logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮೊದಲ ಬಾರಿ ಕಾರು ಖರೀದಿಸುತ್ತಿದ್ದೀರಾ; ಈ ಅಂಶಗಳನ್ನ ಮರೆಯಲೇ ಬೇಡಿ

ಮೊದಲ ಬಾರಿ ಕಾರು ಖರೀದಿಸುತ್ತಿದ್ದೀರಾ; ಈ ಅಂಶಗಳನ್ನ ಮರೆಯಲೇ ಬೇಡಿ

Raghavendra M Y HT Kannada

Dec 18, 2023 06:14 PM IST

google News

ಮೊದಲ ಬಾರಿ ಕಾರು ಖರೀದಿಸುವವರಿಗೆ ಈ ಮಾಹಿತಿ.

  • ನೀವು ಮೊದಲ ಬಾರಿಗೆ ಕಾರು ಖರೀದಿಸುತ್ತಿದ್ದರೇ ಈ ಅಂಶಗಳನ್ನು ಗಮನದಲ್ಲಿಡುವುದು ಮುಖ್ಯ. ಮುಂದೆ ಪಶ್ಚಾತಾಪ ಪಡುವುದನ್ನ ತಪ್ಪಿಸಬಹುದು. ಹೊಸ ಕಾರು ಖರೀದಿಸುವವರಿಗಾಗಿ ಈ ಮಾಹಿತಿ.

ಮೊದಲ ಬಾರಿ ಕಾರು ಖರೀದಿಸುವವರಿಗೆ ಈ ಮಾಹಿತಿ.
ಮೊದಲ ಬಾರಿ ಕಾರು ಖರೀದಿಸುವವರಿಗೆ ಈ ಮಾಹಿತಿ.

ಬೆಂಗಳೂರು: ಪ್ರತಿಯೊಬ್ಬರಿಗೂ ಜೀವನದಲ್ಲಿ ಒಮ್ಮೆಯಾದರೂ ಹೊಸ ಕಾರು ಖರೀದಿಸಬೇಕೆಂಬ ಆಸೆ ಇರುತ್ತದೆ. ಒಂದು ವೇಳೆ ನೀವೇನಾದರೂ ಈಗ ಹೊಸ ಕಾರು ಖರೀದಿ ಮಾಡಬೇಕೆಂದು ಪ್ಲಾನ್ ಮಾಡಿಕೊಳ್ಳುತ್ತಿದ್ದರೇ ನಿಮಗೆ ಕಡಿಮೆ ಬೆಲೆಯ ಎರಡು ಕಂಪನಿಗಳು ಕಾರುಗಳ ವೈಶಿಷ್ಟ್ಯಗಳನ್ನು ವಿವರಿಸುತ್ತಿದ್ದೇವೆ. ನಿಮಗೆ ಯಾವುದು ಸರಿ ಅನಿಸುತ್ತದೆಯೋ ಅದನ್ನು ಕೊಂಡುಕೊಳ್ಳಬಹುದು.

ಸಾಮಾನ್ಯವಾಗಿ ಮೊದಲ ಬಾರಿಗೆ ಕಾರು ಖರೀದಿಸುತ್ತಿದ್ದರೆ ಸ್ವಲ್ಪ ಗೊಂದಲ ಆಗುವುದು ಸಹಜ. ಯಾವುದು ಅತ್ಯುತ್ತಮ ಕಾರು, ಮೊದಲ ಬಾರಿಗೆ ಕಾರು ಖರೀದಿಸುವವರಿಗೆ ಟಾಪ್ ಕಾರು ಯಾವುದು, ಯಾವ ಕಾರಿನ ಆಯ್ಕೆ ಉತ್ತಮ ಎಂಬ ಹತ್ತಾರು ಪ್ರಶ್ನೆಗಳು ಮೂಡುತ್ತವೆ. ರೆನಾಲ್ಟ್ ಕಿಗರ್ ಹಾಗೂ ಹೋಂಡಾ ಅಮೇಜ್ ಈ ಎರಡು ಕಾರುಗಳ ಹೋಲಿಕೆಯನ್ನು ಒಮ್ಮೆ ನೋಡಿ. ಆ ನಂತರ ಯಾವ ಮಾದರಿಯ ಕಾರು ಬೆಸ್ಟ್ ಎಂಬುದನ್ನು ನೀವೇ ನಿರ್ಧಾರ ಮಾಡಿ.

ಮೊದಲ ಬಾರಿ ಕಾರು ಖರೀದಿಸುವರು ಮೊದಲು ಕಾರಿನ ಕುರಿತ ಮಾರ್ಗದರ್ಶನವನ್ನು ತಿಳಿಯೋದು ತುಂಬಾ ಮುಖ್ಯ. ಕಾರು ಖರೀದಿಸುವ ಮುನ್ನ ಕಾರಿನಲ್ಲಿ ಏನೆಲ್ಲಾ ಗಮನಿಸಬೇಕು ಅನ್ನೋದನ್ನ ತಿಳಿದುಕೊಳ್ಳಬೇಕು. ರೆಲಾನ್ಟ್ ಕಿಗರ್ ಮತ್ತು ಹೋಂಡಾ ಅಮೇಜ್ ಕಂಪನಿಯವರು ಕಾರಿನ ಮಾದರಿ, ವೈಶಿಷ್ಟ್ಯ, ಬೆಲೆ ಹಾಗೂ ಚಾಲನಾ ಸಾಮರ್ಥ್ಯದ ಬಗ್ಗೆ ಸಂಕ್ಷೀಪ್ತವಾಗಿ ಮಾರ್ಗದರ್ಶನದಲ್ಲಿ ನೀಡಿರುತ್ತಾರೆ. ಜೊತೆಗೆ ಕಾರಿನ ಆಯ್ಕೆ ಮಾಡಿಕೊಳ್ಳುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳಬೇಕು.

