ಟಾಟಾ ಎಲೆಕ್ಟ್ರಿಕ್ ಕಾರುಗಳ ಮೇಲೆ ವರ್ಷಾಂತ್ಯದ ಭಾರಿ ಡಿಸ್ಕೌಂಟ್ ಆಫರ್; ಯಾವ ಇವಿಗೆ ಎಷ್ಟಿದೆ ನೋಡಿ
Dec 15, 2023 04:10 PM IST
ಟಾಟಾ ಮೋಟಾರ್ಸ್ ತನ್ನ ಇವಿಗಳ ಮೇಲೆ ಭಾರಿ ರಿಯಾಯಿತಿಗಳನ್ನು ಘೋಷಣೆ ಮಾಡಿದೆ.
ಇಯರ್ ಎಂಡಿಂಗ್ ಡಿಸ್ಕೌಂಟ್ ಭಾಗವಾಗಿ ಟಾಟಾ ಮೋಟಾರ್ಸ್ ತನ್ನ ಎಲೆಕ್ಟ್ರಿಕ್ ಕಾರುಗಳ ಮೇಲೆ ಭಾರಿ ರಿಯಾಯಿತಿಗಳನ್ನು ಘೋಷಣೆ ಮಾಡಿದೆ. ಇವಿಗಳ ಮೇಲಿನ ಡಿಸ್ಕೌಂಟ್ ಆಫರ್‌ಗಳು ಹೀಗಿವೆ.
ಬೆಂಗಳೂರು: 2023ರ ಮುಗಿಸಿದು 2024ಕ್ಕೆ ಪ್ರವೇಶಿಸಲು ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲು ಇಡೀ ಜಗತ್ತು ಕಾತುರದಿಂದ ಕಾಯುತ್ತಿರುವುದು ಒಂದೆಡೆಯಾದರೆ ಆಟೋಮೊಬೈಲ್ ಕಂಪನಿಗಳು ತಮ್ಮ ಎಲೆಕ್ಟ್ರಿಕ್ ಕಾರುಗಳ (Electric Cars) ಮೇಲೆ ವರ್ಷಾಂತ್ಯದ ರಿಯಾಯಿತಿಗಳನ್ನು (Year Ending Discount) ಘೋಷಣೆ ಮಾಡಿವೆ. ಇದರಲ್ಲಿ ದೇಶದ ಪ್ರಮುಖ ಆಟೋಮೊಬೈಲ್ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಕೂಡ ಒಂದು.
ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರುಗಳ ಮೇಲೆ ಬಂಪರ್ ಇಯರ್ ಎಂಡಿಂಗ್ ಡಿಸ್ಕೌಂಟ್ ಆಫರ್‌ಗಳನ್ನು ಘೋಷಣೆ ಮಾಡಿದೆ. ಡಿಸೆಂಬರ್ 31ರೊಳಗೆ ಬುಕ್ ಮಾಡುವ ಇವಿಗಳ ಮೇಲೆ ಬರೋಬ್ಬರಿ 2.6 ಲಕ್ಷದವರಿಗೆ ರಿಯಾಯಿತಿ ಪ್ರಯೋಜನೆಗಳನ್ನು ಪಡೆಯಬಹುದಾಗಿದೆ.
ಟಾಟಾ ಮೋಟಾರ್ಸ್‌ನ ನೆಕ್ಸಾನ್, ಟಿಯಾಗೊ ಹಾಗೂ ಟಿಗೊರ್ ಮಾದರಿಯ ಎಲೆಕ್ಟ್ರಿಕ್ ಕಾರುಗಳ ಮೇಲೆ ಭಾರಿ ಆಫರ್‌ಗಳನ್ನು ಘೋಷಿಸಿದೆ. ಈ ರಿಯಾಯಿತಿಗಳು ಡಿಸೆಂಬರ್ 31ರ ವರೆಗೆ ಅಥವಾ ಸ್ಟಾಕ್ ಇರುವವರಿಗೆ ಮಾತ್ರ ಅನ್ವಯವಾಗಲಿದೆ ಎಂದು ಟಾಟಾ ಮೋಟಾರ್ಸ್ ಸ್ಪಷ್ಟಪಡಿಸಿದೆ.
