎಂದು ಪ್ರಸೂತಿ ತಜ್ಞರೇ ಸಲಹೆಯನ್ನು ನೀಡುತ್ತಾರೆ. ಅಲ್ಲದೇ ದೇಹದಲ್ಲಿ ಸಕ್ಕರೆ ಅಂಶವನ್ನು ನಿಭಾಯಿಸುವ ಕೆಲವು ಆಹಾರ ಪದಾರ್ಥಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದ್ದು ಇವುಗಳು ರಕ್ತದಲ್ಲಿ ತ್ವರಿತಗತಿಯಲ್ಲಿ ಸಕ್ಕರೆ ಅಂಶವನ್ನು ಹೆಚ್ಚು ಮಾಡುವುದಿಲ್ಲ. ಅಗತ್ಯ ಪೋಷಕಾಂಶವನ್ನೂ ಹೊಂದಿರುವ ಈ ಆಹಾರ ಪದಾರ್ಥಗಳು ದಂಪತಿಯಲ್ಲಿ ಫಲವತ್ತತೆಯ ಪ್ರಮಾಣವನ್ನೂ ಹೆಚ್ಚಿಸುತ್ತವೆ .

ಟ್ರೆಂಡಿಂಗ್​ ಸುದ್ದಿ

ವೈರಲ್‌ ಆಯ್ತು ಪ್ರೇತಕ್ಕೆ ಮದುವೆ ಮಾಡಿಸಲು ವರ ಬೇಕಾಗಿದೆ ಜಾಹೀರಾತು, ಏನಿದು ಪ್ರೇತ ಮದುವೆ?; ಪ್ರತಿಭಾ ಕುಡ್ತಡ್ಕ ಬರಹ

Parenting Tips: ಮಕ್ಕಳ ಮಾನಸಿಕ ಆರೋಗ್ಯ ವೃದ್ಧಿಗೆ ಸ್ಕ್ರೀನ್‌ಟೈಮ್‌ ವಿಚಾರದಲ್ಲಿ ಪೋಷಕರು ತಪ್ಪದೇ ಪಾಲಿಸಬೇಕಾದ ನಿಯಮಗಳಿವು

Personality Test: ನಿಮ್ಮ ಸ್ವಭಾವ ಹೇಗೆ, ವ್ಯಕ್ತಿತ್ವ ಎಂಥದ್ದು ತಿಳಿಸುತ್ತೆ ಕೈ ಬೆರಳುಗಳ ಗಾತ್ರ, ಅಂಗೈನ ಆಕಾರ; ಪರೀಕ್ಷಿಸಿ

ಚಾರ್‌ ಧಾಮ್‌ ಯಾತ್ರೆ; ಶಿವನ ಸನ್ನಿಧಾನಕ್ಕೆ ಹೋಗುವ ಮೊದಲು ಕೇದಾರನಾಥದ ಇತಿಹಾಸ ತಿಳಿಯಿರಿ

ಬೆರ್ರಿ ಹಣ್ಣುಗಳು : ಬೆರ್ರಿ ಹಣ್ಣುಗಳಲ್ಲಿ ಇರುವ ಆಂಟಿಆಕ್ಸಿಡೆಂಟ್​ಗಳು ಮಹಿಳೆಯರ ಅಂಡಾಣುಗಳಿಗೆ ಯಾವುದೇ ಹಾನಿ ಉಂಟಾಗದಂತೆ ಹಾಗೂ ವಯಸ್ಸಾಗದಂತೆ ಕಾಯ್ದುಕೊಳ್ಳುತ್ತವೆ. ಅಲ್ಲದೇ ಸ್ಟ್ರಾಬೆರ್ರಿ ಹಣ್ಣುಗಳು ಮಹಿಳೆಯರಲ್ಲಿ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತವೆ ಎಂದೂ ಸಹ ಹೇಳಲಾಗಿದೆ.

ತರಕಾರಿ ಸೊಪ್ಪುಗಳು : ಪಾಲಕ್​, ಕರಿಬೇವಿನ ಎಲೆಗಳು, ಮೆಂತ್ಯ ಸೊಪ್ಪು ಹಾಗೂ ವಿವಿಧ ಕೋಸುಗಡ್ಡೆಗಳಲ್ಲಿ ಫೋಲೇಟ್​ ಎಂಬ ಅಂಶವಿರುತ್ತದೆ. ಅಂಡಾಣುಗಳ ಉತ್ಪತ್ತಿಗೆ ಸಹಾಯ ಮಾಡುವ ವಿಟಮಿನ್​ ಬಿ ಅಂಶಕೂಡ ಹಸಿರು ಎಲೆಗಳ ತರಕಾರಿಗಳಲ್ಲಿ ಇರುತ್ತದೆ. ಅಲ್ಲದೇ ಇಂತಹ ತರಕಾರಿಯ ಸೇವನೆಯು ನೈಸರ್ಗಿಕವಾಗಿ ಮಹಿಳೆಯರಲ್ಲಿ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಮೂಡುವಂತೆ ಮಾಡುತ್ತವೆ.

