ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ರೆನಾಲ್ಟ್ ಕಿಗರ್ Vs ಹೋಂಡಾ ಅಮೇಜ್; ಹೊಸದಾಗಿ ಕಾರು ಖರೀದಿಸುವವರಿಗೆ ಎರಡರಲ್ಲಿ ಯಾವುದು ಉತ್ತಮ

ರೆನಾಲ್ಟ್ ಕಿಗರ್ vs ಹೋಂಡಾ ಅಮೇಜ್; ಹೊಸದಾಗಿ ಕಾರು ಖರೀದಿಸುವವರಿಗೆ ಎರಡರಲ್ಲಿ ಯಾವುದು ಉತ್ತಮ

Raghavendra M Y HT Kannada

Dec 18, 2023 04:07 PM IST

ರೆನಾಲ್ಟ್ ಕಿಗರ್ ಮತ್ತು ಹೋಂಡಾ ಅಮೇಜ್‌ ಎರಡರಲ್ಲಿ ಯಾವುದು ಬೆಸ್ಟ್ ಅನ್ನೋದನ್ನ ತಿಳಿಯಿರಿ

  • ಮೊದಲ ಬಾರಿಗೆ ಕಾರು ಖರೀದಿಸುವ ಗ್ರಾಹಕರಿಗೆ ರೆಲಾನ್ಟ್ ಕಿಗರ್ ಹಾಗೂ ಹೋಂಡಾ ಅಮೇಜ್‌ 2ರಲ್ಲಿ ಯಾವುದ ಬೆಸ್ಟ್ ಅನ್ನೋದರ ಮಾಹಿತಿ ಇಲ್ಲಿದೆ.

ರೆನಾಲ್ಟ್ ಕಿಗರ್ ಮತ್ತು ಹೋಂಡಾ ಅಮೇಜ್‌ ಎರಡರಲ್ಲಿ ಯಾವುದು ಬೆಸ್ಟ್ ಅನ್ನೋದನ್ನ ತಿಳಿಯಿರಿ
ರೆನಾಲ್ಟ್ ಕಿಗರ್ ಮತ್ತು ಹೋಂಡಾ ಅಮೇಜ್‌ ಎರಡರಲ್ಲಿ ಯಾವುದು ಬೆಸ್ಟ್ ಅನ್ನೋದನ್ನ ತಿಳಿಯಿರಿ

ಬೆಂಗಳೂರು: ಮೊದಲ ಬಾರಿಗೆ ಕಾರು ಖರೀದಿಸುವ ಗ್ರಾಹಕರಿಗೆ ರೆನಾಲ್ಟ್ ಕಿಗರ್ ಮತ್ತು ಹೋಂಡಾ ಅಮೇಜ್ ಅತ್ಯುತ್ತಮ ಆಯ್ಕೆಯಾಗಿದೆ. ಬೆಲೆ ಸ್ವಲ್ಪ ಕಡಿಮೆ ಹಾಗೂ ಹೆಚ್ಚು ವಿಶಿಷ್ಟ್ಯಗಳನ್ನು ಹೊಂದಿರುವ ಕಾರುಗಳಲ್ಲಿ ಈವೆರಡೂ ಟಾಪ್‌ನಲ್ಲಿವೆ. ಸುಲಭವಾಗಿ ಚಾಲನೆ, ಸುರಕ್ಷತೆ ಹಾಗೂ ಕೈಗೆಟುವ ದರ ವಿಚಾರದಲ್ಲಿ ಈ ಮಾಡೆಲ್‌ಗಳು ಉತ್ತಮವಾಗಿವೆ. ಎಬಿಎಸ್ ಹಾಗೂ ಏರ್‌ಬ್ಯಾಗ್‌ಗಳು ಇರುವುದರಿಂದ ಹೊಸದಾಗಿ ಡೈವಿಂಗ್ ಮಾಡಬೇಕೆಂದುಕೊಂಡವರಿಗೆ ಇವು ಅತ್ಯುತ್ತಮ ಆಯ್ಕೆಗಳಾಗಿವೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಆಭರಣ ಪ್ರಿಯರಿಗೆ ಇಲ್ಲಿದೆ ಭರ್ಜರಿ ಸುದ್ದಿ, ಚಿನ್ನದೊಂದಿಗೆ ಬೆಳ್ಳಿ ಬೆಲೆಯೂ ಇಳಿಕೆ; ರಾಜ್ಯದಲ್ಲಿಂದು ದರ ಎಷ್ಟಿದೆ ಗಮನಿಸಿ

Explainer:ಊಟಿ, ಕೊಡೈಕೆನಾಲ್‌ಗೆ ಸ್ವಂತ ವಾಹನದಲ್ಲಿ ಹೊರಟಿದ್ದೀರಾ, ಇ ಪಾಸ್‌ ಕಡ್ಡಾಯ, ಪಡೆಯುವುದು ಹೀಗೆ

Modi Assets: ಪ್ರಧಾನಿ ಮೋದಿ ಆಸ್ತಿ ಎಷ್ಟು,5 ವರ್ಷದಲ್ಲಿ ಏರಿದ ಪ್ರಮಾಣವೇನು, ಅವರ ಬಳಿ ಸ್ವಂತ ಮನೆ, ಕಾರು ಇದೆಯೇ?