ಯಾವ ಕಾರಿಗೆ, ಎಷ್ಟು ಡಿಸ್ಕೌಂಟ್? ನೆಕ್ಸಾನ್ ಇವಿ ಮೇಲೆ ಭಾರಿ ರಿಯಾಯಿತಿ
ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್ ಫೇಸ್‌ಲಿಫ್ಟ್ ಮಾದರಿಯ ಕಾರನ್ನು 2023ರ ಸೆಪ್ಟೆಂಬರ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. ಟಾಟಾ ನೆಕ್ಸಾನ್ ಇವಿ ಭಾರತದಲ್ಲಿ ಹೆಚ್ಚು ಮಾರಾಟದ ಎಲೆಕ್ಟ್ರಿಕ್ ಕಾರು ಎನಿಸಿಕೊಂಡಿದೆ. ಈ ಪೇಸ್‌ಲಿಫ್ಟ್ ಮಾಡೆಲ್‌ಗೂ ಮುನ್ನ ಟಾಟಾ ಮೋಟಾರ್ಸ್ ನೆಕ್ಸಾನ್ ಇವಿಗಳ ಮೇಲೆ ಹೆಚ್ಚು ಡಿಸ್ಕೌಂಟ್ ನೀಡುತ್ತಿದೆ.
ಟಾಟಾ ನೆಕ್ಸಾನ್ ಇವಿ ಪ್ರೈಮ್, ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ವೇರಿಯಂಟ್‌ಗಳು, ಫೇಸ್‌ಲಿಫ್ಟ್ ಆವೃತ್ತಿಗಳನ್ನು ಮೊದಲು ಬಿಡುಗಡೆ ಮಾಡಲಾಗಿದ್ದು, ಈ ಕಾರಿಗೆ 2 ಲಕ್ಷ 60 ಸಾವಿರ ರೂಪಾಯಿ ವರೆಗೆ ಡಿಸ್ಕೌಂಟ್ ಪ್ರಯೋಜನ ಪಡೆಯಬಹುದು. ಪ್ರೈಮ್ ವೇರಿಯಂತ್ ಬೆಲೆಯಲ್ಲಿ 1.5 ಲಕ್ಷ ನಗದು ರಿಯಾಯಿತಿ ಜೊತೆಗೆ 50 ಸಾವಿರ ರೂಪಾಯಿ ಬೋನಸ್ ಆಫರ್ ಕೂಡ ಸಿಗಲಿದೆ. ಟಾಟಾ ನೆಕ್ಸಾನ್ ಮ್ಯಾಕ್ಸ್ ವೇರಿಯಂಟ್ ಮೇಲೆ 2.1 ಲಕ್ಷ ನಗದು ರಿಯಾಯಿತಿ, 50 ಸಾವಿರ ರೂಪಾಯಿ ಎಕ್ಸ್‌ಚೇಂಜ್ ಬೋನ್ ಕೂಡ ಸಿಗುತ್ತದೆ. ಒಟ್ಟು 2.6 ಲಕ್ಷ ರೂಪಾಯಿ ಡೌಸ್ಕೌಂಟ್ ಸಿಗುತ್ತೆ, ಪ್ರೈಮ್ ವೇರಿಯಂಟ್‌ಗಳ ಮೇಲೆ 1.9 ಲಕ್ಷ ರೂಪಾಯಿ ವರೆಗೆ ರಿಯಾಯಿತಿಗಳಿವೆ. ನೆಕ್ಸಾನ್ ಪ್ರೈಮ್‌ನ ಪ್ರಿ-ಪೇಸ್‌ಲಿಫ್ಟ್ ಮಾದರಿಯ ಇವಿ ಕಾರುಗಳ ಬೆಲೆ 14.5 ಲಕ್ಷದಿಂದ 17.19 ಲಕ್ಷ ರೂಪಾಯಿ ವರೆಗೆ ಇದೆ. ನೆಕ್ಸಾನ್ ಮ್ಯಾಕ್ಸ್ 16.49 ಲಕ್ಷ ರೂಪಾಯಿಯಿಂದ 19.54 ಲಕ್ಷ ರೂಪಾಯಿ ವರೆಗೆ ಇದೆ.