ಬೀನ್ಸ್​ : ಬೀನ್ಸ್​ನಲ್ಲಿ ಪ್ರೋಟೀನ್​, ಕಬ್ಬಿಣಾಂಶ ಹಾಗೂ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುವ ಅಂಶವಿರುತ್ತದೆ. ಇವುಗಳಲ್ಲಿ ಗ್ಲೈಸಮಿಕ್​ ಅಂಶವು ತುಂಬಾ ಕಡಿಮೆ ಪ್ರಮಾಣದಲ್ಲಿದ್ದು ಮಧುಮೇಹವನ್ನು ನಿಯಂತ್ರಿಸುವ ಪ್ರಮುಖ ಆಹಾರಗಳ ಪೈಕಿ ಬೀನ್ಸ್​ ಒಂದಾಗಿದೆ.

ಅಂಜೂರ : ಪ್ರಾಚೀನ ಕಾಲದಿಂದಲೂ ಅಂಜೂರದ ಹಣ್ಣು ಕಾಮೋತ್ತೋಜೇಕ ಪದಾರ್ಥವಾಗಿ ಬಳಕೆಯಾಗುತ್ತಲೇ ಬರುತ್ತಿದೆ. ಅಲ್ಲದೇ ಈ ಬಗ್ಗೆ ವೈಜ್ಞಾನಿಕ ಪುರಾವೆಗಳೂ ಸಹ ಸಾಕಷ್ಟು ಅಧ್ಯಯನಗಳಿಂದ ದೊರಕಿದೆ. ಅಂಜೂರದಲ್ಲಿ ಸಾಕಷ್ಟು ಕಬ್ಬಿಣಾಂಶವಿದೆ. ಇದು ಅಂಡಾಣುಗಳ ಉತ್ಪತ್ತಿಗೆ ಸಹಾಯಕವಾಗಿದೆ.

ತರಕಾರಿಗಳು ಮತ್ತು ಹಣ್ಣುಗಳು : ಗರ್ಭವತಿಯಾಗಲು ಪ್ರಯತ್ನಿಸುವ ಸಂದರ್ಭದಲ್ಲಿ ಪ್ರತಿದಿನ ತಾಜಾ ಹಣ್ಣುಗಳು ಹಾಗೂ ತರಕಾರಿಗಳಸನ್ನು ಸೇವಿಸುವುದು ಬಹಳ ಮುಖ್ಯವಾಗಿದೆ. ಇವುಗಳು ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುವ ಜೊತೆಯಲ್ಲಿ ಫಲವತ್ತತೆಯನ್ನೂ ಹೆಚ್ಚಿಸುತ್ತವೆ.

ಹಾಲು : ಕೊಬ್ಬಿನಾಂಶಗಳಿಂದ ಸಮೃದ್ಧವಾದ ಹಾಲು ಫಲವತ್ತತೆಯನ್ನು ಹೆಚ್ಚಿಸುವ ಪೌಷ್ಠಿಕ ಭರಿತ ಪಾನೀಯವಾಗಿದೆ. ಇದರಲ್ಲಿ ಇರುವ ಕ್ಯಾಲ್ಸಿಯಂ, ವಿಟಮಿನ್​ ಡಿ ಹಾಗೂ ಪ್ರೊಟೀನ್​ಗಳಂತಹ ಅಗತ್ಯ ಅಂಶಗಳು ಫಲವತ್ತತೆಯ ಪ್ರಮಾಣವನ್ನು ಹೆಚ್ಚಿಸುತ್ತವೆ. ಇದು ಋತುಚಕ್ರವನ್ನು ಉತ್ತೇಜಿಸುವ ಕಾರ್ಯವನ್ನು ಮಾಡುತ್ತದೆ. ಹಾರ್ಮೋನ್​ಗಳ ಸಮತೋಲನೆಯನ್ನು ಕಾಪಾಡುವ ಕೆಲಸವನ್ನು ಹಾಲು ಮಾಡುತ್ತದೆ.

    ಹಂಚಿಕೊಳ್ಳಲು ಲೇಖನಗಳು