Closing Bell: ಷೇರುಪೇಟೆಗೆ ಬಲ ತುಂಬಿದ ಇಂಧನ-ಆಟೊಮೊಬೈಲ್‌, ಸೆನ್ಸೆಕ್ಸ್‌-ನಿಫ್ಟಿ ಏರಿಕೆ; ಇಂದು ಲಾಭ ಗಳಿಸಿದ ಷೇರುಗಳ ವಿವರ ಹೀಗಿದೆ

ರೆನಾಲ್ಟ್ ಕಿಗರ್ (Renault Kiger)

ರೆನಾಲ್ಟ್ ಕಂಪನಿಯ ರೆನಾಲ್ಟ್ ಕಿಗರ್ ಕಾರು ಬೆಲೆಯ ವಿಚಾರದಲ್ಲಿ ಕಡಿಮೆ ಎನ್ನುಬಹುದು. ಆಧುನಿಕ ವಿನ್ಯಾಸ, ಗ್ರಾಹಕ ಸ್ನೇಹಿ ಇಂಟರ್‌ಫೇಸ್, ಆಕರ್ಷಕ ಪ್ರವೇಶದ ಆಯ್ಕೆ, ಇದರ ಕಾಂಪ್ಯಾಕ್ಟ್ ಸೈಜ್, ಸುಲಭ ನಿರ್ವಹಣೆಯಂತ ಬಹುಆಯ್ಕೆಗಳಿವೆ.

ಹೋಂಡಾ ಅಮೇಜ್ (Honda Amaze)

ಇಂಧನ ದಕ್ಷತೆ, ವಿಶ್ವಾಸಾರ್ಹ ಕಾರ್ಯಕ್ಷಮತೆಗೆ ಹೋಂಡಾ ಅಮೇಜ್ ಅಮೇಜ್ ಹೇಳಿ ಮಾಡಿಸಿದಂತಹ ಕಾರು. ಇದರಲ್ಲಿ ಹಲವು ಅನುಕೂಲಕರ ಆಯ್ಕೆಗಳನ್ನು ನೋಡಬಹುದು. ನೇರ ವಿನ್ಯಾಸ, ವಿಶಾಲವಾದ ಒಳ ವಿನ್ಯಾಸ, ನಿತ್ಯ ಪ್ರಯಾಣ ಮಾಡುವವರಿಗೆ ಈ ಕಾರು ಉತ್ತಮ ಆಯ್ಕೆಯಾಗಿದೆ. ಅಗತ್ಯ ಸುರಕ್ಷತೆ, ಕಾಂಪ್ಯಾಕ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳಲ್ಲಿ ರೆನಾಲ್ಟ್ ಕಿಗರ್ ಮತ್ತು ಹೋಂಡಾ ಅಮೇಜ್ ಸಮಾನವಾಗಿವೆ.

ರೆನಾಲ್ಟ್ ಕಿಗರ್, ಹೋಂಡಾ ಅಮೇಜ್ ವಿವಿಧ ವೇರಿಯಂಟ್‌ಗಳ ಬೆಲೆ ಹೀಗಿದೆ

ರೆನಾಲ್ಟ್ ಕಿಗರ್ - ರೆನಾಲ್ಟ್ ಕಿಗರ್‌ನಲ್ಲಿ 3 ವೇರಿಯಂಟ್‌ಗಳಿವೆ. 2023ರ ಡಿಸೆಂಬರ್ 15ರ ವರೆಗಿನ ಬೆಲೆಗಳನ್ನು ನೋಡುವುದಾದರೆ ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಇ ಕಾರಿನ ಬೆಲೆ 6,49,999 ರೂಪಾಯಿ ಇದೆ. ಆರ್‌ಎಕ್ಸ್‌ಟಿ ಬೆಲೆ 7,92,000 ರೂಪಾಯಿ ಇದೆ. ಅದೇ ರೀತಿಯಾಗಿ ಆರ್‌ಎಕ್ಸ್‌ಟಿ ಒಪಿಟಿ ಕಾರಿನ ಬೆಲೆ 8,00,000 ರೂಪಾಯಿ ಇದೆ.

ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಇ (Renault Kiger RXE)

ಕೈಗೆಟುವ ದರದಲ್ಲಿ ಕಾರು ಖರೀದಿಸಬೇಕು ಎನ್ನುವವರಿಗೆ ರೆನಾಲ್ಟ್ ಆರ್‌ಎಕ್ಸ್‌ಇ (6,49,999 ರೂಪಾಯಿ) ಅತ್ಯುತ್ತಮ ಆಯ್ಕೆಯಾಗಿದೆ.

ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಟಿ (Renault Kiger RXT)

ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಟಿ ಬೆಲೆ 7,92,000 ರೂಪಾಯಿ ಇದೆ. ಆರ್‌ಎಕ್ಸ್‌ಇಗಿಂತ ಆರ್‌ಎಕ್ಸ್‌ಟಿನಲ್ಲಿ ಕೆಲ ಹೆಚ್ಚುವರಿ ವಿಶಿಷ್ಟ್ಯಗಳಿವೆ. ಟಚ್‌ಸ್ಕ್ರೀನ್, ರೇರ್ ಪಾರ್ಕಿಂಗ್ ಸೆನ್ಸಾರ್, ಸ್ಟ್ರೀರ್ನಿಂಗ್ ಮೌಂಟೇನ್ ಕಂಟ್ರೋಲ್ ಸೇರಿ ಹಲವು ಸೌಲಭ್ಯಗಳು ಇದರಲ್ಲಿವೆ.

ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಟಿ ಒಪಿಟಿ (Renault Kiger RXT OPT)

ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಟಿ ಒಪಿಟಿ ಬೆಲೆ 8,00,000 ರೂಪಾಯಿ ಇದ್ದು, ವಿಶ್ರ ಲೋಹದ ಚಕ್ರಗಳು, ಹೆಚ್ಚು ಮೈಲೇಜ್, ಆರ್‌ಎಕ್ಸ್‌ಇ, ಆರ್‌ಎಕ್ಸ್‌ಟಿಗಿಂತ ಹೆಚ್ಚು ಸ್ಟೈಲೀಶ್ ಹಾಗೂ ದಕ್ಷತೆಯಿಂದ ಕೂಡಿದೆ.

ಹೋಂಡಾ ಅಮೇಜ್ - ಹೋಂಡಾ ಅಮೇಜ್‌ನಲ್ಲಿ 2 ಮಾದರಿಗಳಿದ್ದು, ಹೋಂಡಾ ಅಮೇಜ್-ಇ ಕಾರಿನ ಬೆಲೆ 6,99,000 ರೂಪಾಯಿ ಇದೆ. ಇನ್ನ ಹೋಂಡಾ ಅಮೇಜ್-ಎಸ್ 7,67,000 ರೂಪಾಯಿ ಇದೆ.

ಹೋಂಡಾ ಅಮೇಜ್-ಇ (Honda Amaze E)

ಹೋಂಡಾ ಅಮೇಜ್-ಇ ಮಾದರಿಯ ಕಾರಿನ ಬೆಲೆ 6,99,00 ರೂಪಾಯಿ ಇದ್ದು, ಸರಳತೆಗೆ ಈ ಕಾರು ಬೆಸ್ಟ್. ಮೊದಲ ಬಾರಿ ಕಾರು ಚಾಲನೆ ಮಾಡುವವರಿಗೆ ಸುಲಭ ಹಾಗೂ ಹೊಸ ಅನುಭವ ನೀಡುತ್ತದೆ. ಬೆಲೆಯ ವಿಚಾರದಲ್ಲೂ ಬೆಸ್ಟ್ ಅಂತಲೇ ಹೇಳಬಹುದು.

ಹೋಂಡಾ ಅಮೇಜ್-ಎಸ್ (Honda Amaze S)

ಬೆಲೆಯ ವಿಚಾರದಲ್ಲಿ ಅಮೇಜ್-ಇ ಗಿಂತ ಹೋಂಡಾ ಅಮೇಜ್ ಎಸ್‌ ಬೆಲೆ ಜಾಸ್ತಿ ಇದೆ. 7,67,000 ರೂಪಾಯಿ ಈ ಕಾರಿನಲ್ಲಿ ಹೆಚ್ಚು ವಿಶಿಷ್ಟ್ಯಗಳಿವೆ. ಉತ್ತಮ ಆಡಿಯೋ ಸಿಸ್ಟಮ್, ಒಆರ್‌ವಿಎಂ ಆಟೋಮಿಟಿಕ್, ಕುಟುಂಬಕ್ಕಾಗಿ ಕಾರು ಖರೀದಿಸುವ ಪ್ಲಾನ್ ಇದ್ದರೆ ಹೋಂಡಾ ಅಮೇಜ್-ಎಸ್ ಉತ್ತಮ ಆಯ್ಕೆಯಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