ಟಾಟಾ ಟಿಗೋರ್ ಇವಿ ಮೇಲೆ 1.1 ಲಕ್ಷ ರೂಪಾಯಿ ವರೆಗೆ ಡಿಸ್ಕೌಂಟ್
ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರಿನ ಪ್ರಸ್ತುತ ಎಕ್ಸ್ ಶೋ ರೂಂ ಬೆಲೆ 12.40 ಲಕ್ಷ ರೂಪಾಯಿಯಿಂದ 13.75 ಲಕ್ಷ ರೂಪಾಯಿ ವರೆಗೆ ಇದೆ. ಈ ಕಾರಿನ ಮೇಲೆ 2023ರ ಇಯರ್ ಎಂಡಿಂಗ್ ಆಫರ್ 1.1 ಲಕ್ಷ ರೂಪಾಯಿ ಇದೆ. ಇದರಲ್ಲಿ 50 ಸಾವಿರ ನಗದು ರಿಯಾಯಿತಿ, 50 ಸಾವಿರ ಎಕ್ಸ್‌ಚೇಂಜ್ ಬೋನ್ಸ್, 10 ಸಾವಿರ ರೂಪಾಯಿಗಳ ಕಾರ್ಪೊರೇಟ್ ಲಾಭ ಸಿಗುತ್ತದೆ.
ಟಾಟಾ ಟಿಯಾಗೊ ಇವಿ ಮೇಲೆ 77 ಸಾವಿರ ರೂಪಾಯಿ ವರೆಗೆ ರಿಯಾಯಿತಿ
ಟಾಟಾ ಟಿಯಾಗೊ ಇವಿಯ ವೇರಿಯಂಟ್‌ಗಳ ಆಧಾರದಲ್ಲಿ ಡಿಸ್ಕೌಂಟ್ ನೀಡಲಾಗುತ್ತಿದೆ. ಟಾಟಾ ಟಿಯಾಗೊ ಇವಿಯ ಪ್ರಸ್ತುತ ಎಕ್ಸ್ ಶೋ ರೂಂ ಬೆಲೆ 8.69 ಲಕ್ಷ ರೂಪಾಯಿಯಿಂದ 12.04 ಲಕ್ಷ ರೂಪಾಯಿ ವರೆಗೆ ಇದೆ. ಈ ಕಾರುಗಳ ಮೇಲೆ 77 ಸಾವಿರದ ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಇದರಲ್ಲಿ 55 ಸಾವಿರ ಗ್ರೀನ್ ಬೋನಸ್, 15 ಸಾವಿರ ಎಕ್ಸ್‌ಚೇಂಜ್ ಬೋನಸ್ ಹಾಗೂ 7 ಸಾವಿರ ಕಾರ್ಪೊರೇಟ್ ಲಾಭಗಳು ಸಿಗಲಿವೆ.
ಈ ಎಲ್ಲಾ ಆಫರ್‌ಗಳು ಡಿಸೆಂಬರ್ 31ರ ವರೆಗೆ ಮಾತ್ರ ಲಭ್ಯ ಇರುತ್ತವೆ. ಟಾಟಾ ಎಲೆಕ್ಟ್ರಿಕ್ ಕಾರುಗಳ ಮೇಲಿನ ಇಯರ್ ಎಂಡಿಂಗ್ ಡಿಸ್ಕೌಂಟ್‌ಗಳ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಬೇಕಾದರೆ ನಿಮ್ಮ ಹತ್ತಿರದ ಟಾಟಾ ಇವಿ ಕಾರುಗಳ ಶೋ ರೂಂಗಳಿಗೆ ಭೇಟಿ ನೀಡಿ.