ಮೊದಲ ಬಾರಿ ಕಾರು ಖರೀದಿಸುವವರು ಕಾರಿನಲ್ಲಿ ಏನೆಲ್ಲಾ ಗಮನಿಸಬೇಕು?

ಸುರಕ್ಷತೆ: ಕಾರಿನಲ್ಲಿ ಸುರಕ್ಷತೆ ತುಂಬಾ ಮುಖ್ಯವಾಗಿರುತ್ತದೆ. ಹೀಗಾಗಿ ನೀವು ಖರೀದಿಸುವ ಕಾರು ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ಮೊದಲು ಗಮನಿಸಬೇಕು. ಹೀಗಾಗಿ ಆ ಕಾರಿಗೆ ಎಷ್ಟು ಸೇಫ್ಟಿ ರೇಟಿಂಗ್ ಇದೆ ಎಂಬುದನ್ನು ತಿಳಿದುಕೊಳ್ಳಬೇಕು.

ಕೈಗೆಟುವ ದರ: ನೀವು ಖರೀದಿಸುವ ಕಾರು ನಿಮ್ಮ ಬಜೆಟ್‌ಗೆ ತಕ್ಕಂತೆ ಇದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಆ ಕಾರು ನಮ್ಮ ಕೈಗೆಟುವ ಬೆಲೆಗೆ ಸಿಗಲಿದೆಯೇ ಎಂಬುದನ್ನು ಗಮನಿಸಬೇಕು

ಇಂಧನ ದಕ್ಷತೆ: ಹೊಸ ಕಾರು ಉತ್ತಮ ಇಂಧನ ದಕ್ಷತೆಯನ್ನು ಹೊಂದಿದೆಯೇ ಅನ್ನೋದನ್ನ ತಿಳಿಯಬೇಕು. (ಉದಾಹಣೆಗೆ - 1 ಕಿಲೋ ಮೀಟರ್‌ಗೆ ಎಷ್ಟು ಮೈಲೇಜ್ ಕೊಡುತ್ತದೆ) ಇದರಿಂದ ಚಾರಿನ ವೆಚ್ಚ ಗೊತ್ತಾಗುತ್ತದೆ. ಕಡಿಮೆ ವೆಚ್ಚದ ಕಾರು ಮಧ್ಯಮ ವರ್ಗದ ಗ್ರಾಹಕರಿಗೆ ಖರ್ಚನ್ನು ಕಡಿಮೆ ಮಾಡಿಸುತ್ತದೆ.

ಸುಲಭ ಚಾಲನೆ: ಸಾಮಾನ್ಯವಾಗಿ ಕಾರು ಚಾಲನೆ ಮಾಡಲು ಸುಲಭವಾಗಿರಬೇಕು. ಹೊಸದಾಗಿ ಚಾಲನೆ ಮಾಡುವವರಿಗೆ ಅನುಕೂಲಕರವಾಗಿರಬೇಕು. ಹೀಗಾಗಿ ಸುಲಭ ಚಾಲನೆಯ ಬಗ್ಗೆಯೂ ತಿಳಿದುಕೊಳ್ಳುವುದು ಒಳ್ಳೆಯದು.

ಮೊದಲ ಬಾರಿಗೆ ಕಾರು ಖರೀದಿಸುವವರು ಸಾಮಾನ್ಯವಾಗಿ ಕೈಗೆಟುವ ದರ, ಆ ಕಾರು ವಿಶ್ವಾಸಾರ್ಹವಾಗಿದೆಯೇ ಹಾಗೂ ಸುಲಭವಾಗಿ ವಾಹನವನ್ನು ಚಾಲನೆ ಮಾಡಬಹುದಾ ಎಂಬುದನ್ನ ಗಮನಿಸಬೇಕು. ಸುರಕ್ಷಿತ ಚಾನೆಯ ಬಗ್ಗೆ ತಿಳಿದುಕೊಳ್ಳಲು ಎಬಿಎಸ್‌ ಮತ್ತು ಏರ್‌ಬ್ಯಾಗ್‌ಗಳಂತಹ ಸುರಕ್ಷತಾ ವೈಸಿಷ್ಟ್ಯಗಳನ್ನು ಮೊದಲು ಗಮನಿಸಬೇಕು. ಪವರ್ ಸ್ಟೀರಿಂಗ್, ಆರಾಮದಾಯಕ ಡ್ರೈವಿಂಗ್ ಬೇಕಾಗುತ್ತದೆ.

ಕಂಪ್ಯಾಕ್ಟ್ ವಿನ್ಯಾಸಗಳಿಗೂ ಆದ್ಯತೆ ನೀಡಬೇಕು. ನೀವು ನಗರ ಪ್ರದೇಶದವರಾದರೆ ಆ ವಾತಾರಣಕ್ಕೆ ಹೊಂದುವಂತಹ ಕಾರಿಗೆ ಆದ್ಯತೆ ನೀಡಬೇಕಾಗುತ್ತದೆ. ಹೀಗಾಗಿ ಕಂಪ್ಯಾಕ್ಟ್ ವಿನ್ಯಾಸವನ್ನು ಗಮನಿಸಿ. ಇಷ್ಟೆಲ್ಲಾ ಅಂಶಗಳನ್ನು ಸರಿಯಾಗಿ ಗಮನಿಸಿದರೆ ಶೇಕಡಾ 90 ರಷ್ಟು ಕಾರಿನ ಆಯ್ಕೆ ಮತ್ತು ಅದರಿಂದ ಒಂದಷ್ಟು ಲಾಭವನ್ನು ಪಡೆಯಬಹುದು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